Tel: 7676775624 | Mail: info@yellowandred.in

Language: EN KAN

    Follow us :


ಇಳೆಗೆ ತಾತ್ಕಾಲಿಕ ತಂಪೆರದ ಮಳೆ

Posted Date: 09 Apr, 2019

ಇಳೆಗೆ ತಾತ್ಕಾಲಿಕ ತಂಪೆರದ ಮಳೆ

ಯುಗಾದಿ ಹಬ್ಬದ ಹಿಂದೆ ಮುಂದೆ ಮಳೆ ಆಗಬೇಕಿತ್ತು ಎಂಬುದು ಜನರ ವಾಡಿಕೆಯ ಮಾತು, ಯುಗಾದಿ ಕಳೆದರೂ ಮಳೆ ಆಗಲಿಲ್ಲ ಎಂದು ಕೊರಗುತ್ತಿದ್ದ ರೈತಾಪಿ ವರ್ಗಕ್ಕೆ ನಿನ್ನೆ ರಾತ್ರಿ ಗುಡುಗು ಸಿಡಿಲು ಸಮೇತ ಅರ್ಧ ಗಂಟೆಗೂ ಹೆಚ್ಚು ಸಮಯ ಜೋರಾದ ಮಳೆ ಬಿದ್ದರೆ ಸ್ವಲ್ಪ ಸಮಯ ತುಂತುರು ಮಳೆ ಬಿದ್ದದ್ದು ಜನರ ಮನದಲ್ಲಿ ಹರ್ಷ ತುಂಬಿದೆ.


ರಾತ್ರಿ ೧೨:೧೫ ಕ್ಕೆ ಶುರುವಾದ ಮಳೆ ಸುರಿಯಲು ಪ್ರಾರಂಭವಾಯಿತಾದರೂ ಮಳೆಗಿಂತ ಗುಡುಗು ಸಿಡಿಲಿನ ಆರ್ಭಟವೇ ಹೆಚ್ಚಾಗಿತ್ತು, ರಾತ್ರಿ ಸಮಯವಾದ್ದರಿಂದ ಸಿಡಿಲಿಗೆ ಜನ ಜಾನುವಾರುಗಳಿಗೆ ತೊಂದರೆಯಾದ ಉದಾಹರಣೆ ಎಲ್ಲೂ ವರದಿಯಾಗದಿರುವುದು ಸಂತಸದ ವಿಷಯ.


ಯುಗಾದಿ ಹಬ್ಬದ ನಂತರ ಪ್ರಾರಂಭವಾದ ಹೊಸ ಮಳೆಯು ಸದ್ಯದ ಪರಿಸ್ಥಿತಿಯಲ್ಲಿ ಉಂಟಾಗಿದ್ದ ಬೇಸಿಗೆಗೆ ತಂಪೆರದಿದೆ ಎಂದು ಭಾವಿಸಲಾಗದು, ಕನಿಷ್ಠ ಎರಡು ಮೂರು ದಿನವಾದರು ಇಳೆ ತಂಪಾಗುವಂತಹ ಮಳೆ ಬಿದ್ದರೆ ಮಾತ್ರ ಉಪಯೋಗವಾಗುತ್ತದೆ, ಇಲ್ಲವಾದರೆ ಈ ಬೇಸಿಗೆಯ ಬಿಸಿಲಿಗೆ ಜನ ಜಾನುವಾರುಗಳಿಗೆ ಕಾಯಿಲೆ ಕಟ್ಟಿಟ್ಟ ಬುತ್ತಿ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑