Tel: 7676775624 | Mail: info@yellowandred.in

Language: EN KAN

    Follow us :


ಫಲಿತಾಂಶ ಪ್ರಕಟ

ಹಾಸನ : ಕನ್ನಡ ಸಾಹಿತ್ಯ ಪರಿಷತ್ತು 2017-18ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಫಲಿತಾಂಶದ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅಂತರ್ಜಾಲದಲ್ಲೂ ( ತಿತಿತಿ.ಞಚಿsಚಿಠಿಚಿ.iಟಿ ) ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಶೀಘ್ರದಲ್ಲಿಯೇ ಎಲ್ಲ ಅಭ್ಯರ್ಥಿಗಳಿಗ

ಮೂತ್ರಪಿಂಡ ರೋಗಗಳ ಕುರಿತು ಅರಿವನ್ನು ವಿಸ್ತರಿಸಲು ಬೃಹತ್ ವಾಕಥಾನ್
ಮೂತ್ರಪಿಂಡ ರೋಗಗಳ ಕುರಿತು ಅರಿವನ್ನು ವಿಸ್ತರಿಸಲು ಬೃಹತ್ ವಾಕಥಾನ್

ಬೆಂಗಳೂರು : ಬೆಂಗಳೂರಿನಲ್ಲಿ ಮೂತ್ರಪಿಂಡ ರೋಗಗಳ ಕುರಿತು ಅರಿವನ್ನು ಉಂಟು ಮಾಡುವ ನಿಟ್ಟಿನಲ್ಲಿ ನೂರಾರು ಮಂದಿ ವಾಕಥಾನ್‍ನಲ್ಲಿ ಭಾಗವಹಿಸಿದರು. ಹೆಗಡೆನಗರದ ರೀಗಲ್ ಆಸ್ಪತ್ರೆಯಲ್ಲಿ ಪ್ರಾರಂಭವಾದ ಈ ವಾಕಥಾನ್ ಮುನ್ನೆಚ್ಚರಿಕೆ ಕೈಗೊಳ್ಳಲು ಉತ್ತೇಜಿಸಿತು. ಗಂಭೀರ ಮೂತ್ರಪಿಂಡ ರೋಗ(ಸಿಕೆಡಿ) ವಿಶ್ವದಾದ್ಯಂತ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿದ್ದು ಮೂತ್ರಪಿಂಡ ವೈಫಲ್ಯ ಮತ್ತು ಅವಧಿಪೂರ್ವ ಮರಣಕ್ಕೆ ಕಾರಣವಾಗುತ್ತದೆ. ಸಿಕೆಡಿ ಸುಮಾರು 195 ಮಿಲಿಯನ್ ಮಹಿಳೆಯರಿಗೆ ವಿಶ್ವದಾದ್ಯಂತ ಬಾಧಿಸು

ನನಗೂ ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಬಂತು!
ನನಗೂ ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಬಂತು!

ಅಧಿಕಾರ, ಪ್ರಶಸ್ತಿ, ಪುರಸ್ಕಾರ...ಇದ್ಯಾವುದನ್ನೂ ಒಬ್ಬ ಸಾಮಾಜಿಕ ಕಾರ್ಯಕರ್ತ ಬಯಸಬಾರದೆಂಬುದು ನನ್ನ ನಿಲುವು. ಆದರೆ ಕೆಲವೊಮ್ಮೆ ಅವಕಾಶಗಳು ತಾನಾಗಿಯೇ ಹುಡುಕಿ ಬಂದಾಗ ಅದನ್ನು ತಿರಸ್ಕರಿಸಬೇಕೇ ಎಂಬುದು ನನ್ನ ಪ್ರಶ್ನೆ. ಈ ಗೊಂದಲ ಯಾಕೆಂದರೆ ಇಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಘೋಷಣೆಯಾಗಿದೆ. ಅದೂ ನನ್ನ ಬ್ಯಾರಿ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದ ಸೇವೆಗಾಗಿ.    ಆದ್ದರಿಂದಲೇ ಗೊಂದಲ ಮತ್ತು ಸಂತೋಷ ಜೊತೆಯಾಗಿ ಮೂಡಿಬಂದಿ

ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ: ಪ್ರೊ.ಎಸ್.ಎ.ಕೃಷ್ಣಯ್ಯ
ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ: ಪ್ರೊ.ಎಸ್.ಎ.ಕೃಷ್ಣಯ್ಯ

ಹಾಸನ : ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಜಾನಪದ ಮತ್ತು ಇತಿಹಾಸ ವಿದ್ವಾಂಸ ಪ್ರೊ.ಎಸ್.ಎ.ಕೃಷ್ಣಯ್ಯ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ಕಾಲೇಜಿನ ಕನ್ನಡ ವಿಭಾಗ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಜನಪದ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಹಂಪನಹಳ್ಳಿ ತಿಮ್ಮೇಗೌಡ ಅವರ ನಾ ಕಂಡ ಯೂರೋಪ್, ಹೋಯ್ಸಳ ನಾಡಿನ ಜನಪದ ಕಲೆಗಳು ಹಾಗೂ ಭಾಷೆ ಮತ್ತ

ಜಿಲ್ಲಾಧಿಕಾರಿ ಅವರಿಂದ ವಿವಿ ಪ್ಯಾಟ್‍ಗಳ ಪ್ರಥಮ ಹಂತದ ಪರಿಶೀಲನೆ
ಜಿಲ್ಲಾಧಿಕಾರಿ ಅವರಿಂದ ವಿವಿ ಪ್ಯಾಟ್‍ಗಳ ಪ್ರಥಮ ಹಂತದ ಪರಿಶೀಲನೆ

ಹಾಸನ : ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಮತ್ತು ವಿವಿ ಪ್ಯಾಟ್‍ಗಳ ಪ್ರಥಮ ಹಂತದ ತಪಾಸಣೆ (ಎಫ್.ಎಲ್.ಸಿ) ಕಾರ್ಯವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ಪರಿಶೀಲಿಸಿದರು. ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎಫ್.ಎಲ್.ಸಿ. ಕಾರ್ಯವು ತುಂಬ ಸೂಕ್ಷ್ಮ ಮತ್ತು ಜವಾಬ್ದಾರಿಯಿಂದ ಕೂಡಿದ್ದು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.&nbs

ಕೋಮು ವೈಷಮ್ಯತೆಯಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ: -ಕಾವ್ಯಂ ಶ್ರೀನಿವಾಸ ಮೂರ್ತಿ
ಕೋಮು ವೈಷಮ್ಯತೆಯಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ: -ಕಾವ್ಯಂ ಶ್ರೀನಿವಾಸ ಮೂರ್ತಿ

ಕಲಬುರಗಿ : ದೇಶದಲ್ಲಿ ಇಂದು ಕೋಮು ಸೌಹಾರ್ದತೆ ಕದಡುವ ಶಕ್ತಿಗಳು ಹೆಚ್ಚುತ್ತಿದ್ದು, ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾವ್ಯಂ ಶ್ರೀನಿವಾಸ ಮೂರ್ತಿ ಅವರು ವಿಷಾದ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆಯುತ್ತಿರುವ ರಾಟ್ಟ್ರಕೂಟ ಉತ್ಸವದ ಎರಡನೇ ದಿನದ ಮೊದಲನೇ ವಿಚಾರಗೋಷ್ಠಿಯಲ್ಲಿ “ರಾಷ್ಟ್ರಕೂಟ ಕಾಲದ ಸೌಹಾರ್ದ ಪರಂಪರೆ&rdq

ಮೊಬೈಲ್ ಎಸ್.ಎಂ.ಎಸ್ ಆ್ಯಪ್ ಮೂಲಕ ಮತಗಟ್ಟೆಗಳ ವಿವರ: ಬಿ.ಶರತ್ 
ಮೊಬೈಲ್ ಎಸ್.ಎಂ.ಎಸ್ ಆ್ಯಪ್ ಮೂಲಕ ಮತಗಟ್ಟೆಗಳ ವಿವರ: ಬಿ.ಶರತ್ 

ಮಂಡ್ಯ : ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ಸಂಖ್ಯೆ ಹಾಗೂ ಇನ್ನಿತರೆ ಮಾಹಿತಿ ಬಗ್ಗೆ ಖಚಿತ ಪಡಿಸಿಕೊಳ್ಳಲು ಭಾರತ ಚುನಾವಣಾ ಆಯೋಗ ಮೊಬೈಲ್ ಎಸ್.ಎಂ.ಎಸ್ ಆ್ಯಪ್ ಮೂಲಕ ಪ್ರಾರಂಭಿಸಿದ್ದು, ಮಂಡ್ಯ ಜಿಲ್ಲೆಯ ಮತದಾರರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಬಿ.ಶರತ್ ಅವರು ತಿಳಿಸಿದರು.  ಇಂದು ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹ

ಪೀಪಲ್ ಟ್ರೀ ಮೀನಾಕ್ಷಿಯಲ್ಲಿ ಪೆರಿನಟಾಲಜಿ ಕಾರ್ಯಾಗಾರ
ಪೀಪಲ್ ಟ್ರೀ ಮೀನಾಕ್ಷಿಯಲ್ಲಿ ಪೆರಿನಟಾಲಜಿ ಕಾರ್ಯಾಗಾರ

ಬೆಂಗಳೂರು : ಪೀಪಲ್ ಟ್ರೀ ಮೀನಾಕ್ಷಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಪೆರಿನಟಾಲಜಿ ಕಾರ್ಯಾಗಾರದಲ್ಲಿ ಪ್ರಮುಖ ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ಚಿಕಿತ್ಸಾ ತಜ್ಞರು ಭಾಗವಹಿಸಿದ್ದರು. ಈ ಕಾರ್ಯಾಗಾರದ ಉದ್ದೇಶ ಹೆಚ್ಚಿನ ರಿಸ್ಕ್‍ನ ಗರ್ಭಧಾರಣೆಯ ಸಂದರ್ಭದ ಹೆರಿಗೆಯಲ್ಲಿ ಪ್ರಸೂತಿ ತಜ್ಞರು ಮತ್ತು ಮಕ್ಕಳ ತಜ್ಞರಿಗೆ ಉತ್ತಮ ಫಲಿತಾಂಶ ದೊರೆಯುವಂತೆ ಮಾಡುವುದಾಗಿತ್ತು.  ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜೀವದ ಮೊದಲ ಸಾವಿರ ದಿನಗಳ  ಪ್ರಾಮುಖ್ಯತೆಯನ್ನು ಎತ್ತಿ ತೋರುವು

ಬಿಜೆಪಿಯವರು ಸತ್ಯಹರಿಶ್ಚಂದ್ರರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ
ಬಿಜೆಪಿಯವರು ಸತ್ಯಹರಿಶ್ಚಂದ್ರರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಕನಕಪುರ: ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ ತೃಪ್ತಿಯಿದೆ. ರೈತರ ಸಾಲಮನ್ನಾದಿಂದ ಹಿಡಿದು ಹತ್ತಾರು ಜನಪರ ಕಾರ್ಯಕ್ರಮಗಳನ್ನು ಜನರಿಗೆ ನೇರವಾಗಿ ತಲುಪಿಸಿದ್ದೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲ್ಲೂಕಿನ ಶಿವನಹಳ್ಳಿ ಸಮೀಪದ ಐವತ್ತು ಎಕರೆ ವಿಸ್ತೀರ್ಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಗಾಡೈರಿ ಉದ್ಘಾಟಿಸಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪ

ಶಾಸಕ ಬಾಲಕೃಷ್ಣ ಅವರಿಂದ ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ : ಕುಮಾರಸ್ವಾಮಿ
ಶಾಸಕ ಬಾಲಕೃಷ್ಣ ಅವರಿಂದ ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ : ಕುಮಾರಸ್ವಾಮಿ

ರಾಮನಗರ : ಶಾಸಕ ಎಚ್.ಸಿ.ಬಾಲಕೃಷ್ಣ ಅವರದು ಲಂಗು ಲಗಾಮಿಲ್ಲದ ನಾಲಿಗೆ. ಅವರಿಂದ ಒಳ್ಳೆಯ ಮಾತುಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಶಾಸಕ ಬಾಲಕೃಷ್ಣ ಅವರು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಮೊಬೈಲ್ ಸಂಭಾಷಣೆಯಲ್ಲಿ ವಾಚಾಮಗೋಚರವಾಗಿ ನಿಂದಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಬಾಲಕೃಷ್ಣ ಅವರು ನನ್ನ ಹಳೆ ಸ್ನೇಹಿತರು. ಅವರ ನಡವಳಿಕೆ ಏನೆಂಬುದು ನನಗೆ ಚೆನ್ನಾಗಿ ಗೊತ್ತು. ಅವ

Top Stories »  Top ↑