Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

Posted Date: 27 Jun, 2020

ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

ರಾಮನಗರ:ಜೂ/೨೭/೨೦/ಶನಿವಾರ. ಜಿಲ್ಲೆಯಲ್ಲಿ ಇಂದು ಯಾವುದೇ ಕರೋನಾ (ಕೋವಿಡ್-೧೯) ಪ್ರಕರಣ ಹೊಸದಾಗಿ ವರದಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.


ಇದುವರೆಗೆ ಜಿಲ್ಲೆಯಲ್ಲಿ ೧೪೮ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ ೫೫, ಮಾಗಡಿ ೩೮, ಚನ್ನಪಟ್ಟಣ ೨೯ ಮತ್ತು ರಾಮನಗರದ ೨೬ ಪ್ರಕರಣಗಳು ಸೇರಿವೆ.


*ಮತ್ತಿಬ್ಬರು ಬಿಡುಗಡೆ*: ಜಿಲ್ಲಾ ಕೋವಿಡ್-೧೯ ಆಸ್ಪತ್ರೆಯಿಂದ ಇಂದು ಕನಕಪುರದ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 


ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣದ ೯, ರಾಮನಗರದ ೬, ಕನಕಪುರದ ೪ ಮತ್ತು ಮಾಗಡಿಯ ಇಬ್ಬರು ಸೇರಿದಂತೆ

ಒಟ್ಟು ೨೧ ಮಂದಿ ಗುಣಮುಖರಾಗಿದ್ದಾರೆ.


ರಾಮನಗರದ ಕೋವಿಡ್ ಆಸ್ಪತ್ರೆ ಸೇರಿದಂತೆ ಬೆಂಗಳೂರು ಆಸ್ಪತ್ರೆಯಲ್ಲಿ ಕನಕಪುರದ ೫೧ ಮಂದಿ, ಮಾಗಡಿ ೩೩, ಚನ್ನಪಟ್ಟಣದ ೨೦ ಹಾಗೂ ರಾಮನಗರದ ೧೯ ಮಂದಿ ಸೇರಿ ಒಟ್ಟು ೧೨೩ ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ೪ ಮಂದಿ ಸಾವನ್ನಪ್ಪಿದ್ದಾರೆ. ರಾಮನಗರದಲ್ಲಿ ಒಬ್ಬರು ಮತ್ತು ಮಾಗಡಿಯಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ.


*ಜಿಲ್ಲಾ ಆರೋಗ್ಯ ಇಲಾಖೆ ವರದಿ:*

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಶನಿವಾರದ (ಜೂನ್ ೨೭) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೮,೪೩೧ (ಹೊಸದಾಗಿ ಇಂದಿನ ೧೭೬ ಸೇರಿ). ೨೮ ದಿನಗಳ ನಿಗಾ ಅವಧಿ ಪೂರೈಸಿದವರು ೨,೯೭೮ ಜನರಿದ್ದಾರೆ. ಇಂದು ಹೊಸದಾಗಿ ೨೮೮ ಜನ ೧೪ ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. ಇಂಥವರ ಸಂಖ್ಯೆ ಜಿಲ್ಲೆಯಲ್ಲಿ ೨,೪೧೩ಕ್ಕೆ ಏರಿಕೆಗೊಂಡಿದೆ. ೧೩೪ ಜನರು ಇಂದು ಹೋಂ ಕ್ವಾರಂಟೈ ನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ ೨,೩೧೫ ಇಳಿಕೆಯಾಗಿದೆ.


ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು ೩೯ ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ ೨,೭೬೦ ಮಂದಿ ತಪಾಸಣೆಗೆ ಮಾಡಿಸಿ ಕೊಂಡಿದ್ದಾರೆ. ಒಟ್ಟು ೬ ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್ ಗೆ ಇಂದು ೪೨ ಜನ ಸೇರ್ಪಡೆಯಾಗುವುದರೊಂದಿಗೆ ಒಟ್ಟಾರೆ ಸಂಖ್ಯೆ ೩೯೨ ಕ್ಕೆ ಏರಿಕೆಯಾಗಿದೆ.


ಇಂದು ಹೊಸದಾಗಿ ೧೭೮ ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು ೮,೭೪೦ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದಿನ ಎಲ್ಲಾ ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ಇಂದಿನ ೧೭೮ ಬಾಕಿ ವರದಿ ಸೇರಿ ಒಟ್ಟು ೧,೨೬೩ ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಜಿಲ್ಲೆಯಲ್ಲಿ ಇಂದು ೪೭ ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಇಂದು ೪೭ ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ

ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಇಂದು ೪೭ ಕೊರೊನಾ ಪ್ರಕರಣಗಳು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಮಾ

ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ
ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ

ಚನ್ನಪಟ್ಟಣ:ಜು/೦೧/೨೦/ಬುಧವಾರ. ವೈದ್ಯರೆಂದರೆ ಅವರು ದೇವರ ಸಮಾನ. ಈ ಕೊರೊನಾ ಸಂದಿಗ್ಧತೆಯಲ್ಲೂ ಒಂದು ದಿನ ರಜೆ ಪಡೆಯದೇ, ತಮ್ಮ ಅನಾರೋಗ್ಯವನ್ನು

ರಾಮನಗರ ಜಿಲ್ಲೆಯಲ್ಲಿ  ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು
ರಾಮನಗರ ಜಿಲ್ಲೆಯಲ್ಲಿ ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು

ರಾಮನಗರ::ಜೂ/೩೦/೨೦/ಮಂಗಳವಾರ. ಜಿಲ್ಲೆಯಲ್ಲಿ ಕೊರೊನಾ (ಕೋವಿಡ್-೧೯)  ೧೯ ಜನರಿಗೆ ಪಾಸಿಟಿವ್ ಬರುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ

ನಾವು ಸೋಂಕಿತರಲ್ಲ ಶಂಕಿತರು ಮಾತ್ರ. ಸ್ವಚ್ಚತೆಯೇ ಇಲ್ಲದ ಹಾಸ್ಟೆಲ್ ನಲ್ಲೇ ಇದ್ದರೆ ಸೋಂಕು ಗ್ಯಾರಂಟಿ ! ಪ್ರಥಮ ಸಂಪರ್ಕಿತರ ಅಳಲು
ನಾವು ಸೋಂಕಿತರಲ್ಲ ಶಂಕಿತರು ಮಾತ್ರ. ಸ್ವಚ್ಚತೆಯೇ ಇಲ್ಲದ ಹಾಸ್ಟೆಲ್ ನಲ್ಲೇ ಇದ್ದರೆ ಸೋಂಕು ಗ್ಯಾರಂಟಿ ! ಪ್ರಥಮ ಸಂಪರ್ಕಿತರ ಅಳಲು

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ತಾಲ್ಲೂಕಿನ ಚಕ್ಕೆರೆ ಗ್ರಾಮದ ಹೊರವಲಯದಲ್ಲಿರುವ ನವೋದಯ ವಸತಿಯುತ ಶಾಲೆಯಲ್ಲಿ ಹತ್ತು ಮಂದಿ ಶಂಕಿತರನ್ನು ಇರಿಸಲಾಗಿದ

ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ನಗರದ ಬಸ್ ನಿಲ್ದಾಣದ ಮುಂಭಾಗವಿರುವ ಡಿ ಎ ಆರ್ ಪೋಲಿಸ್ ವಸತಿ ಗೃಹ (ಕ್ವಾರ್ಟರ್ಸ್) ಗಳ ಸಮುಚ್ಚಯದಲ್ಲಿ ೪೯ ವರ್

ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

ರಾಮನಗರ:ಜೂ/೨೯/೨೦/ಸೋಮವಾರ. ಜಿಲ್ಲೆಯಲ್ಲಿ ಇಂದು ಯಾವುದೇ ಕೊರೋನಾ ಸೋಂಕಿತರ (ಕೊವಿಡ್-19) ಪ್ರಕರಣ ಹೊಸದಾಗಿ ವರದಿಯಾಗಿರುವುದಿಲ್ಲ, ಹಾಗೂ ೨೭ ಮಂ

ಕೋವಿಡ್ ನಿರ್ವಹಣೆ : ಜಿಲ್ಲಾಡಳಿತ ಕಾರ್ಯಕ್ಕೆ ಡಿಸಿಎಂ ಮೆಚ್ಚುಗೆ
ಕೋವಿಡ್ ನಿರ್ವಹಣೆ : ಜಿಲ್ಲಾಡಳಿತ ಕಾರ್ಯಕ್ಕೆ ಡಿಸಿಎಂ ಮೆಚ್ಚುಗೆ

ರಾಮನಗರ:ಜೂ/೨೮/೨೦/ಗುರುವಾರ. ಸೋಂಕಿನ ನಿರ್ವಹಣೆಯನ್ನು ಜಿಲ್ಲಾಡಳಿತ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉ

ರೋಗಿಗಳೊಂದಿಗೆ ಡಿಸಿಎಂ ಅಶ್ವಥ್ ನಾರಾಯಣ ಸಂವಾದ
ರೋಗಿಗಳೊಂದಿಗೆ ಡಿಸಿಎಂ ಅಶ್ವಥ್ ನಾರಾಯಣ ಸಂವಾದ

ರಾಮನಗರ:ಜೂ/೩೭/೨೦/ಭಾನುವಾರ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಕ

ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್
ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್

ರಾಮನಗರ:ಜೂ/೨೮/೨೦/ಭಾನುವಾರ. ಕೊರೊನಾ (ಕೋವಿಡ್-೧೯) ನ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ,  ಹೊರಗೆ ಓಡಾಡುತ್ತಿದ್ದ ಜಿಲ್ಲೆಯ ಎಂಟ

ಕೊರೋನಾ: ಎರಡು ಪ್ರಕರಣ ವರದಿ
ಕೊರೋನಾ: ಎರಡು ಪ್ರಕರಣ ವರದಿ

ರಾಮನಗರ:ಜೂ/೨೮/೨೦/ಭಾನುವಾರ. ಜಿಲ್ಲೆಯಲ್ಲಿ ಎರಡು ಕರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಈ ಪೈಕಿ ಮಾಗಡಿ ತಾಲೂಕಿನಲ್ಲಿ ಓರ್ವರು ನಿಧನರಾ

Top Stories »  


Top ↑