Tel: 7676775624 | Mail: info@yellowandred.in

Language: EN KAN

    Follow us :


ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು

Posted Date: 25 Dec, 2018

ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು

ಹದಿನೈದು ವರ್ಷಗಳಿಂದ ತುಂಬದಿದ್ದ ಕೂಡ್ಲೂರು ಕೆರೆಯು ಏತ ನೀರಾವರಿ ಮೂಲಕ ತುಂಬಿ ತುಳುಕುತಿದ್ದು ಕೋಡಿ ಹರಿಯಲಾರಂಭಿಸಿದೆ, ಕೆರೆಯ ನೀರು ಮತ್ತು ಬೋರ್ ವೆಲ್ಲ ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತರಿಗೆ ಒಂದು ಕಡೆ ಸಂತಷವಾದರೆ ಅದೇ ನೀರು ಮತ್ತೊಂದು ಕಡೆ ಶಾಪವಾಗಿ ಪರಿಣಮಿಸಿದೆ.


ಕೂಡ್ಲೂರು ಗದ್ದೆ ಬಯಲು ಎಂದೇ ಹೆಸರಾದ ಸಹಸ್ರಾರು ಎಕರೆ ವಿಶಾಲವಾದ ಪ್ರದೇಶಕ್ಕೆ ನೀರುಣಿಸಿ ರೈತನ ಆದಾಯಕ್ಕೆ ಮುನ್ನುಡಿ ಬರೆಯುವುದು ಈ ಕೆರೆಯ ನೀರು, ಜೊತೆಗೆ ಬಹುತೇಕ ಎಲ್ಲಾ ಕೊಳವೆ ಬಾವಿಗಳು ಪುನಶ್ಚೇತನಗೊಂಡು ರೈತರ ಮೊಗದಲ್ಲಿ ಸಂತಸದ ಗೆರೆಗಳು ಮೂಡುತ್ತಿವೆ.


ಕೂಡ್ಲೂರು ಕೆರೆಯು ತುಂಬಿ ಕೋಡಿ ಹರಿದ ನೀರು ನೇರವಾಗಿ ಹೊಡಿಕೆಹೊಸಹಳ್ಳಿ ಕೆರೆಗೆ ಹೋಗುತ್ತದೆ, ಹಿಂದಿನಿಂದಲೂ ಇದ್ದ ಹಳ್ಳವನ್ನು ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದರೆ ಕೆಲವು ಕಡೆ ಮುಚ್ಚಿಹೋಗಿರುವುದರಿಂದ ಕೋಡಿ ಹರಿದ ನೀರು ರೈತ ಬೆಳೆದ ಬೆಳೆಯ ಮೇಲೆ ಹರಿದು ಬೆಳೆಗಳೆಲ್ಲವೂ ಮಕಾಡೆ ಮಲಗಿಕೊಂಡಿವೆ.

ಗೋವಿಂದೇಗೌಡನದೊಡ್ಡಿ, ಚನ್ನಂಕೇಗೌಡನದೊಡ್ಡಿ ಮತ್ತು ಕೂಡ್ಲೂರು ಗ್ರಾಮದ ಅನೇಕ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ನೀರಿನಲ್ಲಿ ನೆನೆದು ಕೊಳೆಯಲಾರಂಬಿಸಿವೆ.


ಕೂಡ್ಲೂರು ಕೆರೆಗೆ ನೀರು ತುಂಬಿಸುವ ಮುನ್ನವೇ ಹೊಡಿಕೆಹೊಸಹಳ್ಳಿ ಕೆರೆಗೆ ನೀರು ಹರಿದು ಹೋಗುವ ಕಾಲುವೆಯನ್ನು ದುರಸ್ತಿ ಮಾಡಬೇಕಾಗಿದ್ದು ಅಧಿಕಾರಿಗಳ ಕರ್ತವ್ಯ, ಇದ್ಯಾವುದನ್ನು ಮುಂದಾಲೋಚನೆ ಮಾಡದ ಪರಿಣಾಮವಾಗಿ ಕೋಡಿ ಹರಿದ ನೀರು ರೈತರ ಭತ್ತದ ಗದ್ದೆಗಳು, ಜಾನುವಾರುಗಳ ಜೋಳದ ಮೇವು ಹಾಗೂ ಇನ್ನಿತರ ಬೆಳೆಗಳು ನಾಶವಾಗಲು ಕಾರಣಕರ್ತರಾಗಿದ್ದಾರೆ ಹಾಗಾಗಿ ನಾಶವಾದ ಫಸಲಿನ ಹಣವನ್ನು ಕಟ್ಟಿಕೊಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.


ಈ ಬಗ್ಗೆ ಇಂಜಿನಿಯರ್ ವೆಂಕಟೇಗೌಡರನ್ನು ಸಂಪರ್ಕ ಮಾಡಿದಾಗ ಈ ಸಂಬಂಧ ನನಗೆ ಮಾಹಿತಿ ಬಂದಿದೆ, ಬಹುತೇಕ ರೈತರು ಕಾಲುವೆ ಹೊತ್ತುವರಿ ಮಾಡಿಕೊಂಡಿದ್ದು, ಮತ್ತೆ‌ ಕೆಲವು ಭಾಗದಲ್ಲಿ ಸಂಪೂರ್ಣ ಮುಚ್ಚಿ ಹೋಗಿರುವುದರಿಂದ ನೀರು ರೈತರ ಜಮೀನಿನ ಮೇಲೆ ಹರಿಯುತ್ತಿದೆ, ಆದ್ದರಿಂದ ತಾತ್ಕಾಲಿಕವಾಗಿ ಕೂಡ್ಲೂರು ಕೆರೆಗೆ ನೀರು ಹರಿಸುವುದನ್ನು ನಿಲ್ಲಿಸಿಲಾಗಿದೆ, ಸದ್ಯದಲ್ಲಿಯೇ ಹೊಡಿಕೆಹೊಸಹಳ್ಳಿ ಕೆರೆಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • Giriraju wrote:
    25 Dec, 2018 05:29 pm

    Danayavadagalu Srinivas ravarage raithara paravage spandeseddake.......

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು
ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು

ಹದಿನೈದು ವರ್ಷಗಳಿಂದ ತುಂಬದಿದ್ದ ಕೂಡ್ಲೂರು ಕೆರೆಯು ಏತ ನೀರಾವರಿ ಮೂಲಕ ತುಂಬಿ ತುಳುಕುತಿದ್ದು ಕೋಡಿ ಹರಿಯಲಾರಂಭಿಸಿದೆ, ಕೆರೆಯ ನೀರು ಮತ್ತು ಬೋರ್ ವೆಲ್ಲ ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತ

ಸಾಲಬಾಧೆ ರೈತ ಆತ್ಮಹತ್ಯೆ
ಸಾಲಬಾಧೆ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೇ ತಾಲ್ಲೂಕಿನ ಹನುಮಾಪುರ ದೊಡ್ಡಿ ಗ್ರಾಮದ ಹೆಚ್ ಎಂ ಕೆಂಪೇಗೌಡ ಎಂಬುವವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.
ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.

ಪಶುವೈದ್ಯಕೀಯ ಇಲಾಖೆ ರೈತ ಸಾಕುವ ಎಲ್ಲಾ ಜಸನುವಾರುಗಳಿಗೆ ಅದರಲ್ಲೂ ಪ್ರತಿನಿತ್ಯ ವಹಿವಾಟು ನಡೆಸುವಂತಹ ಹಸುಗಳಿಗೆ ಸಹಕಾರಿಯಾಗುವ ಇಲಾಖೆ.

ಪಶುವೈದ್ಯ ಇಲಾಖೆಗೂ ಮತ್ತು ರೈತನಿಗೂ ನೇರ ನಂಟಿದೆ, ಬಹುತೇಕ ಮನೆ ಬಾಗಿಲಿಗೆ ಹೋಗಿ ಪ

ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ
ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ

ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ಕಾಂಬಿನೇಷನ್ ಹಿಂದಿನಿಂದ ಇಂದಿನವರೆಗೆ ಜನಪ್ರಿಯವಾಗಿದೆ. ಆದರೆ ಹೊಲದಲ್ಲಿ ಹುಚ್ಚೆಳ್ಳು ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಹುಚ್ಚೆಳ್ಳಿನ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ.

 

ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು
ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು

ತೋಟಗಾರಿಕೆ ಇಲಾಖೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನೆಗಳು, ತಾಲೂಕು ಪಂಚಾಯತ್ ಯೋಜನೆಗಳು, ರಾಜ್ಯ ವಲಯ ಜನೆಗಳು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಳಿದ್ದು ಈ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್

ಕೃಷಿ ಪ್ರಧಾನ ದೇಶದಲ್ಲಿ ರೈತನೇ ಗುರು, ಭಾವಿಪ ಶಿಕ್ಷಕರ ದಿನಾಚರಣೆಯಲ್ಲಿ ಡಾ ಟಿ ಬಿ ಪುಟ್ಟರಾಜು.
ಕೃಷಿ ಪ್ರಧಾನ ದೇಶದಲ್ಲಿ ರೈತನೇ ಗುರು, ಭಾವಿಪ ಶಿಕ್ಷಕರ ದಿನಾಚರಣೆಯಲ್ಲಿ ಡಾ ಟಿ ಬಿ ಪುಟ್ಟರಾಜು.

ಮಕ್ಕಳಿಗೆ ಅಕ್ಷರ ಹೇಳಿಕೊಟ್ಟವನು ಗುರು, ಹೆತ್ತ ಮಕ್ಕಳಿಗೆ ತಾಯಿಯೇ ಗುರು, ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ದೇಶದ ಬೆನ್ನೆಲುಬು, ಅನ್ನದಾತನೇ ಗುರು ಎಂದು ವಿಶ್ರಾಂತ ಪ್ರಾದ್ಯಾಪಕ ಹಾಗೂ ಕೃಷಿ ವಿಶ್ವವಿದ್ಯಾಲಯ ದ ತಾಂತ್ರಿಕ ಅಧಿಕಾರಿಗಳಾದ

ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ
ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ

ಕುರಿ ಸಾಕಾಣಿಕೆದಾರರಿಗೆ ಸಹಕಾರ ಇಲಾಖೆಯಿಂದ ಏನೇನು ಸವಲತ್ತುಗಳನ್ನು ದೊರಕಿಸಿಕೊಡಲು ಸಾಧ್ಯವೋ ಎಲ್ಲಾ ಸೌಕರ್ಯಗಳನ್ನು ದೊರಕಿಸಿಕೊಡಲಾಗುವುದು ಎಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಅಧ್ಯಕ್ಷರಾದ ಹನುಮಂತೇಗೌಡ ಹೇಳಿದರು.

<

ಬಿತ್ತಿರುವ ಕಾಳುಗಳಿಗೆ ಬಿತ್ತಲು ಸಜ್ಜಾಗಿರುವ ರೈತನಿಗೆ ಸಂತಸ ತಂದ ಮಳೆರಾಯ
ಬಿತ್ತಿರುವ ಕಾಳುಗಳಿಗೆ ಬಿತ್ತಲು ಸಜ್ಜಾಗಿರುವ ರೈತನಿಗೆ ಸಂತಸ ತಂದ ಮಳೆರಾಯ

ಮಳೆಯಾಧಾರಿತ ಭೂಮಿಯಲ್ಲಿ ಈಬಾರಿ ಅನೇಕ ರೈತರು ಬೆಳೆ ಬೆಳೆಯಲು ಭೂಮಿಯನ್ನು ಉತ್ತು ಹಸನು ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರೇ ಕೆಲವು ರೈತರು ಅದಾಗಲೇ ಬಿತ್ತನೆ ಬೀಜ ಬಿತ್ತಿದ್ದು ಮೊಳಕೆಯೊಡೆದು ಪೈರು ಬಂದಿದ್ದು ಒಣಗಿ ಹೋಗುವ ಹಂತಕ್ಕೆ ತಲುಪಿದ

ಹನಿ ನೀರಾವರಿ ಜೋಡಣೆಯಲ್ಲಿ ಚನ್ನಪಟ್ಟಣ ರಾಷ್ಟ್ರಕ್ಕೆ ಮಾದರಿಯಾಗಬೇಕು ಡಾ ಬೆಳ್ಳೂರು ಕೃಷ್ಣ.
ಹನಿ ನೀರಾವರಿ ಜೋಡಣೆಯಲ್ಲಿ ಚನ್ನಪಟ್ಟಣ ರಾಷ್ಟ್ರಕ್ಕೆ ಮಾದರಿಯಾಗಬೇಕು ಡಾ ಬೆಳ್ಳೂರು ಕೃಷ್ಣ.

ಹನಿ ನೀರಾವರಿ ಜೋಡಣೆಯಲ್ಲಿ ಹಳೆ ಮೈಸೂರು ಭಾಗ ಹಿಂದುಳಿದಿದ್ದು ಚನ್ನಪಟ್ಟಣವೂ ಹೊರತಾಗಿಲ್ಲ, ಈಗಿನಿಂದಲೇ ಎಲ್ಲಾ ರೈತರು ಹನಿ ನೀರಾವರಿ ಜೋಡಣೆ ಮಾಡುವುದರ ಮೂಲಕ ದೇಶದಲ್ಲೇ ಮಾದರಿಯಾಗಬೇಕು ಎಂದು ಹನಿ ನೀರಾವರಿ ಇಲಾಖೆಯ ಜಂಟಿ ನಿರ್ದೇಶಕ ಡಾ ಬೆಳ್

ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.
ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.

ಮಳೆಯಿಲ್ಲದೆ ಮಾವಿನ ಬೆಳೆ ಕೈಕೊಡುವ ಹಂತಕ್ಕೆ ಈ ಬಾರಿ ಬಂದಿತ್ತು, ಬಿಸಿಲು ಹೆಚ್ಚಾಗಿ ಬಿಟ್ಟ ಹೂಗಳು, ಈಚು ಕಾಯಿಗಳು ಉದರಲಾರಂಭಿಸಿದವು, ಆವಾಗ ರೈತರು ಔಷಧ ಸಿಂಪಡಿಸುವುದರ ಜೊತೆಗೆ ಮಧ್ಯ ಮಧ್ಯ ವರುಣ ದೇವ ಕೃಪೆ ತೋರಿದ್ದರಿಂದ ಒಂದಷ್ಟು ಮಾವಿನ

Top Stories »  


Top ↑