Tel: 7676775624 | Mail: info@yellowandred.in

Language: EN KAN

    Follow us :


ಉಚಿತ ಮೂತ್ರಪಿಂಡ ಪರೀಕ್ಷಾ ಶಿಬಿರ

ಬೆಂಗಳೂರು : ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ರೀಗಲ್ ಆಸ್ಪತ್ರೆ ಉಚಿತ ಮೂತ್ರಪಿಂಡ ಪರೀಕ್ಷಾ ಶಿಬಿರವನ್ನು 10 ದಿನಗಳ ಕಾಲ ಆಯೋಜಿಸಿದೆ. ಈ ಶಿಬಿರದ ಸಂದರ್ಭದಲ್ಲಿ ರೋಗಿಗಳು ಈ ಕೆಳಕಂಡ ಪರೀಕ್ಷೆಗಳನ್ನು ಉಚಿತವಾಗಿ ಪಡೆಯುತ್ತಾರೆ: ಸೆರಂ ಕ್ರಿಯಾಟಿನಿನ್, ಯೂರಿನ್ ರೊಟೀನ್, ಬ್ಲಡ್ ಶುಗರ್, ಬ್ಲಡ್ ಪ್ರೆಷರ್ ಮತ್ತು ನೆಫ್ರಾಲಜಿ ಮತ್ತು ಯುರಾಲಜಿ ಕನ್ಸಲ್ಟೇಷನ್.  ಉಚಿತ ಶಿಬಿರ ಮಾರ್ಚ್ 8ರಿಂದ 18, 2018ರ ಅವಧಿಯವರೆಗೆ(ಬೆಳಿಗ್ಗೆ 10ರಿಂದ ಸಂಜೆ 8ರವರೆಗೆ) ರೀಗಲ್ ಆಸ್ಪತ್ರೆ,

ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಚನೆ
ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಚನೆ

ರಾಮನಗರ : ಪ್ರಜ್ಞಾವಂತ ಸರಕಾರದ ರಚನೆಯಲ್ಲಿ ಈ ಬಾರಿ ಯುವ ಮತದಾರರು ನಿರ್ಣಾಯಕ ಪಾತ್ರವನ್ನು ವಹಿಸಿದರೇ ರಾಜ್ಯವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯಬಹುದೆಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಯುವ ಘಟಕದ ರಾಜ್ಯಾದ್ಯಕ್ಷರಾದ  ಸಿ ಎಮ್ ಕೃಷ್ಣರವರು ಅಭಿಪ್ರಾಯ ಪಟ್ಟರು. ರಾಷ್ಟ್ರೀಯ ಪಕ್ಷಗಳಿಂದ ಜನರು ಪಾಠ ಕಲಿತಿದ್ದು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷದತ್ತ ತಮ್ಮ ಒಲವನ್ನು ತೋರುತ್ತಿದ್ದಾರೆ ಎಂದರು. ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ರಾಮನಗರ ಜಿಲ್ಲಾ ಸಮಿತಿಯ ರಚನೆ

ಸಾರ್ವಜನಿಕರಿಂದ ಆಕ್ಷೇಪಣೆ - ಪ್ರತಿಕ್ರಿಯೆಗಳ ಆಹ್ವಾನ
ಸಾರ್ವಜನಿಕರಿಂದ ಆಕ್ಷೇಪಣೆ - ಪ್ರತಿಕ್ರಿಯೆಗಳ ಆಹ್ವಾನ

ರಾಮನಗರ : ಕೇಂದ್ರ ಸರ್ಕಾರದ ನಗರಾಭಿವೃದ್ದಿ ಮಂತ್ರಾಲಯವು ಸ್ವಚ್ಛ ಭಾರತ ಅಭಿಯಾನವನ್ನು 2014ರ ಅಕ್ಟೋಬರ್ 2ರಿಂದ ಪ್ರಾರಂಭಿಸಿದ್ದು, ಅದು 5 ವರ್ಷಗಳ ಕಾಲಾವಧಿಯವರೆಗೆ ಅಂದರೆ 2019ರ ಅಕ್ಟೋಬರ್ 2ರ ವರೆಗೆ ಜಾರಿಯಲ್ಲಿರುತ್ತದೆ. ಬಯಲು ಶೌಚ ಮುಕ್ತ ನಗರಗಳನ್ನು ಸೃಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಸಂಬಂಧ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿರುವ ವಾರ್ಡ್‍ಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸಬೇಕಾಗಿರುತ್ತದೆ. ನಗರ

ಸ್ವಿಪ್ ವತಿಯಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸಿಇಒ ಸೂಚನೆ
ಸ್ವಿಪ್ ವತಿಯಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸಿಇಒ ಸೂಚನೆ

ರಾಮನಗರ : ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಮಾಣದ ಮತದಾನ ಆಗುವಂತೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ (ಸ್ವೀಪ್) ಸಮಿತಿ ವತಿಯಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಬೇಕಾದ ವಿವಿಧ ಕಾರ್ಯಕ್ರಮಗಳ ಸಿದ್ದತೆಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್. ಲತಾ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸಭೆಯನ್ನು ಆಯೋಜಿಸಲಾಗಿತ್ತು. ಸಿಇಒ ಆರ್. ಲತಾ ಅವರು ಮಾತನಾಡಿ,

ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ
ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ

ಕನಕಪುರ: ನಗರದ ಮೈದಾನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಯಿತಿ ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಕನಕಪುರ ಮತ್ತು ರಾಮನಗರ ಜಿಲ್ಲೆ ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ 2017-2018ನೇ ಸಾಲಿನ ಯುವ ಚೈತನ್ಯ ಯೋಜನೆಯಡಿ ಯುವ ಸಂಘಗಳಿಗೆ ಸಂಸದ ಡಿ.ಕೆ. ಸುರೇಶ್ ಕ್ರೀಡಾ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಮಾತನಾಡಿ ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಯುವಕರು ಮಾರುಹೋಗಿ ಕ್ರೀಡೆಯಲ್ಲಿಹೆಚ್ಚಿನ  ಆಸಕ್ತಿಯನ್ನು ಕಳೆದು ಕೊಳ್ಳುತ್ತಿರುವುದು ದುರಂತ ಸಂಗತಿ ಎ

ಹರಿಸಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಹರಿಸಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಮನಗರ : ತಾಲ್ಲೂಕಿನ ಹರಿಸಂದ್ರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ರಾಜ್ಯಮಟ್ಟದ ಇನ್‍ಸ್ಪೈರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫೆ.22ರಿಂದ ಫೆ.24ರವರೆಗೆ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಇಲ್ಲಿನ ಪ್ರೌಢಶಾಲೆಯ ಮಕ್ಕಳು ಪಾಲ್ಗೊಂಡು 'ಬಹುಪಯೋಗಿ ಕೃಷಿಯಂತ್ರ' ಮಾದರಿಯನ್ನು ಪ್ರದರ್ಶಿಸಿದ್ದರು. ಅತಿ ಸಣ್ಣ ರೈತರುಗಳು, ಮಹಿಳೆಯರಿಗಾಗಿ ಕೃಷಿಪರ ಈ ಯಂತ್ರ ಅತಿ ಕಡಿಮೆ ವೆಚ್ಚ ಮತ್ತು ವೈಜ್ಞಾನಿಕವಾಗಿ

ಶ್ರೀರಂಗ ಬಾಯ್ಸ್ ವತಿಯಿಂದ ಚಿನ್ನಿದಾಂಡು ಆಟದ ಸ್ಪರ್ಧೆ
ಶ್ರೀರಂಗ ಬಾಯ್ಸ್ ವತಿಯಿಂದ ಚಿನ್ನಿದಾಂಡು ಆಟದ ಸ್ಪರ್ಧೆ

ಮಾಗಡಿ : ದೇಸಿಯ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹ ಸಧೃಡವಾಗುವುದರ ಜೊತೆಗೆ ಆರೋಗ್ಯವಂತರಾಗಿ ಜೀವಿಸಲು ಸಾಧ್ಯ ಎಂದು ಬಿಜೆಪಿ ಮುಖಂಡ ಎ.ಹೆಚ್.ಬಸವರಾಜು ಅಭಿಪ್ರಾಯಪಟ್ಟರು.  ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಿಸಿಲು ಮಾರಮ್ಮ ದೇವಿಯ  ಹಬ್ಬದ ಪ್ರಯುಕ್ತ ತಿರುಮಲೆ ಶ್ರೀರಂಗ ಬಾಯ್ಸ್‍ವತಿಯಿಂದ ಏರ್ಪಡಿಸಿದ್ದ ಚಿನ್ನಿದಾಂಡು ಆಟಕ್ಕೆ ಚಾಲನೆ ನೀಡಿ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳು ದೈಹಿಕ ಶ್ರಮ ಬೇಡುವ ಆಟಗಳಿಗೆ ಹೆಚ್ಚಿನ ಗಮನ ನೀಡದೇ ಮನೆಯ

ಬಾಲು ಪಬ್ಲಿಕ್ ಶಾಲೆಯಲ್ಲಿ ಪುಟಾಣಿಗಳ ಪದವೀಧರ ದಿನಾಚರಣೆ
ಬಾಲು ಪಬ್ಲಿಕ್ ಶಾಲೆಯಲ್ಲಿ ಪುಟಾಣಿಗಳ ಪದವೀಧರ ದಿನಾಚರಣೆ

ಚನ್ನಪಟ್ಟಣ : ಮುಗ್ಧ ಮನಸ್ಸಿನ ಮಕ್ಕಳಿಗೆ ಶಾಲೆ ಎಂದರೆ ಮನರಂಜನೆಯ ಮುಖಾಂತರ ವಿದ್ಯಾಭ್ಯಾಸ ನೀಡುವ ದೇಗುಲದಂತೆ ನಿರ್ಮಾಣ ಮಾಡಿದಾಗ ಮಾತ್ರ ಮಕ್ಕಳು ಸಂತಸದಿಂದ ಶಾಲೆಗೆ ಬರಲು ಸಾಧ್ಯವಾಗುತ್ತದೆ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ವೆಂಕಟಸುಬ್ಬಯ್ಯಚಟ್ಟಿ ಅಭಿಪ್ರಾಯಿಸಿದರು.     ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪುಟಾಣಿಗಳ ಪದವಿಧರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಶಾಲೆ ಎಂದರೇ ಸಾಕು ಮುಗ್ಧ  ಮಕ್ಕಳಲ್ಲ

ಲಯನ್ ಮತ್ತು ಲಿಯೋ ಸಂಸ್ಥೆ ಸಂಸ್ಥಾಪಕರ ದಿನಾಚರಣೆ
ಲಯನ್ ಮತ್ತು ಲಿಯೋ ಸಂಸ್ಥೆ ಸಂಸ್ಥಾಪಕರ ದಿನಾಚರಣೆ

ಕನಕಪುರ : ಲಯನ್ಸ್ ಮತ್ತು ಲಿಯೋ ಸಂಸ್ಥೆ ಕನಕಪುರ  ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಮತ್ತು ಸಂಸ್ಥಾಪಕರ ದಿನಾಚರಣೆ  ಕನಕಪುರದ ಲಯನ್ಸ್ ಸಂಸ್ಥೆಯಲ್ಲಿ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ ವಿ ರಾಮಯ್ಯ ಬಾಬು  ಮುಖ್ಯ ಅತಿಥಿಗಳಾಗಿ ಲಯನ್ ಜಿಪಿ ದಿವಾಕರ್ ಜಿಲ್ಲಾ ರಾಜ್ಯಪಾಲರು ಈ ಸಭೆಯಲ್ಲಿ ಭಾಗವಹಿಸಿದ್ದರು ಹಲವಾರು ಸೇವಾ ಕಾರ್ಯಕ್ರಮಗಳು ಲಯನ್ಸ್ ಸಂಸ್ಥೆಯಲ್ಲಿ ನಡೆಯಿತು  ಲಯನ್ಸ್ ಸದಸ್ಯರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಮತ್ತು ವಿಶೇಷ

ಎಲ್.ಪಿ.ಜಿ ಸಂಪರ್ಕ ಸೌಲಭ್ಯಪಡೆದುಕೊಳ್ಳಲು ಮನವಿ
ಎಲ್.ಪಿ.ಜಿ ಸಂಪರ್ಕ ಸೌಲಭ್ಯಪಡೆದುಕೊಳ್ಳಲು ಮನವಿ

ರಾಮನಗರ :  ಕಾರ್ಮಿಕ ಇಲಾಖೆ ವತಿಯಿಂದ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಅನಿಲ ಭಾಗ್ಯ ಯೋಜನೆಯಡಿ ಎಲ್.ಪಿ.ಜಿ ಸಂಪರ್ಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಈಗಾಗಲೇ ನೊಂದಣಿ ಮಾಡಿಕೊಂಡಿರುವ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಎಲ್.ಪಿ.ಜಿ ಸಂಪರ್ಕ ಪಡೆಯದ ಕಟ್ಟಡ ಕಾರ್ಮಿಕರು ಹೊಸದಾಗಿ ಅನಿಲ ಸಂಪರ್ಕ ಪಡೆದುಕೊಳ್ಳಲು ಕೂಡಲೇ ಆಯಾ ತಾಲೂಕಿನ

Top Stories »  Top ↑