Tel: 7676775624 | Mail: info@yellowandred.in

Language: EN KAN

    Follow us :


ತಗಚಗೆರೆ ಮಾಸ್ತಮ್ಮ ಮಂದಿರದಲ್ಲಿ ಚಿತ್ರೀಕರಣಕ್ಕೆ ಚಾಲನೆ
ತಗಚಗೆರೆ ಮಾಸ್ತಮ್ಮ ಮಂದಿರದಲ್ಲಿ ಚಿತ್ರೀಕರಣಕ್ಕೆ ಚಾಲನೆ

ಅಮೃತ ಪ್ರೊಡಕ್ಷನ್ಸ್‌ ರವರ ಚೊಚ್ಚಲ ಕಾಣಿಕೆಯಾಗಿ ಪ್ರೊಡಕ್ಷನ್ ನಂ ೧ ಎಂಬ ಕನ್ನಡ ಚಿತ್ರದ ಚಿತ್ರೀಕರಣಕ್ಕೆ ತಾಲ್ಲೂಕಿನ ತಗಚಗೆರೆ ಗ್ರಾಮದ ಶ್ರೀ ಮಾಸ್ತಮ್ಮ ದೇವಿಯ ಸನ್ನಿಧಿಯಲ್ಲಿ ಗಣ್ಯರು ಚಾಲನೆ ನೀಡಿದರು. ಅನೇಕ ಹೊಸ ನಟ ನಟಿಯರ ಜೊತೆಗೆ ಹಿರಿಯ ಸಿನಿಮಾ ಕಲಾವಿದರನ್ನು ಸೇರಿಸಿ ವಿಭಿನ್ನವಾದ ಸಾಮಾಜಿಕ ಕಳಕಳಿಯ ಕಾಳಜಿಯುಳ್ಳ ಕಥೆಯನ್ನು ರಚಿಸಿದ್ದೇನೆ, ಮಾಸ್ತಮ್ಮ ದೇವಿಯ ಕೃಪೆಯಿಂದ ಯಾವುದೇ ವಿಘ್ಗಗಳು ಬಾರದೆ ಚಿತ್ರೀಕರಣ ಸಾಗಲಿದೆ, ಅದಕ್ಕೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ

ರಾಮನಗರದ ಹುಡುಗರ ಕನ್ನಡ ಕಿರು ಚಿತ್ರ ಪ್ರೇಮ
ರಾಮನಗರದ ಹುಡುಗರ ಕನ್ನಡ ಕಿರು ಚಿತ್ರ ಪ್ರೇಮ

ಈಗಿನ ಯುವಕರಲ್ಲಿ ಕೆಲವರಲ್ಲಿ ಒಂದೊಂದು ತರನಾದ ಹವ್ಯಾಸಗಳಿರುತ್ತದೆ‌. ಹಾಗೇಯೆ ರಾಮನಗರದ ಒಂದು ಯುವಕರ ತಂಡ ಕನ್ನಡ ಕಿರುಚಿತ್ರ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಯಾವುದೇ ತರಬೇತಿಗಳಿಲ್ಲದೇ. ಕೇವಲ ಸಿನಿಮಾ ಮೇಲಿನ ಪ್ರೀತಿಯಿಂದ ಹಾಗೂ ಸಮಾಜಕ್ಕೆ ಸಂದೇಶಗಳನ್ನು ರವಾನಿಸುವ ಸಲುವಾಗಿ ಕಿರುಚಿತ್ರಗಳನ್ನು ನಿರ್ಮಿಸಲು ಈ ತಂಡ ಸಜ್ಜಾಗಿದೆ. ಈಗಾಗಲೇ ಮಿನರ್ವ ಎಂಬ ಹೆಸರಿನ ಕಿರುಚಿತ್ರ ನಿರ್ಮಿಸಿ ಯಶಸ್ಸು ಕಂಡಿರುವ ಈ ತಂಡ, ಸಾಹಿತ್ಯ ಎಂಬ ಎರಡನೇ ಕಿರುಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಚಿತ

ಜಿಲ್ಲಾಡಳಿತ ನೆಟ್ಟ ಕೋಟಿ ಗಿಡಗಳೇನಾದವು ? ಬಹುತೇಕ ಗಿಡಗಳು ವಿದ್ಯುತ್ ತಂತಿಗಳ ಕೆಳಗೇ ಏಕೆ ನೆಡುತ್ತಾರೆ ? ಗಿಡಗಳ ಅರಣ್ಯರೋಧನ
ಜಿಲ್ಲಾಡಳಿತ ನೆಟ್ಟ ಕೋಟಿ ಗಿಡಗಳೇನಾದವು ? ಬಹುತೇಕ ಗಿಡಗಳು ವಿದ್ಯುತ್ ತಂತಿಗಳ ಕೆಳಗೇ ಏಕೆ ನೆಡುತ್ತಾರೆ ? ಗಿಡಗಳ ಅರಣ್ಯರೋಧನ

ಕಳೆದ ಬಾರಿ ರಾಮನಗರ ಜಿಲ್ಲಾಡಳಿತವೂ ಜಿಲ್ಲಾದ್ಯಂತ ಕೋಟಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿ ಚಾಲನೆ ನೀಡಿ ಖಾಲಿ ಇರುವ ಅರಣ್ಯ, ಗೋಮಾಳ, ಸರ್ಕಾರಿ ಬಂಜರು ಭೂಮಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕೋಟಿ ಗಿಡಗಳ ಹೆಸರಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಲಕ್ಷಾಂತರ ಗಿಡಗಳನ್ನು ನೆಟ್ಟು ಕೈ ತೊಳೆದುಕೊಂಡಿತ್ತು. "ಉಳಿದಿರುವ ಗಿಡಗಳ ಲೆಕ್ಕ ಕೊಡಲಿ" ಜಿಲ್ಲಾದ್ಯಂತ ಎತ್ತ ಹೋಗಿ ಲೆಕ್ಕ ತಂದರು ಸಹ ಕೇವಲ ಒಂದು ವರ್ಷ

ಸಮ್ಮಿಶ್ರ ಸರ್ಕಾರ ಸಂಪೂರ್ಣ ದಿವಾಳಿ: ಅಶೋಕ್‌
ಸಮ್ಮಿಶ್ರ ಸರ್ಕಾರ ಸಂಪೂರ್ಣ ದಿವಾಳಿ: ಅಶೋಕ್‌

ಮಂಡ್ಯ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಟೀಕಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಒಂದು ಗೋಮುಖ ವ್ಯಾಘ್ರ ಸರ್ಕಾರ. ಖಜಾನೆ ಬರಿದು ಮಾಡಿಕೊಂಡು ದಿವಾಳಿಯಾಗಿರುವ ಸರ್ಕಾರದಿಂದ ಯಾವುದೇ ಅಭಿವೃದ್ಧಿಯನ್ನೂ ನಿರೀಕ್ಷಿಸಲಾಗದು ಎಂದು ಜರಿದರು. ಅಭಿವ

ಮುಖ್ಯ ಮಂತ್ರಿ ಕುಮಾರಸ್ವಾಮಿ ಜನತಾ ದರ್ಶನದ ಸಮಯ ಬದಲು
ಮುಖ್ಯ ಮಂತ್ರಿ ಕುಮಾರಸ್ವಾಮಿ ಜನತಾ ದರ್ಶನದ ಸಮಯ ಬದಲು

ಬೆಂಗಳೂರು : ರಾಜ್ಯದ ನೂರಾರು ಮಂದಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಲು ಬರುತ್ತಿದ್ದಾರೆ. ಆದರೆ ಇದರಿಂದ ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ತಾವು ಬೆಂಗಳೂರಿನಲ್ಲಿರುವ ಸಂದರ್ಭದಲ್ಲಿ ಪ್ರತಿ ಶನಿವಾರ ಸಾರ್ವಜನಿಕರನ್ನು ಭೇಟಿಯಾಗಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಈ ಕುರಿತಾಗಿ ಮುಖ್ಯಮಂತ್ರಿಗಳ ಕಚೇರಿಯು ಅಧಿಕೃತ ಪ್ರಕಟನೆಯನ್ನು ಹೊ

ಪೋಲಿಸರೇ ಯರ್ರಾಬಿರ್ರಿ ಬೈಕ್ ರೈಡರ್ ತಡೆಗಟ್ಟಲು ಕ್ರಮ ಕೈಗೊಳ್ಳಿ
ಪೋಲಿಸರೇ ಯರ್ರಾಬಿರ್ರಿ ಬೈಕ್ ರೈಡರ್ ತಡೆಗಟ್ಟಲು ಕ್ರಮ ಕೈಗೊಳ್ಳಿ

ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕರು ನಗರವೂ ಸೇರಿದಂತೆ ತಾಲ್ಲೂಕಿದ್ಯಾಂತ ಬೈಕ್ ರೈಡಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಕೆಲ ಯುವಕರು ಅತಿ ಹೆಚ್ಚು ಶಬ್ದ ಬರುವ ಯಮಹಾ ಬೈಕ್ ನಲ್ಲಿ ರೈಡಿಂಗ್ ಮಾಡಿದರೇ ಮತ್ತೆ ಕೆಲ ಯುವಕರು ಅವರ ಬಳಿ ಇರುವ ಬೈಕ್ ನ ಸೈಲೆನ್ಸರ್ ಪೈಪ್ ನ ಫಿಲ್ಟರ್ ತೆಗೆಸಿ ಹೆಚ್ಚು ಶಬ್ದ ಬರುವಂತೆ ಮಾಡಿಸಿಕೊಂಡು ಕಿವಿಗಡಚಿಕ್ಕುವಂತೆ ಶಬ್ದ ಹೊರಡಿಸುತ್ತಾ ವ್ಹೀಲಿಂಗ್ ಮಾಡುತ್ತಿರುವುದು ಪ್ರತಿನಿತ್ಯದ ಚಾಳಿಯಾಗಿಬಿಟ್ಟಿದೆ. ಈ ರೀತಿಯ

ಸಿಎಂಗೆ ಗ್ರೈಪ್‌ವಾಟರ್‌, ನಿಪ್ಪಲ್‌ ರವಾನೆ ಮಾಡಿದ ಮಂಡ್ಯ ಯುವಕರು!
ಸಿಎಂಗೆ ಗ್ರೈಪ್‌ವಾಟರ್‌, ನಿಪ್ಪಲ್‌ ರವಾನೆ ಮಾಡಿದ ಮಂಡ್ಯ ಯುವಕರು!

ಮಂಡ್ಯ: ಮೈತ್ರಿ ಸರಕಾರ ಕಷ್ಟವಾಗುತ್ತಿದೆ ಎಂದು ಕಣ್ಣೀರು ಹಾಕಿದ್ದ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿಯನ್ನು ಅಣಕ ಮಾಡಿರುವ ಮಂಡ್ಯದ ಬಿಜೆಪಿ ಕಾರ್ಯಕರ್ತರು ವುಡ್ವರ್ಡ್ಸ್ ಬಾಟಲಿ ಮತ್ತು ನಿಪ್ಪಲ್​ನ್ನು ಕಳಿಸಿಕೊಟ್ಟು ವ್ಯಂಗ್ಯವಾಡಿದ್ದಾರೆ. ರಾಜ್ಯದ ಜನರ ಕಷ್ಟದ ಕಣ್ಣೀರು ಒರೆಸುವುದನ್ನು ಬಿಟ್ಟು ಅಳುಮುಂಜಿ ರಾಜಕಾರಣವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಇನ್ನೂ ಚಿಕ್ಕವರಿದ್ದು, ಅಳುತ್ತಿದ್ದಾಗ ಮಕ್ಕಳಿಗೆ ವು

ಜೇಟ್ಲಿಯಿಂದ ನಾನು ಪಾಠ ಕಲಿಯಬೇಕಾಗಿಲ್ಲ : ಕುಮಾರಸ್ವಾಮಿ
ಜೇಟ್ಲಿಯಿಂದ ನಾನು ಪಾಠ ಕಲಿಯಬೇಕಾಗಿಲ್ಲ : ಕುಮಾರಸ್ವಾಮಿ

ಬೆಂಗಳೂರು: ಸಮ್ಮಿಶ್ರ ಸಕಾರಕ್ಕೆ ಕಾಂಗ್ರೆಸ್​ ಹಾಗೂ ರಾಹುಲ್​ ಗಾಂಧಿಯ ಬೆಂಬಲ ಇದ್ದೇ ಇದೆ. ಕಾಂಗ್ರೆಸ್​ನಿಂದ ತೊಂದರೆಯಾಗುತ್ತಿದೆ ಎಂದು ನಾನು ಅತ್ತಿಲ್ಲ. ಅರುಣ್​ ಜೇಟ್ಲಿಯಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ಜೇಟ್ಲಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನನ್ನ ನಿರ್ಧಾರಗಳಿಗೆ ಜನರ ಬೆಂಬಲ ಸಿಗುತ್ತಿಲ್ಲ ಎಂಬ ಬೇಸರದಿಂದ ನನ್ನ ಕಣ್ಣಲ್ಲಿ ನೀರು ಬಂತು. ರೈತರ ಸಾಲಮನ್ನಾ ಮಾಡಿದ್ದು, ನಾನೇ ಹೊರತು ಪ್ರಧಾನಿ ನರೇಂದ್ರ ಮೋದಿಯಲ್ಲ ಎಂದು ಸಿಎಂ ಬಿಜೆಪಿಗೆ ತಿ

ಬೆಂಗಳೂರು - ಮೈಸೂರು ರಸ್ತೆ ನಿರ್ಮಾಣ ತಿಂಗಳಲ್ಲಿ ಆರಂಭ
ಬೆಂಗಳೂರು - ಮೈಸೂರು ರಸ್ತೆ ನಿರ್ಮಾಣ ತಿಂಗಳಲ್ಲಿ ಆರಂಭ

ಹಾಸನ: ಬೆಂಗಳೂರು - ಮೈಸೂರು ನಡುವೆ 10 ಪಥದ 141 ಕಿ.ಮೀ. ರಸ್ತೆ ನಿರ್ಮಾಣ ಇನ್ನೊಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು. ರಸ್ತೆ ಕಾಮಗಾರಿಗೆ ಇರುವ ಅಡಚಣೆಗಳನ್ನು ಇನ್ನು 15 ದಿನಗಳೊಳಗೆ ನಿವಾರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಮುಖ್ಯ ಮಂತ್ರಿಯವರ ನೇತೃತ್ವದಲ್ಲಿ ಎನ್‌ಎಚ್‌ಎಐ,ಭೂ ಸ್ವಾಧೀನಾಧಿಕಾರಿಗಳು, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳ ಸಭೆಯೂ ನಡೆದಿದ್ದು, ಕಾಮಗಾ

ಮರುಕಳಿಸಿದ ಭರಚುಕ್ಕಿ ಜಲಪಾತ ವೈಭವ
ಮರುಕಳಿಸಿದ ಭರಚುಕ್ಕಿ ಜಲಪಾತ ವೈಭವ

ಚಾಮರಾಜನಗರ: ಕಬಿನಿ ಜಲಾಶಯ ದಿಂದ 50 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿರುವ ಕಾರಣ ಜಿಲ್ಲೆಯ ಪ್ರಸಿದ್ಧ ಭರಚುಕ್ಕಿ ಜಲಪಾತ ಮೈದುಂಬಿಕೊಂಡಿದ್ದು ಜಲಧಾರೆ ಬೆಳ್ನೊರೆಯಾಗಿ ಧುಮ್ಮಿಕ್ಕುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆಯಾಗದೇ ಭರಚುಕ್ಕಿ ಜಲಪಾತಕ್ಕೆ ಈ ಪ್ರಮಾಣದ ನೀರು ಹರಿದುಬಂದಿರಲಿಲ್ಲ. ಹಾಗಾಗಿ ಈ ವೈಭವದ ದೃಶ್ಯ ಕಾಣಸಿಕ್ಕಿರಲಿಲ್ಲ. ಆದರೆ ಈ ಬಾರಿ ಕಾವೇರಿ, ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಹಾಗೂ

Top Stories »  Top ↑