Tel: 7676775624 | Mail: info@yellowandred.in

Language: EN KAN

    Follow us :


ಜೀವನದಲ್ಲಿ ಸುಖ ದುಃಖ ಎರಡನ್ನೂ ಸಮನಾಗಿ ಸ್ವೀಕರಿಸಿ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

Posted Date: 05 Mar, 2019

ಜೀವನದಲ್ಲಿ ಸುಖ ದುಃಖ ಎರಡನ್ನೂ ಸಮನಾಗಿ ಸ್ವೀಕರಿಸಿ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

ಜೀವನದಲ್ಲಿ ಸುಖ ದುಃಖ ಸರಸ ವಿರಸ ಸಮಾನವಾಗಿ ಸ್ವೀಕರಿಸಬೇಕು ಏನೇ ಆದರೂ ಹೊಂದಿಕೊಂಡು ಹೋಗಬೇಕು ಧಾರ್ಮಿಕತೆಯಲ್ಲಿ ನಂಬಿಕೆ ಉಳಿಸಿಕೊಂಡು ಜೀವನದಲ್ಲಿ ಪರಿಪಕ್ವತೆಯನ್ನು ಕಾಪಾಡಿಕೊಂಡು ಸುಖ ಸಂಸಾರವನ್ನು ಸಾಗಿಸಬೇಕು ಎಂದು ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳು ಆಶೀರ್ವದಿಸಿದರು 


ಅವರು ಕನಕಪುರ ತಾಲ್ಲೂಕಿನ ಶಿವಗಿರಿ ಕ್ಷೇತ್ರದಲ್ಲಿ (ಶ್ರೀ ಶಿವಾಲ್ದಪ್ಪ ಬೆಟ್ಟ) ಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ವಧುವಿಗೆ ಚಿನ್ನದ ಗುಂಡು ಚಿನ್ನದ ತಾಳಿ ಮೂಗುತಿ  ಕಾಲುಂಗುರ ಮತ್ತು  ಸೀರೆ ಕುಪ್ಪಸ ಮತ್ತು ವರನಿಗೆ ಅಂಗಿ ಪಂಚೆ ಹಾಗೂ ಪ್ರತಿ ಜೋಡಿಗೆ ಒಂದೊಂದು ತೆಂಗಿನ ಸಸಿಗಳನ್ನು ವಿತರಿಸಿ ಆಶೀರ್ವದಿಸಿದರು.


ಕನಕಪುರ ದೇಗುಲ ಮಠದ ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಮಾತನಾಡಿ ಕಲ್ಲು ದೇವರು ದೇವರಲ್ಲ ಹೆಣ್ಣು ದೇವರು ದೇವರಲ್ಲ ನಿಮ್ಮ ಆತ್ಮವೇ ಗುಡಿ ಕಾಣಿರಯ್ಯ, ಎಂಬಂತೆ ತಾವು ವಾಸಿಸುವ ಮನೆಯನ್ನೇ ದೇಗುಲವೆಂದು, ತಂದೆ ತಾಯಿ ಅತ್ತೆ ಮಾವ ಅವರನ್ನೇ ದೇವರೆಂದು, ನಂಬಿ  ದಾಂಪತ್ಯ ಜೀವನವನ್ನು ಸುಖಮಯವಾಗಿ ನಡೆಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪ್ರಜೆಗಳನ್ನು ನೀಡಬೇಕು ಎಂದು ಆಶೀರ್ವದಿಸಿದರು. 


ಮತ್ತೊಬ್ಬ ಸಂತ ಮರಳೇಗವಿ ಮಠದ ಶ್ರೀ ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳವರು ಮಾತನಾಡಿ ಪ್ರತಿಯೊಬ್ಬ ನಾಗರಿಕರು ಸರಳವಾಗಿ ಬದುಕುವುದನ್ನು ಕಲಿತುಕೊಳ್ಳಬೇಕು ಸಾಮೂಹಿಕ ಮದುವೆಗಳನ್ನು ಮಾಡಿಕೊಂಡರೆ ಸಂಪೂರ್ಣ ಖರ್ಚು ವೆಚ್ಚಗಳನ್ನು ಉಳಿಸುವುದರ ಜೊತೆಗೆ ದುಂದುವೆಚ್ಚ ಮಾಡುವ ಅಂಧರಿಗೆ ಮಾರ್ಗದರ್ಶಿಗಳಾಗಬಹುದು, ಈ ನಿಟ್ಟಿನಲ್ಲಿ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮಿಗಳವರು ಶಿವಗಿರಿ ಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಮಂಟಪವನ್ನು ನಿರ್ಮಿಸಿ ಈ ರೀತಿಯ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಧಾರ್ಮಿಕ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿ ಉಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳು ಮತ್ತು ಶಿವಗಿರಿ ಕ್ಷೇತ್ರ ಸಮಿತಿಯ ಪದಾಧಿಕಾರಿಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. 


ಇದೇ ವೇಳೆ ರಾಮನಗರ ಜಿಲ್ಲಾಧಿಕಾರಿಯಾದ ಕ್ಯಾಪ್ಟನ್ ರಾಜೇಂದ್ರ ಅವರನ್ನು ಚನ್ನಪಟ್ಟಣ ತಾಲ್ಲೂಕಿನ ಗೇಣಿದಾರರು ಮತ್ತು ಸಾಗುವಳಿ ರೈತರಿಗೆ ಕೆಲವೇ ತಿಂಗಳುಗಳಲ್ಲಿ ಸಾಗುವಳಿ ಚೀಟಿ ನೀಡಿದ್ದಕ್ಕಾಗಿ ರೈತರ  ಪರವಾಗಿ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಶ್ರೀ ಶ್ರೀ ಶ್ರೀ ಡಾಕ್ಟರ್ ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳವರ ಎಪ್ಪತ್ನಾಲ್ಕನೇ ಜಯಂತ್ಯುತ್ಸವದ ಅಂಗವಾಗಿ ಶ್ರೀ ಗುರುನಮನ ಮತ್ತು ಸಾಧಕರಿಗೆ ಸನ್ಮಾನವನ್ನೂ ಏರ್ಪಡಿಸಲಾಗಿತ್ತು.


ಸಂಜೆ ವೇಳೆಗೆ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಶಿವಗಿರಿ ಕ್ಷೇತ್ರಕ್ಕೆ ನೂತನವಾಗಿ ನಿರ್ಮಿಸಿಕೊಟ್ಟಿರುವ ರಥವನ್ನು  ಎಳೆಯುವ ಮೂಲಕ ಸಂಸದ ಡಿಕೆ ಸುರೇಶ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ನಾನು ಮತ್ತು ನನ್ನ ಅಣ್ಣ ಶಿವಕುಮಾರ್ ಅವರು ಆಡಿ ಬೆಳೆದ ಈ ಬೆಟ್ಟಕ್ಕೆ ಚಿರಋುಣಿಯಾಗಿದ್ದೇವೆ ಇಂತಹ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ನಾವು ಯಾವಾಗಲೂ ಬದ್ಧ ಎಂದು ತಿಳಿಸಿದರು.


ಇದೇ ವೇಳೆ ಹುಲಿ ವಾಹನ ಮತ್ತು ಪಲ್ಲಕ್ಕಿ ಉತ್ಸವವನ್ನು ಭಕ್ತರು ವಿಜೃಂಭಣೆಯಿಂದ ಆಚರಿಸಿದರು. ಬೆಳಗಿನ ಜಾವ ಐದು ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಕೊಂಡೋತ್ಸವ ನೆರವೇರಿತು.


ಸಂಜೆಯ ನಂತರ ರಾಮನಗರದ ಬಿಜಿಎಸ್ ವರ್ಲ್ಡ್ ಸ್ಕೂಲ್‌ ಮತ್ತು ಇನ್ನಿತರ ಶಾಲಾ  ಮಕ್ಕಳು ಚಿಣ್ಣರ ಮೇಳ ಕಾರ್ಯಕ್ರಮದಲ್ಲಿ ನಾಟಕ, ಸಂಗೀತ ಮತ್ತು ನೃತ್ಯೋತ್ಸವವನ್ನು ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಮನಗರ ವತಿಯಿಂದ ಅಹೋರಾತ್ರಿ ಜಾಗರಣೆ ಕಾರ್ಯಕ್ರಮಗಳನ್ನು ಹರಿಕಥೆ ವಿದ್ವಾನ್ ಶ್ರೀಮತಿ ರಮಾಬಾಯಿ ಮತ್ತು ತಂಡದವರು ಹಾಗೂ ಭಜನಾ ಮಂಡಳಿಯವರು ನಡೆಸಿಕೊಟ್ಟರು. 


ವೇದಿಕೆಯಲ್ಲಿ ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ ರಾಜು, ರೈತ ಮುಖಂಡ ಶ್ರೀ ಪುಟ್ಟಸ್ವಾಮಿ, ಉಪನ್ಯಾಸಕ ಕಬ್ಬಾಳೇಗೌಡ, ಸಮಾಜಸೇವಕಿ ಜಯಮ್ಮ, ಹಾಗೂ ಕನಕಪುರ ತಾಲ್ಲೂಕಿನ ಸ್ಥಳೀಯ ಮುಖಂಡರು, ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರು ಹಾಜರಿದ್ದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀ ಶಿವಗಿರಿ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ನೆರವೇರಿಸಿಕೊಟ್ಟರು. ವೇದಿಕೆಯ ಕಾರ್ಯಕ್ರಮವನ್ನು ರಾಮನಗರ ನವೀನ್ ನಿರೂಪಿಸಿ ವಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು
ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು

ಬುದ್ಧ ಪೂರ್ಣಿಮೆ ಎಂಬುದು ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ
ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ

ಇಂದಿನ ದಿನಗಳಲ್ಲಿ ಮದುವೆ, ಹುಟ್ಟುಹಬ್ಬ, ವಾರ್ಷಿಕೋತ್ಸವಗಳನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವವರೇ ಹೆಚ್ಚಾಗಿರುವವರ ಮಧ್ಯೆ ಇಲ್ಲೋಬ್ಬರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಜನಪದ ಕಲೆಗಳ ಪ್ರದರ್ಶನ&n

ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ
ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ

ಚನ್ನಪಟ್ಟಣ: ಬೆಂಗಳೂರು ಮೈಸೂರು ನಡುವಿನ ಚನ್ನಪಟ್ಟಣದಲ್ಲಿ ಶತಮಾನದ ಹಿಂದೆಯೇ ಸರ್ಕಾರಿ ಬಾಲಕರ ಪ್ರೌಢಶಾಲೆ ಸ್ಥಾಪನೆಯಾಗಿದ್ದು, ಇಂದಿನ ಹಲವಾರು ಗ

ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಆಯ್ಕೆ
ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಆಯ್ಕೆ

ಹಿಂದಿನ ಅಧ್ಯಕ್ಷರಾದ ದೇವರಾಜು ಮರಣಾನಂತರ ತೆರವಾಗಿದ್ದ ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಗೋವಿಂದೇಗೌಡನದೊಡ್ಡಿ ಗ್ರಾಮದ ಪಂಚಾಯತಿ ಸದಸ್ಯೆ ಶ್ರೀಮತಿ ಪುಟ್ಟಲ

ಸರಣಿ ದೋಖಾ ಎಸಗಿದ ಕಿರಿಯ ಇಂಜಿನಿಯರ್ ಶಂಕರ್ ಅಮಾನತು
ಸರಣಿ ದೋಖಾ ಎಸಗಿದ ಕಿರಿಯ ಇಂಜಿನಿಯರ್ ಶಂಕರ್ ಅಮಾನತು

*ನಮ್ಮ ಪತ್ರಿಕೆಯ ಫಲಶೃತಿ*

ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ತುಂಡು ಗುತ್ತಿಗೆಗಳ ಸರಣಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂಬ ದೂರಿನ ಮೇರೆಗೆ ತನಿಖೆಗೆ ಒಳಪಟ್ಟು ಅಕ್ರಮಗಳು ಸ

ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಸೂರಜ್
ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಸೂರಜ್

ಚನ್ನಪಟ್ಟಣ: ನಗರದ ಸೌಂದರ್ಯಕ್ಕೆ  ದಕ್ಕೆ  ತರುವ ಹಾಗೂ ವಾಹನ ಸಂಚಾರ, ಸಾರ್ವಜನಿಕರ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಪುಟ್‌ಪಾತ್ ವ್ಯಾಪಾರಿಗಳನ್ನು  ತೆರವುಗೊಳಿಸಿ ಅವರಿಗೆ ಪ

ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ
ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಚನ್ನಪಟ್ಟಣ: ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ವಂದಾರಗುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಚುನಾವಣೆ

ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ
ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ

ಚನ್ನಪಟ್ಟಣ: ಇಂದು ಸಂಜೆ ಸುರಿದ ಗಾಳಿ ಸಮೇತ ಮಳೆಗೆ ಬಿಡದಿಯ ಬಳಿ ಇರುವ ಎಲೆಕ್ಟ್ರಾನಿಕ್ ಕಛೇರಿಯಲ್ಲಿ ವಿದ್ಯುತ್ (sub station power supply)

ಕಾಯಕ, ಕನಸು ಮತ್ತು ನಡವಳಿಕೆಯೇ ವ್ಯಕ್ತಿತ್ವ ವಿಕಸನ ಪ್ರೊ ಪ್ರಸನ್ನಕುಮಾರ್
ಕಾಯಕ, ಕನಸು ಮತ್ತು ನಡವಳಿಕೆಯೇ ವ್ಯಕ್ತಿತ್ವ ವಿಕಸನ ಪ್ರೊ ಪ್ರಸನ್ನಕುಮಾರ್

ಕಾಯಕ ಮಾಡುವುದು, ಮನಸ್ಸನ್ನು ಸದೃಢಗೊಳಿಸುವುದು, ಕನಸು ಕಾಣುವುದು, ಆ ಕನಸುಗಳನ್ನು ಸ್ಪಷ್ಟತೆಯ ಗುರಿಯೊಟ್ಟಿಗೆ ನಡವಳಿಕೆಗಳ ಮೂಲಕ ಯಶಸ್ವಿಗೊಳಿಸುವುದೇ ವ್ಯಕ್ತಿತ್ವ ವಿಕಸನ ಎಂದು ಮೈಸೂರು ಸಿದ್ಧಾರ್ಥ

ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು
ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು

ಐದು ವರ್ಷಗಳ ಅವಧಿಗೆ ನಡೆದ ಬಮೂಲ್  ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗೆ ಚುನಾವಣೆ ನಡೆದಿದ್ದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಜೆಡಿಎಸ್ ಧುರೀಣರು ಸ್ಪ

Top Stories »  


Top ↑