ಶೇಕಡಾ 79.12 ರಷ್ಟು ಭಾರತೀಯರಲ್ಲಿ ವಿಟಮಿನ್ ಡಿ ಕೊರತೆ

ಶೇಕಡ 79.12ರಷ್ಟು ಭಾರತೀಯರು ವಿಟಮಿನ್ ಡಿ ಕೊರತೆ ಎದುರಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಶೇ.19 ರಷ್ಟು ಮಂದಿ ಅಧಿಕ ಮದುಮೇಹದಿಂದ ಬಳಲುತ್ತಿದ್ದಾರೆ. ಬೆಳೆಯುತ್ತಿರುವ ನಗರೀ ಕರಣದೊಂದಿಗೆ ಜೀವನಶೈಲಿಯ ಬದಲಾವಣೆಯಿಂದ ಜನ ಅನೇಕ ಬಗೆಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಆರ್ ಡಯಾಗ್ನಸ್ಟಿಕ್ಸ್ ನಡೆಸಿದ ಸಂಶೋಧನಾ ವರದಿಯಿಂದ ತಿಳಿದು ಬಂದಿದೆ.
ವಿಟಮಿನ್ ಡಿ ಕೊರತೆ ಕುರಿತು ಈಗಾಗಲೇ ಸಂಶೋಧನೆಗಳಿಂದ ಧೃಡಪಟ್ಟಿದೆ. ದೇಶದ ಪುರುಷರಿಗಿಂತ ಮಹಿಳೆ ಯರಲ್ಲಿ ಕೊಬ್ಬಿನ ಅಂಶ ಹೆಚ್ಚು ಇದೆ. ಆದರೆ, ಮಧುಮೇಹದ ವಿಚಾರದಲ್ಲಿ ಪುರುಷರು ಮಹಿಳೆಯರನ್ನು ಹಿಂದಿಕ್ಕಿದ್ದಾರೆ. ಒಟ್ಟು ಶೇ. 20.80ರಷ್ಟು ಪುರುಷರು ಮಧುಮೇಹಕ್ಕೆ ತುತ್ತಾಗಿದ್ದರೆ, ಶೇ. 17.36 ರಷ್ಟು ಮಹಿೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. 40 ರಿಂದ 60 ರ ವಯೋಮಾನದ ಪುರುಷರು ಮತ್ತು 61-85 ಮಹಿಳೆಯರಲ್ಲಿ ಹೆಚ್ಚಾಗಿ ಈ ಸ್ಲೋ ಪಾಯ್ಸನ್ ಎನಿಸಿರುವ ಮಧುಮೇಹ ಕಂಡು ಬಂದಿದೆ.
ಅವರ ಜೀವನಶೈಲಿ, ಪ್ರಕೃತಿ ದತ್ತವಾಗಿ ಬಂದಿರುವ ಋತುಚಕ್ರದಂತಹ ಕಾರಣಗಳಿಂದ ಶೇ.30ರಷ್ಟು ಮಹಿಳೆಯರು ರಕ್ತಹೀನತೆ ಯಿಂದ ಬಳಲುತ್ತಿದ್ದಾರೆ. ಮೇಲ್ನೋಟಕ್ಕೆ ಆರೋಗ್ಯವಾಗಿ ಕಂಡರೂ ರಕ್ತಹೀನತೆ ಬಾಧಿಸುತ್ತಲೇ ಇದೆ. ಆದರೆ, ಪುರುಷರಲ್ಲಿ ಈ ರಕ್ತದ ಹೀನತೆ ಕಡಿಮೆ ಇರುತ್ತದೆಯಾದರೂ ಶೇ.16ರಷ್ಟು ಪುರುಷರನ್ನು ಕಾಡುತ್ತಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದ ಮಹಿಳೆ ಯರಿಗೆ ಹೋಲಿಕೆ ಮಾಡಿದಲ್ಲಿ ಪೂರ್ವ ಭಾರತದ ಶೇ.50ರಷ್ಟು ಮಹಿಳೆಯರು ಹೀನತೆಯಿಂದ ಬಳಲುತ್ತಿದ್ದಾರೆ. 61 ವರ್ಷ ದ ನಂತರ ರಕ್ತ ಹೀನತೆಯಿಂದ ಬಳಲುವುದು ಸರ್ವೇಸಾಮಾನ್ಯವಾಗಿದೆ ಎಂದು ವರದಿ ಹೇಳುತ್ತದೆ. ಮಹಿಳೆಯರಿಗೆ ಹೋಲಿಸಿದರೆ ವಿಟಮಿನ್ ಡಿ ಕೊರತೆಯಿಂದ ಬಳಲುವ ಪುರುಷರ ಸಂಖ್ಯೆ ಕಡಿಮೆ ಇದೆ. ಮಹಿಳೆಯರು ವಿಟಮಿನ್ ‘ಡಿ‘ ಕೊರತೆಯನ್ನು, ಪುರು ಷರು ವಿಟಮಿನ್ ‘ಡಿ’ಯ ಅಸಮರ್ಪಕತೆಯನ್ನು ಎದುರಿಸುತ್ತಿದ್ದಾರೆ.
.ಪುರುಷರ ಅನಿಯಮಿತ ಆಹಾರ ಪದ್ಧತಿ, ಪೌಷ್ಟಿಕಾಂಶದ ಕೊರತೆ, ಬೆಳೆಯುತ್ತಿರುವ ನಗರದಲ್ಲಿ ಬದಲಾಗು ತ್ತಿರುವ ಜೀವನಶೈಲಿ, ರಾತ್ರಿ ಪಾಳಿಯಲ್ಲಿ ಕೆಲಸ, ಒತ್ತಡದ ಜೀವನದಿಂದಾಗಿ ಪುರುಷರಿಗೆ ‘ಡಿ’ಯ ಅಸಮರ್ಪಕ ಪೂರೈಕೆಯಾಗುತ್ತದೆ. ವಯಸ್ಸಾದಂತೆ ವಿಟಮಿನ್ ‘ಡಿ’ ಕೊರತೆ ಹೆಚ್ಚಾಗುತ್ತದೆ.
(ಸಂಗ್ರಹ ಮಾಹಿತಿ)
Recent news in health »

ಪ್ರಕೃತಿಯೇ ಆಯುರ್ವೇದ, ಪಥ್ಯವೇ ಆರೋಗ್ಯ. ಆಯುರ್ವೇದ ರತ್ನ ಡಾ ಮಹೇಶ್ ಮೂರ್ತಿ
ಚನ್ನಪಟ್ಟಣ: ಆಯುರ್ವೇದ ರತ್ನ ಚನ್ನಪಟ್ಟಣ ದ ಉಗಮ ಚಿಕಿತ್ಸಾಲಯದ ಡಾ ಮಹೇಶ್ ಮೂರ್ತಿಯವರೊಂದಿಗೆ ಗೋ ರಾ ಶ್ರೀನಿವಾಸ ನಡೆಸಿದ ಒಂದು ಸಂವಾದ<

ಟ್ಯುಬೆರ್ ಕ್ಯುಲೋಸಿಸ್ ಇದ್ದರೆ ಅಣಬೆ ತಿಂದು ಗುಣ ಪಡಿಸಿಕೊಳ್ಳಿ
ಮಳೆಗಾಲ ಶುರುವಾಯಿತೆಂದರೆ ಹಣಬೆಗಳದ್ದೇ ಕಾರುಬಾರು . ರಸ್ತೆಯ ಇಕ್ಕೆಲಗಳಲ್ಲಿ ಎತ್ತ ನೋಡಿದರೂ ಅತ್ತ ಮಣ್ಣಿನ ಮೇಲೆ ಸಣ್ಣ ಸಣ್ಣ ಕೊಡೆಯಾಕಾರದಲ್ಲಿ ನೋಡಲು ಸುಂದರವಾಗಿ ಕಾಣುವ ಅಣಬೆ ವಿವಿಧ ಗಾತ್ರದಲ್ಲಿ ಬ

ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ಉಚಿತ ಯೋಗಾಸನ
ಬೆಂಗಳೂರಿನ ಆಯುಷ್ಮಾ ಯೋಗಾಸನ ಕೇಂದ್ರದ ವತಿಯಿಂದ ನಗರದ ಮಂಗಳವಾರಪೇಟೆಯ ಸರ್ಕಾರಿ ಮಾದರಿ ಮಾಧ್ಯಮಿಕ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ಎಂಟೂವರೆಯಿಂದ ಒಂಭ

ಹೀಗಿರಲಿ ನಿಮ್ಮ ಹಾಲುಗಂದಮ್ಮನ ಹಾರೈಕೆ.......
ಲತಳಿಗೆ ಮದುವೆಯಾಗಿ ವರ್ಷ ತುಂಬುವಷ್ಟರಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು.
ಲತಾಳ ಕುಟುಂಬದವರಿಗೆಲ್ಲಾ ತಡೆಯಾಲಾಗದಷ್ಟು ಸಂತೋಷ. ಲತಾಳ ಕುಟುಂಬಕ್ಕೆ ಸಂತೋಷ ಪಡಲು ಕಾರಣವಾದ ಆ ಕಂದಮ್ಮನ ಹಾರೈಕೆಯು ಒಂದು ಜವಬ

ಸರ್ಕಾರಿ ಶಾಲಾ ಮಕ್ಕಳು ಮತ್ತು ರೈತರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿಗಳಿಗೊಂದು ಪತ್ರ, ಸಿ ಪುಟ್ಟಸ್ವಾಮಿ.
ಗೌರವಾನ್ವಿತರೇ; ಇಡೀ ರಾಷ್ಟ್ರದಲ್ಲಿ ಆರರಿಂದ ಹದಿನೇಳು ವರ್ಷದ ಸರಿಸುಮಾರು 29,59,50,674 ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳು ಇದ್ದು ಶೇಕಡಾ ಐವತ್ತಕ್ಕೂ ಹೆಚ್ಚು ಮಕ್ಕಳು ಪೌಷ್ಟಿಕಾಂಶದ ಕೊರ
ಆರೋಗ್ಯ ಸೇವೆ ಪಡೆಯುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಶಿಬಿರ, ಕಾರ್ಯಾಗಾರ
ಬೆಂಗಳೂರು: ಯಶಸ್ವಿನಿ ಯೋಜನೆಯು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನವಾಗಿರುವುದರಿಂದ ಯಶಸ್ವಿನಿ ಅಡಿ ಆರೋಗ್ಯ ಸೇವೆ ಪಡೆಯುತ್ತಿದ್ದ ಸಹಕಾರ ಸಂಘಗಳ ಸದಸ್ಯರು ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಸೇವೆ ಪಡೆಯುವ ವಿ

ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ, ಡಾ ಮಲವೇಗೌಡ.\"
ರಕ್ತದಾನ ಮಾಡಿದರೆ ಅಗತ್ಯ ಇರುವವರಿಗೆ ಅನುಕೂಲ ಆಗುವುದರ ಜೊತೆಗೆ ರಕ್ತದಾನ ಮಾಡಿದವರಿಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಖ್ಯಾತ ಮೂಳೆ ತಜ್ಞ ಡಾ ಮಲವೇಗೌಡರು ತಿಳಿಸಿದರು.
ಅವರು ತಮ್ಮ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ಏ

ಚನ್ನಪಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ, ದಾನಿಗಳು ರಕ್ತದಾನ ಮಾಡಲು ಮನವಿ.
ಸತತ ಆರು ವರ್ಷಗಳಿಂದ ನಗರದ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆ ವತಿಯಿಂದ ಬೃಹತ್ ರಕ್ತದಾನ ಶಿಬಿರ ಏರ್ಪಡಿಸುತ್ತಾ ಬಂದಿದೆ.
ಅದರ ಮುಂದುವರಿದ ಭಾಗವಾಗಿ ೧೬/೦೬/೧೮ ನೇ ಶನಿವಾರವೂ ಸಹ ಕುವೆಂಪು ನಗರದ ೫ ನೇ ತಿರುವಿನಲ್ಲಿರುವ ಮಾತೃಶ್

ಎರಡು ವರ್ಷಗಳ ವರೆಗೆ ಎದೆಹಾಲು ಕುಡಿಸುವುದು ಒಳ್ಳೆಯದು
ದೆಹಲಿ:ಮಗು ಹುಟ್ಟಿದ ದಿನದಿಂದ ಮೊದಲ ಎರಡು ವರ್ಷಗಳವರೆಗೆ ತಾಯಿ ಎದೆಹಾಲು ಕುಡಿಸುವುದರಿಂದ ಪ್ರತಿ ವರ್ಷ ಐದು ವರ್ಷದ ಒಳಗಿನ ಸುಮಾರು 8.2 ಲಕ್ಷ ಜೀವ ಉಳಿಸಲು ಸಾಧ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್

ಬಿಸಿ ನೀರಿನಿಂದ ಆಗುವ ಪ್ರಯೋಜನಗಳು
ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ?
ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ ಪಾದ ಮೇಲೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಅದೇ
ಪ್ರತಿಕ್ರಿಯೆಗಳು