Tel: 7676775624 | Mail: info@yellowandred.in

Language: EN KAN

    Follow us :


ಭಾವಿಪ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Posted Date: 07 Mar, 2019

ಭಾವಿಪ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ದಿನಾಂಕ ೦೮/೦೩/೨೦೧೯ ರ ಶುಕ್ರವಾರದಂದು ನಗರದ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ  ಮಧ್ಯಾಹ್ನ ೦೩:೦೦ ಗಂಟೆಗೆ ಭಾರತ ವಿಕಾಸ ಪರಿಷತ್ ಕಣ್ವ ಶಾಖೆಯ ವತಿಯಿಂದ *ವಿಶ್ವ ಮಹಿಳಾ ದಿನಾಚರಣೆ* ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತ ವಿಕಾಸ ಪರಿಷತ್ ನ ಕಣ್ವ ಶಾಖೆಯ ಗೌರವ ಪತ್ರಿಕಾ ಕಾರ್ಯದರ್ಶಿ ಗೋ ರಾ ಶ್ರೀನಿವಾಸ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾರ್ಯಕ್ರಮವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲ ರವರು ಉದ್ಘಾಟಿಸಿ ಸಮಾಜದಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೀಣಾಕುಮಾರಿ, ಸಂಚಾರಿ ವಿಭಾಗದ ಎಸ್ ಐ ಶೋಭಾ ವಿ ಕುಮಾರ್, ಭಾವಿಪ ಸದಸ್ಯರಾದ ಸೂರ್ಯಪ್ರಭ ಶ್ರೀನಿವಾಸ, ಶಾಂತಮ್ಮ ನಾಮದೇವ್, ರಾಧಿಕಾರವಿಕುಮಾರ್ ಮತ್ತು ಗಾಯತ್ರಿ ಕೃಷ್ಣಪ್ಪ ವಹಸಿದರೆ ಅಧ್ಯಕ್ಷತೆಯನ್ನು ಭಾವಿಪ ಅಧ್ಯಕ್ಷರಾದ ವಸಂತಕುಮಾರ್ ವಹಿಸಿಕೊಳ್ಳುತ್ತಾರೆ.

ದಸರಾ ಬೊಂಬೆ ಪ್ರದರ್ಶನ, ಸನ್ಮಾನ, ಕಿರುನಾಟಕಗಳು, ಹಾಡುಗಾರಿಕೆ, ನೃತ್ಯ, ಭಜನೆ ಮುಂತಾದ ಕಾರ್ಯಕ್ರಮಗಳನ್ನು ಭಾವಿಪ ದ ಮಹಿಳಾ ಸದಸ್ಯರು ಪ್ರಸ್ತುತ ಪಡಿಸಲಿರುವುದರಿಂದ.

ತಾಲ್ಲೂಕಿನ ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭಾವಿಪ ವತಿಯಿಂದ ಕೋರಲಾಗಿದೆ.ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑