Tel: 7676775624 | Mail: info@yellowandred.in

Language: EN KAN

    Follow us :


ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಬಿಜೆಪಿಯ ಅಬ್ಬರದ ಪ್ರಚಾರ

Posted Date: 11 Apr, 2019

ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಬಿಜೆಪಿಯ ಅಬ್ಬರದ ಪ್ರಚಾರ

ಮುಖ್ಯಮಂತ್ರಿಗಳ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ತಾಲೂಕಿನಾದ್ಯಂತ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹಾಗೂ ಬಿಜೆಪಿಯ ವಕ್ತಾರ ಹಾಗೂ ಬೆಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಶ್ವಥ್ ನಾರಾಯಣ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಇಂದು ಹಲವಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಹಿರಂಗ ಸಭೆ ನಡೆಸಿ ಹೆಚ್ ಡಿಕೆ ಮತ್ತು ಡಿಕೆ ಸಹೋದರರಿಗೆ ಟಾಂಗ್ ನೀಡುವ ಮೂಲಕ ಮತದಾರ ಪ್ರಭುಗಳ ಬಳಿ ಮತಯಾಚನೆ ಮಾಡಿದರು.


ಹೊಂಗನೂರು ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ವಿರುದ್ಧ ಏಕವಚನದಲ್ಲಿ  ಮಾತನಾಡಿದ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಮುಖ್ಯಮಂತ್ರಿಗಳು ಕ್ಷೇತ್ರ ವನ್ನು ಮರೆತಿದ್ದಾರೆ, ಚನ್ನಪಟ್ಟಣ ತಾಲ್ಲೂಕು ಎಲ್ಲಿದೆ ? ಹೇಗಿದೆ ಎಂಬುದನ್ನು ಸಹ ಮರೆತಿದ್ದಾರೆ ! ಯಾವುದೇ ಅಭಿವೃದ್ಧಿ ಮಾಡದ ಇಂತಹವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ, ತಾಲ್ಲೂಕಿನ ಒಂದು ಊರಿನ ಹೆಸರು ಸಹ ಅವರಿಗೆ  ಗೊತ್ತಿಲ್ಲ, ಅವರು ವಾಮ ಮಾರ್ಗದಲ್ಲಿ ಗೆದ್ದದ್ದೇ ವಿನ: ನಿಜವಾದ ಗೆಲುವಲ್ಲ ಎಂದರು.


ಕಾಲ ಬದಲಾಗುತ್ತಿರುತ್ತದೆ, ಚನ್ನಪಟ್ಟಣದ ಜನತೆ ನನ್ನ ಮತ್ತು ಬಿಜೆಪಿ ಪಕ್ಷದ ಪರ ಇದ್ದಾರೆ, ದೀನ ದಲಿತರು, ಬಡವರು, ಹಿಂದುಳಿದ ವರ್ಗಗಳ ಮಂದಿಯೂ ನಮ್ಮ ಜೊತೆ ಇದ್ದಾರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕಿಂತ ಹೆಚ್ಚು ಮತಗಳನ್ನು ಬಿಜೆಪಿ ಪಕ್ಷಕ್ಕೆ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಮೋದಿಯವರ ನಾಮಬಲ ಹಾಗೂ ದೇಶದ ನವ ನಿರ್ಮಾಣಕ್ಕಾಗಿ ಬಿಜೆಪಿ ಪಕ್ಷಕ್ಕೆ ಎಲ್ಲರೂ ಮತ ನೀಡುತ್ತಾರೆ.


ಮುಖ್ಯಮಂತ್ರಿಗಳು ಗೆದ್ದು ಹೋದ ನಂತರ ಒಂದು ಸಭೆ ಹೊರತು ಪಡಿಸಿ ಅಭಿವೃದ್ಧಿಗಾಗಿ ಒಂದು ದಿನವೂ ತಾಲ್ಲೂಕು ಪ್ರವಾಸ ಮಾಡಿಲ್ಲ, ಮಗನನ್ನು ಗೆಲ್ಲಿಸಿಕೊಳ್ಳುವುದಕ್ಕೋಷ್ಕರ ಮಂಡ್ಯದಲ್ಲಿ ಹಗಲು ರಾತ್ರಿ ಕಳೆಯುತ್ತಿದ್ದಾರೆ, ನಾವು ಗೆಲ್ಲಿಸಿರುವುದು ನಮ್ಮ ತಾಲೂಕನ್ನು ಅಭಿವೃದ್ಧಿ ಮಾಡಲು ಎಂದು ಅವನನ್ನು ನೀವು ಕೇಳಬೇಕು ಎಂದು ಏಕವಚನದಲ್ಲಿಯೇ ಮಾತನಾಡಿದರು. ಅಧಿಕಾರದಲ್ಲಿ ಇರುವವರೇ ಏನು ಮಾಡುತ್ತಿಲ್ಲ, ಇನ್ನು ವಿರೋಧ ಪಕ್ಷದವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.


ಇದೇ ವೇಳೆ ಬಿಜೆಪಿಯ ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅಭ್ಯರ್ಥಿ ಅಶ್ವಥ್ ನಾರಾಯಣ ಮಾತನಾಡಿದರು.

ಜಿಲ್ಲಾಧ್ಯಕ್ಷ ಎಂ ರುದ್ರೇಶ್, ತಾಲ್ಲೂಕು ಅಧ್ಯಕ್ಷ ಎಂ ಆನಂದಸ್ವಾಮಿ, ಹಾಗೂ ಸ್ಥಳೀಯ ನಾಯಕರು ಜೊತೆಯಲ್ಲಿದ್ದರು.


ವಿಧಾನಸಭೆ ಚುನಾವಣೆ ಯ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಿ ಪಿ ಯೋಗೇಶ್ವರ್ ಹಳೆಯ ಸೇಡನ್ನು ತೀರಿಸಿಕೊಳ್ಳಲು ಮೈತ್ರಿ ಪಕ್ಷಕ್ಕಿಂತಲೂ ಹೆಚ್ಚು ಮತ ಕ್ರೋಢಿಕರಿಸಿದರೆ ಚುನಾವಣೆ ಯ ನಂತರ ರಾಜ್ಯದಲ್ಲಿ ಬದಲಾವಣೆಗಳಾದರೆ, ಸೂಕ್ತ ಸ್ಥಾನಮಾನ ಸಿಗಬಹುದು ಎಂಬ ಆಲೋಚನೆ ಇಟ್ಡುಕೊಂಡೇ ಅಖಾಡಕ್ಕೆ ಇಳಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. 


ಇದೇ ವೇಳೆ ವಂದಾರಗುಪ್ಪೆ,ಹೊಂಗನೂರು, ಕೋಡಂಬಳ್ಳಿ, ಅಕ್ಕೂರು, ಇಗ್ಗಲೂರು, ಕೂಡ್ಲೂರು ಮತ್ತು ಮಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಹಿರಂಗ ಮತಯಾಚನೆ ಮಾಡುವುದಾಗಿ ತಿಳಿದು ಬಂತು.


ಸಿ ಪಿ ಯೋಗೇಶ್ವರ್ ರವರ ಹಿಂದೆ ನೂರಾರು ಬೈಕ್ ಸವಾರರು ಸಹ ಬಿಜೆಪಿಯ ಬಾವುಟ ಮತ್ತು ಟೋಪಿ ಧರಿಸಿ ಸಾಥ್ ನೀಡಿದರು, ಬೈಕ್ ಸವಾರರು ಪೆಟ್ರೋಲ್ ತುಂಬಿಸಲು ಬಂದಿದ್ದರಿಂದ ಅಂಬೇಡ್ಕರ್ ನಗರದ ಲ್ಲಿ ಇರುವ ಪೆಟ್ರೋಲ್ ಬಂಕ್ ನಲ್ಲಿ ದಿನನಿತ್ಯದ ವಾಹನ ಸವಾರರಿಗೆ ಅವಕಾಶ ಇಲ್ಲವಾಗಿತ್ತು.



ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑