Tel: 7676775624 | Mail: info@yellowandred.in

Language: EN KAN

    Follow us :


ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ

Posted Date: 24 Jun, 2020

ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ

ಚನ್ನಪಟ್ಟಣ:ಜೂ/೨೪/೨೦/ಬುಧವಾರ. ತಾಲ್ಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನ "ಅಧ್ಯಕ್ಷತೆಯಲ್ಲಿ" ಕಾರ್ಯದರ್ಶಿ, ಹಾಲು ಪರೀಕ್ಷಕ ಮತ್ತು ಸಹಾಯಕ ಹಾಲು ಪರೀಕ್ಷಕರು ಸೇರಿ ಪ್ರತಿದಿನವೂ ೩೨ ರಿಂದ ೩೫ ಲೀಟರ್ ಹಾಲು ಕದಿಯುತ್ತಿದ್ದದ್ದು ಇಂದು ಬಹಿರಂಗಗೊಂಡಿದೆ.


ಭೂಹಳ್ಳಿಯ ಹಾಲು ಉತ್ಪಾದಕರ ಸಂಘದಲ್ಲಿ ಶೇಖರಿಸಿದ ಹಾಲಿನ ಡಬ್ಬಗಳನ್ನು ಅರಳಾಳುಸಂದ್ರ ಗ್ರಾಮದಲ್ಲಿರುವ ಶೀಥಲೀಕರಣ ಘಟಕಕ್ಕೆ ಪ್ರತಿದಿನವೂ ಟೆಂಪೋ ಮೂಲಕ ಸಾಗಿಸಲಾಗುತ್ತದೆ. ಈ ಟೆಂಪೋ ಮಾಲೀಕ ಮತ್ತು ಚಾಲಕನೂ ಸಹ ಅಧ್ಯಕ್ಷ ನೇ ಆಗಿದ್ದು ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಸಹ ಭಾಗಿಯಾಗಿರುವ ಸಾಧ್ಯತೆ ಇದೆ.


ಹಾಲಿನ ಡಬ್ಬಗಳನ್ನು ತುಂಬಿಕೊಂಡು ದಾರಿ ಮಧ್ಯದಲ್ಲಿ ಒಂದು ಕಡೆ ನಿಲ್ಲಿಸಿ ಎರಡು ಲೀಟರ್ ನೀರಿನ ಎಂಟು ಬಾಟಲ್ ಗಳಲ್ಲಿ ಹಾಲು ತುಂಬಿಸಿಕೊಂಡು ಡಬ್ಬಕ್ಕೆ ನೀರು ತುಂಬಿಸಿ ಶೀಥಲೀಕರಣ ಘಟಕಕ್ಕೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.


ಹಾಲು ಉತ್ಪಾದಕರಿಗೆ ಅನುಮಾನ ಬಂದು ಹಿಂಬಾಲಿಸಿ ಹಾಲನ್ನು ಕದಿಯುತ್ತಿದ್ದುದನ್ನು ಖುದ್ದು ಹಿಡಿದು ಬಮೂಲ್ ನ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಅಧಿಕಾರಿಗಳು ಭೇಟಿ ನೀಡಿ ರಾಜಿ ಸಂಧಾನ ಅಥವಾ ಕ್ರಮ ಕೈಗೊಳ್ಳುವ ಸಲುವಾಗಿಯೋ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಅರಳಾಳುಸಂದ್ರ ಶೀಥಲೀಕರಣ ಆರಂಭವಾದ ದಿನದಿಂದ ಇಲ್ಲಿಯವರೆಗೂ ಸಂಘಕ್ಕೆ ಆಗಿರುವ ನಷ್ಟ ತುಂಬಿಕೊಡುವಂತೆ ಬಮೂಲ್ ಸೂಪರ್ ವೈಸರ್ ಹೊನ್ನಪ್ಪ ಪೂಜಾರ್ ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ನಂಬಲರ್ಹ ಮೂಲಗಳು ಖಚಿತಪಡಿಸಿವೆ. ಸಂಬಂಧಿಸಿದವರನ್ನು ಕೆಲಸದಿಂದ ವಜಾಗೊಳಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಬೇಕಾಗಿದೆ. ಅಧಿಕಾರಿ ಹೊನ್ನಪ್ಪ‌ಪೂಜಾರ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಧ್ಯಕ್ಷ ಕಂ ಚಾಲಕ ಹಾಲು ಕದಿಯುತ್ತಿದ್ದುದ್ದನ್ನು ಒಪ್ಪಿಕೊಂಡಿದ್ದಾರೆ. ನಷ್ಟವನ್ನು ತುಂಬಿಕೊಡುವುದಾಗಿಯೂ ಹೇಳಿದ್ದಾರೆ. ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.


ಬಮೂಲ್ ನಿರ್ದೇಶಕ  ಜಯಮುತ್ತು ಮಾತನಾಡಿ ಒಂದೇ ಒಂದು ದಿನದ ಮಾಹಿತಿಯನ್ನು ಬಿಡದೇ ಸಂಗ್ರಹಿಸಿ, ಒಟ್ಟು ಎಷ್ಟು ದಿನದಿಂದ ಎಷ್ಟೆಷ್ಟು ಹಾಲನ್ನು, ಯಾರು ಯಾರು ಹೇಗೆ ಕದಿಯುತ್ತಿದ್ದರು. ಎಷ್ಟು ಕದ್ದಿದ್ದಾರೆ ಎಂಬುದನ್ನು ಕಲೆಹಾಕಿ, ಅಷ್ಟು ಬಾಬ್ತನ್ನು ಜಮಾ ಮಾಡಿಸುವುದಾಗಿ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ
ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ

ಚನ್ನಪಟ್ಟಣ:ಜೂ/೨೪/೨೦/ಬುಧವಾರ. ತಾಲ್ಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನ \"ಅಧ್ಯಕ್ಷತೆಯಲ್ಲಿ\" ಕಾರ್ಯದರ್ಶಿ, ಹಾಲು ಪರ

ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ
ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ

ಚನ್ನಪಟ್ಟಣ:ಜೂ/೨೩/೨೦/ಮಂಗಳವಾರ. ರಾಜ್ಯ ಸರ್ಕಾರವು ರೂಪಿಸಲು ಹೊರಟಿರುವ  ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸ

ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ
ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ

ಚನ್ನಪಟ್ಟಣ:ಜೂ/೨೦/೨೦/ಶನಿವಾರ. ರೈತರ ಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ತಾಲ್ಲೂಕಿನ ಎಪಿಎಂಸಿ ಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಕ

ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ ತಿದ್ದುಪಡಿ ತರುತ್ತಿರುವ ಜನಪ್ರತಿನಿಧಿ

ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ

ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು
ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು

ಚನ್ನಪಟ್ಟಣ:ಜೂ/೧೩/೨೦/ಶನಿವಾರ. OKತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಹೈನುಗಾರಿಕೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್

ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ
ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ

ಚನ್ನಪಟ್ಟಣ:ಜೂ/೦೭/೨೦/ಭಾನುವಾರ ತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ಯುವಕನೋರ್ವನಿಗೆ ಕೊರೊನಾ (ಕೋವಿಡ್-೧೯) ಸೋಂಕು ತಗುಲಿದ ನಂತರ ಆತನ ಮನೆಯಿಂ

ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ
ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ಯಾರನ್ನೂ ನಂಬಿ ರಾಜಕೀಯ ಮಾಡುವುದಿಲ್ಲ. ನಂಬಿದ ಕಾರ್ಯಕರ್ತರನ್ನು ಕೈಬಿಡುವುದೂ ಇಲ್ಲ. ಇನ್ನು ಮುಂದೆ ಯಾರ ಹಂಗಿನ

ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು
ಕಾಡಾನೆಗಳ ದಾಳಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾವು ನಾಶ. ಹನಿಯೂರು ರೈತ ಬೋರೆಗೌಡನ ಅಳಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ರೈತ ಬೆಳೆಯನ್ನು ಬೆಳೆಯಲು ಎಷ್ಟು ಹರಸಾಹಸ ಪಡುತ್ತಾನೋ ಅದಕ್ಕಿಂತ ಎರಡು ಪಟ್ಟು ಶ್ರಮವನ್ನು ಬೆಳೆದ ಬೆಳೆಯನ್ನು

ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ
ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಷ್ಟ್ರದ ಪ್ರಧಾನಿಯವರಿಗೆ ಇಲ್ಲಿನ ದಂಡಾಧಿಕಾರಿಗಳ ಮೂಲಕ

Top Stories »  


Top ↑