Tel: 7676775624 | Mail: info@yellowandred.in

Language: EN KAN

    Follow us :


ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

Posted Date: 13 Feb, 2020

ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

ಚನ್ನಪಟ್ಟಣ:ಫೆ/೧೩/೨೦/ಗುರುವಾರ.


ರೈತರ ರಕ್ಷಣೆಯನ್ನು ಕಾಯುವ ಬದಲು ಅವರ ಭಕ್ಷಣೆಗಾಗಿಯೇ ನಿಂತಿರುವ ಬೀಜಕಾಯಿದೆ, ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರ ಒಕ್ಕಲೆಬ್ಬಿಸುವ ಹುನ್ನಾರ, ರಾಮನಗರ ಜಿಲ್ಲೆ ನುಂಗಿ ನೀರು ಕುಡಿದು ತನ್ನ ಬೇಳೆ ಬೇಯಿಸಿಕೊಳ್ಳಲು ನಿಂತಿರುವ ನವಬೆಂಗಳೂರು ಎಂಬ ರಾಕ್ಷರರು, ಮೂಲನಿವಾಸಿಗಳಿಗೆ ಆತಂಕ ತಂದಿಟ್ಟಿರುವ ಸಿಎಎ/ಎನ್ಆರ್ಸಿ, ಎನ್ನಾರ್ಪಿ ಎಂಬ ಭೂತಗಳಂತಹ ಅನೇಕ ಸಮಸ್ಯೆಗಳು ಗುರುವಾರ ನಡೆದ  ರೈತಸಂಘದ ಜನ ಜಾಗೃತಿ ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದ ವಿಚಾರಗಳು.


ಸಮಾವೇಶದ ಅಂಗವಾಗಿ ಪ್ರಚಲಿತವಾಗಿ ಚಾಲ್ತಿಯಲ್ಲಿರುವ ನಾಲ್ಕು ಕಾಯಿದೆಗಳ ಬಗ್ಗೆ ರಾಜ್ಯದ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡನೆ ಮಾಡಿದರು. ಬಳಿಕ ರೈತಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಕೆಲ ಪ್ರಮುಖ ನಿರ್ಣಯಗಳನ್ನು ಇದೇ ವೇಳೆ ತೆಗೆದು ಕೊಳ್ಳಲಾಯಿತು.


*ರೈತರ ಬದುಕು ಮತ್ತು ಬೀಜದ ಹಕ್ಕುಗಳನ್ನು ಕಸಿದುಕೊಳ್ಳುವ ಕಾಯಿದೆ:*


ಸಮಾವೇಶದಲ್ಲಿ ವಿಚಾರ ಮಂಡನೆ ಮಾಡಿದ ಸಹಜ ಸಾಗುವಳಿ ಪತ್ರಿಕೆಯ ಸಂಪಾದಕಿ ಸಂಸ್ಥೆಯ ವಿ.  ಗಾಯತ್ರಿ, ಕೇಂದ್ರ ಸರ್ಕಾರ ರೂಪಿಸಿರುವ ಬೀಜಕಾಯಿದೆ -ಕಾಯಿದೆ ಬಗ್ಗೆ ಮಾತನಾಡಿ, ಹಲವಾರು ಗೊಂದಲಗಳಿಂದ ಕೂಡಿರುವ ಈ ಕಾಯಿದೆ ಯಲ್ಲಿ ಸರ್ಕಾರದ ಬೀಜನಿಗಮ ಮತ್ತು ರೈತರ ಬೀಜ ಉತ್ಪಾದಿಸುವ ಹಕ್ಕನ್ನು ಕಸಿದು ಬೀಜಕಂಪನಿಗಳಿಗೆ ನೀಡುವ ಹುನ್ನಾರ ನಡೆದಿದೆ. ಕಾಯಿದೆಯಲ್ಲಿ ಕೆಲ ಅಂಶಗಳು ರೈತರಿಗೆ ಪರವಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತವೆಯಾದರೂ ಆಳಕ್ಕಿಳಿದು ಚಿಂತನೆ ನಡೆಸಿರುವ ರೈತರಿಗೆ ಇದರಿಂದ ಯಾವುದೇ ಲಾಭವಿಲ್ಲ ಇದನ್ನು ನೀವು ಅಂದಿನ ಬೀಜ-ರಾಜ ಹಾಗೂ ಇಂದಿನ ಖಾಸಗಿ ಕಂಪೆನಿಗಳ ಬೀಜಗಳ ವ್ಯತ್ಯಾಸಗಳಲ್ಲಿ ಕಂಡುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.


ಈಗಾಗಲೇ ಹೈಬ್ರಿಡ್ ಬೀಜಗಳು ರೈತರನ್ನು ದಿಕ್ಕು ತಪ್ಪಿಸಿವೆ. ರೈತರ ಬಳಿಯಿದ್ದ ಬೀಜಗಳ ಸಂಗ್ರಹವನ್ನು ಕೊಂಡು, ತಮ್ಮದೇ ಕಳಪೆ ಬೀಜ ಕೊಟ್ಟು ಹಾಳುಮಾಡುತ್ತಿವೆ. ಹೊಸಕಾಯಿದೆ ಪ್ರಕಾರ ರೈತರ ಬೀಜದ ಹಕ್ಕು ಮತ್ತು ಬೀಜ ನಿಗಮಗಳನ್ನು ಬಲಿಷ್ಟ ಮಾಡುತ್ತದೆ ಎಂದು ನಂಬಲಾಗಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿವೆ. ಇಂತಹ ಅಪಾಯ ದಿಂದ ರೈತರನ್ನು ಆಳುವ ಸರ್ಕಾರಗಳು ಕಾಪಾಡಬೇಕಿದ್ದು, ಯಾವುದೇ ಕಾರಣಕ್ಕೂ ಬೀಜಕಾಯಿದೆ ಜಾರಿಗೆ ಬರದಂತೆ ರೈತಸಂಘವೂ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.


*ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ:*


ಸಮಾವೇಶದಲ್ಲಿ ವಿಚಾರ ಮಂಡಿಸಿದ ಡಾ.ಎಚ್.ವಾಸು ರವರು ಕೇಂದ್ರ ಸರ್ಕಾರ ೨೦೧೬ ರಲ್ಲಿ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿತ್ತು. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಭೂಮಿ ಗುತ್ತಿಗೆ ಕಾಯಿದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾಯಿದೆ ರೈತರ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಗೆ ನೀಡಲು ನಡೆಸುತ್ತಿರುವ ಹುನ್ನಾರವಾಗಿದ್ದು, ಕಂಪನಿಗಳು, ಕೆಲ ಬಂಡವಾಳಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯಿದೆಯಲ್ಲಿ ಕೆಲ ಅಂಶಗಳನ್ನು ಸೇರಿಸಲಾಗಿದೆ. ಇದನ್ನು ರೈತ ಮುಖಂಡರು ಮತ್ತು ಸಂಘಸಂಸ್ಥೆಗಳ ಮುಖ್ಯಸ್ಥರು ಕೂಲಂಕುಷವಾಗಿ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಬೇಕು, ಇಲ್ಲವಾದರೆ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಸರಾಸರಿ ಭೂಮಿ ಪ್ರತಿಯೊಬ್ಬ ವ್ಯಕ್ತಿಗೆ ೧೯ ಗುಂಟೆ ಇದೆ. ರೈತರಿಂದ ಬೇಸಾಯ ಮಾಡಲು ಸಾಧ್ಯವಿಲ್ಲ, ಖಾಸಗಿ ಕಂಪನಿಗಳಿಂದ ಬೇಸಾಯ ಮಾಡಿಸುತ್ತೇವೆ, ಅವರಿಂದ ಹೆಚ್ಚು ಲಾಭ ಕೊಡಿಸುತ್ತೇವೆ ಎಂದು ಭ್ರಮೆ ಸೃಷ್ಟಿಸಿ ರೈತರ ಭೂಮಿಯನ್ನು ವಾಮಮಾರ್ಗದಲ್ಲಿ ಅಂಬಾನಿ, ಅದಾನಿಗಳ ಕೈಗೆ ನೀಡುವ ಹುನ್ನಾರ ಈ ಕಾಯಿದೆಯಲ್ಲಿ ಅಡಕವಾಗಿದೆ. ರೈತರಿಗೆ ಯಾವುದೇ ರಕ್ಷಣೆ ನೀಡದೆ ಅವರ ಜಮೀನಿನ್ನು ಹಿಂಬಾಗಿಲಿನಿಂದ ಕಬಳಿಸುವ ಈ ಕಾಯಿದೆ ಭವಿಷ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಅಪಾಯ ತಂದೊಡ್ಡಲಿದೆ ಎಂದು ಎಚ್ಚರಿಸಿದರು.


*ನವಬೆಂಗಳೂರು ಎಂಬ ರಕ್ಕಸ ನಮಗೆ ಬೇಡ:*


ಚನ್ನಪಟ್ಟಣ ಜಿಲ್ಲೆಯಾಗಬೇಕು ಎಂಬ ಕನಸು ಕಂಡಿದ್ದ ಇಂದಿನ ಜಿಲ್ಲೆಯ ಜನತೆಗೆ ರಾಮನಗರ ಜಿಲ್ಲೆ ನಿರ್ಮಾಣವಾಗಿದ್ದು, ಈ ಭಾಗದ ಜನತೆಗೆ ಆಡಳಿತ ಯಂತ್ರ ಹತ್ತಿರವಾಗಲಿ ಎಂಬ ಉದ್ದೇಶದಿಂದ. ಆದರೆ ಜಿಲ್ಲೆಗೆ ನವಬೆಂಗಳೂರು ಎಂದು ನಾಮಕರಣ ಮಾಡುವ ಹುನ್ನಾರವನ್ನು ಕೆಲ ರಿಯಲ್‍ ಎಸ್ಟೇಟ್ ರಾಜಕಾರಣಿಗಳು ಮುಂದು ಮಾಡಿದ್ದು, ಇದರಿಂದಾಗಿ ಜಿಲ್ಲೆಯ ಸಂಸ್ಕೃತಿ ಮತ್ತು ಕೃಷಿಕರಿಗೆ ಅಪಾಯ ಎದುರಾಗಲಿದೆ ಎಂದು ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಎಚ್ಚರಿಸಿದರು.

ಬೃಹತ್ ಬೆಂಗಳೂರಿನ ಎಲ್ಲಾ ಕಸ ಮತ್ತು ರಾಸಾಯನಿಕಗಳನ್ನು ಇಲ್ಲಿ ತಂದು ಸುರಿಯಲು ಹಾಗೂ ಬಡ ರೈತರ ಜಮೀನನ್ನು ಕವಡೆ ಕಾಸಿಗೆ ಕೊಂಡು ಆಗರ್ಭ ಶ್ರೀಮಂತರಾಗಲು ರಾಜಕಾರಣಿಗಳು ಅವಣಿಸುತ್ತಿದ್ದಾರೆ. ಇದಕ್ಕೆ ರೈತರು ಅವಕಾಶ ನೀಡಬಾರದು ಎಂದು ರೈತರಿಗೆ ಕರೆ ನೀಡಿದರು.


ಸಮಾವೇಶದಲ್ಲಿ ನವಬೆಂಗಳೂರು ಬಗ್ಗೆ ವಿಚಾರ ಮಂಡನೆ ಮಾಡಿದ ಅವರು, ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗುತ್ತದೆ ಎಂಬುದು ಕೇವಲ ಭ್ರಮೆ. ನವಬೆಂಗಳೂರಿನ ಹೆಸರಿನಲ್ಲಿ ನಗರದ ಅಪಸವ್ಯಗಳನ್ನು ಈ ಜಿಲ್ಲೆಗೆ ಹೇರುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಯಾವುದೇ ಅವಕಾಶ ನೀಡಬಾರದು ಎಂದರು.


ಸಿಎಎ, ಎನ್ನಾರ್ಸಿ ಬಗ್ಗೆ ಡಾ ಹೆಚ್ ವಾಸು ಮಾತನಾಡಿ ದೇಶ ಮುನ್ನಡೆಸಬೇಕಾದ ಪ್ರಧಾನಿ ಮತ್ತು ತಂಡ ಬೇಡದ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅದರಲ್ಲಿ ಸಿಎಎ ಯಂತಹ ಕಾಯಿದೆ ಒಂದಾಗಿದ್ದು ಮೂಲ ನಿವಾಸಿಗಳಿಗೆ ಆತಂಕ ತಂದೊಡ್ಡಿದ್ದಾರೆ ಎಂದರು.


ಚರ್ಚಾ ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಎಂ ರಾಮು, ಎಂ ಮಲ್ಲಯ್ಯ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ
ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ರಾಜ್ಯ ಸರ್ಕಾರವು ಕೃಷಿ ಭೂಮಿಗೆ ಸಂಬಂಧಿಸಿದ ಸೆಕ್ಷನ್ ೭೯ ಎ ಮತ್ತು ಬಿ ಯನ್ನು ರದ್ದು ಪಡಿಸಿ ಅನ್ನದಾತನ ಬೆನ್ನಿಗೆ ಬರೆ ಎಳೆದು ಬಲಾ

ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ
ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ

ಚನ್ನಪಟ್ಟಣ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಗ್ರಾಮ ಲೆಕ್ಕಿಗ, ಕಂದಾಯ

ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ
ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ

ಚನ್ನಪಟ್ಟಣ: ನಗರದ ಹೊರವಲಯದಲ್ಲಿರುವ ದೊಡ್ಡಮಳೂರು ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದ ಬಳಿಯ ಬಯಲು ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಡಿಯಲ್ಲಿ ಒಂ

ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ
ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ

ಚನ್ನಪಟ್ಟಣ: ನೂತನ ತಂತ್ರಜ್ಞಾನ ಎನ್ನುವುದು ಉಳ್ಳವರ, ವಿದೇಶಿಗರ ಪಾಲಾಗದೇ ದೇಶಕ್ಕೆ ಅನ್ನ ನೀಡುವ ದೇಶದ ಬೆನ್ನೆಲುಬು ಎಂದೆನಿಸಿಕೊಂಡ ರೈತಾಪಿ ವರ

ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ
ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

ಚನ್ನಪಟ್ಟಣ:ಫೆ/೧೩/೨೦/ಗುರುವಾರ.


ರೈತರ ರಕ್ಷಣೆಯನ್ನು ಕಾಯುವ ಬದಲು ಅವರ ಭಕ್ಷಣೆಗಾಗಿಯೇ ನಿಂತಿರುವ ಬೀಜಕಾಯಿದೆ, ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರ ಒಕ್ಕಲೆಬ್ಬಿಸುವ ಹುನ್ನಾರ, ರಾಮನಗರ ಜಿಲ್ಲೆ ನುಂಗಿ ನೀರು ಕುಡಿದು ತನ

ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ
ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ

ಚನ್ನಪಟ್ಟಣ.ಫೆ.೧೩:


ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ಒಂದೇ ಇರಬೇಕು, ಈಗಿರುವ ಹಲವು ಬಣಗಳು ಒಗ್ಗೂಡಬೇಕು. ವಿಚಾರ ವಿನಿಮಯವಾಗಬೇಕು, ಮೂಲ ಉದ್ದೇಶ ಗಳನ್ನು ಅರಿತು ಯುವಕ ರನ್ನು ಸಂಘಟಿಸಿ ರೈತ ಸಂಘಟನೆಯನ್ನು ಬಲಪಡಿ ಸ

ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?
ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?

ಎಂಭತ್ತರ ದಶಕದ ಕರ್ನಾಟಕ ರಾಜ್ಯ ರೈತ ಸಂಘ ೨೦೧೦ ನೆಯ ಇಸವಿ ಹೊತ್ತಿಗೆ ಸಿಟಿಲೊಡೆದು, ೨೦೨೦ ನೆಯ ಇಸವಿಯ ಹೊತ್ತಿಗೆ ರೆಂಬೆಕೊಂಬೆಗಳಾಗಿ ಕೆಲ ಮುಂದಾಳುಗಳು ನಗರ ಸೇರಿ ವಿಧಾನಸೌಧದ ಒಳಹೊಕ್ಕು ತಮ್ಮ ಬೇಳೆ ಬೇಯ

ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ
ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಈ ಬಾರಿ ರಾಗಿ ಬೆಳೆಯು ಹುಲುಸಾಗಿ ಬೆಳೆದಿದ್ದು ರೈತನ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು.

ಆದರ

ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ
ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ

ಚನ್ನಪಟ್ಟಣ: ಈ ಬಾರಿ ಕಾಲಕಾಲಕ್ಕೆ ಸರಿಯಾಗಿ ಬಿದ್ದ ಮಳೆಯಿಂದಾಗಿ ಜಿಲ್ಲಾದ್ಯಂತ ಬಿತ್ತಿರುವ ರಾಗಿ ಚನ್ನಾಗಿ ಬೆಳೆದಿದ್ದು ರೈತರ ಮೊಗದಲ್ಲಿ ಸಂತಸ ಎದ್ದು ಕಾಣ

ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*
ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ದಾಖಲೆಯ ಎನ್ ಆರ್ ಕಾಲೋನಿಯ ತೋಟವೊಂದರ ಹುಣಸೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯನ್ನು ಬಿಡಿಸಿದರೆ ರಕ್ರ

Top Stories »  


Top ↑