Tel: 7676775624 | Mail: info@yellowandred.in

Language: EN KAN

    Follow us :


ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ ಜಿಲ್ಲಾಧಿಕಾರಿ

Posted Date: 22 May, 2020

ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ ಜಿಲ್ಲಾಧಿಕಾರಿ

ರಾಮನಗರ:ಮೇ/೨೨/೨೦/ಶುಕ್ರವಾರ. ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದಿಂದ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಆಹಾರಧಾನ್ಯ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೇಂದ್ರ ಸರ್ಕಾರದ ಆದೇಶದಂತೆ ಕೊರೊನಾ (ಕೋವಿಡ್-೧೯) ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಾಗೂ ಜಿಲ್ಲೆಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ಸೇರ್ಪಡೆಗೊಳ್ಳದ ವಲಸೆ ಕಾರ್ಮಿಕರು ಹಾಗೂ ಕೋವಿಡ್-೧೯ ನಿಂದಾಗಿ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಪ್ರಸಕ್ತ ಸಾಲಿನ ಮೇ ಮತ್ತು ಜೂನ್ ತಿಂಗಳು ಸೇರಿದಂತೆ ಒಟ್ಟು ಎರಡು ತಿಂಗಳಿಗೆ ಕೇಂದ್ರ ಸರ್ಕಾರದ ಹಂಚಿಕೆಗೆ ಅನುಗುಣವಾಗಿ ಪ್ರತಿ ಫಲಾನುಭವಿಗೆ ತಲಾ ೦೫ ಕೆ.ಜಿ ಅಕ್ಕಿ ಮತ್ತು ಒಂದು ಕೆಜಿ ಕಡಲೆ ಕಾಳನ್ನು ಉಚಿತವಾಗಿ ವಿತರಿಸಲಾಗುವುದು.

ಅದರಂತೆ ಅರ್ಹ ವಲಸೆ ಕಾರ್ಮಿಕರು ಆಯಾ ನ್ಯಾಯಬೆಲೆ ಅಂಗಡಿಯಲ್ಲಿ ತಪ್ಪದೇ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.


ರಾಜ್ಯದಲ್ಲಿನ ಕೇಂದ್ರ ವ್ಯಾಪ್ತಿಯ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯ ಫಲಾನುಭವಿಗಳ ಸಂಖ್ಯೆಯ ಶೇ.೧೦ ರಂತೆ ಅಕ್ಕಿ ಹಂಚಿಕೆ ನೀಡಲಾಗಿರುತ್ತದೆ. ಸದರಿ ಹಂಚಿಕೆಯನ್ನು ಜಿಲ್ಲೆಯಲ್ಲಿ ತಾಲ್ಲೂಕುವಾರು ಹಂಚಿಕೆ ಮಾಡಲು ಜಿಲ್ಲೆಯ ಕಾರ್ಮಿಕ ಇಲಾಖೆಯ ಸೇವಾ ಸಿಂಧು ಅಂಕಿ-ಅಂಶಗಳಂತೆ ತಾಲ್ಲೂಕು ವ್ಯಾಪ್ತಿಯಲ್ಲಿರುವ ವಲಸಿಗರ ಸಂಖ್ಯೆಯ ಶೇಕಡವಾರು ಅನುಪಾತದ ಮೇಲೆ ತಾಲ್ಲೂಕುವಾರು ಹಂಚಿಕೆಯನ್ನು ನೀಡಲಾಗಿದೆ.


ಕೇಂದ್ರ ಸರ್ಕಾರದ ಆದೇಶದಂತೆ ಈ ಯೋಜನೆಯಡಿ ಬರುವ ಫಲಾನುಭವಿಗಳಿಗೆ ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಂಚಿಕೆ ಪಡೆಯುತ್ತಿರಬಾರದು. ಇದನ್ನು ಪರಿಶೀಲಿಸಿ ಖಾತ್ರಿ ಪಡಿಸಲು ಎಲ್ಲ ಫಲಾನುಭವಿಗಳಿಂದಲೂ ಅವರ ಆಧಾರ್ ಸಂಖ್ಯೆಯನ್ನು ಪಡೆದು ಆನ್‌ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ವಿತರಿಸಲಾಗುವುದು. ಹಾಗಾಗಿ ಪ್ರತಿ ಫಲಾನುಭವಿಯ ಆಧಾರ್ ಸಂಖ್ಯೆಯ ಮುಖಾಂತರ ಪರಿಶೀಲಿಸಿ ಅವರ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ. ಬಂದ ನಂತರ, ಸದರಿ ಓಟಿಪಿ ಯನ್ನು ದಾಖಲಿಸಿ ಪಡಿತರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಸಕ್ತ ವರ್ಷದ ಮೇ ತಿಂಗಳ ಹಂಚಿಕೆಯನ್ವಯ ಪ್ರತಿ ಫಲಾನುಭವಿಗೆ ೦೫ ಕೆ.ಜಿ ಅಕ್ಕಿಯನ್ನು ಮೇ ೨೬ ರಿಂದ ಮೇ ೩೧ ರವರೆಗೂ ಮುಂದುವರೆಸಲಾಗುವುದು. ಜೂನ್ ತಿಂಗಳಿನಲ್ಲಿ ಜೂನ್ ೦೧ ರಿಂದ ಜೂನ್ ೧೦ ರವರೆಗೆ ೦೫ ಕೆ.ಜಿ ಅಕ್ಕಿ ಹಾಗೂ ಕೇಂದ್ರ ಸರ್ಕಾರವು ಹಂಚಿಕೆ ಮಾಡುವ ಕಡಲೆ ಕಾಳನ್ನು ವಿತರಿಸಲಾಗುವುದು ಎಂದು ತಿಳಿಸಿದೆ.


ಒಂದು ಪಕ್ಷ ಮೇ ತಿಂಗಳಿನಲ್ಲಿ ಆಹಾರಧಾನ್ಯವನ್ನು ಪಡೆಯದ ವಲಸೆ ಫಲಾನುಭವಿಗಳು ಜೂನ್ ತಿಂಗಳಲ್ಲಿ ಒಟ್ಟಿಗೆ ಎರಡು ತಿಂಗಳಿಗೆ ಸೇರಿದಂತೆ ೧೦ ಕೆ.ಜಿ ಅಕ್ಕಿ ಮತ್ತು ಕೇಂದ್ರ ಸರ್ಕಾರದ ಹಂಚಿಕೆಯಂತೆ ಕಡಲೆ ಕಾಳನ್ನು ಪಡೆಯಲು ಅರ್ಹರಿರುತ್ತಾರೆ.

ವಲಸಿಗ ಕಾರ್ಮಿಕರೆಂದರೆ ‘’ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಮತ್ತು ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಜೀವನ ನಿರ್ವಹಣೆಗೆ ಹೋಗುವವರನ್ನು ವಲಸಿಗರೆಂದು ಪರಿಗಣಿಸಲಾಗುತ್ತದೆ. ಲಾಕ್ ಡೌನ್ ಹಿನ್ನಲೆಯಲ್ಲಿ ವಲಸಿಗರಿಗೆ ಒದಗಿಸುವ ಸೌಲಭ್ಯವನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಸೆಕ್ಷನ್ ೫೨ ರಡಿ (Uಟಿಜeಡಿ seಛಿಣioಟಿ 52 oಜಿ ಣhe ಆisಚಿsಣeಡಿ ಒಚಿಟಿಚಿgemeಟಿಣ ಂಛಿಣ ೨೦೦೫) ಅಂತಹವರಿಗೆ ದಂಡ ದ ಜೊತೆಗೆ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು’’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರುಗಳಿದ್ದಲ್ಲಿ ಜಿಲ್ಲೆಯ ಆಹಾರ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ, ಆಯಾ ತಾಲ್ಲೂಕಿನ ತಹಶೀಲ್ದಾರ್ ಅಥವಾ ಸಹಾಯವಾಣಿ ೧೯೬೭ ಸಂಖ್ಯೆಗೆ ದೂರನ್ನು ದಾಖಲಿಸಲು ಕೋರಿದೆ.

ವಲಸೆ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ನ್ಯಾಯಬೆಲೆ ಅಂಗಡಿಯಿಂದ ಆಹಾರಧಾನ್ಯವನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ರಾಮನಗರ ಚನ್ನಪಟ್ಟಣ ದಲ್ಲಿ ತಲಾ ಒಂದೊಂದು ಕೊರೊನಾ ಪಾಸಿಟಿವ್. ಆತಂಕದಲ್ಲಿ ನಾಗರೀಕರು
ರಾಮನಗರ ಚನ್ನಪಟ್ಟಣ ದಲ್ಲಿ ತಲಾ ಒಂದೊಂದು ಕೊರೊನಾ ಪಾಸಿಟಿವ್. ಆತಂಕದಲ್ಲಿ ನಾಗರೀಕರು

ರಾಮನಗರ:ಜೂ/೦೪/೨೦/ಗುರುವಾರ. ರಾಮನಗರದ ಕುಂಬಾರಗೇರಿಯಲ್ಲಿ ಐವತ್ತೇಳು ವರ್ಷದ ವ್ಯಕ್ತಿಗೆ ಸೋಂಕು ತಗುಲಿದ ನಂತರ ಅವರ ಕುಟುಂಬವನ್ನು ಸ್ವಾಬ್ ತೆಗೆ

ಡಿವೈಎಸ್ಪಿ ಓಂಪ್ರಕಾಶ್ ನಿರ್ಗಮನ ಎಎಸ್ಪಿ ರಾಮರಾಜನ್ ಪುನರಾಗಮನ
ಡಿವೈಎಸ್ಪಿ ಓಂಪ್ರಕಾಶ್ ನಿರ್ಗಮನ ಎಎಸ್ಪಿ ರಾಮರಾಜನ್ ಪುನರಾಗಮನ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ತಾಲ್ಲೂಕಿನ ಪೋಲಿಸ್ ಉಪ ಅಧೀಕ್ಷಕರಾಗಿ (ಪ್ರೊಬೆಷನರಿ) ನಾಲ್ಕು ತಿಂಗಳ ಹಿಂದೆ ನಿಯೋಜನೆಗೊಂಡಿದ್ದ ರಾಮರಾಜನ್ ರವರ

ಎಂತಹ ಮಾರಕ ಖಾಯಿಲೆ ಬಂದರೂ ಧೈರ್ಯವಾಗಿ ಕೆಲಸ ಮಾಡುವವರೇ ಪೌರಕಾರ್ಮಿಕರು. ಪೌರಾಯುಕ್ತ
ಎಂತಹ ಮಾರಕ ಖಾಯಿಲೆ ಬಂದರೂ ಧೈರ್ಯವಾಗಿ ಕೆಲಸ ಮಾಡುವವರೇ ಪೌರಕಾರ್ಮಿಕರು. ಪೌರಾಯುಕ್ತ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ದೇಶದಲ್ಲಿ ಯಾವುದೇ ರೀತಿಯ ಮಾರಕ ಖಾಯಿಲೆಗಳು ಬಂದರೂ ನಗರವನ್ನು ಶುಚಿಯಾಗಿಟ್ಟು ಖಾಯಿಲೆಯನ್ನು ತಡೆಗಟ್ಟುವುದರ ಜೊ

ರಾಮನಗರದ ಕುಂಬಾರ ಬೀದಿ ಸೀಲ್ಡೌನ್; ದ್ವಿತೀಯ ಹಂತದ ೨೨ ಮಂದಿ ಕ್ವಾರಂಟೈನ್
ರಾಮನಗರದ ಕುಂಬಾರ ಬೀದಿ ಸೀಲ್ಡೌನ್; ದ್ವಿತೀಯ ಹಂತದ ೨೨ ಮಂದಿ ಕ್ವಾರಂಟೈನ್

ರಾಮನಗರ:ಜೂ/೦೩/೨೦/ಬುಧವಾರ. ರಾಮನಗರ ಟೌನ್ ನ ಕುಂಬಾರ ಬೀದಿಯ ೫೭ ವರ್ಷದ ವ್ಯಕ್ತಿಯೊಬ್ಬ ಸುಲ್ತಾನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು,

ಕೊರೋನಾ:  ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ
ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ

ರಾಮನಗರ:ಜೂ/೦೨/೨೦/ಮಂಗಳವಾರ. ಜಿಲ್ಲೆಯಲ್ಲಿ ಎರಡು ಸಕ್ರಿಯ ಪ್ರಕರಣಗಳನ್ನು ಹೊರತುಪಡಿಸಿ ಇಂದು ಯಾವುದೇ ಕೊರೋನಾ (ಕೋವಿಡ್-೧೯) ಪ್ರಕರಣ ಹೂಸದಾಗಿ

ಕೊರೋನಾ: ಹೊಸ ಪ್ರಕರಣ ದೃಢ; ರಾಮನಗರದಲ್ಲಿ ಎರಡನೇ ಪ್ರಕರಣ ದಾಖಲು
ಕೊರೋನಾ: ಹೊಸ ಪ್ರಕರಣ ದೃಢ; ರಾಮನಗರದಲ್ಲಿ ಎರಡನೇ ಪ್ರಕರಣ ದಾಖಲು

ರಾಮನಗರ:ಜೂನ್/೦೧/೨೦/ಸೋಮವಾರ. ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ (ಕೋವಿಡ್-೧೯) ಪಾಸಿಟಿವ್ ಪ್ರಕರಣ ಸೋಮವಾರ ದೃಢಪಟ್ಟಿದೆ. ಇದರೊಂದಿಗೆ ಜ

ಕೊರೋನಾ: ಹೊಸ ಪ್ರಕರಣ ದಾಖಲಾಗಿಲ್ಲ
ಕೊರೋನಾ: ಹೊಸ ಪ್ರಕರಣ ದಾಖಲಾಗಿಲ್ಲ

ರಾಮನಗರ:ಮೇ/೩೦/೨೦/ಶನಿವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಯಾವುದೇ ಕರೋನಾ (ಕೋವಿಡ್-೧೯) ಪ್ರಕರಣ ಹೊಸದಾಗಿ ಧೃಡಪಟ್ಟಿರುವುದಿಲ್ಲ.

ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

ರಾಮನಗರ:ಮೇ/೨೮/೨೦/ಗುರುವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಯಾವುದೇ ಕರೋನಾ (ಕೋವಿಡ್-೧೯) ಪ್ರಕರಣ ಹೊಸದಾಗಿ ಧೃಡಪಟ್ಟಿರುವುದಿಲ್ಲ.

<

ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಜಿಲ್ಲಾಧಿಕಾರಿ

ರಾಮನಗರ:ಮೇ/೨೭/೨೦/ಬುಧವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಸಹ ಯಾವುದೇ ಕರೋನಾ (ಕೋವಿಡ್-೧೯) ಪ್ರಕರಣ ಹೊಸದಾಗಿ ಧೃಡಪಟ್ಟಿರುವುದಿಲ್ಲ ಎಂದು ಜಿಲ್ಲ

ಕೊರೋನಾ: ಜಿಲ್ಲೆಯಲ್ಲಿ ನಿನ್ನೆಯ ಪ್ರಕರಣ ಹೊರತುಪಡಿಸಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ನಿನ್ನೆಯ ಪ್ರಕರಣ ಹೊರತುಪಡಿಸಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

ರಾಮನಗರ:ಮೇ/೨೬/೨೦/ಮಂಗಳವಾರ. ರಾಮನಗರ ಜಿಲ್ಲೆಯಲ್ಲಿ ನಿನ್ನೆಯ ಒಂದು ಪ್ರಕರಣ ಹೊರತುಪಡಿಸಿ, ಹೊಸದಾಗಿ ಇಂದು ಯಾವುದೇ ಕೊರೋನಾ (ಕೋವಿಡ್-೧೯) ಪ್ರಕರಣ ದಾಖಲಾಗ

Top Stories »  


Top ↑