Tel: 7676775624 | Mail: info@yellowandred.in

Language: EN KAN

    Follow us :


ವಿದ್ಯಾ ದಾನದ ಹೆಸರಿನಲ್ಲಿ ಹಣ ಲೂಟಿ ಸ್ಪ್ರಿಂಗ್ ಪೀಲ್ಡ್(Spring field) ಶಾಲೆ ವಿರುದ್ಧ ಪೋಷಕರಿಂದ ದೂರು

Posted Date: 12 Jun, 2018

ವಿದ್ಯಾ ದಾನದ ಹೆಸರಿನಲ್ಲಿ ಹಣ ಲೂಟಿ ಸ್ಪ್ರಿಂಗ್ ಪೀಲ್ಡ್(Spring field) ಶಾಲೆ ವಿರುದ್ಧ ಪೋಷಕರಿಂದ ದೂರು

ಚನ್ನಪಟ್ಟಣ: ವಿದ್ಯಾದಾನದ ಹೆಸರಿನಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಶಾಲೆಗಳು ಶಿಕ್ಷಣದ ವ್ಯಾಪಾರಿ ಕರಣಕ್ಕೆ ನಿಂತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಆರ್‌ಟಿಇ ಮಕ್ಕಳಿಂದ ಶುಲ್ಕ ವಸೂಲಿಗೆ ನಿಂತ ಖಾಸಗಿ ಶಾಲೆಯ ವಿರುದ್ಧ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.


ಖಾಸಗಿ ಶಾಲೆಗಳು ಪೋಷಕರನ್ನು ಶುಲ್ಕದ ಹೆಸರಿನಲ್ಲಿ ಉರಿದು ಮುಕ್ಕುತ್ತಿವೆ ಎಂಬ ಕೂಗು ವ್ಯಾಪಕವಾಗಿದೆ.  ಡೊನೇಷನ್ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಸಾಕಷ್ಟು ನಿಯಮ ರೂಪಿಸಿದೆಯಾದರೂ ಅಧಿಕಾರಿಗಳ ಜಾಣ ಮೌನದಿಂದಾಗಿ ಖಾಸಗಿ ಶಾಲೆಗಳು ಇಲ್ಲಸಲ್ಲದ ಶುಲ್ಕ ಎಂದು ಪೋಷಕರನ್ನು ಹುರಿದು ಮುಕ್ಕುತ್ತಿವೆ. ಇಂತಹುದೇ ಒಂದು ಪ್ರಕರಣ ತಾಲೂಕಿನ ಸ್ಪ್ರಿಂಗ್ ಪೀಲ್ಡ್ ಶಾಲೆಯಲ್ಲಿ ನಡೆದಿದೆ.

ಆರ್‌ಟಿಇ ಮಕ್ಕಳಿಗೆ  ೨೫ ಸಾವಿರ ರೂ.: ಬಡ ಮಕ್ಕಳಿಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ದೊರಕ ಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ಆರ್‌ಟಿಇ ಕಾಯಿದೆಯಡಿ ಕೆಲ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರ್ಪಡೆ ಗೊಳಿಸಲಾಗಿದೆ. ಈ ಮಕ್ಕಳ ಖರ್ಚನ್ನು ನಿಯಮಾನುಸಾರ ಸರ್ಕಾರವೇ ಬರಿಸುತ್ತದೆ. ಸರ್ಕಾರದಿಂದ ನಿಗದಿತ ಶುಲ್ಕ ಪಡೆಯುವ ಖಾಸಗಿ ಶಾಲೆಗಳು ಇತ್ತ ಪೋಷಕರಿಂದಲೂ ಹಣ ಕೇಳುತ್ತಿದ್ದು ಇಲ್ಲಿನ ಸ್ಪ್ರಿಂಗ್ ಪೀಲ್ಡ್ ಶಾಲೆ ೨೫ ಸಾವಿರ ರೂ. ಶುಲ್ಕವನ್ನು ಆರ್‌ಟಿಇ ವಿದ್ಯಾರ್ಥಿಯಿಂದ ಪಡೆದಿರುವುದಾಗಿ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಅಳಲು ತೋಡಿ ಕೊಂಡ ಪೋಷಕರು: ಸ್ಪ್ರಿಂಗ್ ಫೀಲ್ಡ್ ಶಾಲೆಯು ನಗರದ ರಾಜಾ ಕೆಂಪೇಗೌಡ ಬಡಾವಣೆಯಲ್ಲಿ ನೋಂದಣಿ ಆಗಿದ್ದು ಮೂರು ವರ್ಷಗಳಿಂದಲೂ ಮೂರು ಕಿಲೋಮೀಟರ್ ದೂರವಿರುವ ಗೋವಿಂದೇಗೌಡನದೊಡ್ಡಿ ಗ್ರಾಮದಲ್ಲಿ ಶಾಲೆಯು ಕಾರ್ಯ ನಿರ್ವಹಿಸುತ್ತಿದೆ, ಅಲ್ಲಿಗಿನ್ನೂ ಅನುಮತಿಯೇ ಪಡೆದಿಲ್ಲ, ಜೊತೆಗೆ ಆ ಶಾಲೆಯು ರಾಜ್ಯ ಪಠ್ಯವನ್ನು(Sಣಚಿಣe ಅಥಿಟebus) ಮಾತ್ರ ಬೋಧಿಸಲು ಅನುಮತಿ ಪಡೆದಿದ್ದು ಪೋಷಕರಿಗೆ ಸಿಬಿಎಸ್ಸಿ (ಅಃSಇ) ಭೋಧಿಸುತ್ತೇವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.


ಆರ್ ಟಿ ಇ ಮೂಲಕ ಪ್ರವೇಶ ಪಡೆದಿರುವ ಮಕ್ಕಳಿಗೂ ಅವರಿಗೆ ಇಷ್ಟ ಬಂದ ರೀತಿಯಲ್ಲಿ ೮,೫೦೦ ರಿಂದ ೧೭,೦೦೦ ರೂಪಾಯಿಗಳನ್ನು ಶುಲ್ಕವಾಗಿ ಪಡೆದಿದ್ದಾರೆ ಅದನ್ನು ಪ್ರಶ್ನಿಸಿದರೆ ಹೌದು ನಾವು ಹಾಗೆಯೇ ತೆಗೆದುಕೊಳ್ಳುತ್ತೇವೆ ಇಷ್ಟವಿದ್ದರೇ ಸೇರಿಸಿ ಇಲ್ಲಾಂದ್ರೆ ಕರೆದುಕೊಂಡು ಹೋಗಿ ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಪೋಷಕರೊಬ್ಬರು ನೊಂದು ನುಡಿದರು.


ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಯಾವ ತರಗತಿಯ ಮಕ್ಕಳಗೂ ೧೭,೫೦೦ ರೂ ಗಳಿಗೆ ಮಾತ್ರ ರಶೀದಿ ಕೊಡುತ್ತಾರೆ, ಉಳಿದ ೮,೦೦೦ ರೂ ಗಳಿಗೆ ಯಾವುದೇ ರೀತಿಯ ರಶೀದಿ ಕೊಡುವುದಿಲ್ಲ ಕೇಳಿದರೆ ದಬಾಯಿಸಿ ಕಳುಹಿಸುತ್ತಾರೆ, ಇಲ್ಲವೇ ಮಕ್ಕಳ ಭವಿಷ್ಯ ಹಾಳಾಗುತ್ತದೆ ನೋಡಿ ಎಂದು ಹೆದರಿಸುತ್ತಾರೆ ಎಂದು ತಮ್ಮ ಅಳಲನ್ನು ಶಿಕ್ಷಣಾಧಿಕಾರಿಗಳ ಬಳಿ ತೋಡಿಕೊಂಡರು.


ಸ್ಪ್ರಿಂಗ್ ಫೀಲ್ಡ್ ಶಾಲೆಯ ಮುಖ್ಯೋಪಾಧ್ಯಾಯಿನಿಯವರು ಹಾಜರಿದ್ದು ನಾನು ಈ ಶಾಲೆಗೆ ಬಂದು ಕೇವಲ ಒಂದು ವಾರ ಆಗಿದೆ, ನನ್ನ ಗಮನಕ್ಕೆ ಬಂದಿಲ್ಲ ಕಾರ್ಯದರ್ಶಿಯವರ ಬಳಿ ಮಾತನಾಡುತ್ತೇನೆ ಎಂದು ಜಾರಿಕೆ ಉತ್ತರ ಕೊಡಲು ಮುಂದಾದಾಗ ಇವಾಗಲೇ ಮಾತನಾಡಿ ನಾಳೆ ಬೆಳಿಗ್ಗೆ ಬರಲೇಬೇಕೆಂದು ಹೇಳಬೇಕು ಎಂದು ಪೋಷಕರು ಒತ್ತಾಯಿಸಿದರು, ತಕ್ಷಣ ಕಾರ್ಯದರ್ಶಿ ಗೆ ಕರೆಮಾಡಿದ ಮುಖ್ಯೋಪಾಧ್ಯಾಯಿನಿಯವರು ನಾಳೆ ಬಿಇಓ ಕಛೇರಿಗೆ ಬರಲು ಹೇಳಿದರು.


ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ರವರು ಅನ್ಯಾಯವಾಗಿರುವ ಪೋಷಕರು ನಾಳೆ ಬೆಳಿಗ್ಗೆ ಕಛೇರಿಗೆ ಬಂದು ಬಗೆಹರಿಸಿಕೊಳ್ಳಲು ಮನವಿ ಮಾಡಿದರು.


ಈ ವೇಳೆ ನಗರಸಭಾ ಮಾಜಿ ಸದಸ್ಯ ಕೃಷ್ಣೇಗೌಡ, ವಿಠಲೇನಹಳ್ಳಿ ಗ್ರಾಮದ ಅಂಗಡಿ ಕೃಷ್ಣೇಗೌಡ, ಕಾಂತರಾಜು, ರಮೇಶ್, ಮೊಗಣ್ಣ, ಕುಮಾರ್, ಪೋಷಕರಾದ ಚಂದ್ರು, ವೈದ್ಯೇಗೌಡ, ರಾಜು ಮುಂತಾದವರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...
ಮೊ: 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಸಾವಿತ್ರಿ ಜ್ಯೋತಿ ಬಾಫುಲೆ ಹೆಣ್ಣು ಮಕ್ಕಳ ದನಿಯಾದರೆ ಕುವೆಂಪು ಶೂದ್ರರ ದನಿಯಾಗಿದ್ದರು ಸುತರಾ
ಸಾವಿತ್ರಿ ಜ್ಯೋತಿ ಬಾಫುಲೆ ಹೆಣ್ಣು ಮಕ್ಕಳ ದನಿಯಾದರೆ ಕುವೆಂಪು ಶೂದ್ರರ ದನಿಯಾಗಿದ್ದರು ಸುತರಾ

ಚನ್ನಪಟ್ಟಣ: ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ದಲಿತರ, ದಮನಿತರ ದನಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ ನಿಂತವರು ಸಾವಿತ್ರಿ ಜ್ಯ

ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.
ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.

ತನ್ನ ಯವ್ವನದ ವಯಸ್ಸಿನಲ್ಲಿಯೇ ಬಿರ್ಸಾ ಮುಂಡಾ  ತನ್ನ ಜನಾಂಗವಾದ ವನವಾಸಿಗಳ ಪರ ನಿಲ್ಲಲು ಕಾರಣ ಬ್ರಿಟೀಷ್ ವಸಾಹತುಸಾಹಿ ಆಡಳಿತದ ವಿರುದ್ಧ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ  ತಮ್ಮ ಭೂಮ

ಸರಳತೆಯ ಮೂಲಕವೆ ವಿದ್ಯಾರ್ಥಿಗಳ ಮನಗೆದ್ದ ಕೃಷ್ಣಮೂರ್ತಿ ಮೇಷ್ಟ್ರು
ಸರಳತೆಯ ಮೂಲಕವೆ ವಿದ್ಯಾರ್ಥಿಗಳ ಮನಗೆದ್ದ ಕೃಷ್ಣಮೂರ್ತಿ ಮೇಷ್ಟ್ರು

ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಬಹುಪಾಲನ್ನು ಮೀಸಲಾಗಿಡುವ ಶಿಕ್ಷಕರು ಅದೆಷ್ಟೋ ಮಂದಿ ಇದ್ದಾರೆ. ಅಂತವರಲ್ಲಿ ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ಕೃಷ್ಣಮೂರ್ತಿ ಅವರು ಒಬ್ಬರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಆನ್‌ಲೈನ್‌ನಲ್ಲೇ ಅಂಕಪಟ್ಟಿ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಆನ್‌ಲೈನ್‌ನಲ್ಲೇ ಅಂಕಪಟ್ಟಿ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಅಂಕಪಟ್ಟಿ ಸಿಗಲಿದೆ. ಮಾರ್ಚ್‌ ತಿಂಗಳಲ್ಲಿ (2017-18ನೇ ಸಾಲಿನ) ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಾಗೂ ಜೂನ್&

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫ‌ಲಿತಾಂಶ ಪ್ರಕಟ
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫ‌ಲಿತಾಂಶ ಪ್ರಕಟ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್‌ನಲ್ಲಿ ನಡೆಸಿದ ಪೂರಕ ಪರೀಕ್ಷೆ ಫ‌ಲಿತಾಂಶ ಪ್ರಕಟವಾಗಿದೆ. ಈ ಬಾರಿ ಫ‌ಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್&zwnj

ಬೆಳಗ್ಗೆ 8ರಿಂದಲೇ ಕಾಲೇಜು
ಬೆಳಗ್ಗೆ 8ರಿಂದಲೇ ಕಾಲೇಜು

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೆಳಗ್ಗೆ ತರಗತಿ ಆರಂಭಿಸುವ ಸಮಯವನ್ನು ಮತ್ತೆ ಪರಿಷ್ಕರಿಸಲಾಗಿದೆ. ಸ್ವಂತ ಕಟ್ಟಡ ಇಲ್ಲದ ಹಾಗೂ ಕೊಠಡಿಗಳ ಕೊರತೆ ಯಿದ್ದು, ಎರಡು ಪಾಳಿಯಲ್ಲಿ

ಪಿ.ಯು. ಉಪನ್ಯಾಸಕರ ಹುದ್ದೆ: ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮಾಹಿತಿಗೆ: http://kea

ಪಿಜಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ
ಪಿಜಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಜ್ಞಾನಭಾರತಿ ಆವರಣ, ರಾಮನಗರ ಸ್ನಾತಕೋತ್ತರ ಕೇಂದ್ರ ಹಾಗೂ ಸಂಯೋಜಿತ ಕಾಲೇಜುಗಳ ಮೂಲಕ 2018-19ನೇ ಸಾಲಿನಲ್ಲಿ ಕೊಡಮಾಡುವ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ ಬೆಂಗಳೂರು ವಿಶ್ವವಿದ್ಯಾಲಯವು ಅರ್ಜ

ಎಂಜಿನಿಯರಿಂಗ್‌ ಕೋರ್ಸ್‌ಗೆ 46 ಸಾವಿರ ಸೀಟು
ಎಂಜಿನಿಯರಿಂಗ್‌ ಕೋರ್ಸ್‌ಗೆ 46 ಸಾವಿರ ಸೀಟು

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಸೀಟ್‌ ಮ್ಯಾಟ್ರಿಕ್ಸ್‌ ಈಗಾಗಲೇ ಪ್ರಕಟಿಸಿದ್ದರೂ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಕೋರ್ಸ್‌ಗಳ ಸೀಟುಗಳ ವಿವರವನ್ನು ಪ್ರಕಟಿಸದಿದ್ದ ಕ

ಸರ್ಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
ಸರ್ಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಪಡೆಯುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರದ

Top Stories »  


Top ↑