Tel: 7676775624 | Mail: info@yellowandred.in

Language: EN KAN

    Follow us :

ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಸಿಪಿವೈಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರು

Posted Date: 13 Apr, 2019

ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಸಿಪಿವೈಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರು

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರ ಬಗ್ಗೆ ಏಕವಚನದಲ್ಲಿ ಮಾತನಾಡಲು ಹಾಗೂ ದೊಡ್ಡಗೌಡರ ಕುಟುಂಬದ ಬಗ್ಗೆ ಹಗುರವಾಗಿ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಗೆ ನೈತಿಕ ಹಕ್ಕಿಲ್ಲ ಎಂದು ಚನ್ನಪಟ್ಟಣ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಸಿಪಿವೈಗೆ ತಿರುಗೇಟು ನೀಡಿದರು.

ಅವರು‌ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿ ಪರ ಮತಯಾಚನೆ ಮಾಡುವ ಸಂದರ್ಭದಲ್ಲಿ ಸಿ ಪಿ ಯೋಗೇಶ್ವರ್ ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಸಂಬೋಧಿಸಿದ್ದಾರೆ, ತಾಲ್ಲೂಕು ಎಲ್ಲಿದೆ ಎಂದಾಗಲಿ,ತಾಲ್ಲೂಕಿನ ಗ್ರಾಮದ ಹೆಸರಾಗಲಿ ಗೊತ್ತಿದೆಯೇ ಎಂದು ಹಗುರವಾಗಿ ಮಾತನಾಡಿದ್ದಾರೆ, ಇಪ್ಪತೈದು ವರ್ಷಗಳ ಹಿಂದೆಯೇ ಅವರು ಈ ಭಾಗದ ಹೆಸರುಗಳನ್ನು ಮುಖಂಡರ ಹೆಸರನ್ನು ಕರಗತ ಮಾಡಿಕೊಂಡಿದ್ದಾರೆ ಎಂದರು.

ನೀರಾವರಿ ಹರಿಕಾರ ದೇವೇಗೌಡ ರ ಕೊಡುಗೆ ಬಗ್ಗೆ ಮಾತನಾಡುತ್ತಾರೆ, ಇಪ್ಪತ್ತು ವರ್ಷಗಳ ಕಾಲ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು, ದೇವೇಗೌಡ ಮತ್ತು ವರದೇಗೌಡ ಪಟ್ಟು ಹಿಡಿದು ಮಾಡಿದ ನೀರಾವರಿ ಕೆಲಸಕ್ಕೆ ಕೇವಲ ಪೈಪುಗಳನ್ನು ಹಾಕಿಸಿದ್ದಷ್ಟೇ ಇವರ ಸಾಧನೆಯೇ ? ಎಂದು ಸಾರ್ವಜನಿಕರಿಗೆ ತಿಳಿಸಬೇಕೆಂದು ಹೇಳಿದರು.

ನಗರಸಭೆಯ ಹಿರಿಯ ಸದಸ್ಯ ಉಮಾಶಂಕರ್ ಮಾತನಾಡಿ ಯೋಗೇಶ್ವರ್ ಹದ್ದುಮೀರಿ ಮಾತನಾಡುತ್ತಿದ್ದಾರೆ, ಅವರ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಖಾಸಗಿ ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ಯುಜಿಡಿ ಕಾಮಗಾರಿಗಳನ್ನು ಮಾಡಲಾಗಿಲ್ಲ, ಇನ್ನಾರು ತಿಂಗಳಲ್ಲಿ ಈ ಎಲ್ಲಾ ಕೆಲಸಗಳನ್ನು ಮಾಡಿ ತೋರಿಸುತ್ತೇವೆ, ಕುಡಿಯಲು ಕಾವೇರಿ ನೀರು ಒದಗಿಸುತ್ತೇವೆ, ಇನ್ನು ಮುಂದೆ ಎಚ್ಚರಿಕೆಯಿಂದ ಮಾತನಾಡದೇ ಹೋದರೆ ಸಿ ಪಿ ಯೋಗೇಶ್ವರ್ ವಿರುದ್ಧ ಬಹಿರಂಗ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಗುತ್ತಿಗೆದಾರ ಗೋವಿಂದಳ್ಳಿ ನಾಗರಾಜು, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮುದ್ದುಕೃಷ್ಣ ಮಾತನಾಡಿ ಡಿ ಕೆ ಸಹೋದರ ಹಣ ದ್ವಿಗುಣಗೊಂಡಿದೆ ಎಂದು ಹೇಳುತ್ತಾರೆ ಇವರ ಹಣ ಮತ್ತು ಆಸ್ತಿ ಕಡಿಮೆಯಾಗಿದೆಯೇ ಎಂದು ತಿರುಗೇಟು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಲೆಕೇರಿ ರವೀಶ್, ವೆಂಕಟಾಚಲಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಜಿದ್ದಾಜಿದ್ದಿ ಇಲ್ಲದೆ ಮಂದಗತಿಯಲ್ಲಿ ಏರಿಕೆಯಾದ ಮತದಾನ
ಜಿದ್ದಾಜಿದ್ದಿ ಇಲ್ಲದೆ ಮಂದಗತಿಯಲ್ಲಿ ಏರಿಕೆಯಾದ ಮತದಾನ

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಅಶ್ವಥ್ ನಾರಾಯಣ ರವರ ನೇರ ಸ್ಪರ್ಧೆಯ ಲೋಕಸಭಾ ಚುನಾವಣೆಯು ಇಂದು ಯಾವುದೇ ತ

ಮಹಾವೀರ ಜಯಂತಿ ಪ್ರಯುಕ್ತ ಅನ್ನದಾನ
ಮಹಾವೀರ ಜಯಂತಿ ಪ್ರಯುಕ್ತ ಅನ್ನದಾನ

ಅಹಿಂಸಾ ಪರಮೋಧರ್ಮ ಎಂದು ಸಾರಿದ ಶ್ರೀ ಭಗವಾನ್ ಮಹಾವೀರ ತೀರ್ಥಂಕರರ ಜಯಂತಿಯ ಪ್ರಯುಕ್ತ ಚನ್ನಪಟ್ಟಣ ಜೈನ್ ಸಂಘದವರು ಇಂದು ನಗರದ ನಗರಸಭಾ ಆವರಣದಲ್ಲಿ ಅನ್ನದಾನ ಏರ್ಪಡಿಸಿದ್ದರು.

ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ
ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ

ಮತದಾರ ನಿರ್ಭೀತಿಯಿಂದ ಮತ ಚಲಾಯಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಚುನಾವಣಾ ಆಯೋಗವು ಸೂಕ್ತ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

<

ದಲಿತರು ಹಿಂದುಳಿದವರು ಉಳಿಯಬೇಕಾದರೆ ಮೈತ್ರಿ ಅಭ್ಯರ್ಥಿ ಗೆ ಮತ ನೀಡಿ, ಜಯಂತ್ ಚಾಲುಕ್ಯ
ದಲಿತರು ಹಿಂದುಳಿದವರು ಉಳಿಯಬೇಕಾದರೆ ಮೈತ್ರಿ ಅಭ್ಯರ್ಥಿ ಗೆ ಮತ ನೀಡಿ, ಜಯಂತ್ ಚಾಲುಕ್ಯ

ಸಂವಿಧಾನ ಉಳಿವಿಗೆ, ದೀನ ದಲಿತರು ಹಾಗೂ ಹಿಂದುಳಿದ ವರ್ಗ ದ ಜನ ಮುಂದುವರಿಯಬೇಕಾದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಮೈತ್ರಿ ಪಕ್ಷಗಳಿಂದ ಮಾತ್ರ ಸಾಧ್ಯ, ಬಿಜೆಪಿ ಪಕ್ಷಕ್ಕೆ ಮತ ನೀಡಿದರೆ ಸಂವಿಧಾನಕ್ಕಾಗಲ

ಜೋಡೆತ್ತುಗಳ ಹುಸಿ ಭರವಸೆಗಳಿಂದ ನೊಂದ ಮತದಾರ ? ಬಿಜೆಪಿ ಪರ ಒಲವು ಹೊಂದಿದ್ದಾನೆ, ಯೋಗೇಶ್ವರ್.
ಜೋಡೆತ್ತುಗಳ ಹುಸಿ ಭರವಸೆಗಳಿಂದ ನೊಂದ ಮತದಾರ ? ಬಿಜೆಪಿ ಪರ ಒಲವು ಹೊಂದಿದ್ದಾನೆ, ಯೋಗೇಶ್ವರ್.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಗಾದಿಗೇರಿದ ಕುಮಾರಸ್ವಾಮಿ ಮತ್ತು ಕನಕಪುರ ಕ್ಷೇತ್ರದಿಂದ ಗೆದ್ದು ಜಲಸಂಪನ್ಮೂಲ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಮಂತ್

ಇಪ್ಪತ್ತು ಗಂಟೆಗಳಲ್ಲಿಯೇ ಅದೇ ಜಾಗದಲ್ಲಿ ಡಿಕೆಶಿಗೆ ಪ್ರತ್ಯುತ್ತರಿಸಿ ಶಿವಕುಮಾರ್ ದುಡ್ಡು ಬಿಜೆಪಿಗೆ ಓಟು ಎಂದ ಸಿಪಿವೈ
ಇಪ್ಪತ್ತು ಗಂಟೆಗಳಲ್ಲಿಯೇ ಅದೇ ಜಾಗದಲ್ಲಿ ಡಿಕೆಶಿಗೆ ಪ್ರತ್ಯುತ್ತರಿಸಿ ಶಿವಕುಮಾರ್ ದುಡ್ಡು ಬಿಜೆಪಿಗೆ ಓಟು ಎಂದ ಸಿಪಿವೈ

ನನ್ನನ್ನು ಗಂಡಸಾ ! ಎಂದು ಕೇಳಿದ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ನಿಜವಾದ ಗಂಡಸಾಗಿದ್ರೆ ನಮ್ಮ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನಾನು ಬರಗಾಲ ದಲ್ಲಿ ತುಂಬಿಸಿದ ಹಾಗೆ ನೀರು ತುಂಬಿಸಲಿ, ಆಗ ಅವರನ್

ತಾಲ್ಲೂಕಿನಾದ್ಯಂತ ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ
ತಾಲ್ಲೂಕಿನಾದ್ಯಂತ ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ

ನಗರದ ದೇವಾಲಯಗಳು ಸೇರಿದಂತೆ ತಾಲ್ಲೂಕಿನ ಬಹುತೇಕ ದೇವಾಲಯಗಳಲ್ಲಿ ಅದರಲ್ಲೂ ರಾಮಮಂದಿರಗಳು, ಶ್ರೀ ರಾಮ ದೇವಾಲಯ ಹಾಗೂ ರಾಮ ಭಕ್ತ ಆಂಜನೇಯ ದೇಗುಲಗಳ ಬಳಿ ಶ್ರೀ ರಾಮನವಮಿ ಯ ಪ್ರಯುಕ್ತ ನೀರು ಮಜ್ಜಿಗೆ, ಬೆ

ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಸಿಪಿವೈಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರು
ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಸಿಪಿವೈಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರು

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರ ಬಗ್ಗೆ ಏಕವಚನದಲ್ಲಿ ಮಾತನಾಡಲು ಹಾಗೂ ದೊಡ್ಡಗೌಡರ ಕುಟುಂಬದ ಬಗ್ಗೆ ಹಗುರವಾಗಿ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಗೆ

ತೊಡೆ ತಟ್ಟಿ ಪೊರಕೆಯಲ್ಲಿ ಹೊಡೆಸೋ ಗಂಡು ಎಲೆಕ್ಷನ್ ನಿಲ್ಬೇಕಾಗಿತ್ತು: ಡಿ ಕೆ ಶಿವಕುಮಾರ್
ತೊಡೆ ತಟ್ಟಿ ಪೊರಕೆಯಲ್ಲಿ ಹೊಡೆಸೋ ಗಂಡು ಎಲೆಕ್ಷನ್ ನಿಲ್ಬೇಕಾಗಿತ್ತು: ಡಿ ಕೆ ಶಿವಕುಮಾರ್

ಚನ್ನಪಟ್ಟಣದಲ್ಲಿ ನಮಗೆ ತೊಡೆ ತಟ್ಟಿದ ಗಂಡ್ಸು, ಹೆಂಗಸರ ಕೈಯಲ್ಲಿ ಪೊರಕೆಯಿಂದ ಹೊಡೆಸ್ತೀನಿ ಅಂದವರು ಇಂದಿನ ಚುನಾವಣೆಗೆ ನಿಂತು ಗೆದ್ದು ತೋರಿಸಬೇಕಾಗಿತ್ತು, ಪಾಪ ಯಾರೋ ಕುಸ್ತಿ ನೋಡಲು ಬಂದವರನ್ನೇ ಅಖಾ

ನೀಲಸಂದ್ರ ಭೈರವೇಶ್ವರ ಸ್ವಾಮಿಯ ಅದ್ದೂರಿ ಜಾತ್ರೋತ್ಸವ
ನೀಲಸಂದ್ರ ಭೈರವೇಶ್ವರ ಸ್ವಾಮಿಯ ಅದ್ದೂರಿ ಜಾತ್ರೋತ್ಸವ

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ನೀಲಸಂದ್ರ ಗ್ರಾಮದ ಹೊರವಲಯದಲ್ಲಿರುವ ಶ್ರೀ ಭೈರವೇಶ್ವರ ಸ್ವಾಮಿ ಜಾತ್ರೆಯು ಇಂದು ಅಧಿಕೃತವಾಗಿ ಚಾಲನೆಗೊಂಡಿತು.

ನಿನ್ನೆಯಿಂದ ಜಾತ್ರಾ ಮಹೋತ್ಸವ ಪ್ರಾರಂಭವಾ

Top Stories »  

Top ↑