Tel: 7676775624 | Mail: info@yellowandred.in

Language: EN KAN

    Follow us :


ನಮ್ಮ ಬಳಿ ರೇಷ್ಮೆ ಖರೀದಿಸುವವರಿಲ್ಲ, ನಾವು ಗೂಡು ಖರೀದಿಸುವುದಿಲ್ಲ ರೀಲರ್ಸ್ ಪಟ್ಟು

Posted Date: 16 May, 2020

ನಮ್ಮ ಬಳಿ ರೇಷ್ಮೆ ಖರೀದಿಸುವವರಿಲ್ಲ, ನಾವು ಗೂಡು ಖರೀದಿಸುವುದಿಲ್ಲ ರೀಲರ್ಸ್ ಪಟ್ಟು

ರಾಮನಗರ:ಮೇ/೧೬/೨೦/ಶನಿವಾರ. ನಾವು ಇದುವರೆಗೂ ರೈತರಿಂದ ರೇಷ್ಮೆ ಗೂಡನ್ನು ಖರೀದಿಸಿ ಕಚ್ಚಾ ರೇಷ್ಮೆಯನ್ನು ಮಾಡಿಟ್ಟುಕೊಂಡಿದ್ದೇವೆ. ಆದರೆ ನಮ್ಮ ರೇಷ್ಮೆಯನ್ನು ಯಾರೂ ಖರೀದಿಸುತ್ತಿಲ್ಲ, ರಾಜ್ಯ ಸರ್ಕಾರವು ಸಹ ಖರೀದಿಸಲು ಮೀನ ಮೇಷ ಎಣಿಸುತ್ತಿದೆ. ಇದು ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೇಷ್ಮೆ ಮಾರುಕಟ್ಟೆ ಬಳಿ ರೀಲರ್ಸ್ ಪ್ರತಿಭಟನೆ ನಡೆಸಿದರು. 


ನಮ್ಮ ಬೇಡಿಕೆಗಳು ಈಡೇರುವವರೆಗೂ ವ್ಯಾಪಾರ ವಹಿವಾಟು ನಡೆಸೋದಕ್ಕೆ ಅವಕಾಶ ಕೊಡುವುದಿಲ್ಲ ಎಂದು ರೀಲರ್ಸ್ ಪಟ್ಟು ಹಿಡಿದಿದ್ದು, ಮಾರುಕಟ್ಟೆ ಬಳಿ ವ್ಯಾಪಾರಕ್ಕೆ ಬಂದವರನ್ನು ತಡೆದು ವಾಪಸ್ ಕಳಿಸುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯ ಮುಂದೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.


ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಡಿವೈಎಸ್‌ಪಿ ಪುರುಷೋತ್ತಮ್ ಆಗಮಿಸಿ ಸಂಘದ ಪದಾಧಿಕಾ ರಿಗಳ ಜೊತೆ ಮಾತುಕತೆ ನಡೆಸಿದರು. ನಂತರ ರೀಲರ್ಸ್ ಬಳಿ ವ್ಯಾಪಾರ ವಹಿವಾಟು ನಡೆಸುವಂತೆ ಮನವಿ ಮಾಡಿದರು. ಆಗ ನೋವು ತೋಡಿಕೊಂಡ ರೀಲರ್ಸ್ಗಳು, ನಮಗೆ ಲಾಸ್ ಆಗ್ತಿದೆ, ನಮ್ಮ ಬಳಿ ಉತ್ಪಾದಿತ ರೇಷ್ಮೆ ನೂಲು ಮಾರಾಟ ಆಗಿಲ್ಲ. ನಾವು ರೇಷ್ಮೆಗೂಡು ವ್ಯಾಪಾರ ಮಾಡಲು ಸಾಧ್ಯವಿಲ್ಲ ಎಂದರು.


ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೇಷ್ಮೆ ರೀಲರ್ಸ್ ರಾಜ್ಯ ಸಂಘದ ಅಧ್ಯಕ್ಷ ಮಹಮ್ಮದ್ ಮುಹಿಬ್ ಪಾಷ, ರೇಷ್ಮೆಗೂಡು ಕೊಳ್ಳಲು ನಮ್ಮ ಬಳಿ ಹಣ ಇಲ್ಲ. ರೇಷ್ಮೆಗೂಡು ಯಾರೂ ಕೊಳ್ಳದಂತೆ ತೀರ್ಮಾನ ಮಾಡಿದ್ದೇವೆ. ರೀಲರ್ಸ್ ಗಳ ಬಳಿ ಸುಮಾರು ೨,೫೦೦ ಟನ್ ನಷ್ಟು ರೇಷ್ಮೆ ನೂಲಿದೆ.


ಒಬ್ಬೊಬ್ಬ ರೀಲರ್ಸ್ ಬಳಿ ಕನಿಷ್ಠ ೧೦೦ ಕೆಜಿಯಿಂದ ೧,೦೦೦ ಕಿಲೋ ವರೆಗೆ ರೇಷ್ಮೆ ನೂಲಿದೆ. ಸರ್ಕಾರ ಒಬ್ಬರ ಬಳಿ ಒಂದು ವರ್ಷಕ್ಕೆ ೨೦ ಕೆಜಿ ನೂಲು ಮಾತ್ರ ಖರೀದಿಸಲು ಹೇಳಿದೆ. ಇದರಿಂ ಲದಾಗಿ ನಮ್ಮ ಬಳಿಯಿರುವ ರೇಷ್ಮೆ ನೂಲು ವ್ಯಾಪಾರ ವಾಗುತ್ತಿಲ್ಲ. ನಮಗೆ ಅಂತರ ರಾಜ್ಯ ನೂಲು ವ್ಯಾಪಾರಕ್ಕೆ ಅವಕಾಶ ಕೊಡುತ್ತಿಲ್ಲ. ನಮ್ಮ ಬೇಡಿಕೆಗಳು ಈಡೇ ರಿಸುವವರೆಗೆ ರೇಷ್ಮೆಗೂಡು ಖರೀದಿ ಮಾಡಲ್ಲ ಎಂದು ಹೇಳಿದ್ದಾರೆ.


ಇನ್ನು ಈ ಬಗ್ಗೆ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಮುನಿಬಸವಯ್ಯ ಮಾತನಾಡಿ, ರೇಷ್ಮೆಗೂಡಿನ ಮಾರುಕಟ್ಟೆ ಎಂದಿನಂತೆ ತೆರೆಯಲಾಗಿದೆ. ರೈತರು ರೇಷ್ಮೆಗೂಡನ್ನು ಮಾರು ಕಟ್ಟೆಯಲ್ಲಿ ಮಾರಲು ಅವಕಾಶ ಇದೆ ಎಂದಿದ್ದಾರೆ. ರೈತರು ಎಂದಿನಂತೆ ವ್ಯಾಪಾರಕ್ಕೆ ಬಂದಿದ್ದಾರೆ. ನಾವು ಅವರಿಗೆ ಮಾರುಕಟ್ಟೆ ಒಳಗಡೆ ಬರಲು ಅವಕಾಶ ಕೊಟ್ಟಿದ್ದೇವೆ ಎಂದರು.

ರೀಲರ್ಸ್ಗಳು ತಮ್ಮ ಕೆಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ಅವರು ಇಂದು ವ್ಯಾಪಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ. ರೀಲರ್ಸ್ ಗಳು ಬಂದು ಕೊಂಡುಕೊಳ್ಳಬಹುದು ಯಾವುದೇ ಸಮಸ್ಯೆ ಇಲ್ಲ. ಆದರೆ ರೀಲರ್ಸ್ಗಳು ಅಂತರರಾಜ್ಯ ರೇಷ್ಮೆ ಮಾರಾಟ ಮತ್ತು ಕೆಎಸ್‌ಐಎಲ್‌ನಿಂದ ರೇಷ್ಮೆ ಖರೀದಿಗೆ ಆಗ್ರಹಿಸಿದ್ದಾರೆ. ರೀಲರ್ಸ್ಗಳ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾರುಕಟ್ಟೆ ಡಿಡಿ ಮುನಿಬಸವಯ್ಯ ಹೇಳಿದ್ದಾರೆ.


ಚನ್ನಪಟ್ಟಣದಲ್ಲಿ ಪ್ರತಿಭಟನೆ

ಚನ್ನಪಟ್ಟಣ ಗೂಡಿನ ಮಾರುಕಟ್ಟೆಗೆ ರೈತರು ಗೂಡು ತರದಿರುವಂತೆ ನೋಡಿಕೊಳ್ಳುವಳ್ಳುವಲ್ಲಿ ಇಲ್ಲಿನ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದರು.

ಡಿವೈಎಸ್‌ಪಿ ಓಂ ಪ್ರಕಾಶ್ ನೇತೃತ್ವದಲ್ಲಿ ತಾಲ್ಲೂಕಿನ ಎಲ್ಲಾ ಭಾಗದ ರಸ್ತೆಗಳಲ್ಲಿ ನಾಕಾಬಂಧಿ ಯನ್ನು ಏರ್ಪಡಿಸಿ ಗೂಡು ತರುವ ರೈತರನ್ನು ಅಲ್ಲಲ್ಲೇ ತಡೆದು, ಇಂದು ರೀಲರ್ಸ್ಗಳು ಗೂಡು ಖರೀಸಿದಿಸದಿರಲು ನಿರ್ಧರಿಸಿ ಚಳವಳಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನೀವು ಮಾರುಕಟ್ಟೆಗೆ ಗೂಡು ತರುವುದು ಬೇಡ ಪರಿಸ್ಥಿತಿ ಸರಿ ಹೋದರೆ ನಾಳೆ ತನ್ನಿ ಎಂದು ಪೊಲೀಸರ ಮೂಲಕ ಬಂದೋ ಬಸ್ತ್ ಮಾಡಿಸಲಾಗಿತ್ತು.


ಮಾರುಕಟ್ಟೆಯ ಬಳಿ ರೀಲರ್ಸ್ಗಳು ಮತ್ತು ರೇಷ್ಮೆ ಬೆಳೆಗಾರರ ಮಧ್ಯೆ ಘರ್ಷಣೆ ಏರ್ಪಡುವ ಸಂಭವವಿದ್ದುದರಿಂದ ಹೆಚ್ಚಿನ ಸಂಖ್ಯೆಯ ಪೊಲೀಸರು ಹಾಜರಿದ್ದು ಯಾವುದೇ ಅಹಿತಕರ ಘಟನೆಯು ನಡೆಯದ ರೀತಿ ಮುನ್ನೆಚ್ಚರಿಕೆ ವಹಿಸಿರುವುದಾಗಿ ಡಿವೈಎಸ್ಪಿ ಓಂ ಪ್ರಕಾಶದ್ ಅವರು ಮಾಹಿತಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ
ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ಯಾರನ್ನೂ ನಂಬಿ ರಾಜಕೀಯ ಮಾಡುವುದಿಲ್ಲ. ನಂಬಿದ ಕಾರ್ಯಕರ್ತರನ್ನು ಕೈಬಿಡುವುದೂ ಇಲ್ಲ. ಇನ್ನು ಮುಂದೆ ಯಾರ ಹಂಗಿನ

ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು
ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ರೈತ ಬೆಳೆಯನ್ನು ಬೆಳೆಯಲು ಎಷ್ಟು ಹರಸಾಹಸ ಪಡುತ್ತಾನೋ ಅದಕ್ಕಿಂತ ಎರಡು ಪಟ್ಟು ಶ್ರಮವನ್ನು ಬೆಳೆದ ಬೆಳೆಯನ್ನು

ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ
ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಷ್ಟ್ರದ ಪ್ರಧಾನಿಯವರಿಗೆ ಇಲ್ಲಿನ ದಂಡಾಧಿಕಾರಿಗಳ ಮೂಲಕ

ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ
ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಒಂದೆಡೆ ಕೊರೋನಾ ಕಾಟಕ್ಕೆ ರೈತರು ಸೊರಗಿ ದ್ದಾರೆ. ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ ಯಿಂದಾಗಿ ರೈತರು ಬೆಳೆದ

ಕೆರೆ ಮತ್ತು ಕಾಡಿನ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ: ಅಶ್ವಥ್ ನಾರಾಯಣ*
ಕೆರೆ ಮತ್ತು ಕಾಡಿನ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ: ಅಶ್ವಥ್ ನಾರಾಯಣ*

ರಾಮನಗರ:ಮೇ/೨೨/೨೦/ಶುಕ್ರವಾರ.

ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳುವ ಕೆಲಸಗಳಲ್ಲಿ ಕೆರೆ ಮತ್ತು ಕಾಡಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಉಪ ಮುಖ್ಯಮಂತ್ರಿಗ

ದಳಪತಿಗೆ ಕಾಂಗ್ರೆಸ್ ಸಂಸದ ಸಾಥ್, ಬೆಳೆ ಕಳೆದುಕೊಂಡವರಿಗೆ ವೈಯುಕ್ತಿಕ ನೆರವು, ಸರ್ಕಾರಕ್ಕೆ ಮನವಿ
ದಳಪತಿಗೆ ಕಾಂಗ್ರೆಸ್ ಸಂಸದ ಸಾಥ್, ಬೆಳೆ ಕಳೆದುಕೊಂಡವರಿಗೆ ವೈಯುಕ್ತಿಕ ನೆರವು, ಸರ್ಕಾರಕ್ಕೆ ಮನವಿ

ಚನ್ನಪಟ್ಟಣ:ಮೇ/೧೯/೨೦/ಮಂಗಳವಾರ. ತಾಲ್ಲೂಕಿನಾದ್ಯಂತ ಮೊನ್ನೆ ಬೀಸಿದ ಬಿರುಗಾಳಿ ಮತ್ತು ಮಳೆಗೆ, ನಾಶಗೊಂಡ ರೈತನ ತೋಟಕ್ಕೆ ಇಂದು ಸ್ಥಳೀಯ ಶಾಸಕ ಹೆ

ತಾಲ್ಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಬಾಳೆ, ಅಸುನೀಗಿದ ಕುರಿಗಳು
ತಾಲ್ಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಬಾಳೆ, ಅಸುನೀಗಿದ ಕುರಿಗಳು

ಚನ್ನಪಟ್ಟಣ:ಮೇ/೧೭/೨೦/ಭಾನುವಾರ. ಹಲವಾರು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆಯು ಇಂದು ಸಂಜೆಯ ವೇಳೆಗೆ ಗುಡಗು, ಮಿಂಚಿನ ಜೊತೆಗೆ ಭಾರಿ

ಮೇ ೧೮ ರಂದು ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ
ಮೇ ೧೮ ರಂದು ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ

ರಾಮನಗರ:ಮೇ/೧೬/೨೦/ಶನಿವಾರ. ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯ

ನಮ್ಮ ಬಳಿ ರೇಷ್ಮೆ ಖರೀದಿಸುವವರಿಲ್ಲ, ನಾವು ಗೂಡು ಖರೀದಿಸುವುದಿಲ್ಲ ರೀಲರ್ಸ್ ಪಟ್ಟು
ನಮ್ಮ ಬಳಿ ರೇಷ್ಮೆ ಖರೀದಿಸುವವರಿಲ್ಲ, ನಾವು ಗೂಡು ಖರೀದಿಸುವುದಿಲ್ಲ ರೀಲರ್ಸ್ ಪಟ್ಟು

ರಾಮನಗರ:ಮೇ/೧೬/೨೦/ಶನಿವಾರ. ನಾವು ಇದುವರೆಗೂ ರೈತರಿಂದ ರೇಷ್ಮೆ ಗೂಡನ್ನು ಖರೀದಿಸಿ ಕಚ್ಚಾ ರೇಷ್ಮೆಯನ್ನು ಮಾಡಿಟ್ಟುಕೊಂಡಿದ್ದೇವೆ. ಆದರೆ ನಮ್ಮ ರ

ನೇಕಾರರ ಸಮ್ಮಾನ್ ಹೊಸ ಯೋಜನೆ : ನೇಕಾರರಿಗೆ ವಾರ್ಷಿಕ ಎರಡು ಸಾವಿರ ರೂ.ಗಳ ಸಹಾಯಧನ
ನೇಕಾರರ ಸಮ್ಮಾನ್ ಹೊಸ ಯೋಜನೆ : ನೇಕಾರರಿಗೆ ವಾರ್ಷಿಕ ಎರಡು ಸಾವಿರ ರೂ.ಗಳ ಸಹಾಯಧನ

ರಾಮನಗರ:ಮೇ/೧೫/೨೦/ಶುಕ್ರವಾರ.ಕೈಮಗ್ಗ ಮತ್ತು ಜವಳಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಮಗ್ಗ ನೇಕಾರಿಕೆಯ ರೇಷ್ಮೆ, ಹತ್ತಿ, ಉಣ್ಣೆ

Top Stories »  


Top ↑