Tel: 7676775624 | Mail: info@yellowandred.in

Language: EN KAN

    Follow us :


ನಾಳೆಯಿಂದ ಸಿಇಟಿ ಪರೀಕ್ಷೆ

Posted Date: 17 Apr, 2018

ನಾಳೆಯಿಂದ ಸಿಇಟಿ ಪರೀಕ್ಷೆ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿ ಶಿಕ್ಷಣ ಕೋರ್ಸ್‌ಗಳಿಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇದೇ 18ರಿಂದ ಪ್ರಾರಂಭವಾಗಲಿದೆ.

18ರಂದು ಜೀವವಿಜ್ಞಾನ, ಗಣಿತ, 19ಕ್ಕೆ ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ಪರೀಕ್ಷೆ ನಡೆಯಲಿದೆ. 20ಕ್ಕೆ ಹೊರರಾಜ್ಯದ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ಇರಲಿದೆ. ಇದೇ ಮೊದಲ ಬಾರಿಗೆ ಪ್ರಶ್ನೆಪತ್ರಿಕೆಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ.

ಆಯುಷ್, ನ್ಯಾಚುರೋಪತಿ, ಯೋಗ, ಯುನಾನಿ ಕೋರ್ಸ್‌ಗಳು ನೀಟ್ ಅಡಿಯಲ್ಲಿ ಬರಲಿವೆ. ಹಾಗಾಗಿ ಸಿಇಟಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ರಾಜ್ಯದಲ್ಲಿ ಒಟ್ಟು 430 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರಿನಲ್ಲಿ 86 ಕೇಂದ್ರಗಳನ್ನು ತೆರೆಯಲಾಗಿದೆ. 1,00,071 ವಿದ್ಯಾರ್ಥಿಗಳು ಮತ್ತು 98,568 ವಿದ್ಯಾರ್ಥಿನಿಯರು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.

ಏನೆಲ್ಲ ಕೊಂಡೊಯ್ಯಬೇಕು?: ವಿದ್ಯಾರ್ಥಿಗಳು ಸಿಇಟಿ ಪ್ರವೇಶಪತ್ರದ ಜೊತೆ ಮಾನ್ಯತೆ ಇರುವ ಯಾವುದಾದರೂ ಗುರುತಿನ ಚೀಟಿಯನ್ನು (ಕಾಲೇಜಿನ ಗುರುತಿನ ಚೀಟಿ/ ದ್ವಿತೀಯ ಪಿಯು ಪ್ರವೇಶ ಪತ್ರ/ ಬಸ್‌ ಪಾಸ್‌/ ಚಾಲನ ಪರವಾನಗಿ/ ಪಾಸ್‌ಪೋರ್ಟ್‌/ ಆಧಾರ್‌ ಕಾರ್ಡ್‌/ ಪ್ಯಾನ್‌ಕಾರ್ಡ್‌) ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ನೀಲಿ ಅಥವಾ ಕಪ್ಪು ಮಸಿಯ ಎರಡು ಪೆನ್‌ಗಳನ್ನು ಇಟ್ಟುಕೊಂಡಿರುವುದು ಸೂಕ್ತ.

ಉತ್ತರಿಸುವ ಮುನ್ನ ಇದನ್ನು ತಿಳಿದಿರಿ: ಪರೀಕ್ಷೆ ಬರೆಯುವ ಆತಂಕದಲ್ಲಿರುವ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ನಮೂದಿಸಬೇಕಾದ ಕೆಲ ಮಾಹಿತಿಗಳನ್ನು ತಪ್ಪಾಗಿ ಬರೆಯುವುದನ್ನು ತಪ್ಪಿಸಲು ಈ ಬಾರಿ ವಿದ್ಯಾರ್ಥಿಗಳ ಹೆಸರು, ಕ್ರಮಸಂಖ್ಯೆ, ಪ್ರಶ್ನೆ ಪತ್ರಿಕೆ ಸಂಖ್ಯೆ ಎಲ್ಲವೂ ನಮೂದಾಗಿರುವ
(ಪ್ರಿ–ಪ್ರಿಂಟೆಡ್‌) ಒಎಂಆರ್‌ ಪತ್ರಿಕೆಯನ್ನು ನೀಡಲಾಗುತ್ತದೆ.

ವಿದ್ಯಾರ್ಥಿಗಳು ತಮಗೆ ನೀಡಿರುವ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಮಾಹಿತಿ ಹಾಗೂ ಪ್ರವೇಶ ಪತ್ರದ ಮಾಹಿತಿ ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅದೇ ರೀತಿ ಪ್ರಶ್ನೆಪತ್ರಿಕೆ ಮತ್ತು ಓಎಂಆರ್‌ ಉತ್ತರ ಪತ್ರಿಕೆಯ ಕೋಡ್‌ ಒಂದೇ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

ಓಎಂಆರ್ ಉತ್ತರ ಪತ್ರಿಕೆಗಳಲ್ಲಿ ಶೇಡ್‌ ಮಾಡುವುದರ ಮೂಲಕ ಉತ್ತರಿಸಬೇಕು. ಸರಿ ಉತ್ತರಗಳನ್ನು ನೀಲಿ ಅಥವಾ ಕಪ್ಪು ಮಸಿಯ ಪೆನ್‌ಗಳಿಂದ ಗುರುತಿಸಬೇಕು.

ಹೆಚ್ಚಿನ ಭದ್ರತೆ: ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಖಜಾನೆಗಳ ಹೆಚ್ಚಿನ ಭದ್ರತೆ ಜವಾಬ್ದಾರಿ ವಹಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಒಟ್ಟು 430 ಪರೀಕ್ಷಾ ವೀಕ್ಷಕರು, 860 ವಿಶೇಷ ಜಾಗೃತಿ ದಳದ ಸದಸ್ಯರು, 430 ಪ್ರಶ್ನೆ ಪತ್ರಿಕೆ ಪಾಲಕರು, 12440 ಕೊಠಡಿ ಮೇಲ್ವಿಚಾರಕರ ಕಣ್ಗಾವಲಿನಲ್ಲಿ ಸಿಇಟಿ ನಡೆಯಲಿದೆ ಎಂದು ತಿಳಿಸಿದ್ದಾರೆ.

**

ಸಿಇಟಿ ಪರೀಕ್ಷಾ ವೇಳಾಪಟ್ಟಿ

ದಿನಾಂಕ; ದಿನ; ಸಮಯ; ವಿಷಯ; ಅಂಕಗಳು

18.04.2018; ಬುಧವಾರ; ಬೆಳಿಗ್ಗೆ 10.30 ರಿಂದ 11.50; ಜೀವವಿಜ್ಞಾನ; 60

ಮಧ್ಯಾಹ್ನ 2.30ರಿಂದ 3.50; ಗಣಿತ; 60

19.04.2018; ಗುರುವಾರ; ಬೆಳಿಗ್ಗೆ 10.30 ರಿಂದ 11.50; ಭೌತವಿಜ್ಞಾನ; 60

ಮಧ್ಯಾಹ್ನ 2.30ರಿಂದ 3.50; ರಸಾಯನ ವಿಜ್ಞಾನ; 60

(ಸಂಗ್ರಹ ವರದಿ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.
ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.

ತನ್ನ ಯವ್ವನದ ವಯಸ್ಸಿನಲ್ಲಿಯೇ ಬಿರ್ಸಾ ಮುಂಡಾ  ತನ್ನ ಜನಾಂಗವಾದ ವನವಾಸಿಗಳ ಪರ ನಿಲ್ಲಲು ಕಾರಣ ಬ್ರಿಟೀಷ್ ವಸಾಹತುಸಾಹಿ ಆಡಳಿತದ ವಿರುದ್ಧ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ  ತಮ್ಮ ಭೂಮ

ಸರಳತೆಯ ಮೂಲಕವೆ ವಿದ್ಯಾರ್ಥಿಗಳ ಮನಗೆದ್ದ ಕೃಷ್ಣಮೂರ್ತಿ ಮೇಷ್ಟ್ರು
ಸರಳತೆಯ ಮೂಲಕವೆ ವಿದ್ಯಾರ್ಥಿಗಳ ಮನಗೆದ್ದ ಕೃಷ್ಣಮೂರ್ತಿ ಮೇಷ್ಟ್ರು

ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಬಹುಪಾಲನ್ನು ಮೀಸಲಾಗಿಡುವ ಶಿಕ್ಷಕರು ಅದೆಷ್ಟೋ ಮಂದಿ ಇದ್ದಾರೆ. ಅಂತವರಲ್ಲಿ ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ಕೃಷ್ಣಮೂರ್ತಿ ಅವರು ಒಬ್ಬರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಆನ್‌ಲೈನ್‌ನಲ್ಲೇ ಅಂಕಪಟ್ಟಿ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಆನ್‌ಲೈನ್‌ನಲ್ಲೇ ಅಂಕಪಟ್ಟಿ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಅಂಕಪಟ್ಟಿ ಸಿಗಲಿದೆ. ಮಾರ್ಚ್‌ ತಿಂಗಳಲ್ಲಿ (2017-18ನೇ ಸಾಲಿನ) ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಾಗೂ ಜೂನ್&

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫ‌ಲಿತಾಂಶ ಪ್ರಕಟ
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫ‌ಲಿತಾಂಶ ಪ್ರಕಟ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್‌ನಲ್ಲಿ ನಡೆಸಿದ ಪೂರಕ ಪರೀಕ್ಷೆ ಫ‌ಲಿತಾಂಶ ಪ್ರಕಟವಾಗಿದೆ. ಈ ಬಾರಿ ಫ‌ಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್&zwnj

ಬೆಳಗ್ಗೆ 8ರಿಂದಲೇ ಕಾಲೇಜು
ಬೆಳಗ್ಗೆ 8ರಿಂದಲೇ ಕಾಲೇಜು

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೆಳಗ್ಗೆ ತರಗತಿ ಆರಂಭಿಸುವ ಸಮಯವನ್ನು ಮತ್ತೆ ಪರಿಷ್ಕರಿಸಲಾಗಿದೆ. ಸ್ವಂತ ಕಟ್ಟಡ ಇಲ್ಲದ ಹಾಗೂ ಕೊಠಡಿಗಳ ಕೊರತೆ ಯಿದ್ದು, ಎರಡು ಪಾಳಿಯಲ್ಲಿ

ಪಿ.ಯು. ಉಪನ್ಯಾಸಕರ ಹುದ್ದೆ: ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮಾಹಿತಿಗೆ: http://kea

ಪಿಜಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ
ಪಿಜಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಜ್ಞಾನಭಾರತಿ ಆವರಣ, ರಾಮನಗರ ಸ್ನಾತಕೋತ್ತರ ಕೇಂದ್ರ ಹಾಗೂ ಸಂಯೋಜಿತ ಕಾಲೇಜುಗಳ ಮೂಲಕ 2018-19ನೇ ಸಾಲಿನಲ್ಲಿ ಕೊಡಮಾಡುವ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ ಬೆಂಗಳೂರು ವಿಶ್ವವಿದ್ಯಾಲಯವು ಅರ್ಜ

ಎಂಜಿನಿಯರಿಂಗ್‌ ಕೋರ್ಸ್‌ಗೆ 46 ಸಾವಿರ ಸೀಟು
ಎಂಜಿನಿಯರಿಂಗ್‌ ಕೋರ್ಸ್‌ಗೆ 46 ಸಾವಿರ ಸೀಟು

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಸೀಟ್‌ ಮ್ಯಾಟ್ರಿಕ್ಸ್‌ ಈಗಾಗಲೇ ಪ್ರಕಟಿಸಿದ್ದರೂ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಕೋರ್ಸ್‌ಗಳ ಸೀಟುಗಳ ವಿವರವನ್ನು ಪ್ರಕಟಿಸದಿದ್ದ ಕ

ಸರ್ಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
ಸರ್ಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಪಡೆಯುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರದ

ವಿದ್ಯಾ ದಾನದ ಹೆಸರಿನಲ್ಲಿ ಹಣ ಲೂಟಿ ಸ್ಪ್ರಿಂಗ್ ಪೀಲ್ಡ್(Spring field) ಶಾಲೆ ವಿರುದ್ಧ ಪೋಷಕರಿಂದ ದೂರು
ವಿದ್ಯಾ ದಾನದ ಹೆಸರಿನಲ್ಲಿ ಹಣ ಲೂಟಿ ಸ್ಪ್ರಿಂಗ್ ಪೀಲ್ಡ್(Spring field) ಶಾಲೆ ವಿರುದ್ಧ ಪೋಷಕರಿಂದ ದೂರು

ಚನ್ನಪಟ್ಟಣ: ವಿದ್ಯಾದಾನದ ಹೆಸರಿನಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಶಾಲೆಗಳು ಶಿಕ್ಷಣದ ವ್ಯಾಪಾರಿ ಕರಣಕ್ಕೆ ನಿಂತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಆರ್‌ಟಿಇ ಮಕ್ಕಳಿಂದ ಶುಲ್ಕ ವಸೂಲಿಗೆ ನಿಂತ ಖಾಸಗಿ ಶಾಲೆಯ ವಿರುದ್ಧ ಪೋಷಕರು ಕ

Top Stories »  


Top ↑