Tel: 7676775624 | Mail: info@yellowandred.in

Language: EN KAN

    Follow us :


ಕೆರೆಗೆ ನೀರು ಬಿಡಲು ಆಗ್ರಹಿಸಿ ಹೊಂಗನೂರು ಗ್ರಾಮದಲ್ಲಿ ಧರಣಿ

Posted Date: 11 Mar, 2019

ಕೆರೆಗೆ ನೀರು ಬಿಡಲು ಆಗ್ರಹಿಸಿ ಹೊಂಗನೂರು ಗ್ರಾಮದಲ್ಲಿ ಧರಣಿ

ಸಂತೆಮೊಗಳ್ಳಿದೊಡ್ಡಿ ಕೆರೆಗೆ ನೀರು ತುಂಬಿಸಿಲ್ಲ ಎಂದು ಗ್ರಾಮದ ರೈತರು ಇಂದು ಹೊಂಗನೂರು ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಅಧಿಕಾರಿಗಳು, ಡಿ ಕೆ ಶಿವಕುಮಾರ್ ಗೆ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.


ಹೊಡಿಕೆ ಹೊಸಹಳ್ಳಿ ಕೆರೆಗೆ ಡಿಸೆಂಬರ್ ನಲ್ಲಿ ನೀರು ತುಂಬಿಸಿದ್ದು ಕೋಡಿ ಹರಿದ ನೀರು ನಮ್ಮ ಕೆರೆಗೆ ಬರಬೇಕಾಗಿತ್ತು, ತುಂಬಿದ ಮರುಕ್ಷಣವೇ ನಿಲ್ಲಿಸಿ ನಮ್ಮ ಕೆರೆಗೆ ನೀರು ಹರಿಸಲಿಲ್ಲ, ಹೊಂಗನೂರು ಕೆರೆ ಇಷ್ಟು ಹತ್ತಿರವಿದ್ದರೂ ನೀರು ಹರಿಸಲಿಲ್ಲ, ಕೂಡ್ಲೂರು ಕೆರೆ ತುಂಬಿಸಿದ ನಂತರ ಬಿಡುತ್ತೇವೆಂದು ಆಗಲೂ ಬಿಡದೇ ನಮಗೆಲ್ಲ ದ್ರೋಹವೆಸಗಿದ್ದಾರೆ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.


ನಮ್ಮ ತಾಲ್ಲೂಕಿನ ಕೆರೆಗಳು ಬರಿದಾಗಿದ್ದರೂ ಸಹ ಕನಕಪುರ ತಾಲೂಕಿನ ಕೆರೆಗಳಿಗೆ ನೀರು ಹರಿಸಿದ್ದಾರೆ, ನಮ್ಮ ಕೆರೆಗಳನ್ನು ತುಂಬಿಸಿದ ನಂತರ ಅಲ್ಲಿಯ ಕೆರೆಗಳನ್ನು ತುಂಬಿಸಬೇಕೆಂದು ಪಟ್ಟು ಹಿಡಿದರು.


ಒಂದೂವರೆ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ನಂತರ ನೀರಾವರಿ ಇಲಾಖೆಯ ವೆಂಕಟೇಗೌಡ ಮತ್ತು ತಹಶಿಲ್ದಾರ್ ಶಿವಕುಮಾರ್ ಆಗಮಿಸಿ ಮಾತುಕತೆ ನಡೆಸಿ ಇಗ್ಗಲೂರು ಅಣೆಕಟ್ಟೆಯಲ್ಲಿ ಕಡಿಮೆ ನೀರು ಇರುವುದರಿಂದ ಬಿಡಲಾಗಿಲ್ಲ, ಮೇಲಾಧಿಕಾರಿಗಳ ಅನುಮತಿ ಪಡೆದು ಶೀಘ್ರವಾಗಿ ಕೆರೆ ತುಂಬಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ಹಿಂತೆಗೆದುಕೊಂಡರು.


ಧರಣಿಯಲ್ಲಿ ರೋಹಿತ್, ಮಂಜುನಾಥ, ಯಜಮಾನ್ ಮಂಜು, ಮೋಹನ್ ಕುಮಾರ್ ಬಿಜೆಪಿ ಮುಖಂಡ ಆನಂದಸ್ವಾಮಿ ಹಾಗೂ ಎಸ್ ಎಂ ಹಳ್ಳಿ, ಎಸ್ ಎಂ ದೊಡ್ಡಿ ಮತ್ತು ಹೊಡಿಕೆಹೊಸಹಳ್ಳಿ ಗ್ರಾಮದ ರೈತರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑