Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾದ್ಯಂತ ವಿಜೃಂಭಣೆಯಿಂದ ಆಚರಣೆಗೊಂಡ ಶಿವರಾತ್ರಿ

Posted Date: 05 Mar, 2019

ತಾಲ್ಲೂಕಿನಾದ್ಯಂತ ವಿಜೃಂಭಣೆಯಿಂದ ಆಚರಣೆಗೊಂಡ ಶಿವರಾತ್ರಿ

ಅಜ್ಞಾನದಿಂದ ಸು ಜ್ಞಾನ ದೆಡೆಗೆ ಸಾಗುವುದೇ ಶಿವರಾತ್ರಿ ಹಬ್ಬ, ಈ ಹಬ್ಬದ ದಿನದಂದು ಶಿವನ ಪ್ರತಿರೂಪದ ಎಲ್ಲಾ ದೇವಾಲಯಗಳಲ್ಲದೇ ಅನೇಕ ಬೇರೆಬೇರೆಯ ದೇವಾಲಯಗಳಲ್ಲೂ ಸಹ ವಿಶೇಷ ಪೂಜೆ ನಡೆಯುತ್ತದೆ, ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭಗೊಳ್ಳುವ ಪೂಜೆ ರಾತ್ರಿ ಪೂರಾ ಜಾಗರಣೆ ಮಾಡುವ ಭಕ್ತಾಧಿಗಳಿಗೆ ದೇವರ ಹಾಡು, ತತ್ವ ಪದ, ಜಾನಪದ ಗೀತೆಗಳು ಮತ್ತು ಭಜನೆಗಳ ರಸದೌತಣದೊಟ್ಟಿಗೆ ಮಾರನೆಯ ದಿನ ಮಂಗಳಾರತಿ ಮಾಡುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ.


ನಗರದ ಮಳೂರು ಗ್ರಾಮದ ತೋಟವೊಂದರಲ್ಲಿ ಪ್ರತಿಷ್ಠಾಪನೆಗೊಂಡಿರುವ ಜಲಕಂಠೇಶ್ವರ ಹೆಸರಿನ ಲಿಂಗ ವೂ ಬಹಳ ವಿಶೇಷ ವಾದದ್ದು, ಈ ಲಿಂಗಕ್ಕೆ ಯಾವುದೇ ದೇವಸ್ಥಾನವಾಗಲಿ, ಕೊನೇಪಕ್ಷ ಮೇಲ್ಛಾವಣಿಯಾಗಲಿ ಇಲ್ಲ, ಮುಕ್ತವಾಗಿರುವ ಈ ಲಿಂಗಕ್ಕೆ ಭಕ್ತಾಧಿಗಳು ಪೂಜೆ ಸಲ್ಲಿಸಿ ಪುನೀತರಾದರು.

ಪಕ್ಕದಲ್ಲಿಯೇ ಇರುವ ಶ್ರೀ ಅರ್ಕೇಶ್ವರ ದೇವಾಲಯವೂ ಪುರಾತನ ಕಾಲದ ದೇವಸ್ಥಾನ ವಾಗಿದ್ದು ಭಕ್ತರು ದರ್ಶನಗೈದು ಪ್ರಸಾದ ಸ್ವೀಕರಿಸಿದರು.


ಕೋಟೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯವೂ ಸಹ ಪುರಾತನ ಇತಿಹಾಸ ಹೊಂದಿದ್ದು ಶ್ರೀ ಸ್ವಾಮಿಯ ವಿಗ್ರಹವನ್ನು ಕಾಶಿಯಿಂದಲೇ ತಂದು ಪ್ರತಿಷಪನೆ ಮಾಡಿರುವುದು ವಿಶೇಷ, ನಂಬಿ ಬಂದವರ ಕೈ ಬಿಡದ ಕಾಶಿ ವಿಶ್ವೇಶ್ವರ ಸ್ವಾಮಿ ಗೆ ಬೆಳಿಗ್ಗೆಯಿಂದ ರಾತ್ರಿವರೆಗೂ ಸಹಸ್ರಾರು ಭಕ್ತರು ಸಾಲಿನಲ್ಲಿ ನಿಂತು ದರ್ಶಿಸಿ ಪ್ರಸಾದ ಸ್ವೀಕರಿಸಿದರು.


ಮಹಾತ್ಮ ಗಾಂಧಿ ರಸ್ತೆಯ ಡೂಂ ಲೈಟ್ ಸರ್ಕಲ್ ನಲ್ಲಿರುವ ನೀಲಕಂಠೇಶ್ವರ ಸ್ವಾಮಿ ಕಣ್ವ ಕ್ಷೇತ್ರ ಎಂದೇ ಪ್ರಸಿದ್ಧ, ಈ ಸನ್ನಿಧಾನಕ್ಕೆ ಐದುಸಾವಿರ ವರ್ಷಗಳ ಇತಿಹಾಸ ಹಾಗೂ ದೇವಾಲಯದ ಕಟ್ಟಡಕ್ಕೆ ೧,೩೦೦ ವರ್ಷಗಳ ಇತಿಹಾಸವಿದೆ, ಈ ದೇವಸ್ಥಾನಕ್ಕೆ ಕಣ್ವ ಮಹರ್ಷಿಗಳು ನಿತ್ಯಾರಾಧನೆಗೆ ಬರುತ್ತಿದ್ದರು ಎಂಬ ಪ್ರತೀತಿ ಇದೆ ಎಂದು ಅರ್ಚಕ ರವೀಂದ್ರ ದೀಕ್ಷಿತ್ ಹೇಳುತ್ತಾರೆ, ಈ ದೇವಾಲಯಕ್ಕೂ ಸಹ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ ಮಾಡಿದರು.


ನಗರದ ಹೃದಯ ಭಾಗದಲ್ಲಿರುವ ಕೊಲ್ಲಾಪುರದಮ್ಮನ ದೇವಾಲಯದಲ್ಲಿ ಅನೇಕ ರೀತಿಯ ದೇವರ ವಿಗ್ರಹಗಳನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿದರು, ನಗರದ ಹೊರವಲಯದಲ್ಲಿನ ಮಹದೇಶ್ವರ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಜಾಗದಲ್ಲೇ ಮೂರ್ತಿಗೆ ಅಲಂಕರಿಸಿ ಪೂಜಿಸಿದರು, ಭಕ್ತಾದಿಗಳು ಪ್ರಸಾದ ಹಂಚುವ ಮೂಲಕ ತಮ್ಮ ಭಕ್ತಿ ಮೆರೆದರು.


ಶಿವಪ್ಪನ ಮಠ ಮತ್ತು ಕೂಡ್ಲೂರು ಗ್ರಾಮದ ಮಂಗಳೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಪೂಜಿಸಿ ಭಕ್ತರು ಕೃತಾರ್ಥರಾದರು.ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು
ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು

ಬುದ್ಧ ಪೂರ್ಣಿಮೆ ಎಂಬುದು ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ
ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ

ಇಂದಿನ ದಿನಗಳಲ್ಲಿ ಮದುವೆ, ಹುಟ್ಟುಹಬ್ಬ, ವಾರ್ಷಿಕೋತ್ಸವಗಳನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವವರೇ ಹೆಚ್ಚಾಗಿರುವವರ ಮಧ್ಯೆ ಇಲ್ಲೋಬ್ಬರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಜನಪದ ಕಲೆಗಳ ಪ್ರದರ್ಶನ&n

ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ
ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ

ಚನ್ನಪಟ್ಟಣ: ಬೆಂಗಳೂರು ಮೈಸೂರು ನಡುವಿನ ಚನ್ನಪಟ್ಟಣದಲ್ಲಿ ಶತಮಾನದ ಹಿಂದೆಯೇ ಸರ್ಕಾರಿ ಬಾಲಕರ ಪ್ರೌಢಶಾಲೆ ಸ್ಥಾಪನೆಯಾಗಿದ್ದು, ಇಂದಿನ ಹಲವಾರು ಗ

ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಆಯ್ಕೆ
ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಆಯ್ಕೆ

ಹಿಂದಿನ ಅಧ್ಯಕ್ಷರಾದ ದೇವರಾಜು ಮರಣಾನಂತರ ತೆರವಾಗಿದ್ದ ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಗೋವಿಂದೇಗೌಡನದೊಡ್ಡಿ ಗ್ರಾಮದ ಪಂಚಾಯತಿ ಸದಸ್ಯೆ ಶ್ರೀಮತಿ ಪುಟ್ಟಲ

ಸರಣಿ ದೋಖಾ ಎಸಗಿದ ಕಿರಿಯ ಇಂಜಿನಿಯರ್ ಶಂಕರ್ ಅಮಾನತು
ಸರಣಿ ದೋಖಾ ಎಸಗಿದ ಕಿರಿಯ ಇಂಜಿನಿಯರ್ ಶಂಕರ್ ಅಮಾನತು

*ನಮ್ಮ ಪತ್ರಿಕೆಯ ಫಲಶೃತಿ*

ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ತುಂಡು ಗುತ್ತಿಗೆಗಳ ಸರಣಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂಬ ದೂರಿನ ಮೇರೆಗೆ ತನಿಖೆಗೆ ಒಳಪಟ್ಟು ಅಕ್ರಮಗಳು ಸ

ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಸೂರಜ್
ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಸೂರಜ್

ಚನ್ನಪಟ್ಟಣ: ನಗರದ ಸೌಂದರ್ಯಕ್ಕೆ  ದಕ್ಕೆ  ತರುವ ಹಾಗೂ ವಾಹನ ಸಂಚಾರ, ಸಾರ್ವಜನಿಕರ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಪುಟ್‌ಪಾತ್ ವ್ಯಾಪಾರಿಗಳನ್ನು  ತೆರವುಗೊಳಿಸಿ ಅವರಿಗೆ ಪ

ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ
ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಚನ್ನಪಟ್ಟಣ: ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ವಂದಾರಗುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಚುನಾವಣೆ

ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ
ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ

ಚನ್ನಪಟ್ಟಣ: ಇಂದು ಸಂಜೆ ಸುರಿದ ಗಾಳಿ ಸಮೇತ ಮಳೆಗೆ ಬಿಡದಿಯ ಬಳಿ ಇರುವ ಎಲೆಕ್ಟ್ರಾನಿಕ್ ಕಛೇರಿಯಲ್ಲಿ ವಿದ್ಯುತ್ (sub station power supply)

ಕಾಯಕ, ಕನಸು ಮತ್ತು ನಡವಳಿಕೆಯೇ ವ್ಯಕ್ತಿತ್ವ ವಿಕಸನ ಪ್ರೊ ಪ್ರಸನ್ನಕುಮಾರ್
ಕಾಯಕ, ಕನಸು ಮತ್ತು ನಡವಳಿಕೆಯೇ ವ್ಯಕ್ತಿತ್ವ ವಿಕಸನ ಪ್ರೊ ಪ್ರಸನ್ನಕುಮಾರ್

ಕಾಯಕ ಮಾಡುವುದು, ಮನಸ್ಸನ್ನು ಸದೃಢಗೊಳಿಸುವುದು, ಕನಸು ಕಾಣುವುದು, ಆ ಕನಸುಗಳನ್ನು ಸ್ಪಷ್ಟತೆಯ ಗುರಿಯೊಟ್ಟಿಗೆ ನಡವಳಿಕೆಗಳ ಮೂಲಕ ಯಶಸ್ವಿಗೊಳಿಸುವುದೇ ವ್ಯಕ್ತಿತ್ವ ವಿಕಸನ ಎಂದು ಮೈಸೂರು ಸಿದ್ಧಾರ್ಥ

ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು
ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು

ಐದು ವರ್ಷಗಳ ಅವಧಿಗೆ ನಡೆದ ಬಮೂಲ್  ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗೆ ಚುನಾವಣೆ ನಡೆದಿದ್ದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಜೆಡಿಎಸ್ ಧುರೀಣರು ಸ್ಪ

Top Stories »  


Top ↑