Tel: 7676775624 | Mail: info@yellowandred.in

Language: EN KAN

    Follow us :


ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆ ಕಾರ್ಯಕ್ರಮ

Posted Date: 05 Mar, 2018

ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆ ಕಾರ್ಯಕ್ರಮ

ರಾಮನಗರ : ಲಿಂಗ ನಿರ್ಧಾರಿತ ವೀರ್ಯವನ್ನು ಬಳಸಿ ಹೆಣ್ಣು ಕರುಗಳನ್ನು ಪಡೆಯುವ ತಂತ್ರಜ್ಞಾನದ ಉತ್ತಮ ಕಾರ್ಯಕ್ರಮವಾಗಿದ್ದು, ಇದರ ಬಗ್ಗೆ ತಿಳಿದುಕೊಂಡು, ತಮ್ಮ ಪಶುಗಳಿಗೆ ಅಳವಡಿಸುವತ್ತ ಆಲೋಚನೆ ಮಾಡಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಎನ್.ಡಿ.ಆರ್.ಎ. ದಕ್ಷಿಣ ವಲಯ ಕೇಂದ್ರ (ಆಡುಗೋಡಿ), ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದಲ್ಲಿ ನಡೆದ ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆÉ ಕಾರ್ಯಕ್ರಮದ ದಿವ್ಯ ಸಾನಿಧÀ್ಯ ವಹಿಸಿ ಅವರು ಮಾತನಾಡಿದರು.
ಹೈನುಗಾರ ಪಶುಗಳಿಗೆ ಕೃತಕ ಗರ್ಭಧಾರಣೆÉ ಮೂಲಕ ಬಯಸಿದ ಕರು ಪಡೆಯುವ ಕಾರ್ಯಕ್ರಮಕ್ಕೆ ಲಿಂಗ ನಿರ್ಧಾರಿತ ವೀರ್ಯದ ನಳಿಕೆಗಳನ್ನು ಸರ್ಕಾರ ಸಂಪೂರ್ಣ ಉಚಿತವಾಗಿ ನೀಡಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.
ರೈತ ಶಕ್ತಿ ಕೃಷಿ ಪ್ರಧಾನ ಭಾರತದ ಉಸಿರಾಗಿದೆ. ಆದರೆ ಇಲ್ಲಿ ಬೆಳೆಗಳಿಗೆ ತಕ್ಕ ಬೆಲೆ ಸಿಗುತ್ತಿಲ್ಲ, ಇನ್ನೊಂದೆಡೆ ಮಳೆ ಕೊರತೆ ಹೀಗಾಗಿ ರೈತರು ಕೃಷಿ ಕಾಯಕದಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ರೈತ ಪರ ಯೋಜನೆಗಳು, ಸಂಶೋಧನೆಗಳು ತೀರಾ ಅಗತ್ಯವಿದೆ. ಜಲ ನೀತಿಯಂತೆ ಹಾಲು ನೀತಿಯು ಜಾರಿಯಾಗಬೇಕಾಗಿದೆ. ಎಲ್ಲಿ ಸಂಶೋಧನೆಗಳು ಹೆಚ್ಚುತ್ತವೆಯೂ ಅಲ್ಲಿ ರೈತನ ಬದುಕು ಹಸನಾಗಿರುತ್ತದೆ. ಆದ್ದರಿಂದ ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುತ್ತಿರುವ ಪೆÇ್ರೀತ್ಸಾಹ ಧನವನ್ನು 5 ರೂ.ನಿಂದ 7 ರೂ.ಗೆ ಏರಿಸುವ ಮತ್ತು ಇತರ ಬೇಡಿಕೆಗಳ ಬಗ್ಗೆ ಸರ್ಕಾರ ಪರಿಗಣಿಸಬೇಕು ಎಂದು ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು. 
ಭಾರತ ಸರ್ಕಾರದ ಪಶುಸಂಗೋಪನೆ ಆಯುಕ್ತ ಡಾ.ಸುರೇಶ್ ಹೊನ್ನಪ್ಪಗೋಳ್ ಮಾತನಾಡಿ, ಬೆಂಗಳೂರಿನ ಹೆಸರುಘಟ್ಟದಲ್ಲಿ ಲಿಂಗ ನಿರ್ಧಾರಿತ ವೀರ್ಯ ಸಂಶೋಧÀನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸದ್ಯ ಅಮೇರಿಕಾ ಮೂಲದ ತಳಿಯನ್ನು ಲಿಂಗ ನಿರ್ಧಾರಿತ ವೀರ್ಯದಲ್ಲಿ ಬಳಕೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ದೇಶಿ ತಳಿಗಳ ವೀರ್ಯ ಬಳಕೆಗೆ ಕ್ರಮ ವಹಿಸಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಎಂ.ಎಫ್ ಅಧ್ಯಕ್ಷ ಪಿ.ನಾಗರಾಜು, ಹಸುಗಳಲ್ಲಿ ಹೆಣ್ಣು ಕರುಗಳನ್ನೇ ಪಡೆಯಲು ವೀರ್ಯ ನಳಿಕೆಯಂತಹ ಕಾರ್ಯಕ್ರಮ ರಾಮನಗರದಲ್ಲಿ ಅನುಷ್ಟಾನವಾಗುತ್ತಿದೆ. ಇದರಿಂದ ಶೇ.95ರಷ್ಟು ಯಶಸ್ಸು ಪ್ರಯೋಗಗಳಲ್ಲಿ ಕಂಡು ಬಂದಿದೆ ಎಂದರು. 1 ನಳಿಕೆ ವೀರ್ಯಕ್ಕೆ 900 ರೂ. ವೆಚ್ಚವಾಗುತ್ತಿದೆ. ಸರ್ಕಾರ 450 ರೂ. ಸಬ್ಸಿಡಿ ನೀಡಿದೆ. ರಾಮನಗರ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಆರಂಭವಾಗಿದ್ದು, ತಾವು ವೈಯಕ್ತಿಕವಾಗಿ ಉಳಿದ 450 ರೂ. ಭÀರಿಸುತ್ತಿರುವುದಾಗಿ, ರೈತರಿಗೆ ನಯಾ ಪೈಸೆ ಹೊರೆಯಾಗಿಲ್ಲ ಎಂದರು. 
ಜಿಲ್ಲೆಯಲ್ಲಿ ರೈತರ ಹಣದಿಂದ ಒಂದು ಸಾವಿರ ಕೋಟಿ ಹಣದಲ್ಲಿ ಹಾಲಿನ ಉತ್ಪನ್ನಗಳ ಪ್ಯಾಕಿಂಗ್ ಘಟಕ ಮತ್ತು ಹಾಲಿನ ಪುಡಿ ಮಾಡುವ ಘಟಕ ನಿರ್ಮಾಣವಾಗುತ್ತಿರುವುದು ನಿಮ್ಮ ಬೆವರ ಹನಿಯೆ ಹೊರತು ಯಾವುದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣವಲ್ಲ, ಒಂದು ಹಾಲು ಒಕ್ಕೂಟದ ವತಿಯಿಂದ ರೈತ ಮೃತಪಟ್ಟರೆ 2 ಲಕ್ಷ ಕೊಡುವುದಾದರೆ ಸರ್ಕಾರ ಏಕೆ ಕೊಡಬಾರದು. ರೈತರ ಬಗ್ಗೆ ಇಚ್ಚಾಶಕ್ತಿಯಿದ್ದವರಿಗೆ ಮಾತ್ರ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಲು ಸಾಧ್ಯ ಎಂದರು.
ಸಾಹಿವಾಲ ತಳಿ ಸಂಘದ ಅಧÀ್ಯಕ್ಷ ಹಾಗೂ ಪಂಜಾಬ್ ಸರ್ಕಾರದ ಸಲಹೆಗಾರರಾಗಿರುವ ಪೆÇ್ರ.ಪಿ.ಕೆ.ಉಪ್ಪಲ್ ಮಾತನಾಡಿ, ಗೋಸೇವೆ ಬಗ್ಗೆ ವೇದಗಳಲ್ಲೂ ಉಲ್ಲೇಖವಿದೆ. ರಾಸುಗಳಲ್ಲಿ ಅನುವಂಶಿಯತೆಯನ್ನು ಅಭಿವೃದ್ದಿ ಪಡಿಸುವ ತಂತ್ರಜ್ಞಾನದ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದೆ. ಲಿಂಗ ನಿರ್ಧಾರಿತ ವೀರ್ಯ ಬಳಸಿ ಹೆಣ್ಣು ಕರುಗಳನ್ನು ಪಡೆಯುವ ತಂತ್ರಜ್ಞಾನ ಕರ್ನಾಟಕ ಇದೀಗ ತೆರೆದುಕೊಳ್ಳುತ್ತಿದೆ. ಪಂಜಾಬ್ ರಾಜ್ಯದಲ್ಲಿ ಈಗಾಗಲೆ ಜಾರಿಯಲ್ಲಿರುವ ಈ ಪದ್ದತಿಯನ್ನು ರಾಜ್ಯದ ರೈತರು ವಿಶ್ವಾಸದಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ತಮಗಿದ್ದು ಪಿ.ನಾಗರಾಜು ಅವರ ಹೈನುಗಾರ ರೈತನ ಬದುಕು ಹಸನಾಗಿಸುವ ಕನಸು ನನಸಾಗಲಿ ಎಂದರು.
ವೇದಿಕೆಯಲ್ಲಿ ಅಂಧರಶಾಲೆ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಎನ್.ಡಿ.ಆರ್.ಎ ದಕ್ಷಿಣ ವಲಯ ಕೇಂದ್ರದ ಮುಖ್ಯಸ್ಥ ಡಾ.ಕೆ.ಪಿ.ರಮೇಶ್, ಬಮೂಲ್‍ನ ರಾಮನಗರ ಶಿಬಿರ ವ್ಯವಸ್ಥಾಪಕ ಡಾ.ಶಿವಶಂಕರ್, ರೈತ ಮುಖಂಡ ಪುಟ್ಟಸ್ವಾಮಿ, ನಗರಸಭಾ ಸದಸ್ಯ ಡಿ.ಕೆ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ರಮೇಶ್, ಮುಖಂಡ ವೆಂಕಟಸ್ವಾಮಿ ಉಪಸ್ಥಿತರಿದ್ದರು. 
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ
ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

ಚನ್ನಪಟ್ಟಣ:ಫೆ/೧೩/೨೦/ಗುರುವಾರ.


ರೈತರ ರಕ್ಷಣೆಯನ್ನು ಕಾಯುವ ಬದಲು ಅವರ ಭಕ್ಷಣೆಗಾಗಿಯೇ ನಿಂತಿರುವ ಬೀಜಕಾಯಿದೆ, ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರ ಒಕ್ಕಲೆಬ್ಬಿಸುವ ಹುನ್ನಾರ, ರಾಮನಗರ ಜಿಲ್ಲೆ ನುಂಗಿ ನೀರು ಕುಡಿದು ತನ

ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ
ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ

ಚನ್ನಪಟ್ಟಣ.ಫೆ.೧೩:


ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ಒಂದೇ ಇರಬೇಕು, ಈಗಿರುವ ಹಲವು ಬಣಗಳು ಒಗ್ಗೂಡಬೇಕು. ವಿಚಾರ ವಿನಿಮಯವಾಗಬೇಕು, ಮೂಲ ಉದ್ದೇಶ ಗಳನ್ನು ಅರಿತು ಯುವಕ ರನ್ನು ಸಂಘಟಿಸಿ ರೈತ ಸಂಘಟನೆಯನ್ನು ಬಲಪಡಿ ಸ

ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?
ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?

ಎಂಭತ್ತರ ದಶಕದ ಕರ್ನಾಟಕ ರಾಜ್ಯ ರೈತ ಸಂಘ ೨೦೧೦ ನೆಯ ಇಸವಿ ಹೊತ್ತಿಗೆ ಸಿಟಿಲೊಡೆದು, ೨೦೨೦ ನೆಯ ಇಸವಿಯ ಹೊತ್ತಿಗೆ ರೆಂಬೆಕೊಂಬೆಗಳಾಗಿ ಕೆಲ ಮುಂದಾಳುಗಳು ನಗರ ಸೇರಿ ವಿಧಾನಸೌಧದ ಒಳಹೊಕ್ಕು ತಮ್ಮ ಬೇಳೆ ಬೇಯ

ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ
ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಈ ಬಾರಿ ರಾಗಿ ಬೆಳೆಯು ಹುಲುಸಾಗಿ ಬೆಳೆದಿದ್ದು ರೈತನ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು.

ಆದರ

ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ
ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ

ಚನ್ನಪಟ್ಟಣ: ಈ ಬಾರಿ ಕಾಲಕಾಲಕ್ಕೆ ಸರಿಯಾಗಿ ಬಿದ್ದ ಮಳೆಯಿಂದಾಗಿ ಜಿಲ್ಲಾದ್ಯಂತ ಬಿತ್ತಿರುವ ರಾಗಿ ಚನ್ನಾಗಿ ಬೆಳೆದಿದ್ದು ರೈತರ ಮೊಗದಲ್ಲಿ ಸಂತಸ ಎದ್ದು ಕಾಣ

ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*
ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ದಾಖಲೆಯ ಎನ್ ಆರ್ ಕಾಲೋನಿಯ ತೋಟವೊಂದರ ಹುಣಸೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯನ್ನು ಬಿಡಿಸಿದರೆ ರಕ್ರ

ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆದು ಒಕ್ಕಣೆ ಮಾಡುತ್ತಿರುವ ಸಿರಿವಂತ ಯುವಕ ಯೋಗೇಶಗೌಡ
ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆದು ಒಕ್ಕಣೆ ಮಾಡುತ್ತಿರುವ ಸಿರಿವಂತ ಯುವಕ ಯೋಗೇಶಗೌಡ

ಚನ್ನಪಟ್ಟಣ: ಸಿರಿಧಾನ್ಯ ಎಂದರೆ ಇತ್ತೀಚಿನವರೆಗೂ ಮೂಗು‌ ಮುರಿಯುತ್ತಿದ್ದ ಜನರು ಸಿರಿಧಾನ್ಯ ಕ್ಕೆ ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ. ಅಂದು ಬ

ಹೈನೋದ್ಯಮವನ್ನು ಹತ್ತಿಕ್ಕುವ ಕೆಲಸ ಕೈಬಿಡಬೇಕು ಕಕಜವೇ ರಮೇಶ್ ಗೌಡ
ಹೈನೋದ್ಯಮವನ್ನು ಹತ್ತಿಕ್ಕುವ ಕೆಲಸ ಕೈಬಿಡಬೇಕು ಕಕಜವೇ ರಮೇಶ್ ಗೌಡ

ಚನ್ನಪಟ್ಟಣ: ರಾಜ್ಯದಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳಿದ್ದು ಹಾಲು ಮತ್ತು ಅದರ ಉಪ ಉತ್ಪನ್ನಗಳಲ್ಲಿಯೂ ದೇಶ ಮುಂಚೂಣಿ

ರೈತರ ಏಳ್ಗೇಗಾಗಿ‌ ಕೃಷಿ ಅಭಿಯಾನ ಕೆವಿಕೆ ಯ ಪ್ರೀತು
ರೈತರ ಏಳ್ಗೇಗಾಗಿ‌ ಕೃಷಿ ಅಭಿಯಾನ ಕೆವಿಕೆ ಯ ಪ್ರೀತು

ಚನ್ನಪಟ್ಟಣ: ರೈತ ಬೆಳೆಯುವ ಎಲ್ಲಾ ಬೆಳೆಗೂ ಕೃಷಿ ಇಲಾಖೆಯ ಸಹಾಯ ಮತ್ತು ಮಾಹಿತಿ ಪಡೆದು ವ್ಯವಸಾಯ ಮಾಡಿದರೆ ರೈತನ ಬದುಕು ಉಜ್ವಲವಾಗುತ್ತದೆ, ರೈತರ

ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ
ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಹಲವಾರು ರೈತರು ಬಿತ್ತನೆ ಮಾಡಲಾಗಿಲ್ಲ, ತಡವಾಗಿ ಬಂದ ಅಲ್ಪ ಮಳೆ ನೆಚ್ಚಿಕೊಂಡು

Top Stories »  


Top ↑