Tel: 7676775624 | Mail: info@yellowandred.in

Language: EN KAN

    Follow us :


೨೦೧೯ ರ ರಾಮನಗರ ಮ್ಯಾರಥಾನ್: ಟಿ - ಶರ್ಟ್ಸ್ ಮಾದರಿಯನ್ನು ಕೃಷ್ಣಾಪುರದೊಡ್ಡಿಯಲ್ಲಿರುವ ದಾರಿದೀಪ ವೃದ್ಧಾಶ್ರಮದಲ್ಲಿರುವ ನಿರಾಶ್ರಿತ ವೃದ್ಧರಿಂದ ಅನಾವ

Posted Date: 08 Mar, 2019

೨೦೧೯ ರ ರಾಮನಗರ  ಮ್ಯಾರಥಾನ್:  ಟಿ - ಶರ್ಟ್ಸ್  ಮಾದರಿಯನ್ನು ಕೃಷ್ಣಾಪುರದೊಡ್ಡಿಯಲ್ಲಿರುವ ದಾರಿದೀಪ ವೃದ್ಧಾಶ್ರಮದಲ್ಲಿರುವ ನಿರಾಶ್ರಿತ ವೃದ್ಧರಿಂದ  ಅನಾವ

ಯೆಲ್ಲೋ ಆಂಡ್ ರೆಡ್ ಫೌಂಡೇಷನ್ಸ್ ಇದೇ ಮಾರ್ಚ್  ೧೦ ನೇ, ಭಾನುವಾರ  ೨೦೧೯ ರಂದು ರಾಮನಗರದಲ್ಲಿ ರೋಟರಿ ಸಿಲ್ಕ್ ಸಿಟಿ ರಾಮನಗರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ರವರ ಸಹಭಾಗಿತ್ವದಲ್ಲಿ ರಾಮನಗರ  ಮ್ಯಾರಥಾನ್ ಆಯೋಜಿಸುತ್ತಿದೆ. 

೨೦೧೯ ರ ರಾಮನಗರ  ಮ್ಯಾರಥಾನ್  ಕಾರ್ಯಕ್ರಮದ ಪ್ರಯುಕ್ತ ಓಟಗಾರರಿಗೆ ನೀಡುವ  ಟಿ - ಶರ್ಟ್ಸ್  ಮಾದರಿಯನ್ನು ಕೃಷ್ಣಾಪುರದೊಡ್ಡಿಯಲ್ಲಿರುವ ದಾರಿದೀಪ ವೃದ್ಧಾಶ್ರಮದಲ್ಲಿರುವ ನಿರಾಶ್ರಿತ ವೃದ್ಧರಿಂದ  ಅನಾವರಣಗೊಳಿಸಲಾಯಿತು.  

 ಈ  ಮ್ಯಾರಥಾನ್ ಓಟವನ್ನು "ನಿರಾಶ್ರಿತ ಅನಾಥ ವೃದ್ಧರ ಕಾಳಜಿ ಹಾಗೂ ಅವರ ಆರೋಗ್ಯದ ಬಗ್ಗೆ ಹಾಗೂ ನೈತಿಕ ಮತದಾನದ ಬಗ್ಗೆ  ಜಾಗೃತಿ" ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅನಾಥ ವೃದ್ಧರ ಏಳಿಗೆಗಾಗಿ  ಸಾರ್ವಜನಿಕ ಮಾಧ್ಯಮಗಳಲ್ಲಿ ವೃದ್ಧರ ಬಗ್ಗೆ ಕಾಳಜಿ ವಹಿಸುವಂತೆ ಯುವಪೀಳಿಗೆಯನ್ನು ಉತ್ತೇಜಿಸುವುದು , ಮೂಲಭೂತ ವಸ್ತುಗಳು ಹಾಗೂ ಅನಿವಾರ್ಯವಾಗಿರುವ ಔಷದಿಗಳನ್ನು ಒದಗಿಸಿಕೊಡುವಂತೆ ಉತ್ತೇಜಿಸುವುದು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ವೈದ್ಯರನ್ನು ಭೇಟಿ ಮಾಡಿಸಿ ಅವರಿಗೆ ನೆರವಾಗುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ರಾಮನಗರ ಮ್ಯಾರಥಾನ್‌ನ ಪ್ರಮುಖ  ಉದ್ದೇಶವಾಗಿದೆ.   

ಈ ಸಂದರ್ಭದಲ್ಲಿ ಯೆಲ್ಲೋ ಆಂಡ್ ರೆಡ್ ಸರ್ವೀಸ್ ಪ್ರೈ.ಲಿ.  ನ ವ್ಯವಸ್ಥಾಪಕ ನಿರ್ದೇಶಕರಾದ ಆನಂದಾಶಿವಾ,  ಹಾಗೂ ರೋಟರಿ ಸಿಲ್ಕ್ ಸಿಟಿ ರಾಮನಗರ ಅಧ್ಯಕ್ಷರಾದ ರೊ।। ರಾಘವೇಂದ್ರ , ಕಾರ್ಯದರ್ಶಿಯಾದ ರೊ।। ಅನುರಾಧ,  ದಾರಿದೀಪ ವೃದ್ದಾಶ್ರಮದ ಸಂಸ್ಥಾಪಕರಾದ ಶ್ರೀಮತಿ ಕವಿತಾರಾವ್ ರವರು  ಹಾಜರಿದ್ದರು. 

ರಾಮನಗರ ಮ್ಯಾರಥಾನ್ ಕಾರ್ಯಕ್ರಮವನ್ನು ರಾಮನಗರ ತಾಲ್ಲೊಕಿನ ಬಸವನಪುರದಲ್ಲಿ ಏರ್ಪಡಿಸಲಾಗಿದ್ದು, ಬೆಳಿಗ್ಗೆ: ೫.೪೫ ಕ್ಕೆ ಪ್ರಾರಂಭಗೊಳ್ಳುತ್ತದೆ. ಓಟದಲ್ಲಿ ಐದು ವರ್ಗಗಳಿವೆ, (ರೂರಲ್ ೭.ಕಿ.ಮೀ, ವಿದ್ಯಾರ್ಥಿ ೭.ಕಿ.ಮೀ, ಹಿರಿಯರ ೭ಕಿ.ಮೀ., ರಾಕ್ ೧೧.ಕಿ.ಮೀ  ಮತ್ತು ರೀಡಿಫೈನ್ ೧/೨ (೨೧.೧ಕಿ.ಮೀ) ಓಟ.) 

ಈ ಜಾಗೃತಿಯ ಅಭಿಯಾನದಲ್ಲಿ ರಾಮನಗರದ ಜನತೆ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑