Tel: 7676775624 | Mail: info@yellowandred.in

Language: EN KAN

    Follow us :


ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ

Posted Date: 20 Jun, 2020

ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ

ಚನ್ನಪಟ್ಟಣ:ಜೂ/೨೦/೨೦/ಶನಿವಾರ. ರೈತರ ಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ತಾಲ್ಲೂಕಿನ ಎಪಿಎಂಸಿ ಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷ ವೆಂಕಟಸ್ವಾಮಿ ಹೇಳಿದರು.

ಅವರು ಇಂದು ನಡೆದ ಎಪಿಎಂಸಿ ಅಧ್ಯಕ್ಷೀಯ ಚುನಾವಣೆ ಯಲ್ಲಿ ಗೆದ್ದ ನಂತರ ಪತ್ರಕರ್ತರ ಜೊತೆ ಮಾತನಾಡಿ ಈ ವಿಷಯ ತಿಳಿಸಿದರು.


ಕಾಂಗ್ರೆಸ್ ಮತ್ತು ಬಿಜೆಪಿ ಯ ಆಂತರಿಕ ಒಪ್ಪಂದದ ಮೇರೆಗೆ ಕಾಂಗ್ರೆಸ್ ನ ಪೂರ್ಣಿಮಾ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಕಂ ಬಿಜೆಪಿ ಪಕ್ಷದ ನಿರ್ದೇಶಕರ ಒಳ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ವೆಂಕಟಸ್ವಾಮಿ ಉಪಾಧ್ಯಕ್ಷ ಸ್ಥಾನಕ್ಕೆ ಕೋಡಂಬಳ್ಳಿ ಕ್ಷೇತ್ರದ ಕೆ ಬಿ ಬೀರಯ್ಯ (ಬಿಳಿ ತಲೆ ಬೀರಯ್ಯ) ನವರು ನಾಮಪತ್ರ ಸಲ್ಲಿಸಿದ್ದರು. ನಾಮಿನಿ ಯ ಮೂವರು ಸದಸ್ಯರು ಸೇರಿ ಹದಿನಾರು ಸದಸ್ಯರ ಪೈಕಿ ವೆಂಕಟಸ್ವಾಮಿ ಒಂಭತ್ತು ಮತಗಳನ್ನು ಪಡೆದು ಜಯಶೀಲರಾದರೇ ಏಳು ಮತಗಳನ್ನು ಪಡೆದ ಪೂರ್ಣಿಮಾ ರವರು ಪರಾಭವಗೊಂಡರು.


ಅಚ್ಚರಿಯ ಬೆಳವಣಿಗೆಯಲ್ಲಿ ಸೋಗಾಲ ಕ್ಷೇತ್ರದ ನಾಗರಾಜು ಬಿಜೆಪಿ ಪಕ್ಷದಿಂದ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡಿದ್ದರಿಂದ ಜೆಡಿಎಸ್ ಪಕ್ಷವು ಅಧ್ಯಕ್ಷ ಸ್ಥಾನ ಹಿಡಿಯಲು ಸುಲಭ ಸಾಧ್ಯವಾಗಿದ್ದು, ಇದು ಮಾಜಿ ಮಂತ್ರಿ ಸಿ ಪಿ ಯೋಗೇಶ್ವರ್ ರವರಿಗೆ ಮುಖಭಂಗ ಎಂದೇ ಭಾವಿಸಬಹುದು.


ಈ ಬಗ್ಗೆ ನಾಗರಾಜು ರವರನ್ನು ಪ್ರಶ್ನಿಸಲಾಗಿ ನಾನು ಯೋಗೇಶ್ವರ್ ಮತ್ತು ಬಿಜೆಪಿ ಪಕ್ಷವನ್ನು ನಂಬಿ ‌ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆ. ಆದರೆ ಯೋಗೇಶ್ವರ್ ರವರು ಪ್ರತಿ ಭೇಟಿಯಲ್ಲೂ ನೀವು ದಳದ ಫಾಲೋವರ್ ಎಂದೇ ಸಂಭೋದಿಸುತ್ತಿದ್ದುದರಿಂದ ಹಾಗೂ ಅವರ ಮನಸ್ಸಿನಲ್ಲಿ ಅದೇ ಭಾವನೆ ಮೂಡಿದ್ದು ಮುಂದೆಯೂ ಇದು ಪುನಾರವರ್ತನೆ ಆಗುವುದು ಬೇಡ ಎಂದು ನಿನ್ನೆ ದಿನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಇಂದಿನ ಚುನಾವಣೆಯಲ್ಲಿ ಅಧ್ಯಕ್ಷರಿಗೆ ಮತ ಚಲಾಯಿಸುವ ಮೂಲಕ ಪಕ್ಷದ ಗೆಲುವಿಗೆ ಸ್ಪಂದಿಸಿರುವುದಾಗಿ ತಿಳಿಸಿದರು.


ಕಟ್ಟಾ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ನವರ ಅಭಿಮಾನಿಯಾದ ಉಪಾಧ್ಯಕ್ಷ ಕೆ ಬಿ ಬೀರಯ್ಯನವರು ಮಾತನಾಡಿ ನಾನು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದ ವರೆಗೂ ಕಾಂಗ್ರೆಸ್ ನನ್ನನ್ನು ಕಡೆಗಣಿಸಿದೆ. ಈ ಬಾರಿ ತಾಲ್ಲೂಕಿನ ಜೆಡಿಎಸ್ ಪಕ್ಷದ ನಾಯಕರು ನನ್ನನ್ನು ಗುರುತಿಸಿ ಉಪಾಧ್ಯಕ್ಷ ಸ್ಥಾನವನ್ನು ಗೆಲ್ಲಲು ಸಹಕಾರ ನೀಡಿದ್ದಾರೆ. ಅವರಿಗೆ ನಾನು ಚಿರ ಋಣಿ ಆಗಿರುತ್ತೇನೆ. ಈ ವಿಚಾರದಲ್ಲಿ ಯಾರನ್ನೂ ದೂರುವುದಿಲ್ಲ. ತಟಸ್ಥವಾಗಿರುತ್ತೇನೆ ಎಂದರು.


ಜನತಾ ದಳ ಪಕ್ಷದ ನಾಯಕರೇನಕರು ಒಗ್ಗೂಡಿದರೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ನಮಗೂ ಇದಕ್ಕೂ ಸಂಬಂಧವೇ ಇಲ್ಲಾ ಎಂಬಂತೆ ಬಂದು ಹೋಗುವ ಕೆಲಸವನ್ನಷ್ಟೇ ಮಾಡಿದರು. ಬಿಜೆಪಿ ಪಕ್ಷದ ನಾಯಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಚುನಾವಣಾಧಿಕಾರಿಯಾಗಿ ತಾಲ್ಲೂಕಿನ ದಂಡಾಧಿಕಾರಿ ಬಿ ಕೆ ಸುದರ್ಶನ್ ರವರು ಕರ್ತವ್ಯ ನಿರ್ವಹಿಸಿದರು. ಪೂರ್ವ ಪೋಲಿಸ್ ಠಾಣೆಯ ಪಿಎಸ್ಐ ಪ್ರಕಾಶ್ ಮತ್ತು ಸಿಬ್ಬಂದಿಗಳು ಬಂದೋಬಸ್ತ್ ಕೈಗೊಂಡಿದ್ದರು.


ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಜೆಡಿಎಸ್ ನ ತಾಲ್ಲೂಕು ಅಧ್ಯಕ್ಷ ಜಯಮುತ್ತು, ನಾಯಕರಾದ ಸಿಂಲಿಂ ನಾಗರಾಜು, ಕರಿಯಪ್ಪ, ಹಾಪ್ ಕಾಮ್ಸ್ ದೇವರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ಹಿಂದಿನ ನಿಕಟಪೂರ್ವ ಅಧ್ಯಕ್ಷ ಯಾಲಕ್ಕಿಗೌಡ ರಂಗಸ್ವಾಮಿ, ಕುಕ್ಕೂರುದೊಡ್ಡಿ ಜಯರಾಮು, ಮಳೂರುಪಟ್ಟಣ ರವಿ ಸೇರಿದಂತೆ ಅನೇಕ ನಾಯಕರು ಅಭಿನಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ
ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ

ಚನ್ನಪಟ್ಟಣ:ಜೂ/೨೪/೨೦/ಬುಧವಾರ. ತಾಲ್ಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನ \"ಅಧ್ಯಕ್ಷತೆಯಲ್ಲಿ\" ಕಾರ್ಯದರ್ಶಿ, ಹಾಲು ಪರ

ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ
ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ

ಚನ್ನಪಟ್ಟಣ:ಜೂ/೨೩/೨೦/ಮಂಗಳವಾರ. ರಾಜ್ಯ ಸರ್ಕಾರವು ರೂಪಿಸಲು ಹೊರಟಿರುವ  ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸ

ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ
ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ

ಚನ್ನಪಟ್ಟಣ:ಜೂ/೨೦/೨೦/ಶನಿವಾರ. ರೈತರ ಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ತಾಲ್ಲೂಕಿನ ಎಪಿಎಂಸಿ ಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಕ

ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ ತಿದ್ದುಪಡಿ ತರುತ್ತಿರುವ ಜನಪ್ರತಿನಿಧಿ

ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ

ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು
ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು

ಚನ್ನಪಟ್ಟಣ:ಜೂ/೧೩/೨೦/ಶನಿವಾರ. OKತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಹೈನುಗಾರಿಕೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್

ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ
ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ

ಚನ್ನಪಟ್ಟಣ:ಜೂ/೦೭/೨೦/ಭಾನುವಾರ ತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ಯುವಕನೋರ್ವನಿಗೆ ಕೊರೊನಾ (ಕೋವಿಡ್-೧೯) ಸೋಂಕು ತಗುಲಿದ ನಂತರ ಆತನ ಮನೆಯಿಂ

ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ
ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ಯಾರನ್ನೂ ನಂಬಿ ರಾಜಕೀಯ ಮಾಡುವುದಿಲ್ಲ. ನಂಬಿದ ಕಾರ್ಯಕರ್ತರನ್ನು ಕೈಬಿಡುವುದೂ ಇಲ್ಲ. ಇನ್ನು ಮುಂದೆ ಯಾರ ಹಂಗಿನ

ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು
ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ರೈತ ಬೆಳೆಯನ್ನು ಬೆಳೆಯಲು ಎಷ್ಟು ಹರಸಾಹಸ ಪಡುತ್ತಾನೋ ಅದಕ್ಕಿಂತ ಎರಡು ಪಟ್ಟು ಶ್ರಮವನ್ನು ಬೆಳೆದ ಬೆಳೆಯನ್ನು

ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ
ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಷ್ಟ್ರದ ಪ್ರಧಾನಿಯವರಿಗೆ ಇಲ್ಲಿನ ದಂಡಾಧಿಕಾರಿಗಳ ಮೂಲಕ

Top Stories »  


Top ↑