Tel: 7676775624 | Mail: info@yellowandred.in

Language: EN KAN

    Follow us :


ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ನಿರಂತರ ಸಹಕಾರ: ಕೆ.ಎಂ ಹನುಮಂತರಾಯಪ್ಪ

Posted Date: 06 Mar, 2018

ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ನಿರಂತರ ಸಹಕಾರ: ಕೆ.ಎಂ ಹನುಮಂತರಾಯಪ್ಪ

ಹಾಸನ : ರೇಷ್ಮೆ ಬೆಳೆಗೆ ಇಡೀ ದೇಶದಲ್ಲೆ ಬೇಡಿಕೆ ಹೆಚ್ಚು, ರೇಷ್ಮೆ ಬೆಳೆಗಾರರೊಂದಿಗೆ ಕೇಂದ್ರ ಸರ್ಕಾರ ಯಾವಾಗಲು ಜೊತೆಗಿದ್ದು ನಿರಂತರ ಸಹಕಾರ ನೀಡಲಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದ ಕೆ.ಎಂ ಹನುಮಂತರಾಯಪ್ಪ ಅವರು ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಖಾತೆ, ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ರೇಷ್ಮೆ ಕೃಷಿಕರ ಕಾರ್ಯಾಗಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ರೇಷ್ಮೆ ಕೃಷಿ ಉದ್ಯಮ ರೈತರ ಆರ್ಥಿಕತೆಗೆ ವರದಾನವಾಗಿದೆ ಇದರಿಂದ ರೈತರ ಸ್ಥಿತಿ-ಗತಿ ಬದಲಾಗುತ್ತದೆ ಎಂದು ಹೇಳಿದರು.
ಪ್ರಪಂಚದ ಶ್ರೀಮಂತ ರಾಜ್ಯಗಳಿಗೆ ನಮ್ಮ ದೇಶದಿಂದಲೇ ರೇಷ್ಮೆ ರಫ್ತಾಗುತ್ತಿದ್ದು, ಶೇ.50 ರಷ್ಟು ರೇಷ್ಮೆ ಬೆಳೆ ಉತ್ಪನ್ನ ಕರ್ನಾಟಕದಿಂದಲೇ ತಯರಾಗುತ್ತಿರುವುದು ಮತ್ತೊಂದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರೇಷ್ಮೆ ಬೆಳೆ ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಹಾಯ ಧನವನ್ನು ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ರೇಷ್ಮೆ ಬೆಳೆ ಬೆಳೆಯಲು ರೈತರು ಮನಸ್ಸು ಮಾಡಬೇಕು ಎಂದರಲ್ಲದೆ ರೇಷ್ಮೆ ಬೆಳೆಯಲ್ಲಿ 12 ತಳಿಗಳ ಲಭ್ಯವಿದ್ದು ಇದರಲ್ಲಿ ಉಪ ಬೆಳೆಗಳನ್ನು ಸಹ ಬೆಳೆಯಲು ಅವಕಾಶವಿದೆ ಎಂದು ಹೇಳಿದರು. 
ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರು ಮಾತನಾಡಿ ರೇಷ್ಮೆ ಉತ್ಪಾದನೆಗೆ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅಲ್ಲದೆ ಕೋಟ್ಯಾಂತರ ರೂ ಹಣವನ್ನು ಮೀಸಲಿರಿಸಿದೆ. ರೇಷ್ಮೆ ಬೆಳೆಯುವುದರಿಂದ ರೈತರ ಜೀವನ ಮಟ್ಟ ಸುಧಾರಿಸಲಿದೆ ಎಂದು ಹೇಳಿದರು.
ಒಟ್ಟು 10.328 ಹಳ್ಳಿಗಳಲ್ಲಿ 91 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ 1.25 ಲಕ್ಷ ಜನ ರೇಷ್ಮೆ ಉತ್ಪಾದನೆಯನ್ನು ಮಾಡುತ್ತಿದ್ದು 1.08.000 ಸಣ್ಣ ಮತ್ತು ಅತೀ ಸಣ್ಣ ಕುಟುಂಬಗಳು ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆ ಇದ್ದಾರೆ ಎಂದು ಮಾಹಿತಿ ನೀಡಿದರು. 
ಕೆಲವು ವರ್ಷಗಳ ಹಿಂದೆ ರೇಷ್ಮೆ ಬೆಳೆಗೆ ಮಾರುಕಟ್ಟೆ ಬೆಲೆ 190 ರಿಂದ 200 ರೂಗಳಿತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ರೈತರು ಉತ್ತಮ ಗುಣಮಟ್ಟದ ಬೆಳೆ ಬೆಳೆಯುತ್ತಿದ್ದಾರೆ ಇಂದಿನ ಮಾರುಕಟ್ಟೆ ದರ 600 ರೂಪಾಯಿಗಳವರೆಗೂ ಇದೆ ಎಂದರಲ್ಲದೆ ಜಿಲ್ಲೆಯಲ್ಲಿ ರೈತರು ಹೆಚ್ಚು ಹೆಚ್ಚು ರೇಷ್ಮೆ ಬೆಳೆಯನ್ನು ಬೆಳೆಯಲು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರೇಷ್ಮೆ ಬೆಳೆಗಾರರಿಗೆ ಇ-ಟೆಂಡರ್ ಬಹಳ ಸಹಾಯವಾಗಿದೆ ಮತ್ತು ರೇಷ್ಮೆ ಬೆಳೆಗೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಮತ್ತು ಪ್ರಚಾರ ಸಿಕ್ಕಿದಂತೆ ಆಗಿದೆ. ಬೇರೆ ಬೆಳೆಗಳಿಗಿಂತ ರೇಷ್ಮೆ ಬೆಳೆ ಅತೀ ಹೆಚ್ಚು ಪ್ರಮಾಣದಲ್ಲಿ ಉತ್ಪಾತಿಯಾಗುತ್ತಿದೆ. 2016-17ನೇ ವರ್ಷದಲ್ಲಿ 78 ಸಾವಿರ ಮೆಟ್ರಿಕ್ ಟನ್ ಅಷ್ಟು ಉತ್ಪಾದನೆ ಮತ್ತು 2017-18ನೇ ವರ್ಷದಲ್ಲಿ ಕಳೆದ 2 ತಿಂಗಳಿಂದ 58 ಸಾವಿರ ಮೆಟ್ರಿಕ್ ಟನ್ ಎಷ್ಟು ಉತ್ಪಾದನೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಹೆಚ್.ಎಸ್ ಪ್ರಕಾಶ್ ಅವರು ಮಾತನಾಡಿ ರೇಷ್ಮೆ ಬೆಳೆ ಒಂದು ಉತ್ತಮ ಬೆಳೆಯಾಗಿದ್ದು ಕರ್ನಾಟಕ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗುವಂತೆ ಮಾಡಬೇಕು ಮತ್ತು ರೈತರಿಗೆ ರೇಷ್ಮೆ ಬೆಳೆ ಬೆಳೆಯುವುದರ ಬಗ್ಗೆ ತರಬೇತಿ ಕೊಟ್ಟು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆದರೆ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ. ಮಾರುಕಟ್ಟೆಯಲ್ಲಿ ರೇಷ್ಮೆಗೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತದೆ ಎಂದು ಹೇಳಿದರು.
ಉತ್ತಮ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ ಪ್ರಧಾನ: 2016-17ನೇ ಸಾಲಿನಲ್ಲಿ ರೇಷ್ಮೆ ಬೆಳೆಯುವಲ್ಲಿ ಉತ್ತಮ ಸಾಧನೆ ಮಾಡಿದ 93 ಜನರಿಗೆ ಕೇಂದ್ರ ರೇಷ್ಮೆ ಮಂಡಳಿ ಮತ್ತು ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ನೂರಿತ ತಜ್ಞರಿಂದ ರೇಷ್ಮೆ ಕೃಷಿಕರಿಗೆ ಕಾರ್ಯಾಗಾರ: ವಿವಿಧ ನೂರಿತ ತಜ್ಞರಿಂದ ರೇಷ್ಮೆ ಕೃಷಿಕರಿಗೆ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ಇತ್ತೀಚೆಗೆ ಅಭಿವೃದ್ಧಿ ಪಡಿಸಿರುವ ನೂತನ ಸಂಶೋಧನೆಗಳ ಕುರಿತು ಹಾಗೂ ವಿವಿಧ ವಿಷಯಗಳ ಕುರಿತು ಕಾರ್ಯಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎಸ್ ಶ್ವೇತಾ ದೇವರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಜಾನಕಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿಗಳಾದ ಮಹೇಶ್ವರ್ ರಾವ್.ಎಂ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಸ್ತು ಪ್ರದರ್ಶನ ಮತ್ತು ವಿವಿಧ ತಳಿಗಳ ಬಿಡುಗಡೆ
ಹಾಸನ ಮಾ.6: ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ಮತ್ತು ಹೊಸ ರೇಷ್ಮೆ ಹುಳು ತಳಿಯ ಬಿಡುಗಡೆ, ಹೊಸ ಹಿಪ್ಪುನೇರಳೆ ತಳಿಗಳ(ಜಿ.4 ಮತ್ತು ಎಜಿಬಿ 8) ಬಿಡುಗಡೆ ಮಾಡಿದರು.
ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದ ಕೆ.ಎಂ ಹನುಮಂತರಾಯಪ್ಪ ಅವರು ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಿದರು. ರಾಟ್ ಫಿಕ್ಸ್ ಬಿಡುಗಡೆಯನ್ನು ಶಾಸಕರಾದ ಹೆಚ್,ಎಸ್ ಪ್ರಕಾಶ್ ಅವರು ಮಾಡಿದರು. ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿಗಳಾದ ರಜಿತ್ ರಂಜನ್ ಒಖಾಂಡಿಯಾರ್ ಅವರು ಊಜಿ ನೊಣದ ಲಿಂಗಾಕರ್ಷಕ ಬಲೆ ಬಿಡುಗಡೆ ಮಾಡಿದರು, ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರಾದ ಕೆ.ಎಸ್ ಮಂಜುನಾಥ್ ಅವರು (ಮಣ್ಣಿನ ಫಲವತ್ತತೆ ಮತ್ತು ಆರೋಗ್ಯಕ್ಕಾಗಿ) ಅಂಕುರ್ ಬಿಡುಗಡೆ ಮಾಡಿದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು
ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ರೈತ ಬೆಳೆಯನ್ನು ಬೆಳೆಯಲು ಎಷ್ಟು ಹರಸಾಹಸ ಪಡುತ್ತಾನೋ ಅದಕ್ಕಿಂತ ಎರಡು ಪಟ್ಟು ಶ್ರಮವನ್ನು ಬೆಳೆದ ಬೆಳೆಯನ್ನು

ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ
ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಷ್ಟ್ರದ ಪ್ರಧಾನಿಯವರಿಗೆ ಇಲ್ಲಿನ ದಂಡಾಧಿಕಾರಿಗಳ ಮೂಲಕ

ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ
ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಒಂದೆಡೆ ಕೊರೋನಾ ಕಾಟಕ್ಕೆ ರೈತರು ಸೊರಗಿ ದ್ದಾರೆ. ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ ಯಿಂದಾಗಿ ರೈತರು ಬೆಳೆದ

ಕೆರೆ ಮತ್ತು ಕಾಡಿನ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ: ಅಶ್ವಥ್ ನಾರಾಯಣ*
ಕೆರೆ ಮತ್ತು ಕಾಡಿನ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ: ಅಶ್ವಥ್ ನಾರಾಯಣ*

ರಾಮನಗರ:ಮೇ/೨೨/೨೦/ಶುಕ್ರವಾರ.

ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳುವ ಕೆಲಸಗಳಲ್ಲಿ ಕೆರೆ ಮತ್ತು ಕಾಡಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಉಪ ಮುಖ್ಯಮಂತ್ರಿಗ

ದಳಪತಿಗೆ ಕಾಂಗ್ರೆಸ್ ಸಂಸದ ಸಾಥ್, ಬೆಳೆ ಕಳೆದುಕೊಂಡವರಿಗೆ ವೈಯುಕ್ತಿಕ ನೆರವು, ಸರ್ಕಾರಕ್ಕೆ ಮನವಿ
ದಳಪತಿಗೆ ಕಾಂಗ್ರೆಸ್ ಸಂಸದ ಸಾಥ್, ಬೆಳೆ ಕಳೆದುಕೊಂಡವರಿಗೆ ವೈಯುಕ್ತಿಕ ನೆರವು, ಸರ್ಕಾರಕ್ಕೆ ಮನವಿ

ಚನ್ನಪಟ್ಟಣ:ಮೇ/೧೯/೨೦/ಮಂಗಳವಾರ. ತಾಲ್ಲೂಕಿನಾದ್ಯಂತ ಮೊನ್ನೆ ಬೀಸಿದ ಬಿರುಗಾಳಿ ಮತ್ತು ಮಳೆಗೆ, ನಾಶಗೊಂಡ ರೈತನ ತೋಟಕ್ಕೆ ಇಂದು ಸ್ಥಳೀಯ ಶಾಸಕ ಹೆ

ತಾಲ್ಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಬಾಳೆ, ಅಸುನೀಗಿದ ಕುರಿಗಳು
ತಾಲ್ಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಬಾಳೆ, ಅಸುನೀಗಿದ ಕುರಿಗಳು

ಚನ್ನಪಟ್ಟಣ:ಮೇ/೧೭/೨೦/ಭಾನುವಾರ. ಹಲವಾರು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆಯು ಇಂದು ಸಂಜೆಯ ವೇಳೆಗೆ ಗುಡಗು, ಮಿಂಚಿನ ಜೊತೆಗೆ ಭಾರಿ

ಮೇ ೧೮ ರಂದು ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ
ಮೇ ೧೮ ರಂದು ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ

ರಾಮನಗರ:ಮೇ/೧೬/೨೦/ಶನಿವಾರ. ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯ

ನಮ್ಮ ಬಳಿ ರೇಷ್ಮೆ ಖರೀದಿಸುವವರಿಲ್ಲ, ನಾವು ಗೂಡು ಖರೀದಿಸುವುದಿಲ್ಲ ರೀಲರ್ಸ್ ಪಟ್ಟು
ನಮ್ಮ ಬಳಿ ರೇಷ್ಮೆ ಖರೀದಿಸುವವರಿಲ್ಲ, ನಾವು ಗೂಡು ಖರೀದಿಸುವುದಿಲ್ಲ ರೀಲರ್ಸ್ ಪಟ್ಟು

ರಾಮನಗರ:ಮೇ/೧೬/೨೦/ಶನಿವಾರ. ನಾವು ಇದುವರೆಗೂ ರೈತರಿಂದ ರೇಷ್ಮೆ ಗೂಡನ್ನು ಖರೀದಿಸಿ ಕಚ್ಚಾ ರೇಷ್ಮೆಯನ್ನು ಮಾಡಿಟ್ಟುಕೊಂಡಿದ್ದೇವೆ. ಆದರೆ ನಮ್ಮ ರ

ನೇಕಾರರ ಸಮ್ಮಾನ್ ಹೊಸ ಯೋಜನೆ : ನೇಕಾರರಿಗೆ ವಾರ್ಷಿಕ ಎರಡು ಸಾವಿರ ರೂ.ಗಳ ಸಹಾಯಧನ
ನೇಕಾರರ ಸಮ್ಮಾನ್ ಹೊಸ ಯೋಜನೆ : ನೇಕಾರರಿಗೆ ವಾರ್ಷಿಕ ಎರಡು ಸಾವಿರ ರೂ.ಗಳ ಸಹಾಯಧನ

ರಾಮನಗರ:ಮೇ/೧೫/೨೦/ಶುಕ್ರವಾರ.ಕೈಮಗ್ಗ ಮತ್ತು ಜವಳಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಮಗ್ಗ ನೇಕಾರಿಕೆಯ ರೇಷ್ಮೆ, ಹತ್ತಿ, ಉಣ್ಣೆ

ಹೂವು ಬೆಳೆಗಾರರಿಗೆ ಪರಿಹಾರಧನ: ಮೇ ೨೬ ರೊಳಗಾಗಿ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ*
ಹೂವು ಬೆಳೆಗಾರರಿಗೆ ಪರಿಹಾರಧನ: ಮೇ ೨೬ ರೊಳಗಾಗಿ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ*

ರಾಮನಗರ:ಮೇ/೧೪/೨೦/ಗುರುವಾರ. ಕೊರೊನಾ (ಕೋವಿಡ್-೧೯) ನಿಂದಾಗಿ ರಾಜ್ಯದಲ್ಲಿ ೨೦೨೦ ಮಾರ್ಚ್ ತಿಂಗಳಿನಿಂದ ಲಾಕ್ ಡೌನ್ ಮಾಡಿರುವ  ಹಿನ್ನೆಲೆಯ

Top Stories »  


Top ↑