Tel: 7676775624 | Mail: info@yellowandred.in

Language: EN KAN

    Follow us :

ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ

Posted Date: 07 Jun, 2020

ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ

ಚನ್ನಪಟ್ಟಣ:ಜೂ/೦೭/೨೦/ಭಾನುವಾರ ತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ಯುವಕನೋರ್ವನಿಗೆ ಕೊರೊನಾ (ಕೋವಿಡ್-೧೯) ಸೋಂಕು ತಗುಲಿದ ನಂತರ ಆತನ ಮನೆಯಿಂದ ೫೦ ಮೀಟರ್ ಅಂತರವನ್ನು ಕಂಟೋನ್ಮೆಂಟ್ ಝೋನ್ ಎಂದು ಸಂಪೂರ್ಣ ಗ್ರಾಮವನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತವು ಸೀಲ್ಡೌನ್  ಮಾಡಿದ್ದು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಗ್ರಾಮದ ಬಹುತೇಕ ಮಂದಿಗೆ ಆಘಾತವಾಗಿದ್ದು, ಸಂಬಂಧಿಸಿದವರು ಶೀಘ್ರವಾಗಿ ತಿಳುವಳಿಕೆ ನೀಡುವ ಮೂಲಕ ಸ್ಪಂದಿಸಬೇಕಿದೆ.

ಶಾನುಭೋಗನಹಳ್ಳಿ ಗ್ರಾಮದಲ್ಲಿ ಸದ್ಯ ೧೧೦ ಮಂದಿ ಡೈರಿಗೆ ಹಾಲು ಹಾಕುತ್ತಿದ್ದು ಬೆಳಿಗ್ಗೆ ಸಮಯದಲ್ಲಿ ೧,೩೫೦ ಲೀಟರ್ ಹಾಗೂ ಸಂಜೆ ಸಮಯದಲ್ಲಿ ೧,೨೫೦ ಲೀಟರ್ ಹಾಲನ್ನು ಡೈರಿಗೆ ಸರಬರಾಜು ಮಾಡಲಾಗುತ್ತಿದ್ದು, ಈಗ ಯಾವುದೇ ವ್ಯಕ್ತಿಯಿಂದ ಸಂಘವು ಹಾಲನ್ನು ಖರೀದಿಸದಿರುವುದರಿಂದ ಭೂಮಿಗೆ ಸುರಿಯುತ್ತಿರುವುದು ಸಂಬಂಧಿಸಿದವರ ಅಜ್ಞಾನ ಎಂದರೆ‌ ತಪ್ಪಾಗಲಾರದು.

ಅಗತ್ಯ ವಸ್ತುಗಳ ಪೂರೈಕೆಯ (SOP) ಕೈಪಿಡಿಯಲ್ಲಿ ಬಫರ್ ಝೋನ್ ನಲ್ಲಿ ಕೃಷಿ ಚಟುವಟಿಕೆಗೆ ಆದ್ಯತೆ ನೀಡಿದ್ದು, ಹೈನುಗಾರಿಕೆಯೂ ಸಹ ಕೃಷಿಗೆ ಬರುವುದರಿಂದ ಕಂಟೋನ್ಮೆಂಟ್ ಝೋನ್ ಹೊರತುಪಡಿಸಿ ಬಫರ್ ಝೋನ್ ನಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಹಾಲು ಖರೀದಿಸಬಹುದಾಗಿದೆ. ಖರೀದಿಸಲಾಗುವುದಿಲ್ಲವಾದರೆ ಸಂಬಂಧಿಸಿದ ಅಧಿಕಾರಿಗಳು ಕಾಯಿಸಿ ತುಪ್ಪ ಮಾಡಲು ಅಥವಾ ವೈಜ್ಞಾನಿಕವಾಗಿ ಬೇರೆ ಏನು ಮಾಡಬಹುದು ಎಂಬುದನ್ನು ತಿಳಿ ಹೇಳಿದರೆ ಹೈನುಗಾರರ ಬದುಕನ್ನು ಹಸನು ಮಾಡಬಹುದಾಗಿದೆ.

ಕಂಟೋನ್ಮೆಂಟ್ ಝೋನ್ ಹೊರತುಪಡಿಸಿ ಬಫರ್ ಝೋನ್ ನಲ್ಲಿರುವ ಹೈನೋತ್ಪಾದಕರಿಂದ ಹಾಲು ಖರೀದಿಸಲು ಬಮೂಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ಹಲವಾರು ಕಾರಣ ನೀಡಿ ತಿರಸ್ಕರಿಸಿದ್ದು, ರೈತರಿಗೆ ನೆರವಾಗುವ ದೃಷ್ಟಿಯಿಂದ ಬೇರೆ ರೀತಿಯಲ್ಲಿ ಸಹಾಯ ಹಸ್ತ ನೀಡುತ್ತೇವೆ ಎಂದಿದ್ದಾರೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುತ್ತೇನೆ.
ಬಿ ಕೆ ಸುದರ್ಶನ್. ದಂಡಾಧಿಕಾರಿಗಳು. ಚನ್ನಪಟ್ಟಣ.

ತಾಲ್ಲೂಕಿನಲ್ಲಿ ಇದು ಪ್ರಥಮ ಪ್ರಕರಣವಾಗಿದ್ದು, ಸೋಂಕು ಮತ್ತೊಬ್ಬರಿಗೆ ತಗುಲದಿರಲಿ ಎಂದು ಹಾಲನ್ನು ಖರೀದಿಸುತ್ತಿಲ್ಲ. ರೈತರಿಗೆ ತೊಂದರೆಯಾಗದಿರಲಿ ಎಂಬ ಕಾರಣದಿಂದ ಬಮೂಲ್ ವತಿಯಿಂದ ಶೇ ೫೦ ಹಾಗೂ ಗ್ರಾಮದ ಹಾಲು ಉತ್ಪಾದಕರ ಸಂಘದಿಂದ ಶೇ ೨೫ ರಷ್ಟು ಹಣವನ್ನು ತುಂಬಿಕೊಡಲಾಗುವುದು.

ಜಯಮುತ್ತು ನಿರ್ದೇಶಕರು ಬಮೂಲ್

ಹಾಲನ್ನು ಕರೆಯದೆ ಬಿಟ್ಟರೆ ಕೆಚ್ಚಲು ಬಾವು ಬರುತ್ತದೆ. ಹಾಲು ಉಪಯೋಗವಿಲ್ಲವೆಂದು ಆಹಾರ ಕಡಿಮೆ ನೀಡಿದರೆ ಕೀಟೋಸಿಸ್ (ketosis) ರೋಗ ಬರುತ್ತದೆ. ಕಂಟೋನ್ಮೆಂಟ್ ಝೋನ್ ನವರು ತುಪ್ಪ ಮಾಡಿಕೊಂಡು ಉಪಯೋಗಿಸಬಹುದು. ಬಫರ್ ಝೋನ್ ನವರ ಹಾಲನ್ನು ಉತ್ಪಾದಕ ಸಂಘದವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತೆಗೆದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಸೂಚಿಸಬೇಕು.
ಡಾ ಜಯರಾಮು. ಅಧ್ಯಕ್ಷರು. ಕರ್ನಾಟಕ ಪಶು ವೈದ್ಯಕೀಯ ಸಂಘ ರಾಮನಗರ

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ
ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ

ಚನ್ನಪಟ್ಟಣ:ಜೂ/೨೪/೨೦/ಬುಧವಾರ. ತಾಲ್ಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನ \"ಅಧ್ಯಕ್ಷತೆಯಲ್ಲಿ\" ಕಾರ್ಯದರ್ಶಿ, ಹಾಲು ಪರ

ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ
ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ

ಚನ್ನಪಟ್ಟಣ:ಜೂ/೨೩/೨೦/ಮಂಗಳವಾರ. ರಾಜ್ಯ ಸರ್ಕಾರವು ರೂಪಿಸಲು ಹೊರಟಿರುವ  ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸ

ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ
ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ

ಚನ್ನಪಟ್ಟಣ:ಜೂ/೨೦/೨೦/ಶನಿವಾರ. ರೈತರ ಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ತಾಲ್ಲೂಕಿನ ಎಪಿಎಂಸಿ ಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಕ

ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ ತಿದ್ದುಪಡಿ ತರುತ್ತಿರುವ ಜನಪ್ರತಿನಿಧಿ

ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ

ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು
ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು

ಚನ್ನಪಟ್ಟಣ:ಜೂ/೧೩/೨೦/ಶನಿವಾರ. OKತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಹೈನುಗಾರಿಕೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್

ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ
ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ

ಚನ್ನಪಟ್ಟಣ:ಜೂ/೦೭/೨೦/ಭಾನುವಾರ ತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ಯುವಕನೋರ್ವನಿಗೆ ಕೊರೊನಾ (ಕೋವಿಡ್-೧೯) ಸೋಂಕು ತಗುಲಿದ ನಂತರ ಆತನ ಮನೆಯಿಂ

ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ
ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ಯಾರನ್ನೂ ನಂಬಿ ರಾಜಕೀಯ ಮಾಡುವುದಿಲ್ಲ. ನಂಬಿದ ಕಾರ್ಯಕರ್ತರನ್ನು ಕೈಬಿಡುವುದೂ ಇಲ್ಲ. ಇನ್ನು ಮುಂದೆ ಯಾರ ಹಂಗಿನ

ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು
ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ರೈತ ಬೆಳೆಯನ್ನು ಬೆಳೆಯಲು ಎಷ್ಟು ಹರಸಾಹಸ ಪಡುತ್ತಾನೋ ಅದಕ್ಕಿಂತ ಎರಡು ಪಟ್ಟು ಶ್ರಮವನ್ನು ಬೆಳೆದ ಬೆಳೆಯನ್ನು

ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ
ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಷ್ಟ್ರದ ಪ್ರಧಾನಿಯವರಿಗೆ ಇಲ್ಲಿನ ದಂಡಾಧಿಕಾರಿಗಳ ಮೂಲಕ

Top Stories »  

Top ↑