Tel: 7676775624 | Mail: info@yellowandred.in

Language: EN KAN

    Follow us :


ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ

Posted Date: 13 Feb, 2020

ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ

ಚನ್ನಪಟ್ಟಣ.ಫೆ.೧೩:


ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ಒಂದೇ ಇರಬೇಕು, ಈಗಿರುವ ಹಲವು ಬಣಗಳು ಒಗ್ಗೂಡಬೇಕು. ವಿಚಾರ ವಿನಿಮಯವಾಗಬೇಕು, ಮೂಲ ಉದ್ದೇಶ ಗಳನ್ನು ಅರಿತು ಯುವಕ ರನ್ನು ಸಂಘಟಿಸಿ ರೈತ ಸಂಘಟನೆಯನ್ನು ಬಲಪಡಿ ಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷ, ಮಾಜಿ ಶಾಸಕ ದಿವಂಗತ ಕೆ ಎಸ್ ಪುಟ್ಟಣ್ಣಯ್ಯರವರ ಧರ್ಮ ಪತ್ನಿ ಸುನೀತಾ ಪುಟ್ಟಣ್ಣಯ್ಯ ಹೇಳಿದರು.

ಅವರು ಇಂದು ನಗರದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರೊ. ಎಂ.ಡಿ ನಂಜುಂಡಸ್ವಾಮಿ ರವರ ೮೪ ನೇ ಜನ್ಮ ದಿನಾಚರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಪ್ರೊ ನಂಜುಂಡಸ್ವಾಮಿ, ಪುಟ್ಟಣ್ಣಯ್ಯ, ಎಚ್.ಎಸ್ ರುದ್ರಪ್ಪ, ಎನ್.ಡಿ ಸುಂದರೇಶ್ ಮತ್ತು ಸೋಮಲಿಂಗಯ್ಯನವರಂತಹ ಅನೇಕ ಧುರೀಣರು ಇಂದು ನಮ್ಮನ್ನಗಲಿದ್ದಾರೆ. ಇವರು ಮತ್ತೆ ಹುಟ್ಟಿ ಬರುತ್ತಾರೆ ಎಂಬ  ಕನಸಿಗಿಂತ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ, ನಡೆದ ದಾರಿಯಲ್ಲಿ  ಸಂಘಟನೆಯನ್ನು ಬಲಪಡಿಸಿ ರೈತರಿಗಾಗುತ್ತಿರುವ ಸಂಕಷ್ಟಗಳನ್ನು ಅಳಿಸಿ, ಸರ್ಕಾರದ ಕಣ್ತೆರೆಸಬೇಕು ಎಂದು ಕರೆ ನೀಡಿದರು.


ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮಾತನಾಡಿ ಎಂಬತ್ತರ ದಶಕಕ್ಕೂ ಮುಂಚೆ ನರಗುಂದ, ನವಲಗುಂದ ನಗರದಲ್ಲಿ ಉಪಯೋಗಿಸದ ನೀರಿಗಾಗಿ ಅಂದಿನ ಗುಂಡೂರಾಯರ ಸರ್ಕಾರ ನೀರಿನ ಕರ ವಿಧಿಸಿತ್ತು. ಅದನ್ನು ವಿರೋಧಿಸಿ ಏಕಾ ಏಕಿ ರೈತರೇ ಸಂಘಟಿತರಾಗಿ ಹೋರಾಟ ನಡೆಸಿದರು. ಇದರ ಫಲಾಫಲದಿಂದ ಇಬ್ಬರು ರೈತರು ಮೃತರಾದರು. ಮತ್ತು ಒಬ್ಬ ಪೊಲೀಸ್ ಅಧಿಕಾರಿ ಯನ್ನು ಬಲಿಕೊಡಲಾಯಿತು. ಇದನ್ನು ಮನಗಂಡ ಪ್ರೊ ನಂಜುಂಡಸ್ವಾಮಿ ಯವರು ಸ್ಥಳಕ್ಕೆ ಭೇಟಿ ನೀಡಿ ರೈತರನ್ನು  ಎಚ್ಚರ ಗೊಳಿಸಿ ಸಂಘಟನೆಯನ್ನು  ಹುಟ್ಟು ಹಾಕಿ ಮುನ್ನಡೆ ಸಿದರು ಎಂದರು.


ಇಂತಹ ನಂಜುಂಡಸ್ವಾಮಿ ಯವರ ಮಾರ್ಗದರ್ಶನದಲ್ಲಿ ರೈತರ ಮನೆ ಜಪ್ತಿ ನಿಂತಿತ್ತು. ರೈತನಿಗೆ ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು ಗೌರವ ನೀಡುವುದನ್ನು ಕಲಿಸಿದರು ಎಂದು ನೆನಪಿಸಿಕೊಂಡರು.


ಕುಮಾರಸ್ವಾಮಿಯವರು ಘೋಷಿಸಿದ ರೈತರ ಸಾಲ ಮನ್ನಾ ಹೇಳಿದ ಮಟ್ಟಿಗೆ ಆಗಲಿಲ್ಲ, ಋಣಮುಕ್ತ ಕಾಯಿದೆ ಹಾಗೆಯೇ ಮಲಗಿದೆ. ಯಡಿಯೂರಪ್ಪ ಸರ್ಕಾರ ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಶೀಘ್ರವಾಗಿ ಜಾರಿಗೆ ತರಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು 

ಎಚ್ಚರಿಕೆ ನೀಡಿದರು.


ರೈತರಿಗಾಗಿ ಬದುಕಿದ ವಿಶ್ವಚೇತನ ಪ್ರೊ ನಂಜುಂಡಸ್ವಾಮಿ ಯವರ ಮಕ್ಕಳು ಇಂದು ತಮ್ಮ ವೈಯುಕ್ತಿಕ ಬೆಳವಣಿಗೆಗಾಗಿ ಸಂಘಟನೆಯನ್ನು ವಿಘಟನೆ ಮಾಡಿದರು. ಇವರು ತಂದೆಗೆ ತಕ್ಕ ಮಕ್ಕಳಾಗದೆ ದಾರಿ ತಪ್ಪಿದ ಮಕ್ಕಳಾದರು ಎಂದು ಆಕ್ಷೇಪಿಸಿದರು.


ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮುಂದಿನ ಮಾಚ್೯ ತಿಂಗಳೊಳಗೆ ರೈತ ಸಂವಿಧಾನವನ್ನು ಪ್ರಸ್ತುತ ಪಡಿಸಲು ತೀರ್ಮಾನಿಸಿದ್ದೇವೆ. ವಿಘಟನೆಯಾಗಿರುವ ಸಂಘಟನೆಯನ್ನು ಒಗ್ಗೂಡಿಸುವ ಕೆಲಸ, ಜಿಲ್ಲಾ ಮತ್ತು ರಾಜ್ಯ ಮಟ್ಟದ ರೈತ ಸಂಘದ ಪದಾಧಿಕಾರಿಗಳು ಪ್ರತಿ ವರ್ಷವೂ ಆಸ್ತಿ ಘೋಷಿಸಿ ಕೊಳ್ಳಬೇಕು, ಹದಿನೆಂಟ ರಿಂದ ಮೂವತೈದು ವರ್ಷಗಳ ಯುವಕ ಯುವ ತಿಯರನ್ನು ಸಂಘಟಿಸು ವಂತಹ ಕೆಲಸವನ್ನು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.


ಇದಕ್ಕೂ ಮೊದಲು ಮಂಗಳವಾರಪೇಟೆ ಯಿಂದ  ರೈತ ನಾಯಕ ಪ್ರೊ ನಂಜುಂಡಸ್ವಾಮಿ ಯವರ ಭಾವಚಿತ್ರವನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ತರಲಾಯಿತು.


ಮೆರವಣಿಗೆಯ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರು ಇಲ್ಲಿನ ಪೊಲೀಸ್ ಠಾಣೆಯ ಬಳಿ ಮಾನವ ಸರಪಳಿ ರಚಿಸಲು ಮುಂದಾದರು. ಆ ಸಂದರ್ಭದಲ್ಲಿ ಪೊಲೀಸರು ಮತ್ತು ರೈತ ಕಾರ್ಯಕರ್ತರ ಮಧ್ಯೆ ವಾಗ್ವಾದಗಳು ನಡೆದವು ಆದರೆ ಪೊಲೀಸರು ಅದನ್ನು ತಡೆದರು. ಇದರಿಂದ ಸಂಚಾರ ಸಮಸ್ಯೆ ಉಂಟಾಗುತ್ತದೆ ಬೇಡ ಎಂದು ರೈತ ಸಂಘದ ಕಾರ್ಯಕರ್ತರನ್ನು ಒಪ್ಪಿಸಿ ದರು. ಆ ನಂತರ ಮೆರ ವಣಿಗೆಯು ಸರಾಗವಾಗಿ ಸಾಗಿತು.

ರಾಜ್ಯದ ಹಲವಾರು ಜಿಲ್ಲೆಗಳ ರೈತ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.


ಹಿರಿಯ ರೈತ ಮುಖಂಡರಾದ ಸು.ತ ರಾಮೇಗೌಡ, ತೊರೆಹೊಸೂರು ಕುಮಾರಸ್ವಾಮಿ, ಖಾಸಿಂ ಆಲಿ ಆಜಾದ್, ಸುನೀತಾ ಪುಟ್ಟಣ್ಣಯ್ಯ, ಅರಸು ಮೈಸೂರು ರವರನ್ನು ಸನ್ಮಾನಿಸಲಾಯಿತು.

ರಾಜ್ಯ ಉಪಾಧ್ಯಕ್ಷ ಎಂ ರಾಮು ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಅಧ್ಯಕ್ಷ ಕೆ. ಮಲ್ಲಯ್ಯ ನವರು ಸ್ವಾಗತಿಸಿದರು. ವೇದಿಕೆ ಯಲ್ಲಿ ಟಿ. ಮಲೇನೂರು ಎಂ ಶಂಕರಪ್ಪ, ಸೇರಿದಂತೆ ಅನೇಕ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿ ಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ
ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ರಾಜ್ಯ ಸರ್ಕಾರವು ಕೃಷಿ ಭೂಮಿಗೆ ಸಂಬಂಧಿಸಿದ ಸೆಕ್ಷನ್ ೭೯ ಎ ಮತ್ತು ಬಿ ಯನ್ನು ರದ್ದು ಪಡಿಸಿ ಅನ್ನದಾತನ ಬೆನ್ನಿಗೆ ಬರೆ ಎಳೆದು ಬಲಾ

ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ
ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ

ಚನ್ನಪಟ್ಟಣ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಗ್ರಾಮ ಲೆಕ್ಕಿಗ, ಕಂದಾಯ

ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ
ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ

ಚನ್ನಪಟ್ಟಣ: ನಗರದ ಹೊರವಲಯದಲ್ಲಿರುವ ದೊಡ್ಡಮಳೂರು ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದ ಬಳಿಯ ಬಯಲು ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಡಿಯಲ್ಲಿ ಒಂ

ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ
ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ

ಚನ್ನಪಟ್ಟಣ: ನೂತನ ತಂತ್ರಜ್ಞಾನ ಎನ್ನುವುದು ಉಳ್ಳವರ, ವಿದೇಶಿಗರ ಪಾಲಾಗದೇ ದೇಶಕ್ಕೆ ಅನ್ನ ನೀಡುವ ದೇಶದ ಬೆನ್ನೆಲುಬು ಎಂದೆನಿಸಿಕೊಂಡ ರೈತಾಪಿ ವರ

ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ
ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

ಚನ್ನಪಟ್ಟಣ:ಫೆ/೧೩/೨೦/ಗುರುವಾರ.


ರೈತರ ರಕ್ಷಣೆಯನ್ನು ಕಾಯುವ ಬದಲು ಅವರ ಭಕ್ಷಣೆಗಾಗಿಯೇ ನಿಂತಿರುವ ಬೀಜಕಾಯಿದೆ, ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರ ಒಕ್ಕಲೆಬ್ಬಿಸುವ ಹುನ್ನಾರ, ರಾಮನಗರ ಜಿಲ್ಲೆ ನುಂಗಿ ನೀರು ಕುಡಿದು ತನ

ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ
ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ

ಚನ್ನಪಟ್ಟಣ.ಫೆ.೧೩:


ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ಒಂದೇ ಇರಬೇಕು, ಈಗಿರುವ ಹಲವು ಬಣಗಳು ಒಗ್ಗೂಡಬೇಕು. ವಿಚಾರ ವಿನಿಮಯವಾಗಬೇಕು, ಮೂಲ ಉದ್ದೇಶ ಗಳನ್ನು ಅರಿತು ಯುವಕ ರನ್ನು ಸಂಘಟಿಸಿ ರೈತ ಸಂಘಟನೆಯನ್ನು ಬಲಪಡಿ ಸ

ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?
ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?

ಎಂಭತ್ತರ ದಶಕದ ಕರ್ನಾಟಕ ರಾಜ್ಯ ರೈತ ಸಂಘ ೨೦೧೦ ನೆಯ ಇಸವಿ ಹೊತ್ತಿಗೆ ಸಿಟಿಲೊಡೆದು, ೨೦೨೦ ನೆಯ ಇಸವಿಯ ಹೊತ್ತಿಗೆ ರೆಂಬೆಕೊಂಬೆಗಳಾಗಿ ಕೆಲ ಮುಂದಾಳುಗಳು ನಗರ ಸೇರಿ ವಿಧಾನಸೌಧದ ಒಳಹೊಕ್ಕು ತಮ್ಮ ಬೇಳೆ ಬೇಯ

ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ
ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಈ ಬಾರಿ ರಾಗಿ ಬೆಳೆಯು ಹುಲುಸಾಗಿ ಬೆಳೆದಿದ್ದು ರೈತನ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು.

ಆದರ

ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ
ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ

ಚನ್ನಪಟ್ಟಣ: ಈ ಬಾರಿ ಕಾಲಕಾಲಕ್ಕೆ ಸರಿಯಾಗಿ ಬಿದ್ದ ಮಳೆಯಿಂದಾಗಿ ಜಿಲ್ಲಾದ್ಯಂತ ಬಿತ್ತಿರುವ ರಾಗಿ ಚನ್ನಾಗಿ ಬೆಳೆದಿದ್ದು ರೈತರ ಮೊಗದಲ್ಲಿ ಸಂತಸ ಎದ್ದು ಕಾಣ

ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*
ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ದಾಖಲೆಯ ಎನ್ ಆರ್ ಕಾಲೋನಿಯ ತೋಟವೊಂದರ ಹುಣಸೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯನ್ನು ಬಿಡಿಸಿದರೆ ರಕ್ರ

Top Stories »  


Top ↑