Tel: 7676775624 | Mail: info@yellowandred.in

Language: EN KAN

    Follow us :


ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.

Posted Date: 26 Nov, 2018

ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.

ಪಶುವೈದ್ಯಕೀಯ ಇಲಾಖೆ ರೈತ ಸಾಕುವ ಎಲ್ಲಾ ಜಸನುವಾರುಗಳಿಗೆ ಅದರಲ್ಲೂ ಪ್ರತಿನಿತ್ಯ ವಹಿವಾಟು ನಡೆಸುವಂತಹ ಹಸುಗಳಿಗೆ ಸಹಕಾರಿಯಾಗುವ ಇಲಾಖೆ.

ಪಶುವೈದ್ಯ ಇಲಾಖೆಗೂ ಮತ್ತು ರೈತನಿಗೂ ನೇರ ನಂಟಿದೆ, ಬಹುತೇಕ ಮನೆ ಬಾಗಿಲಿಗೆ ಹೋಗಿ ಪಶುಗಳಿಗೆ ಮತ್ತು ಇನ್ನಿತರೇ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು, ಕ್ಯಾಂಪ್ ಗಳನ್ನು ಆಯೋಜಿಸಿ ಸೂಕ್ತ ತಿಳುವಳಿಕೆ ನೀಡುವುದು ಈ ನಮ್ಮ ಇಲಾಖೆಯ ಪ್ರತಿನಿತ್ಯದ ಕೆಲಸ ಎಂದು ಚನ್ನಪಟ್ಟಣದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ ಹೆಚ್ ಸಿ‌ ಜಯರಾಮು ಪ್ರತಿಪಾದಿಸಿದರು.

ತಾಲ್ಲೂಕಿನಲ್ಲಿರುವ ಜಾನುವಾರುಗಳು

ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು ೪೪,೯೭೫ ಮನೆಗಳಿದ್ದು ೩೬,೫೮೬ ಹಸುಗಳು, ೧೧,೮೩೪ ಎಮ್ಮೆಗಳು, ೩೩,೯೫೪ ಕುರಿಗಳು, ೧೯,೨೨೫ ಮೇಕೆಗಳು, ೫೮೬ ಹಂದಿಗಳು. ಮತ್ತು ಚನ್ನಪಟ್ಟಣ ನಗರದಲ್ಲಿ ೧೫,೮೫೪ ಮನೆಗಳಿದ್ದು, ೧,೧೨೦ ಹಸುಗಳು. ೮೪೧ ಎಮ್ಮೆಗಳು, ೯೧೨ ಕುರಿಗಳು, ೧,೧೬೫ ಮೇಕೆಗಳಿವೆ. ಇವುಗಳ ಜೊತೆಗೆ ಮನೆ ಸಾಕಾಣಿಕೆಯ ಕೋಳಿಗಳು ನಗರದಲ್ಲಿ ೨,೯೯೦ ಗ್ರಾಮೀಣ ಭಾಗದಲ್ಲಿ ೨೫,೩೫೩ ಕೋಳಿಗಳಿವೆ. ಇವುಗಳ ಪೈಕಿ ಫಾರಂ (ಫೌಲ್ಟ್ರಿ) ಕೋಳಿಗಳು ನಗರದಲ್ಲಿ ೧೦,೯೦೦ ಮತ್ತು ಗ್ರಾಮೀಣ ಪ್ರದೇಶದಲ್ಲಿ ೧,೪೪,೭೦೦ ಕೋಳಿಗಳನ್ನು ಸಾಕಲಾಗಿದೆ.

ಚುಚ್ಚುಮದ್ದು ಹಾಕಿಸಿ ಆರೋಗ್ಯ ರಕ್ಷಿಸಿ

ವರ್ಷದಲ್ಲಿ ಎರಡು ಬಾರಿ ಪ್ರತಿ ಸಾಕು ಪ್ರಾಣಿಗಳಿಗೂ ಚುಚ್ಚುಮದ್ದು (ವ್ಯಾಕ್ಸಿನ್) ಹಾಕಲಾಗುತ್ತದೆ, ನಮ್ಮ ಆರೋಗ್ಯ ಇಲಾಖೆ ಆಯಾಯ ಗ್ರಾಮಗಳಲ್ಲಿಯೇ ಕ್ಯಾಂಪ್ ಮಾಡಿ ಚುಚ್ಚುಮದ್ದು ನೀಡಲಾಗುತ್ತದೆ, ಯಾವುದೇ ರೀತಿಯ ಕಾರಣಗಳನ್ನು ನೀಡದೆ, ಮೂಢನಂಬಿಕೆಯನ್ನು ಬದಿಗಿಟ್ಟು ಚುಚ್ಚುಮದ್ದು ಹಾಕಿಸಿ.

ಕಾಲುಬಾಯಿ ಜ್ವರಕ್ಕೆ ಚುಚ್ಚುಮದ್ದು

ಸೀಳುಗೊರಸು ಇರುವ ಎಲ್ಲಾ ಪ್ರಾಣಿಗಳಿಗೂ ಕಾಲುಬಾಯಿ ಜ್ವರ ಬರುತ್ತದೆ, ಈ ಕಾಯಿಲೆ ವೈರಲ್ ನಿಂದ ಬರುತ್ತದೆ, ಗಾಳಿಯಲ್ಲಿ ಹರಡಿ ಪ್ರಾಣಿಯಿಂದ ಪ್ರಾಣಿಗೆ ಹರಡುತ್ತದೆ, ರಾಜ್ಯದಲ್ಲಿ ೨೦೧೩ ವರ್ಷವನ್ನು ಹೊರತುಪಡಿಸಿದರೆ ಕಾಲುಬಾಯಿ ಜ್ವರದಿಂದ ಅಂತಹ‌ ಸಾವು ಸಂಭವಿಸಿಲ್ಲ. ಕಾಯಿಲೆ ಬೇಗ ವಾಸಿಯಾಗಲು ಚುಚ್ಚುಮದ್ದು ನೆರವಾಗಿವೆ.

ವರ್ಷಕ್ಕೆರಡು ಬಾರಿ ಚುಚ್ಚುಮದ್ದು ಹಾಕಿಸಿ

ಹಸು, ಎಮ್ಮೆಗಳ ಕಾಲುಬಾಯಿ ಜ್ವರಕ್ಕೆ ಕುರಿ ಮತ್ತು ಮೇಕೆಗಳ ನೀಲಿ ನಾಲಿಗೆ ರೋಗ ಮತ್ತು ಕರಳುಬೇನೆ ರೋಗಕ್ಕೆ ವರ್ಷಕ್ಕೆರಡು ಬಾರಿ ಚುಚ್ಚುಮದ್ದು ಹಾಕಿಸಲೇಬೇಕು, ಎರಡು ಬಾರಿ ಪಿಡಿಆರ್ ಮತ್ತು ಇಟಿ ಎಂಬ ಚುಚ್ಚುಮದ್ದು ಹಾಕಿಸುವುದರಿಂದ ಬಹುತೇಕ ಎಲ್ಲಾ ಕಾಯಿಲೆಗಳನ್ನು ಸಕಾಲದಲ್ಲಿ ತಡೆಯಬಹುದಾಗಿದೆ.

ತಾಲ್ಲೂಕಿನಾದ್ಯಂತ ಪ್ರತಿದಿನ ಹಾಲಿಗೆ ಹತ್ತು ಲಕ್ಷ ಸಹಾಯಧನ

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೧,೮೩,೦೦೦ ಲೀಟರ್‌ ನಿಂದ ೨,೦೦,೦೦೦ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿ ದಿನ‌‌ ಐದು ರೂಪಾಯಿಯಂತೆ ಬರುವ ಸಹಾಯಧನ ಒಟ್ಟು ಹತ್ತು ಲಕ್ಷ ರೂಪಾಯಿ ಬರುತ್ತಿದೆ, ನಮ್ಮ ಇಲಾಖೆಯಲ್ಲಿಯೂ ಸಹ ರಾಸುಗಳ ವಿಮಾ ಯೋಜನೆಯು‌ ಇದೆ, ಅದನ್ನು ರೈತರು‌ ಉಪಯೋಗಿಸಕೊಳ್ಳಬೇಕು.

ಹಿತ್ತಲಕೋಳಿ ಯೋಜನೆ

ಹಿತ್ತಲ ಕೋಳಿ ಯೋಜನೆಯಲ್ಲಿ ಗಿರಿರಾಜ, ಗಿರಿರಾಣಿ ಮತ್ತು ಸುವರ್ಣಧಾರಾ ಎಂಬ ಕೋಳಿಗಳನ್ನು ಫಲಾನುಭವಿಗಳಿಗೆ ತಲಾ ಹತ್ತರಂತೆ ಸಾಕಾಣಿಕೆದಾರರಿಗೆ ನೀಡಲಾಗುತ್ತದೆ, ಫಲಾನುಭವಿಗಳನ್ನು ಜಿಲ್ಲಾ ಪಂಚಾಯತ್ ಸದಸ್ಯರು ಶಿಫಾರಸ್ಸು ಮಾಡುತ್ತಾರೆ, ಸಾಮಾನ್ಯ ವರ್ಗಕ್ಕೆ ಶೇ ೭೫ ಪರಿಶಿಷ್ಟ ವರ್ಗಕ್ಕೆ ಸಂಪೂರ್ಣ ಉಚಿತವಾಗಿ ಕೋಳಿಗಳನ್ನು ನೀಡಲಾಗುತ್ತದೆ.

ಸಾಕು ಪ್ರಾಣಿಗಳು ಮತ್ತು ಫಾರಂ ಕೋಳಿಗಳು

ನಾಯಿ ಮತ್ತು ಬೆಕ್ಕು ಗಳಿಗೂ ಸಹ ಸೂಕ್ತ ಸಮಯದಲ್ಲಿ ಚುಚ್ಚುಮದ್ದು ಹಾಕಿಸಿಬೇಕು, ಬೀದಿ ನಾಯಿಗಳನ್ನು ಸಂಬಂಧಿಸಿದ ಇಲಾಖೆಯವರು ಸಂತಾನಹರಣ ಚಿಕಿತ್ಸೆ ಮಾಡಿ ಚುಚ್ಚುಮದ್ದು ಹಾಕಿಸಿ ಎಲ್ಲಿಂದ ಕರೆತಂದಿದ್ದರೋ ಅಲ್ಲಿಗೆ ಮತ್ತೆ ಬಿಡಬೇಕು, ಆಗ ಅವುಗಳಿಂದಾಗುವ ತೊಂದರೆಗಳು ತಪ್ಪುತ್ತವೆ.

ಕೋಳಿ ಫಾರಂ ಗಳಿಗೆ ಪ್ರತ್ಯೇಕ ನೀತಿ ನಿಯಮಗಳಿಲ್ಲ, ಗ್ರಾಮದಿಂದ ಅಥವಾ ವಾಸವಿರುವ ಮನೆಗಳಿಂದ ಐದುನೂರು ಮೀಟರ್ ದೂರವಿರಬೇಕೆಂಬ ನಿಯಮವನ್ನು ಅಳವಡಿಸಿದ್ದಾರೆ.

ತಾಲ್ಲೂಕಿನ ಆಸ್ಪತ್ರೆ ಮತ್ತು ಸಿಬ್ಬಂದಿ

ತಾಲ್ಲೂಕಿನಲ್ಲಿ ನಾಲ್ಕು ಪಶುವೈದ್ಯಕೀಯ ಆಸ್ಪತ್ರೆ, ಏಳು ಪಶುಚಿಕಿತ್ಸಾಲಯ, ಒಂದು ಸಂಚಾರಿ ಪಶುಚಿಕಿತ್ಸಾಲಯ ಮತ್ತು ಹದಿಮೂರು ಪ್ರಾಥಮಿಕ ಪಶುಚಿಕಿತ್ಸಾಲಯಗಳು ಸೇರಿದಂತೆ ಒಟ್ಟು ಇಪ್ಪತ್ತೈದು ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ.

ಅವುಗಳಲ್ಲಿ ಎರಡು ಪಶುಚಿಕಿತ್ಸಾಲಯಗಳಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ. ಹದಿನಾರು ಹಿರಿಯ ಪರೀಕ್ಷಕರ ಹುದ್ದೆಗಳಲ್ಲಿ ಎರಡು‌ ಹುದ್ದೆ, ಹದಿನೆಂಟು ಸಹಾಯಕರ ಹುದ್ದೆಗಳಲ್ಲಿ ಹದಿನಾಲ್ಕು ಹುದ್ದೆ ಖಾಲಿ, ಸಂಚಾರಿ ಪಶುಚಿಕಿತ್ಸಾಲಯದ ವಾಹನ ಚಾಲಕರ ಹುದ್ದೆಯೂ ಖಾಲಿ ಇದ್ದು ಗ್ರಾಮೀಣ ಪ್ರದೇಶಕ್ಕೆ ಹೋಗಲಾಗುತ್ತಿಲ್ಲ. ಮೂವತ್ಮೂರು ಡಿ ದರ್ಜೆ ನೌಕರರ ಹುದ್ದೆಗಳಲ್ಲಿ ಇಪ್ಪತ್ಮೂರು ಹುದ್ದೆಗಳು ಖಾಲಿ ಇದ್ದು ಒಟ್ಟು ತೊಂಭತ್ತೊಂದು ಹುದ್ದೆಗಳಲ್ಲಿ ನಲವತ್ಮೂರು ಹುದ್ದೆಗಳು ಖಾಲಿ ಇರುವುದರಿಂದ ಜಾನುವಾರುಗಳ ಸಾವು ನೋವಿಗೂ ಸರ್ಕಾರ ಹೊಣೆಯಾಗಲಿದೆ.

ಕಟ್ಟಡಗಳು ಮತ್ತು ಅನುದಾನ

ಬಹುತೇಕ ಸ್ವಂತ ಕಟ್ಟಡಗಳಿದ್ದು  ಕೆಲವು ಆರ್ ಐ ಡಿ ಎಫ್, ಇನ್ನೂ ಕೆಲವು ಪಂಚಾಯತ್ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಕೆಲವು ಶಿಥಿಲಾವಸ್ತೆ ತಲುಪಿವೆ, ಹದಿಮೂರು ಪ್ರಾಥಮಿಕ ಪಶುಚಿಕಿತ್ಸಾಲಯ ಗಳನ್ನು ಕೇಂದ್ರ ಸರ್ಕಾರದ ಶಿಫಾರಸ್ಸಿನ ಅನ್ವಯ ಪಶುಚಿಕಿತ್ಸಾಲಯ ಗಳನ್ನಾಗಿ ಮೇಲ್ದರ್ಜೆಗೆ ಏರಿಸಿ ಕನಿಷ್ಠ ನಲವತ್ತು ಲಕ್ಷ ಅನುದಾನ ಮತ್ತು ಸಿಬ್ಬಂದಿಗಳನ್ನು ನೀಡಿದರೆ ತಾಲ್ಲೂಕಿನ ಎಲ್ಲಾ ಚಿಕಿತ್ಸಾಲಯಗಳನ್ನು ರಾಜ್ಯದಲ್ಲಿಯೇ ಮುಂಚೂಣಿಗೆ ತಂದು ಸಂಪೂರ್ಣ ಎಲ್ಲಾ ರೋಗಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಶ್ರಮಿಸುತ್ತೇನೆ ಎಂದರು.

ನಮ್ಮ ಎಲ್ಲಾ ವರ್ಗದ ಸಿಬ್ಬಂದಿಗಳು ರೈತರ ಕೂಗಿಗೆ ಸ್ಪಂದಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಮತ್ತು ಮಾರ್ಗದರ್ಶನ ಮಾಡಲು ಹಾಗೂ ಅವರಿಗೆ ಇಲಾಖೆಯ ವತಿಯಿಂದ ಬೇಕಾದ ಸವಲತ್ತುಗಳನ್ನು ಪಡೆದು ಸೇವೆ ಮಾಡಬೇಕು.

ಇನ್ನು ಜಾನುವಾರುಗಳ ಮಾಲೀಕರಿಗೆ ಹೇಳುವುದೇನೆಂದರೆ ವೈರಸ್ ಬಂದ ನಂತರ ಕಾಯಿಲೆ ವಾಸಿಮಾಡಲು ಆಗುವುದಿಲ್ಲ, ಹಾಗಾಗಿ ನಿಮ್ಮೆಲ್ಲ ರಾಸುಗಳಿಗೆ ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚುಚ್ಚುಮದ್ದು ಹಾಕಿಸಿಕೊಂಡರೆ ಕಾಯಿಲೆ ಬರುವುದನ್ನು ತಡೆಗಟ್ಟಬಹುದಾದುದರಿಂದ ಉದಾಸೀನ ಮತ್ತು ಮೂಢನಂಬಿಕೆಗೆ ಕಿವಿಗೊಡದೆ ಇಲಾಖೆಯ ಮಾರ್ಗದರ್ಶನ ಪಡೆದುಕೊಳ್ಳಲು ಕರೆ ನೀಡಿದರು.


ಗೋ ರಾ ಶ್ರೀನಿವಾಸ...
ಮೊ:9845856139. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ
ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಹಲವಾರು ರೈತರು ಬಿತ್ತನೆ ಮಾಡಲಾಗಿಲ್ಲ, ತಡವಾಗಿ ಬಂದ ಅಲ್ಪ ಮಳೆ ನೆಚ್ಚಿಕೊಂಡು

ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ
ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ

ಚನ್ನಪಟ್ಟಣ: ಮುಂಗಾರು ಮಳೆ ಕೈಕೊಟ್ಟ ಹಾಗೂ ತಡವಾಗಿ ಆಗಮಿಸಿದ ಕಾರಣ ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಲಾಗದೇ ಕಂಗಲಾಗಿದ್ದ ರೈತ, ತಡವಾಗಿ ಆಗಮಿಸಿರುವ ಮ

ರೈತನ ಗೋಳು ಕೇಳೋರ್ ಯಾರು ?
ರೈತನ ಗೋಳು ಕೇಳೋರ್ ಯಾರು ?

ಒಂದು ಕಂತೆ ಕೊತ್ತಂಬರಿ ಮತ್ತು ಸಪ್ಪಸೀಗೆ ಸೊಪ್ಪಿಗೆ ಕೇವಲ ಐದು ರೂಪಾಯಿಗಳು, ಆಟೋದಲ್ಲಿ ಮಾರುತ್ತಿರುವ ವ್ಯಕ್ತಿ ವ್ತಾಪಾರಸ್ಥ, ಸೊಪ್ಪು ತಂದಿರುವುದು ಮಂಡ್ಯ ಮಾರ್ಕೆಟ್ ನಿಂದ, ಮಂಡ್ಯದಿಂದ ಆಟೋದಲ್ಲಿ ತ

ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು
ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು

ಹದಿನೈದು ವರ್ಷಗಳಿಂದ ತುಂಬದಿದ್ದ ಕೂಡ್ಲೂರು ಕೆರೆಯು ಏತ ನೀರಾವರಿ ಮೂಲಕ ತುಂಬಿ ತುಳುಕುತಿದ್ದು ಕೋಡಿ ಹರಿಯಲಾರಂಭಿಸಿದೆ, ಕೆರೆಯ ನೀರು ಮತ್ತು ಬೋರ್ ವೆಲ್ಲ ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತ

ಸಾಲಬಾಧೆ ರೈತ ಆತ್ಮಹತ್ಯೆ
ಸಾಲಬಾಧೆ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೇ ತಾಲ್ಲೂಕಿನ ಹನುಮಾಪುರ ದೊಡ್ಡಿ ಗ್ರಾಮದ ಹೆಚ್ ಎಂ ಕೆಂಪೇಗೌಡ ಎಂಬುವವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.
ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.

ಪಶುವೈದ್ಯಕೀಯ ಇಲಾಖೆ ರೈತ ಸಾಕುವ ಎಲ್ಲಾ ಜಸನುವಾರುಗಳಿಗೆ ಅದರಲ್ಲೂ ಪ್ರತಿನಿತ್ಯ ವಹಿವಾಟು ನಡೆಸುವಂತಹ ಹಸುಗಳಿಗೆ ಸಹಕಾರಿಯಾಗುವ ಇಲಾಖೆ.

ಪಶುವೈದ್ಯ ಇಲಾಖೆಗೂ ಮತ್ತು ರೈತನಿಗೂ ನೇರ ನಂಟಿದೆ, ಬಹುತೇಕ ಮನೆ ಬಾಗಿಲಿಗೆ ಹೋಗಿ ಪ

ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ
ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ

ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ಕಾಂಬಿನೇಷನ್ ಹಿಂದಿನಿಂದ ಇಂದಿನವರೆಗೆ ಜನಪ್ರಿಯವಾಗಿದೆ. ಆದರೆ ಹೊಲದಲ್ಲಿ ಹುಚ್ಚೆಳ್ಳು ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಹುಚ್ಚೆಳ್ಳಿನ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ.

 

ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು
ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು

ತೋಟಗಾರಿಕೆ ಇಲಾಖೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನೆಗಳು, ತಾಲೂಕು ಪಂಚಾಯತ್ ಯೋಜನೆಗಳು, ರಾಜ್ಯ ವಲಯ ಜನೆಗಳು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಳಿದ್ದು ಈ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್

ಕೃಷಿ ಪ್ರಧಾನ ದೇಶದಲ್ಲಿ ರೈತನೇ ಗುರು, ಭಾವಿಪ ಶಿಕ್ಷಕರ ದಿನಾಚರಣೆಯಲ್ಲಿ ಡಾ ಟಿ ಬಿ ಪುಟ್ಟರಾಜು.
ಕೃಷಿ ಪ್ರಧಾನ ದೇಶದಲ್ಲಿ ರೈತನೇ ಗುರು, ಭಾವಿಪ ಶಿಕ್ಷಕರ ದಿನಾಚರಣೆಯಲ್ಲಿ ಡಾ ಟಿ ಬಿ ಪುಟ್ಟರಾಜು.

ಮಕ್ಕಳಿಗೆ ಅಕ್ಷರ ಹೇಳಿಕೊಟ್ಟವನು ಗುರು, ಹೆತ್ತ ಮಕ್ಕಳಿಗೆ ತಾಯಿಯೇ ಗುರು, ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ದೇಶದ ಬೆನ್ನೆಲುಬು, ಅನ್ನದಾತನೇ ಗುರು ಎಂದು ವಿಶ್ರಾಂತ ಪ್ರಾದ್ಯಾಪಕ ಹಾಗೂ ಕೃಷಿ ವಿಶ್ವವಿದ್ಯಾಲಯ ದ ತಾಂತ್ರಿಕ ಅಧಿಕಾರಿಗಳಾದ

ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ
ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ

ಕುರಿ ಸಾಕಾಣಿಕೆದಾರರಿಗೆ ಸಹಕಾರ ಇಲಾಖೆಯಿಂದ ಏನೇನು ಸವಲತ್ತುಗಳನ್ನು ದೊರಕಿಸಿಕೊಡಲು ಸಾಧ್ಯವೋ ಎಲ್ಲಾ ಸೌಕರ್ಯಗಳನ್ನು ದೊರಕಿಸಿಕೊಡಲಾಗುವುದು ಎಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಅಧ್ಯಕ್ಷರಾದ ಹನುಮಂತೇಗೌಡ ಹೇಳಿದರು.

<

Top Stories »  


Top ↑