Tel: 7676775624 | Mail: info@yellowandred.in

Language: EN KAN

    Follow us :


ಕೋವಿಡ್ ನಿರ್ವಹಣೆ : ಜಿಲ್ಲಾಡಳಿತ ಕಾರ್ಯಕ್ಕೆ ಡಿಸಿಎಂ ಮೆಚ್ಚುಗೆ

Posted Date: 29 Jun, 2020

ಕೋವಿಡ್ ನಿರ್ವಹಣೆ : ಜಿಲ್ಲಾಡಳಿತ ಕಾರ್ಯಕ್ಕೆ ಡಿಸಿಎಂ ಮೆಚ್ಚುಗೆ

ರಾಮನಗರ:ಜೂ/೨೮/೨೦/ಗುರುವಾರ. ಸೋಂಕಿನ ನಿರ್ವಹಣೆಯನ್ನು ಜಿಲ್ಲಾಡಳಿತ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ಇಂದು ಇಲ್ಲಿ ಪ್ರಶಂಸಿಸಿದರು.


ಜಿಲ್ಲೆಯಲ್ಲಿನ ಕೊರೊನಾ (ಕೋವಿಡ್-೧೯) ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಉಪಮುಖ್ಯಮಂತ್ರಿಗಳು ಕರೋನ ಸೋಂಕಿನಿಂದ ಜಿಲ್ಲೆಯಲ್ಲಿ ಎದುರಾಗುವ ಎಲ್ಲಾ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಆದರೂ ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಅನೇಕ ರೀತಿಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿಗಳು ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


*ಆಸ್ಪತ್ರೆಗಳೊಂದಿಗೆ ಒಪ್ಪಂದ:*

ರಾಮನಗರ ಜಿಲ್ಲೆಯ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಗೇರಿ ಸಮೀಪದಲ್ಲಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಕನಕಪುರದ ಹಾರೋಹಳ್ಳಿ ಸಮೀಪದ ದಯಾನಂದ್ ಸಾಗರ್ ಆಸ್ಪತ್ರೆಗಳೊಂದಿಗೆ ಜಿಲ್ಲಾಡಳಿತವು ಒಪ್ಪಂದ ಮಾಡಿಕೊಳ್ಳುತ್ತಿದೆ.


ಒಪ್ಪಂದದಂತೆ ಮುಂದಿನ ೧೦, ೨೦ ಮತ್ತು ೩೦ ದಿನಗಳಿಗೆ ಅಗತ್ಯವಾಗುವ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಹಾಸಿಗೆಗಳನ್ನು ಕಾಯ್ದಿರಿಸಿ ಕೊಳ್ಳುವಂತೆ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.


*ಸಹಾಯ ಕೇಂದ್ರ:*

ಎರಡು ಆಸ್ಪತ್ರೆಗಳ ಪ್ರಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸಹಾಯಕೇಂದ್ರವನ್ನು  ಪ್ರಾರಂಭಿಸಲಾಗುವುದು. ಈ ಸಹಾಯವಾಣಿ ಕೇಂದ್ರದಲ್ಲಿ ಸೋಂಕಿತರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡಲಾಗುವುದು ಹಾಗೆಯೆ, ಆಸ್ಪತ್ರೆಗಳಲ್ಲಿ ದಾಖಲಾಗುವ ಸೋಂಕಿತರು ಮತ್ತು ಅವರ ಸಂಬಂಧಿಕರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ಮಾಹಿತಿ ನೀಡಿದರು.


*ಕ್ಲಿನಿಕ್ ಸಂಖ್ಯೆ ಹೆಚ್ಚಳ:*

ಪ್ರಸಕ್ತ ರಾಮನಗರ ಜಿಲ್ಲೆಯಲ್ಲಿ ಒಂಬತ್ತು ಫೀವರ್ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಸಂಖ್ಯೆಯನ್ನು ೨೩ ಕ್ಕೆ ಹೆಚ್ಚಿಸಲಾಗುವುದು. ಹಾಗೆಯೇ, ಈಗಿರುವ ೪ ಸ್ವಾಬ್ ಸಂಗ್ರಹ ಘಟಕಗಳ ಸಂಖ್ಯೆಯನ್ನು ೧೬ ಕ್ಕೆ ಏರಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಅವರು ತಿಳಿಸಿದರು.


*ಸಾಂಸ್ಥಿಕ ಕ್ವಾರಟೈನ್*:

ರಾಮನಗರ ಜಿಲ್ಲೆಯಲ್ಲಿ ಪ್ರಸಕ್ತವಾಗಿ ೨೫೦ ಮಂದಿಯನ್ನು ಸಾಂಸ್ಥಿಕ ಕ್ವಾರಟೈನ್ ಒಳಪಡಿಸುವ ಸಾಮರ್ಥ್ಯವಿದೆ. ಇದನ್ನು ಶೀಘ್ರವೇ ಇನ್ನೂ ೧,೧೫೦ ಹೆಚ್ಚಿಸಿ ಒಟ್ಟಾರೆಯಾಗಿ ೨,೦೦೦ ಮಂದಿಯನ್ನು ಕ್ವಾರಟೈನ್ ನಲ್ಲಿ ಇರಿಸುವಂತಹ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಸಾಮರ್ಥ್ಯವನ್ನು ಎಂಟು ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.


*ಖಾಸಗಿ ವೈದ್ಯರಿಗೂ ಪಿಪಿ ಕಿಟ್:*

ಜಿಲ್ಲೆಯಲ್ಲಿ ಖಾಸಗಿಯಾಗಿ ರೋಗಿಗಳನ್ನು ಪರೀಕ್ಷಿಸುತ್ತಿರುವ ಎಲ್ಲಾ ವೈದ್ಯರಿಗೂ ಮುಂಜಾಗ್ರತಾ ಕ್ರಮವಾಗಿ ಪಿಪಿ ಕಿಟ್ ಅನ್ನು ಧರಿಸುವುದನ್ನು ಕಡ್ಡಾಯ ಮಾಡಲು ಚಿಂತಿಸಲಾಗುತ್ತಿದೆ ಎಂದು ನುಡಿದರು.


 ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳು ಪೂರ್ಣಪ್ರಮಾಣದ ಇಲ್ಲವೇ ಹಾಫ್ ಪಿಪಿ ಕಿಟ್ ಅನ್ನು ಧರಿಸಿಕೊಂಡು ರೋಗಿಗಳನ್ನು ಪರೀಕ್ಷಿಸಬೇಕು. ವೈದ್ಯರುಗಳಿಗೆ ಅಗತ್ಯವಾದ ಕಿಟ್ ಗಳನ್ನು ಜಿಲ್ಲಾಡಳಿತದ ವತಿಯಿಂದ ಇಲ್ಲವೇ ದಾನಿಗಳ ವತಿಯಿಂದ ಸಂಗ್ರಹಿಸಿ ನೀಡಲಾಗುವುದು ಎಂದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಜಿಲ್ಲೆಯಲ್ಲಿ ಇಂದು ೪೭ ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಇಂದು ೪೭ ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ

ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಇಂದು ೪೭ ಕೊರೊನಾ ಪ್ರಕರಣಗಳು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಮಾ

ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ
ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ

ಚನ್ನಪಟ್ಟಣ:ಜು/೦೧/೨೦/ಬುಧವಾರ. ವೈದ್ಯರೆಂದರೆ ಅವರು ದೇವರ ಸಮಾನ. ಈ ಕೊರೊನಾ ಸಂದಿಗ್ಧತೆಯಲ್ಲೂ ಒಂದು ದಿನ ರಜೆ ಪಡೆಯದೇ, ತಮ್ಮ ಅನಾರೋಗ್ಯವನ್ನು

ರಾಮನಗರ ಜಿಲ್ಲೆಯಲ್ಲಿ  ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು
ರಾಮನಗರ ಜಿಲ್ಲೆಯಲ್ಲಿ ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು

ರಾಮನಗರ::ಜೂ/೩೦/೨೦/ಮಂಗಳವಾರ. ಜಿಲ್ಲೆಯಲ್ಲಿ ಕೊರೊನಾ (ಕೋವಿಡ್-೧೯)  ೧೯ ಜನರಿಗೆ ಪಾಸಿಟಿವ್ ಬರುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ

ನಾವು ಸೋಂಕಿತರಲ್ಲ ಶಂಕಿತರು ಮಾತ್ರ. ಸ್ವಚ್ಚತೆಯೇ ಇಲ್ಲದ ಹಾಸ್ಟೆಲ್ ನಲ್ಲೇ ಇದ್ದರೆ ಸೋಂಕು ಗ್ಯಾರಂಟಿ ! ಪ್ರಥಮ ಸಂಪರ್ಕಿತರ ಅಳಲು
ನಾವು ಸೋಂಕಿತರಲ್ಲ ಶಂಕಿತರು ಮಾತ್ರ. ಸ್ವಚ್ಚತೆಯೇ ಇಲ್ಲದ ಹಾಸ್ಟೆಲ್ ನಲ್ಲೇ ಇದ್ದರೆ ಸೋಂಕು ಗ್ಯಾರಂಟಿ ! ಪ್ರಥಮ ಸಂಪರ್ಕಿತರ ಅಳಲು

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ತಾಲ್ಲೂಕಿನ ಚಕ್ಕೆರೆ ಗ್ರಾಮದ ಹೊರವಲಯದಲ್ಲಿರುವ ನವೋದಯ ವಸತಿಯುತ ಶಾಲೆಯಲ್ಲಿ ಹತ್ತು ಮಂದಿ ಶಂಕಿತರನ್ನು ಇರಿಸಲಾಗಿದ

ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ನಗರದ ಬಸ್ ನಿಲ್ದಾಣದ ಮುಂಭಾಗವಿರುವ ಡಿ ಎ ಆರ್ ಪೋಲಿಸ್ ವಸತಿ ಗೃಹ (ಕ್ವಾರ್ಟರ್ಸ್) ಗಳ ಸಮುಚ್ಚಯದಲ್ಲಿ ೪೯ ವರ್

ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

ರಾಮನಗರ:ಜೂ/೨೯/೨೦/ಸೋಮವಾರ. ಜಿಲ್ಲೆಯಲ್ಲಿ ಇಂದು ಯಾವುದೇ ಕೊರೋನಾ ಸೋಂಕಿತರ (ಕೊವಿಡ್-19) ಪ್ರಕರಣ ಹೊಸದಾಗಿ ವರದಿಯಾಗಿರುವುದಿಲ್ಲ, ಹಾಗೂ ೨೭ ಮಂ

ಕೋವಿಡ್ ನಿರ್ವಹಣೆ : ಜಿಲ್ಲಾಡಳಿತ ಕಾರ್ಯಕ್ಕೆ ಡಿಸಿಎಂ ಮೆಚ್ಚುಗೆ
ಕೋವಿಡ್ ನಿರ್ವಹಣೆ : ಜಿಲ್ಲಾಡಳಿತ ಕಾರ್ಯಕ್ಕೆ ಡಿಸಿಎಂ ಮೆಚ್ಚುಗೆ

ರಾಮನಗರ:ಜೂ/೨೮/೨೦/ಗುರುವಾರ. ಸೋಂಕಿನ ನಿರ್ವಹಣೆಯನ್ನು ಜಿಲ್ಲಾಡಳಿತ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉ

ರೋಗಿಗಳೊಂದಿಗೆ ಡಿಸಿಎಂ ಅಶ್ವಥ್ ನಾರಾಯಣ ಸಂವಾದ
ರೋಗಿಗಳೊಂದಿಗೆ ಡಿಸಿಎಂ ಅಶ್ವಥ್ ನಾರಾಯಣ ಸಂವಾದ

ರಾಮನಗರ:ಜೂ/೩೭/೨೦/ಭಾನುವಾರ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಕ

ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್
ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್

ರಾಮನಗರ:ಜೂ/೨೮/೨೦/ಭಾನುವಾರ. ಕೊರೊನಾ (ಕೋವಿಡ್-೧೯) ನ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ,  ಹೊರಗೆ ಓಡಾಡುತ್ತಿದ್ದ ಜಿಲ್ಲೆಯ ಎಂಟ

ಕೊರೋನಾ: ಎರಡು ಪ್ರಕರಣ ವರದಿ
ಕೊರೋನಾ: ಎರಡು ಪ್ರಕರಣ ವರದಿ

ರಾಮನಗರ:ಜೂ/೨೮/೨೦/ಭಾನುವಾರ. ಜಿಲ್ಲೆಯಲ್ಲಿ ಎರಡು ಕರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಈ ಪೈಕಿ ಮಾಗಡಿ ತಾಲೂಕಿನಲ್ಲಿ ಓರ್ವರು ನಿಧನರಾ

Top Stories »  


Top ↑