Tel: 7676775624 | Mail: info@yellowandred.in

Language: EN KAN

    Follow us :


ಪೇಸ್ ಬುಕ್ ನಲ್ಲಿ ಚುನಾವಣೆ ಪಾವಿತ್ರ್ಯತೆ ಕಾಪಾಡಿ :_ಮಾರ್ಕ್ ಝಕರ್ ಬರ್ಗ್

Posted Date: 05 Apr, 2018

ಪೇಸ್ ಬುಕ್ ನಲ್ಲಿ ಚುನಾವಣೆ ಪಾವಿತ್ರ್ಯತೆ ಕಾಪಾಡಿ :_ಮಾರ್ಕ್ ಝಕರ್ ಬರ್ಗ್

ವಾಷಿಂ‌ಗ್‌ಟನ್‌: ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ನಡೆಯಲಿರುವ ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ನಡೆಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಫೇಸ್‌ಬುಕ್ ನಿಂದ ಯಾವುದೇ ಧಕ್ಕೆಯಾಗದಿರಲು ಕೃತಕ ಬುದ್ಧಿಮತ್ತೆ ಹಾಗು ಸಹಸ್ರಾರು ಜನರನ್ನು ಇದೇ ವಿಚಾವಾಗಿ ನೇಮಿಸಿರುವುದಾಗಿ ಫೇಸ್‌ಬುಕ್‌ ಸ್ಥಾಪಕ ಹಾಗು ಸಿಇಓ, ಮಾರ್ಕ್‌ ಝುಕರ್‌ಬರ್ಗ್‌ ತಿಳಿಸಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸುವ ಟ್ರೋಲ್‌ಗಳನ್ನು ನಿಯಂತ್ರಿಸಲು ಪೇಸ್‌ಬುಕ್‌ ತನ್ನ ಭದ್ರತಾ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸುತ್ತಿದೆ ಎಂದು ಹೇಳಿರುವ ಝುಕ್‌ರ್‌ಬರ್ಗ್, ಚುನಾವಣಾ ದೃಷ್ಟಿಯಿಂದ 2018 ದೊಡ್ಡ ವರ್ಷವಾಗಿದೆ ಎಂದಿದ್ದಾರೆ.

ಡೊನಾಲ್ಡ್‌ ಟ್ರಂಪ್‌ರ ಅಧ್ಯಕ್ಷೀಯ ಚುನಾವಣಾ ಪ್ರಚಾರದೊಂದಿಗೆ ನಂಟು ಹೊಂದಿರುವ ಬ್ರಿಟನ್ ಮೂಲದ, ಕೇಂಬ್ರಿಡ್ಜ್‌ ಅನಲಿಟಿಕಾ ಸಂಸ್ಥೆಯಿಂದ ಆದ ಭಾರೀ ಪ್ರಮಾಣದ ವೈಯಕ್ತಿಕ ಮಾಹಿತಿ ಸೊರಿಕೆ ಕುರಿತಾಗಿ, ಸಾಮಾಜಿಕ ಜಾಲತಾಣ ದೈತ್ಯನ ವಿರುದ್ಧ ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬಂದಿದ್ದವು.

“ಕಳೆದ ವರ್ಷ, ಅಮೆರಿಕದ ಅಲಬಾಮಾದಲ್ಲಿ ನಡೆದಿದ್ದ ವಿಶೇಷ ಸೆನೆಟ್‌ ಚುನಾವಣೆಯಲ್ಲಿ ತಪ್ಪು ಮಾಹಿತಿ ಹಬ್ಬಿಸಲು ಯತ್ನಿಸುತ್ತಿದ್ದ ಮ್ಯಾಸಿಡೋನಿಯನ್‌ ಮೂಲದ ಟ್ರೋಲ್‌ಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ತೆಗೆದುಹಾಕಲಾಗಿತ್ತು. ಸದ್ಯ, 15,000ಕ್ಕೂ ಹೆಚ್ಚು ಮಂದಿ ಭದ್ರತೆ ಹಾಗು ವಿಷಯ ಪರಿಶೀಲನೆ ಕುರಿತಂತೆ ಕೆಲಸ ಮಾಡುತ್ತಿದ್ದಾರೆ, ವರ್ಷಾಂತ್ಯಕ್ಕೆ 20,000ಕ್ಕೂ ಹೆಚ್ಚು ಮಂದಿಯನ್ನು ಇದೇ ವಿಚಾರವಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು” ಎಂದು ನೆನ್ನೆ ನಡೆದ ದೂರವಾಣಿ ಸಭೆ ಉದ್ದೇಶಿಸಿ, ಝುಕರ್‌ಬರ್ಗ್‌ ತಿಳಿಸಿದ್ದಾರೆ.

 ಭಾರತ, ಬ್ರೆಝಿಲ್, ಮೆಕ್ಸಿಕೋ ,ಪಾಕಿಸ್ತಾನ, ಹಂಗೇರಿ ಹಾಗು ಇನ್ನಿತರ ದೇಶಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿದ್ದು ಬಹಳ ಮಹತ್ವ ಪಡೆದುಕೊಂಡಿದೆ.

ಕರ್ನಾಟಕ, ರಾಜಸ್ಥಾನ, ಛತ್ತೀಸ್‌ಗಡ, ಮಧ್ಯ ಪ್ರದೇಶಗಳಲ್ಲಿ ಈ ವರ್ಷ ವಿಧಾನ ಸಭಾ ಚುನಾವಣೆಗಳು ಜರುಗಲಿದ್ದು ಇನ್ನೊಂದು ವರ್ಷದಲ್ಲಿ ಲೋಕಸಭಾ ಚುನಾವಣೆಯೂ ಆಯೋಜನೆಯಾಗಲಿದೆ.

ಇದಕ್ಕೂ ಮುನ್ನ, ಅಮೆರಿಕವನ್ನು ಗುರಿಯಾಗಿಸಿದ್ದ ರಷ್ಯಾದ ಅಂತರ್ಜಾಲ ಸಂಶೋಧನಾ ಏಜೆನ್ಸಿಯ ಪತ್ರಗಳನ್ನು ಫೇಸ್‌ಬುಕ್‌ ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ ಎಂದು  ಝುಕರ್‌ಬರ್ಗ್‌ ತಿಳಿಸಿದ್ದಾರೆ.

“2016ರ ಚುನಾವಣೆ ಬಳಿಕ ಅವರ ಚಟುವಟಿಕೆಗಳ ಕುರಿತು ಜಾಗೃತರಾದ ನಾವು ಜಗತ್ತಿನಾದ್ಯಂದ ಚುನಾವಣೆಗಳ ಪಾವಿತ್ರ‍್ಯತೆ ಕಾಪಾಡಲು ಕೆಲಸ ಮಾಡುತ್ತಿದ್ದೇವೆ” ಎಂದು ಝುಕರ್‌ಬರ್ಗ್‌ ತಿಳಿಸಿದ್ದಾರೆ.

ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಕುರಿತಂತೆ ಕಣ್ಗವಾಲಿಟ್ಟ ಕಾರಣ, ಸುಮಾರು 30,000 ನಕಲಿ ಖಾತೆಗಳನ್ನು ಕೃತಕ ಬುದ್ಧಿಮತ್ತೆ ಮೂಲಕ ಪತ್ತೆ ಮಾಡಲಾಗಿತ್ತು ಎಂದು ಝುಕರ್‌ಬರ್ಗ್‌ ತಿಳಿಸಿದ್ದಾರೆ.

ಕೆಲವೊಮ್ಮೆ ಸ್ಪಾ‌ಮ್‌ಗಳನ್ನು ಹಬ್ಬಿಸುವವರಿಂದ, ಚುನಾವಣೆಗಳಲ್ಲಿ ಮಧ್ಯ ಪ್ರವೇಶಿದಲು ಸರಕಾರ ಯತ್ನಿಸುವ ಕಾರಣ ಹಾಗು ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳಲ್ಲಿ ಸತ್ಯಾಂಶದ ಕೊರತೆ ಕೂಡಾ ಕಾರಣವಾಗಲಿದೆ ಎಂದು ಝುಕರ್‌ಬರ್ಗ್ ತಿಳಿಸಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ರಷ್ಯಾ ಭಾಗಿಯಾದಂಥ ವಿಚಾರಗಳು ರಾಷ್ಟ್ರೀಯ ಭದ್ರತೆ ಕುರಿತಂತೆ ಪ್ರಭಾವ ಬೀರಲಿವೆ ಎಂದು ಝುಕರ್‌ಬರ್ಗ್‌ ತಿಳಿಸಿದ್ದಾರೆ.

“ಈ ವಿಚಾರವಾಗಿ ಪರಿಹಾರ ಕಂಡುಕೊಳ್ಳಲು ನಾವು ಮೊದಲು ದುಷ್ಟ ಶಕ್ತಿಗಳನ್ನು ಪತ್ತೆ ಮಾಡಬೇಕಿದೆ. ಇಮಥ ಶಕ್ತಿಗಳನ್ನು ಫೇಸ್‌ಬುಕ್‌ನಿಂದ ಸಂಪೂರ್ಣ ಕಿತ್ತೊಗೆಯಲು ಯತ್ನಿಸಲಿದ್ದೇವೆ” ಎಂದು ಝುಕರ್‌ಬರ್ಗ್‌ ತಿಳಿಸಿದ್ದಾರೆ.

(ಸಂಗ್ರಹಿಸಿದ ವರದಿ)

 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in nation »

ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?
ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಅನೇಕ ಬೀದಿ ನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ, ಒಂದು ಸಣ್ಣ ಪೆಟ್ಟಾದ ನಾಯಿ ರಸ್ತೆಯಲ್ಲಿ ಬಿದ್ದರಷ್ಟೇ ಸಾಕು ಅದು ಎದ್ದು ಸಾವರಿಸಿ ಮು

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ಒಂದು ಮೆಲುಕು

ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ಒಂದು ಮೆಲುಕು

ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್‌: 6 ದಿನ ತಿಮ್ಮಪ್ಪನ ದರ್ಶನವಿಲ್ಲ
ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್‌: 6 ದಿನ ತಿಮ್ಮಪ್ಪನ ದರ್ಶನವಿಲ್ಲ

ತಿರುಪತಿ: ಆಗಸ್ಟ್‌ 11 ರಿಂದ 17ರ ವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧ್ಯಕ್ಷ ಪುಟ್ಟ ಸುಧಾಕರ ಯಾದವ್‌ ಅವರು

ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು
ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು

ದೆಹಲಿ: ಇನ್ನು ಮುಂದೆ ವಾಹನ ಸವಾರರು ಆರ್‌.ಸಿ., ಡ್ರೈವಿಂಗ್‌ ಲೈಸೆನ್ಸ್‌, ಇನ್ಶೂರೆನ್ಸ್‌ ದಾಖಲೆಗಳನ್ನು ಹೋದಲ್ಲೆಲ್ಲಾ ಹೊತ್ತೂಯ್ಯುವ ಅಗತ್ಯವಿಲ್ಲ. ಮೊಬೈಲ್‌ನಲ್ಲೇ ಡಿಜಿ ಲಾಕರ್&zw

ಹೆಸರು ಬದಲಿಸಿದ ಪತಂಜಲಿಯ \'ಕಿಂಬೋ\' ಆ್ಯಪ್..?
ಹೆಸರು ಬದಲಿಸಿದ ಪತಂಜಲಿಯ \'ಕಿಂಬೋ\' ಆ್ಯಪ್..?

ಯೋಗ ಗುರು ಬಾಬಾ ರಾಮ್​ದೇವ್ ಒಡೆತನದ ಪತಂಜಲಿ ಕಂಪನಿ ಮೇ ತಿಂಗಳಲ್ಲಿ 'ಕಿಂಬೋ' ಎನ್ನುವ ಮೆಸೇಜಿಂಗ್ ಆ್ಯಪ್​ ಒಂದನ್ನು ಪರಿಚಯಿಸಿತ್ತು. ಆದರೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಆ್ಯಪ್​ ಅನ್ನು ಪ್ಲೇ ಸ್ಟೋರ್​ನಿಂದ ತೆಗೆದು ಹಾಕಲಾಯ

ಪ್ರಧಾನ ಮಂತ್ರಿ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ
ಪ್ರಧಾನ ಮಂತ್ರಿ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ

ಪಿಎಂಎವೈ ಯೋಜನೆ ಮೂಲಕ ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕು, ೨೦೨೨ರ ವೇಳೆಗೆ ಎಲ್ಲರಿಗೂ ಸ್ವಂತ ಮನೆ ಇರಬೇಕು ಎನ್ನುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಉದ್ದೇಶ. ಕೇಂದ್ರ, ರಾಜ್ಯ ಸರ್ಕಾರಗಳ ಈ ಯೋಜನೆಯಲ್ಲಿ ಬಡವರು, ಅತಿ ಕೆಳವರ್ಗದವರ

ಸ್ನೇಹಿತರ ಜೊತೆಯಲ್ಲಿ ಮಗಳ ಮೇಲೆ ಅತ್ಯಾಚಾರ ಮಾಡಿದ ತಂದೆ

ಲಖನೌ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗವಂತೆ ಕಾಣುತ್ತಿಲ್ಲ. ದಿನಕ್ಕೆ ಹತ್ತಾರು ಪ್ರಕರಣಗಳು ದಾಖಲಾಗುತ್ತಿದ್ದು, ಇದಕ್ಕೆ ಹೊಸತೊಂದು ಸೇರ್ಪೆಡೆಯಾಗಿದೆ. ಉತ್ತರ ಪ್ರದೇಶದ ಸೀತಾಪುರದ ಕಮಲಾಪುರ ಗ್ರಾಮದಲ್ಲ

ಸಲ್ಮಾನ್ ಖಾನ್ ಗೆ ಜಾಮೀನು
ಸಲ್ಮಾನ್ ಖಾನ್ ಗೆ ಜಾಮೀನು

ಜೋಧಪುರ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ನಟ ಸಲ್ಮಾನ್ ಖಾನ್‌ಗೆ ಜೋಧಪುರ ಸೆಷನ್ಸ್ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಅರ್ಜಿ ವಿಚಾರಣೆ ನಡೆಸಿರುವ

ಪೇಸ್ ಬುಕ್ ನಲ್ಲಿ ಚುನಾವಣೆ ಪಾವಿತ್ರ್ಯತೆ ಕಾಪಾಡಿ :_ಮಾರ್ಕ್ ಝಕರ್ ಬರ್ಗ್
ಪೇಸ್ ಬುಕ್ ನಲ್ಲಿ ಚುನಾವಣೆ ಪಾವಿತ್ರ್ಯತೆ ಕಾಪಾಡಿ :_ಮಾರ್ಕ್ ಝಕರ್ ಬರ್ಗ್

ವಾಷಿಂ‌ಗ್‌ಟನ್‌: ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ನಡೆಯಲಿರುವ ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ನಡೆಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಫೇಸ್‌ಬುಕ್ ನಿಂದ ಯಾವುದೇ ಧಕ್ಕೆಯಾಗದಿರಲು ಕೃತಕ ಬುದ್ಧಿಮತ್ತೆ ಹಾಗು

Top Stories »  


Top ↑