Tel: 7676775624 | Mail: info@yellowandred.in

Language: EN KAN

  Follow us :


ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು

Posted Date: 08 Oct, 2018

ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು

ತೋಟಗಾರಿಕೆ ಇಲಾಖೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನೆಗಳು, ತಾಲೂಕು ಪಂಚಾಯತ್ ಯೋಜನೆಗಳು, ರಾಜ್ಯ ವಲಯ ಜನೆಗಳು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಳಿದ್ದು ಈ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಚನ್ನಪಟ್ಟಣ ತೋಟಗಾರಿಕೆ ಸಹಾಯಕ ನಿರ್ದೇಶಕ ವಿವೇಕ್ ಹೇಳಿದರು. ತಾಲ್ಲೂಕಿನಲ್ಲಿ 20,000 ಹೆಕ್ಟೇರ್‍ಗೂ ಹೆಚ್ಚು ತೋಟಗಾರಿಕೆ ಬೆಳೆಯಿದ್ದು 12,000 ಹೆಕ್ಟೇರ್ ತೆಂಗು, 5,000 ಹೆಕ್ಟೇರ್ ಮಾವು, 3,000 ಹೆಕ್ಟೇರ್ ಬಾಳೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಯನ್ನು ಬೆಳೆ ಯಲಾಗುತ್ತಿದೆ.
ಪ್ರತಿ ವರ್ಷವೂ ನರೇಗಾ ಸೇರಿದಂತೆ ಎಂಟರಿಂದ ಒಂಭತ್ತು ಕೋಟಿ ಅನುದಾನ ಬರುತಿದ್ದು {ಅಧಿಕಾರಿ ಗಳು ಮತ್ತು ತೋಟಗಾರಿಕೆ ಸಿಬ್ಬಂದಿಗಳ ಸಂಬಳ ಸೇರಿದಂತೆ} ಬಹುತೇಕ ಯೋಜನೆಗಳ ಹಣವು ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.

ಜಿಲ್ಲಾ ಪಂಚಾಯತ್ ಯೋಜನೆಗಳು

ಜಿಲ್ಲಾ ಪಂಚಾಯತ್ ಯೋಜನೆಗಳಲ್ಲಿ ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆ ಮಾಡಿ ಗುಣಮಟ್ಟದ ಸಸಿಗಳನ್ನು ವಿತರಿಸುವುದು ಮತ್ತು ಜೇನು ಕೃಷಿ ಮಾಡುವವರಿಗೆ ಶೇಕಡಾ 50 ರ ರಿಯಾ ಯಿತಿಯಲ್ಲಿ ಕೃಷಿ ಪರಿಕರಗಳನ್ನು ಒದಗಿಸಲಾಗುತ್ತದೆ. ತಾಲ್ಲೂಕು ಪಂಚಾಯತ್ ಯೋಜನೆಗಳು ತಾಲ್ಲೂಕು ಪಂಚಾಯತ್ ಯೋಜನೆಗಳಲ್ಲಿ ತೋಟಗಾರಿಕೆಗೆ ನುರಿತ ವಿದ್ವಾಂಸರಿಂದ ತಾಂತ್ರಿಕತೆ ಮತ್ತು ನೂತನ ಆವಿಸ್ಕಾರಗಳ ಕುರಿತು ತರಬೇತಿ. ರೈತರಿಗೆ ಒಂದು ಎಕರೆ ಪ್ರದೇಶಕ್ಕೆ 1,000 ರೂ ಗಳಿಗೆ ಮೀರದಂತೆ ಉಚಿತವಾಗಿ
ತೆಂಗು, ಮಾವು ಸಪೋಟ ಮುಂತಾದ ಗಿಡಗಳನ್ನು ವಿತರಿಸುವುದು. ರೋಗ ಮತ್ತು ಕೀಟ ಬಾಧೆಗಳ ನಿಯಂತ್ರಣಕ್ಕೆ ಪ್ರತಿ
ಹೆಕ್ಟೇರ್‍ಗೆ ಗರಿಷ್ಠ 2,000 ರೂ ಮೀರದಂತೆ ಮಾರ್ಗಸೂಚಿ ಪ್ರಕಾರ ಎಲ್ 1 ದರ ಆಧರಿಸಿ ಶೇಕಡಾ 50 ರಷ್ಟು ಸಹಾಯಧನ ಒದಗಿಸುತ್ತದೆ.
2018-19ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವರ್ಗದ ರೈತರಿಗೆ 2.1 ಎಕರೆ ಹೊಸದಾಗಿ ತೆಂಗು, ಹಣ್ಣಿನ ತೋಟ ಸ್ಥಾಪಿಸಲು ಸಹಾಯಧನ ನೀಡುತ್ತದೆ.

ರಾಜ್ಯವಲಯ ಯೋಜನೆಗಳು

ತೋಟಗಾರಿಕೆ ಬೆಳೆಗಳ ರೋಗ, ಕೀಟಗಳ ನಿಯಂತ್ರ ಣದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50, ಪರಿಶಿಷ್ಠ ವರ್ಗದ ರೈತರಿಗೆ ಶೇಕಡಾ 90 ರಂತೆ ಗರಿಷ್ಠ 2 ಹೆಕ್ಟೇರ್ ಗೆ ಸಂರಕ್ಷಣಾ ಔಷಧಿ ಖರೀದಿಗೆ ಸಹಾಯ ನೀಡಲಾಗುತ್ತದೆ. ತೆಂಗು ಬೆಳೆ ಅಭಿವೃದ್ದಿ ಯೋಜನೆ ಯಲ್ಲಿ ಸಂಯೋಜಿತ ಬೇಸಾಯ ಮಾಡಿದರೆ ಶೇಕಡಾ 75 ರಂತೆ ಕೀಟ ಬಾಧೆಗಳ ರೋಗಕ್ಕೆ, ಪೋಷಕಾಂಶ ನಿರ್ವಹಣೆಗೆ ಶೇಕಡಾ 75 ರಂತೆ,
ಪ್ರದೇಶ ವಿಸ್ತರಣೆಗೆ ರಾಜ್ಯದ ಪಾಲು ಸೇರಿ ಶೇಕಡಾ 50 ರಂತೆ ಹಾಗೂ ಮರು ನಾಟಿ ಮತ್ತು ಪುನಶ್ಚೇತನ, ನಿರ್ವಹಣೆಗೆ ಪ್ರತಿ ಹೆಕ್ಟೇರ್‍ಗೆ 44,750 ರೂ ಮೊದಲನೇ ವರ್ಷ, ಎರಡನೇ ವರ್ಷ 8,750 ರೂ ಗಳನ್ನು ನೀಡಲಾಗುತ್ತದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ
ಗುಚ್ಚಗಳಲ್ಲಿ ಅಂದರೆ ನಾಲ್ಕೈದು ಗ್ರಾಮಗಳ ರೈತರನ್ನು ಒಟ್ಟಿಗೆ ಸೇರಿಸಿ ಒಂದೇ ಕಡೆ ಒಂದೊಂದೇ ಬೆಳೆಯನ್ನು ಬೆಳೆಯುವಂತೆ ಪ್ರೋತ್ಸಾಹ ನೀಡುವುದು. ಟೊಮ್ಯಾಟೋ, ಫೋಲ್‍ಬೀನ್ಸ್, ಮಾವು ಮುಂತಾದ ಬೆಳೆಗಳನ್ನು ಗುಚ್ಚ ಪದ್ದತಿಯಲ್ಲಿ ಬೆಳೆಯಬೇಕಾದರೆ ಹನಿ ನೀರಾವರಿ ಕಡ್ಡಾಯವಾಗಿದ್ದು, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಹನಿ ನೀರಾ ವರಿ, ಉತ್ಪನ್ನಗಳ ಗುಣಮಟ್ಟ, ಸಂಸ್ಕರಣೆ ಮತ್ತು ಮೌಲ್ಯವರ್ದನೆ ಪ್ಯಾಕ್‍ಹೌಸ್, ಕೃಷಿಹೊಂಡ, ಪ್ಲಾಷ್ಟಿಕ್ ಕ್ರೇಟ್ಸ್, ಮಾರುಕಟ್ಟೆ ಸುವ್ಯವಸ್ಥೆ ಕಲ್ಪಿಸಲಾಗುತ್ತದೆ, ಪರಿಶಿಷ್ಟ ಜಾತಿಗೆ ಶೇಕಡಾ 90, ಸಾಮಾನ್ಯ ವರ್ಗಕ್ಕೆ ಶೇಕಡಾ 50 ಸಹಾಯಧನ ನೀಡಲಾಗುತ್ತದೆ. ನೀರಿನ ಟ್ಯಾಂಕ್ ಖರೀದಿಸಲು, ಕೈತೋಟ ಮತ್ತು ತಾರಸಿ
ತೋಟಗಳ ಉತ್ತೇಜನ, ಅಪ್ರಧಾನ ಹಣ್ಣುಗಳ ಪ್ರದೇಶ ವಿಸ್ತರಣೆ, ಕೃಷಿ ಭಾಗ್ಯ ಯೋಜನೆಳಿಗೂ ಸಹಾಯಧನ ಒದಗಿಸಲಾಗುತ್ತದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

ಗೆಡ್ಡೆ ಬಾಳೆ, ಅಂಗಾಂಶ ಕೃಷಿ ಬಾಳೆ, ಪಪ್ಪಾಯ, ತರಕಾರಿ ನಿಖರ ಬೇಸಾಯ ಪದ್ದತಿಯಲ್ಲಿ ಬೆಳೆಯಲು ಸಹಾಯಧನ, ಅಗತ್ಯವಿರುವ ಅನುಮೋದಿತ ಖರೀದಿಸಿದ ಉಪಕರಣಗಳಿಗೆ ಎಸ್‍ಎಂಎಎಂ ಯೋಜನೆಯಡಿಯಲ್ಲಿ ಸಹಾಯಧನ, ಆರ್‍ಕೆವಿವೈ ಯೋಜನೆಯಡಿ ಪರಂಪರಾಗತ ಕೃಷಿವಿಕಾಸ ಯೋಜನೆಯಡಿಯಲ್ಲಿ ಪ್ಯಾಕ್‍ಹೌಸ್, ಜೇನು ಸಾಕಾ ಣಿಕೆ ತರಬೇತಿ ಮತ್ತು ಪಿಎಂಕೆಸಿವೈ ಯೋಜನೆಯಡಿ ಹನಿ, ತುಂತುರು ನೀರಾವರಿ ಯೋಜನೆಗಳಿಗೆ ಸಹಾಯ ಧನ ಒದಗಿಸಲಾಗುತ್ತದೆ.

ಸಮಗ್ರ ತೋಟಗಾರಿಕೆ ಅಭಿವೃದ್ದಿ ಮಿಷನ್ ಯೋಜನೆ

ಈ ಎನ್‍ಹೆಚ್‍ಎಂ ಯೋಜನೆಯಡಿಯಲ್ಲಿ ಅಂಗಾಂಶ ಕೃಷಿ ಬಾಳೆ ಪ್ರದೇಶ ವಿಸ್ತರಣೆ, ಪುಷ್ಪಾಭಿವೃದ್ಧಿ, ತರಕಾರಿ ಬೇಸಾಯ, ಹಸಿರುಮನೆ, ನೆರಳು ಚಪ್ಪರ ನಿರ್ಮಾಣ, ಮತ್ತು ತೇವಾಂಶ ಕಾಪಾಡಲು ಹಾಗೂ ಕಳೆ ನಿಯಂ ತರಿಸಲು ಶೇಕಡಾ 50 ರಷ್ಟು ಸಹಾಯಧನ ನೀಡ ಲಾಗುತ್ತದೆ. ಟ್ರ್ಯಾಕ್ಟರ್, ಟಿಲ್ಲರ್ ಖರೀದಿಸಲು, ರೋಗ ಮತ್ತು ಕೀಟಗಳ ನಿಯಂತ್ರಣಕ್ಕೆ ಸಹಾಯಧನ, ರೈತರಿಗೆ ತರಬೇತಿ,
ಪ್ಯಾಕ್‍ಹೌಸ್ ನಿರ್ಮಾಣ, ಹಣ್ಣು ಮಾಗಿ ಸುವ ಘಟಕ, ಶೀತಲ ಗೃಹ ಘಟಕಗಳಿಗೂ ಸಹ ಸಾಮಥ್ರ್ಯ ಕ್ಕನುಗುಣವಾಗಿ ಸಹಾಯಧನ ನೀಡಲಾಗುತ್ತಿದೆ.

ರೈತರಿಗಾಗಿ ನಾವು ಹೆಚ್‍ಆರ್ ವಿವೇಕ್

ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳನ್ನು ಫಲಾನುಭವಿ ರೈತರಿಗೆ ಪತ್ರಿಕೆಗಳ ಮೂಲಕ, ಕೆಲವು ಜಾಹೀರಾತುಗಳು, ಕರಪತ್ರಗಳ ಮೂಲಕ ರೈತರಿಗೆ ತಲುಪಿಸುತ್ತಿದ್ದೇವೆ. ಕೆಲವೊಂದು ಬೆಳೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಬೆಳೆಗಳಿಗೆ ಬರುವ ಸಹಾಯಧನವೂ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ, ಇನ್ನು ಮುಂದೆಯೂ ಸಹ ತಾಲ್ಲೂಕಿನಾದ್ಯಂತ ರೈತರು ಮತ್ತು
ಬೆಳೆಗೆ ಸಂಬಂಧಿಸಿದಂತೆ ತಿಳುವಳಿಕೆ ಮೂಡಿಸಿ ಎಲ್ಲರಿಗೂ ಅನುಕೂಲ ಕಲ್ಪಿಸುಕೊಡಲು ಪ್ರಯತ್ನಿ ಸುತ್ತೇನೆ ಎಂದು ವಿಶ್ವಾಸ ವ್ಯಕ್ತÀಪಡಿಸಿದರು.

ಈ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ

ಚನ್ನಪಟ್ಟಣ ತಾಲ್ಲೂಕು ತೋಟಗಾರಿಕೆ ಇಲಾಖೆ ಯಲ್ಲಿ ಒಟ್ಟು 23 ಹುದ್ದೆಗಳಿದ್ದು ಸದ್ಯ 11 ಹುದ್ದೆಗಳು ಮಾತ್ರ ಭರ್ತಿಂiÉiÁಗಿವೆ. ಸಹಾಯಕ ತೋಟಗಾರಿಕೆ ಅಧಿ ಕಾರಿಗಳ 5 ಹುದ್ದೆಗಳಲ್ಲಿ ಕೇವಲ ಇಬ್ಬರು ಅಧಿಕಾರಿ ಗಳಿದ್ದಾರೆ. ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಒಂದಿದ್ದು ಅದೂ ಖಾಲಿ ಇದೆ, ತೋಟಗಾರರ ಎಂಟು ಹುದ್ದೆ ಗಳಿದ್ದು, ಎಂಟು ಹುದ್ದೆಗಳನ್ನು ಭರ್ತಿ ಮಾಡದೆ ಇರುವುದು ನಿಜಕ್ಕೂ ದಾಖಲೆಯೇ ಸರಿ.

 

ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು

 • Puttegowda s s wrote:
  08 Oct, 2018 08:34 pm

  Hello sir naaanobba raitha naanu Reshme ilakege documents submitt maadi 3 months agide Inna bandu gps madila response madala

 • Puttegowda s s wrote:
  08 Oct, 2018 08:34 pm

  Hello sir naaanobba raitha naanu Reshme ilakege documents submitt maadi 3 months agide Inna bandu gps madila response madala

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ
ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ

ಚನ್ನಪಟ್ಟಣ: ಈ ಬಾರಿ ಕಾಲಕಾಲಕ್ಕೆ ಸರಿಯಾಗಿ ಬಿದ್ದ ಮಳೆಯಿಂದಾಗಿ ಜಿಲ್ಲಾದ್ಯಂತ ಬಿತ್ತಿರುವ ರಾಗಿ ಚನ್ನಾಗಿ ಬೆಳೆದಿದ್ದು ರೈತರ ಮೊಗದಲ್ಲಿ ಸಂತಸ ಎದ್ದು ಕಾಣ

ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*
ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ದಾಖಲೆಯ ಎನ್ ಆರ್ ಕಾಲೋನಿಯ ತೋಟವೊಂದರ ಹುಣಸೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯನ್ನು ಬಿಡಿಸಿದರೆ ರಕ್ರ

ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆದು ಒಕ್ಕಣೆ ಮಾಡುತ್ತಿರುವ ಸಿರಿವಂತ ಯುವಕ ಯೋಗೇಶಗೌಡ
ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆದು ಒಕ್ಕಣೆ ಮಾಡುತ್ತಿರುವ ಸಿರಿವಂತ ಯುವಕ ಯೋಗೇಶಗೌಡ

ಚನ್ನಪಟ್ಟಣ: ಸಿರಿಧಾನ್ಯ ಎಂದರೆ ಇತ್ತೀಚಿನವರೆಗೂ ಮೂಗು‌ ಮುರಿಯುತ್ತಿದ್ದ ಜನರು ಸಿರಿಧಾನ್ಯ ಕ್ಕೆ ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ. ಅಂದು ಬ

ಹೈನೋದ್ಯಮವನ್ನು ಹತ್ತಿಕ್ಕುವ ಕೆಲಸ ಕೈಬಿಡಬೇಕು ಕಕಜವೇ ರಮೇಶ್ ಗೌಡ
ಹೈನೋದ್ಯಮವನ್ನು ಹತ್ತಿಕ್ಕುವ ಕೆಲಸ ಕೈಬಿಡಬೇಕು ಕಕಜವೇ ರಮೇಶ್ ಗೌಡ

ಚನ್ನಪಟ್ಟಣ: ರಾಜ್ಯದಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳಿದ್ದು ಹಾಲು ಮತ್ತು ಅದರ ಉಪ ಉತ್ಪನ್ನಗಳಲ್ಲಿಯೂ ದೇಶ ಮುಂಚೂಣಿ

ರೈತರ ಏಳ್ಗೇಗಾಗಿ‌ ಕೃಷಿ ಅಭಿಯಾನ ಕೆವಿಕೆ ಯ ಪ್ರೀತು
ರೈತರ ಏಳ್ಗೇಗಾಗಿ‌ ಕೃಷಿ ಅಭಿಯಾನ ಕೆವಿಕೆ ಯ ಪ್ರೀತು

ಚನ್ನಪಟ್ಟಣ: ರೈತ ಬೆಳೆಯುವ ಎಲ್ಲಾ ಬೆಳೆಗೂ ಕೃಷಿ ಇಲಾಖೆಯ ಸಹಾಯ ಮತ್ತು ಮಾಹಿತಿ ಪಡೆದು ವ್ಯವಸಾಯ ಮಾಡಿದರೆ ರೈತನ ಬದುಕು ಉಜ್ವಲವಾಗುತ್ತದೆ, ರೈತರ

ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ
ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಹಲವಾರು ರೈತರು ಬಿತ್ತನೆ ಮಾಡಲಾಗಿಲ್ಲ, ತಡವಾಗಿ ಬಂದ ಅಲ್ಪ ಮಳೆ ನೆಚ್ಚಿಕೊಂಡು

ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ
ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ

ಚನ್ನಪಟ್ಟಣ: ಮುಂಗಾರು ಮಳೆ ಕೈಕೊಟ್ಟ ಹಾಗೂ ತಡವಾಗಿ ಆಗಮಿಸಿದ ಕಾರಣ ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಲಾಗದೇ ಕಂಗಲಾಗಿದ್ದ ರೈತ, ತಡವಾಗಿ ಆಗಮಿಸಿರುವ ಮ

ರೈತನ ಗೋಳು ಕೇಳೋರ್ ಯಾರು ?
ರೈತನ ಗೋಳು ಕೇಳೋರ್ ಯಾರು ?

ಒಂದು ಕಂತೆ ಕೊತ್ತಂಬರಿ ಮತ್ತು ಸಪ್ಪಸೀಗೆ ಸೊಪ್ಪಿಗೆ ಕೇವಲ ಐದು ರೂಪಾಯಿಗಳು, ಆಟೋದಲ್ಲಿ ಮಾರುತ್ತಿರುವ ವ್ಯಕ್ತಿ ವ್ತಾಪಾರಸ್ಥ, ಸೊಪ್ಪು ತಂದಿರುವುದು ಮಂಡ್ಯ ಮಾರ್ಕೆಟ್ ನಿಂದ, ಮಂಡ್ಯದಿಂದ ಆಟೋದಲ್ಲಿ ತ

ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು
ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು

ಹದಿನೈದು ವರ್ಷಗಳಿಂದ ತುಂಬದಿದ್ದ ಕೂಡ್ಲೂರು ಕೆರೆಯು ಏತ ನೀರಾವರಿ ಮೂಲಕ ತುಂಬಿ ತುಳುಕುತಿದ್ದು ಕೋಡಿ ಹರಿಯಲಾರಂಭಿಸಿದೆ, ಕೆರೆಯ ನೀರು ಮತ್ತು ಬೋರ್ ವೆಲ್ಲ ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತ

ಸಾಲಬಾಧೆ ರೈತ ಆತ್ಮಹತ್ಯೆ
ಸಾಲಬಾಧೆ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೇ ತಾಲ್ಲೂಕಿನ ಹನುಮಾಪುರ ದೊಡ್ಡಿ ಗ್ರಾಮದ ಹೆಚ್ ಎಂ ಕೆಂಪೇಗೌಡ ಎಂಬುವವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


Top Stories »  


Top ↑