Tel: 7676775624 | Mail: info@yellowandred.in

Language: EN KAN

    Follow us :


ಹುಟ್ಟಿನಿಂದ ಸಾವಿನವರೆಗೂ ಅವಳಿಗೆ ಮಹಿಳಾ ದಿನವೇ, ಸುಮಂಗಲ

Posted Date: 10 Mar, 2019

ಹುಟ್ಟಿನಿಂದ ಸಾವಿನವರೆಗೂ ಅವಳಿಗೆ ಮಹಿಳಾ ದಿನವೇ, ಸುಮಂಗಲ

ಯಾವಾಗ ಹೆಣ್ಣು ಜನ್ಮ ತಳೆಯುತ್ತಾಳೋ ಅಂದಿನಿಂದ ಮತ್ತೊಂದು ಮನೆಯಲ್ಲಿ ಹೋಗಿ ಆ‌ ಮನೆಯ ದೀಪವನ್ನು ಬೆಳಗಿ ಅಸುನೀಗುವ ವರೆಗೂ ಆಕೆಗೆ ಪ್ರತಿದಿನ, ಪ್ರತಿಕ್ಷಣವೂ ಮಹಿಳೆಯ ದಿನವೇ, ಬೆಳಿಗ್ಗೆ ಎದ್ದು ಮನೆ ಮುಂದೆ ನೀರು ಹಾಕಿ, ರಂಗೋಲಿ ಬಿಡಿಸಿ, ಅಡುಗೆ ಮಾಡಿ ಮಕ್ಕಳು ಮನೆಯವರಿಗೆ ಬಡಿಸಿ, ತೊಳೆದು ಬಂದವರನ್ನು ಉಪಚರಿಸಿ, ಸಂತೈಸಿ ರಾತ್ರಿ ಹಾಸಿಗೆ ಹಾಕಿ ಮಲಗುವವರೆಗೂ ಆಕೆ ಹೆಣ್ಣಾಗಿಯೇ ವರ್ತಿಸುತ್ತಾಳೆ, ಪ್ರೀತಿಸುತ್ತಾಳೆ, ಸತ್ಕರಿಸುತ್ತಾಳೆ, ಹೆಣ್ಣಾಗಿಯೇ ಉಳಿಯುತ್ತಾಳೆ, ಇದೊಂದು ದಿನ ಅವಳನ್ನು ಹೆಣ್ಣಾಗಿ ಗುರುತಿಸದರೇ ಸಾಕೆ ಎಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲಾ ರವರು ಮಾರ್ಮಿಕವಾಗಿ ನುಡಿದರು.


ಅವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಭಾರತ ವಿಕಾಸ ಪರಿಷದ್ (ಕಣ್ವ ಶಾಖೆ) ವತಿಯಿಂದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.


ಪೋಷಕರಾದವರು ಹೆಣ್ಣು ಮಕ್ಕಳಿಗೆ ಹೇರುವಷ್ಟು ಕಟ್ಟುಪಾಡುಗಳನ್ನು ಗಂಡು ಮಕ್ಕಳಿಗೆ ಹೇರುವುದಿಲ್ಲ, ಹೆಣ್ಣು ಏನೇ ಮಾಡಿದರೂ ಅವಳದೇ ತಪ್ಪು ಎಂದು ಕಲ್ಪಿಸಿ ಆಕೆಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಬೇಕು, ಆಕೆಗೆ ಸಮಾನವಕಾಶವನ್ನು ನೀಡಬೇಕು ಎಂದು ಒತ್ತಾಯಿಸಿದರು.


ರಾಮನಗರ ಸಂಚಾರಿ ವಿಭಾಗದ ಇನ್ಸ್ಪೆಕ್ಟರ್ ಶೋಭಾ ವಿ ಕುಮಾರ್ ಮಾತನಾಡಿ ಇಂದು ಹೆಣ್ಣು ಯಾವ ವಿಭಾಗದಲ್ಲೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ಆಕೆಗೆ ಸಂಸಾರ ತೂಗಿಸುವುದಷ್ಟೇ ಅಲ್ಲಾ ದೇಶ ತೂಗಿಸುವುದು ಗೊತ್ತು, ದೇಶ ಕಾಯುವುದು ಗೊತ್ತು. ಭೂಮಿ, ನದಿಯಿಂದ ಹಿಡಿದು ಮುಖ್ಯ ಭೂಮಿಕೆಯೆಲ್ಲವೂ ಹೆಣ್ಣು ಎಂದು ಪ್ರತಿಪಾದಿಸಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಶೈಲಜಾ ಶಿವಾನಂದ್ ಜಗತ್ತಿನಲ್ಲಿ ಹೆಣ್ಣು ಗಂಡುಗಳ ಸಮಾನ ಸಂತಾನವಿದೆ, ಆದರೂ ಇಂದಿಗೂ ಸಹ ಪುರುಷ ಪ್ರಧಾನ ಜಗತ್ತು ಎಂದೇ ಕರೆಸಿಕೊಳ್ಳುತ್ತಿದೆ, ಮನೆಗೆಲಸ, ಪೋಲಿಸ್ ಪೇದೆ, ಶಿಕ್ಷಕಿ ಯಿಂದ ಆರಂಭಗೊಂಡು ಗಡಿಕಾಯುವ ರಕ್ಷಕಿಯಾಗಿ ದೇಶದ ಪರಮೋಚ್ಚ ನಾಯಕಿಯರಾಗಿ, ಸಾಧುಸಂತರಾದಿಯಾಗಿ ದೇಶ ಮುನ್ನಡೆಸುವ ತಾಕತ್ತು ಹೆಣ್ಣಿಗಿದೆ.

ದೇಶದಲ್ಲಿಂದು ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಣ್ಣು ಭ್ರೂಣ ಹತ್ಯೆಯಂತಹ ನೀಚತನದಲ್ಲಿ ತೊಡಗಿರುವುದು ನಾಚಿಕೆಗೇಡಿತನ ಸಂಗತಿ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾವಿಪ ದ ತಾಲ್ಲೂಕು ಅಧ್ಯಕ್ಷ ವಸಂತಕುಮಾರ್ ಸಿ ವಿ ಶ್ರೀನಿವಾಸ ರವರ ನೇತೃತ್ವದಲ್ಲಿ ಸಣ್ಣದಾಗಿ ಬೆಳೆದ ಈ ಸಂಸ್ಥೆ ಇಂದು ಹೆಮ್ಮರವಾಗಿದೆ, ಇದನ್ನು ಬೆಳೆಸಲು ಸಹಕರಿಸಿದ ಎಲ್ಲರಿಗೂ ನಾವು ಋಣಿಯಾಗಿದ್ದೇವೆ ಎಂದು ತಿಳಿಸಿದರು.


ವೇದಿಕೆ ದುರ್ಬಳಕೆ ಮಾಡಿಕೊಂಡ ಶಿಕ್ಷಕರು


ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲ ರವರು ಬಂದಿದ್ದರಿಂದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದಿಯಾಗಿ ಅನೇಕ ಸರ್ಕಾರಿ ಶಾಲಾ ಶಿಕ್ಷಕರು ಅವರಿಗೆ ಸನ್ಮಾನಿಸುವ ಮೂಲಕ ಅರ್ಧ ಗಂಟೆಗೂ ಹೆಚ್ಚು ಕಾಲ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ವೀಕ್ಷಕರು ಮತ್ತು ಕಲಾ ಪ್ರದರ್ಶನಕಾರರನ್ನು ಅಸಮಧಾನಗೊಳಿಸಿತು.

ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರು ಮತ್ತು ವೀಕ್ಷಕರು ಸುಶಿಕ್ಷಿತ ಶಿಕ್ಷಕ ರನ್ನು ನೇರವಾಗಿ ಶಪಿಸುತ್ತಿದ್ದು ಕಂಡುಬಂತು.

ಅವರ ಭಾಷಣವೂ ಸಹ ಕೇವಲ ಶಿಕ್ಷಕರಿಗೆ ಮಾತ್ರ ಎಂಬಂತಿದ್ದು ವೇದಿಕೆಯ ಕಾರ್ಯಕ್ರಮಕ್ಕೂ ಅವರ ಭಾಷಣಕ್ಕೂ ಸಂಬಂಧವೇ ಇರದಿದ್ದದ್ದು ಸಭಿಕರಿಗೆ ಬೇಸರವನ್ನುಂಟು ಮಾಡಿತು.*


ಭಾವಿಪ ದ ಪದಾಧಿಕಾರಿಗಳಾದ ಕೃಷ್ಣಮ್ಮ ಸೋಮರಾಜು ರವರ ನಿರ್ದೇಶನದಲ್ಲಿ ಸೋಬಾನೆ ಮದುವೆ, ಮಾಲತಿ ಮತ್ತು ತಂಡ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಲಕ್ಷ್ಮಿ ಗೋ ರಾ ಶ್ರೀನಿವಾಸ ತಂಡದಿಂದ ಅಭಿಜ್ಞಾನ ಶಾಕುಂತಲ, ಮಂಗಳ ಮತ್ತು ತಂಡದವರಿಂದ ಶ್ರೀ ಕೃಷ್ಣ ರಾಸಲೀಲೆ, ರಾಜೇಶ್ವರಿ ಸುಜ್ಞಾನ ಪ್ರಭು ತಂಡದಿಂದ ಯಮನ ನಿರ್ಧಾರ, ಸವಿತಾ ಮತ್ತು ಲಕ್ಷ್ಮಿ ಯವರಿಂದ ನಾಟ್ಯ ರಾಣಿ ಶಾಂತಲೆ, ಮೇಘನ ತಂಡದವರಿಂದ ಯೋಧರ ನಿಲುವು ಮತ್ತು ಇಂಡಿಯನ್ ಆಕ್ಸ್‌ಫರ್ಡ್ ಶಾಲೆಯ ಶಿಕ್ಷಕಿಯರಿಂದ ದೇಶಭಕ್ತಿ ಗೀತೆ ಕಾರ್ಯಕ್ರಮಗಳು ವೀಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸಿಯಾದವು.


ಇದೇ ವೇಳೆ ಹಂಸವತಿ ಕೃಷ್ಣಯ್ಯ ಶೆಟ್ಟಿ, ಲಲಿತಮ್ಮ ನಾಗರಾಜು, ಹೆಚ್ ಡಿ ಪದ್ಮ ಮಂಜುನಾಥ ರವರನ್ನು ಸನ್ಮಾನಿಸಲಾಯಿತು, ದಸರಾ ಬೊಂಬೆ ಪ್ರದರ್ಶನ ಕಾರರಿಗೆ ಬಹುಮಾನವನ್ನು ವಿತರಿಸಲಾಯಿತು.


ವೇದಿಕೆಯಲ್ಲಿ ಶಾಂತಮ್ಮ ನಾಮದೇವ್, ಮಾಲಿನಿ ರಮೇಶ್, ರಾಧಿಕಾ ರವಿಕುಮಾರ್, ಎಂ ಸಾವಿತ್ರಮ್ಮ ಕೃಷ್ಣಪ್ಪ, ರಾಜೇಶ್ವರಿ ರಾಘವೇಂದ್ರ ಉಪಸ್ಥಿತರಿದ್ದರು.


ಭಾವಿಪದ ರಾಜ್ಯಾಧ್ಯಕ್ಷರಾದ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ಕೆ ತಿಪ್ರೇಗೌಡ, ಬಿ ಎನ್ ಕಾಡಯ್ಯ, ಹೆಚ್ ಗೋವಿಂದಯ್ಯ, ಪಿ ಗುರುಮಾದಯ್ಯ, ಗೋ ರಾ ಶ್ರೀನಿವಾಸ, ಎಸ್ ಶಿವಲಿಂಗಯ್ಯ, ಕೃಷ್ಣಮ್ಮ ಸೋಮರಾಜು, ಶ್ವೇತಾ ಶಿವಕುಮಾರ್, ಜಯಲಕ್ಷ್ಮಮ್ಮ, ನವೀನ ಉಮೇಶ್, ವರಲಕ್ಷ್ಮಿ ಸಿದ್ದಾರ್ಥ, ರಾಜೇಶ್ವರಿ ಜಯರಾಮೇಗೌಡ ಹಾಗೂ ಪರಿಷದ್ ನ ಸದಸ್ಯರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು
ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು

ಬುದ್ಧ ಪೂರ್ಣಿಮೆ ಎಂಬುದು ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ
ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ

ಇಂದಿನ ದಿನಗಳಲ್ಲಿ ಮದುವೆ, ಹುಟ್ಟುಹಬ್ಬ, ವಾರ್ಷಿಕೋತ್ಸವಗಳನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವವರೇ ಹೆಚ್ಚಾಗಿರುವವರ ಮಧ್ಯೆ ಇಲ್ಲೋಬ್ಬರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಜನಪದ ಕಲೆಗಳ ಪ್ರದರ್ಶನ&n

ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ
ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ

ಚನ್ನಪಟ್ಟಣ: ಬೆಂಗಳೂರು ಮೈಸೂರು ನಡುವಿನ ಚನ್ನಪಟ್ಟಣದಲ್ಲಿ ಶತಮಾನದ ಹಿಂದೆಯೇ ಸರ್ಕಾರಿ ಬಾಲಕರ ಪ್ರೌಢಶಾಲೆ ಸ್ಥಾಪನೆಯಾಗಿದ್ದು, ಇಂದಿನ ಹಲವಾರು ಗ

ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಆಯ್ಕೆ
ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಆಯ್ಕೆ

ಹಿಂದಿನ ಅಧ್ಯಕ್ಷರಾದ ದೇವರಾಜು ಮರಣಾನಂತರ ತೆರವಾಗಿದ್ದ ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಗೋವಿಂದೇಗೌಡನದೊಡ್ಡಿ ಗ್ರಾಮದ ಪಂಚಾಯತಿ ಸದಸ್ಯೆ ಶ್ರೀಮತಿ ಪುಟ್ಟಲ

ಸರಣಿ ದೋಖಾ ಎಸಗಿದ ಕಿರಿಯ ಇಂಜಿನಿಯರ್ ಶಂಕರ್ ಅಮಾನತು
ಸರಣಿ ದೋಖಾ ಎಸಗಿದ ಕಿರಿಯ ಇಂಜಿನಿಯರ್ ಶಂಕರ್ ಅಮಾನತು

*ನಮ್ಮ ಪತ್ರಿಕೆಯ ಫಲಶೃತಿ*

ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ತುಂಡು ಗುತ್ತಿಗೆಗಳ ಸರಣಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂಬ ದೂರಿನ ಮೇರೆಗೆ ತನಿಖೆಗೆ ಒಳಪಟ್ಟು ಅಕ್ರಮಗಳು ಸ

ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಸೂರಜ್
ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಸೂರಜ್

ಚನ್ನಪಟ್ಟಣ: ನಗರದ ಸೌಂದರ್ಯಕ್ಕೆ  ದಕ್ಕೆ  ತರುವ ಹಾಗೂ ವಾಹನ ಸಂಚಾರ, ಸಾರ್ವಜನಿಕರ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಪುಟ್‌ಪಾತ್ ವ್ಯಾಪಾರಿಗಳನ್ನು  ತೆರವುಗೊಳಿಸಿ ಅವರಿಗೆ ಪ

ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ
ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಚನ್ನಪಟ್ಟಣ: ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ವಂದಾರಗುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಚುನಾವಣೆ

ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ
ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ

ಚನ್ನಪಟ್ಟಣ: ಇಂದು ಸಂಜೆ ಸುರಿದ ಗಾಳಿ ಸಮೇತ ಮಳೆಗೆ ಬಿಡದಿಯ ಬಳಿ ಇರುವ ಎಲೆಕ್ಟ್ರಾನಿಕ್ ಕಛೇರಿಯಲ್ಲಿ ವಿದ್ಯುತ್ (sub station power supply)

ಕಾಯಕ, ಕನಸು ಮತ್ತು ನಡವಳಿಕೆಯೇ ವ್ಯಕ್ತಿತ್ವ ವಿಕಸನ ಪ್ರೊ ಪ್ರಸನ್ನಕುಮಾರ್
ಕಾಯಕ, ಕನಸು ಮತ್ತು ನಡವಳಿಕೆಯೇ ವ್ಯಕ್ತಿತ್ವ ವಿಕಸನ ಪ್ರೊ ಪ್ರಸನ್ನಕುಮಾರ್

ಕಾಯಕ ಮಾಡುವುದು, ಮನಸ್ಸನ್ನು ಸದೃಢಗೊಳಿಸುವುದು, ಕನಸು ಕಾಣುವುದು, ಆ ಕನಸುಗಳನ್ನು ಸ್ಪಷ್ಟತೆಯ ಗುರಿಯೊಟ್ಟಿಗೆ ನಡವಳಿಕೆಗಳ ಮೂಲಕ ಯಶಸ್ವಿಗೊಳಿಸುವುದೇ ವ್ಯಕ್ತಿತ್ವ ವಿಕಸನ ಎಂದು ಮೈಸೂರು ಸಿದ್ಧಾರ್ಥ

ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು
ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು

ಐದು ವರ್ಷಗಳ ಅವಧಿಗೆ ನಡೆದ ಬಮೂಲ್  ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗೆ ಚುನಾವಣೆ ನಡೆದಿದ್ದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಜೆಡಿಎಸ್ ಧುರೀಣರು ಸ್ಪ

Top Stories »  


Top ↑