Tel: 7676775624 | Mail: info@yellowandred.in

Language: EN KAN

    Follow us :


ನರೇಗಾ ಯೋಜನೆಯಡಿ ತೋಟಗಾರಿಕೆ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ ಇಲಾಖೆ

Posted Date: 06 May, 2020

ನರೇಗಾ ಯೋಜನೆಯಡಿ ತೋಟಗಾರಿಕೆ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ ಇಲಾಖೆ

ರಾಮನಗರ:ಮೇ/೦೬/೨೦/ಬುಧವಾರ. ಕೊರೊನಾ (ಕೊವಿಡ್-೧೯) ಮಹಾಮಾರಿ ರೋಗ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ತೋಟಗಾರಿಕೆ ಬೆಳೆಗಾರರಿಗೆ ಅನೇಕ ತೊಂದರೆಗಳು ಉಂಟಾಗುತ್ತಿದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೈತರನ್ನು ಆರ್ಥಿಕವಾಗಿ ಪ್ರಸ್ತುತ ಸಂದರ್ಭದಲ್ಲಿ ಬಲಪಡಿಸಬೇಕಾಗಿದೆ.


ಆದ್ದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತ ಬಾಂಧವರು ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, ನಿರ್ವಹಣೆ, ಪುನಃಶ್ಚೇತನ, ತರಕಾರಿ ಮತ್ತು ಹಣ್ಣುಗಳ ಮಾರುಕಟ್ಟೆ ಘಟಕ ನಿರ್ಮಾಣ, ಇಲಾಖಾ ತೋಟಗಾರಿಕೆ ಕ್ಷೇತ್ರಗಳಲ್ಲಿ ಅನುಮೋದಿತ ಕಾಮಗಾರಿಗಳು, ಪೌಷ್ಠಿಕ ತೋಟಗಳ ನಿರ್ಮಾಣ, ಕೃಷಿಹೊಂಡ ಮತ್ತು ಕೊಳವೆಬಾವಿ ಮರುಪೂರಣಾ ಘಟಕಗಳ ನಿರ್ಮಾಣ ಮತ್ತು ಇತರೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಕಾಮಗಾರಿಗಳನ್ನು ಈ ಕೂಡಲೇ ಕೈಗೆತ್ತಿಕೊಳ್ಳಬಹುದಾಗಿದೆ.


ಈ ವಿಚಾರವಾಗಿ ಜಿಲ್ಲೆಯ ರೈತಬಾಂಧವರು ಈ ಕೂಡಲೇ ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ನಿರ್ದೇಶಕರು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ದೂರವಾಣಿ ಮೂಲಕ ರಾಮನಗರ: ೦೮೦-೨೭೨೭೫೩೯೬, ಚನ್ನಪಟ್ಟಣ: ೦೮೦-೨೯೭೮೩೧೯೪, ಮಾಗಡಿ: ೦೮೦-೨೭೭೪೬೩೯೬, ಕನಕಪುರ: ೦೮೦-೨೭೫೦೪೨೯೬ ಗೆ ಸಂಪರ್ಕಿಸಲು ತೋಟಗಾರಿಕಾ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ
ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ಯಾರನ್ನೂ ನಂಬಿ ರಾಜಕೀಯ ಮಾಡುವುದಿಲ್ಲ. ನಂಬಿದ ಕಾರ್ಯಕರ್ತರನ್ನು ಕೈಬಿಡುವುದೂ ಇಲ್ಲ. ಇನ್ನು ಮುಂದೆ ಯಾರ ಹಂಗಿನ

ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು
ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ರೈತ ಬೆಳೆಯನ್ನು ಬೆಳೆಯಲು ಎಷ್ಟು ಹರಸಾಹಸ ಪಡುತ್ತಾನೋ ಅದಕ್ಕಿಂತ ಎರಡು ಪಟ್ಟು ಶ್ರಮವನ್ನು ಬೆಳೆದ ಬೆಳೆಯನ್ನು

ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ
ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಷ್ಟ್ರದ ಪ್ರಧಾನಿಯವರಿಗೆ ಇಲ್ಲಿನ ದಂಡಾಧಿಕಾರಿಗಳ ಮೂಲಕ

ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ
ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಒಂದೆಡೆ ಕೊರೋನಾ ಕಾಟಕ್ಕೆ ರೈತರು ಸೊರಗಿ ದ್ದಾರೆ. ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ ಯಿಂದಾಗಿ ರೈತರು ಬೆಳೆದ

ಕೆರೆ ಮತ್ತು ಕಾಡಿನ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ: ಅಶ್ವಥ್ ನಾರಾಯಣ*
ಕೆರೆ ಮತ್ತು ಕಾಡಿನ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ: ಅಶ್ವಥ್ ನಾರಾಯಣ*

ರಾಮನಗರ:ಮೇ/೨೨/೨೦/ಶುಕ್ರವಾರ.

ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳುವ ಕೆಲಸಗಳಲ್ಲಿ ಕೆರೆ ಮತ್ತು ಕಾಡಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಉಪ ಮುಖ್ಯಮಂತ್ರಿಗ

ದಳಪತಿಗೆ ಕಾಂಗ್ರೆಸ್ ಸಂಸದ ಸಾಥ್, ಬೆಳೆ ಕಳೆದುಕೊಂಡವರಿಗೆ ವೈಯುಕ್ತಿಕ ನೆರವು, ಸರ್ಕಾರಕ್ಕೆ ಮನವಿ
ದಳಪತಿಗೆ ಕಾಂಗ್ರೆಸ್ ಸಂಸದ ಸಾಥ್, ಬೆಳೆ ಕಳೆದುಕೊಂಡವರಿಗೆ ವೈಯುಕ್ತಿಕ ನೆರವು, ಸರ್ಕಾರಕ್ಕೆ ಮನವಿ

ಚನ್ನಪಟ್ಟಣ:ಮೇ/೧೯/೨೦/ಮಂಗಳವಾರ. ತಾಲ್ಲೂಕಿನಾದ್ಯಂತ ಮೊನ್ನೆ ಬೀಸಿದ ಬಿರುಗಾಳಿ ಮತ್ತು ಮಳೆಗೆ, ನಾಶಗೊಂಡ ರೈತನ ತೋಟಕ್ಕೆ ಇಂದು ಸ್ಥಳೀಯ ಶಾಸಕ ಹೆ

ತಾಲ್ಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಬಾಳೆ, ಅಸುನೀಗಿದ ಕುರಿಗಳು
ತಾಲ್ಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಬಾಳೆ, ಅಸುನೀಗಿದ ಕುರಿಗಳು

ಚನ್ನಪಟ್ಟಣ:ಮೇ/೧೭/೨೦/ಭಾನುವಾರ. ಹಲವಾರು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆಯು ಇಂದು ಸಂಜೆಯ ವೇಳೆಗೆ ಗುಡಗು, ಮಿಂಚಿನ ಜೊತೆಗೆ ಭಾರಿ

ಮೇ ೧೮ ರಂದು ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ
ಮೇ ೧೮ ರಂದು ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ

ರಾಮನಗರ:ಮೇ/೧೬/೨೦/ಶನಿವಾರ. ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯ

ನಮ್ಮ ಬಳಿ ರೇಷ್ಮೆ ಖರೀದಿಸುವವರಿಲ್ಲ, ನಾವು ಗೂಡು ಖರೀದಿಸುವುದಿಲ್ಲ ರೀಲರ್ಸ್ ಪಟ್ಟು
ನಮ್ಮ ಬಳಿ ರೇಷ್ಮೆ ಖರೀದಿಸುವವರಿಲ್ಲ, ನಾವು ಗೂಡು ಖರೀದಿಸುವುದಿಲ್ಲ ರೀಲರ್ಸ್ ಪಟ್ಟು

ರಾಮನಗರ:ಮೇ/೧೬/೨೦/ಶನಿವಾರ. ನಾವು ಇದುವರೆಗೂ ರೈತರಿಂದ ರೇಷ್ಮೆ ಗೂಡನ್ನು ಖರೀದಿಸಿ ಕಚ್ಚಾ ರೇಷ್ಮೆಯನ್ನು ಮಾಡಿಟ್ಟುಕೊಂಡಿದ್ದೇವೆ. ಆದರೆ ನಮ್ಮ ರ

ನೇಕಾರರ ಸಮ್ಮಾನ್ ಹೊಸ ಯೋಜನೆ : ನೇಕಾರರಿಗೆ ವಾರ್ಷಿಕ ಎರಡು ಸಾವಿರ ರೂ.ಗಳ ಸಹಾಯಧನ
ನೇಕಾರರ ಸಮ್ಮಾನ್ ಹೊಸ ಯೋಜನೆ : ನೇಕಾರರಿಗೆ ವಾರ್ಷಿಕ ಎರಡು ಸಾವಿರ ರೂ.ಗಳ ಸಹಾಯಧನ

ರಾಮನಗರ:ಮೇ/೧೫/೨೦/ಶುಕ್ರವಾರ.ಕೈಮಗ್ಗ ಮತ್ತು ಜವಳಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಮಗ್ಗ ನೇಕಾರಿಕೆಯ ರೇಷ್ಮೆ, ಹತ್ತಿ, ಉಣ್ಣೆ

Top Stories »  


Top ↑