ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ ನೇರವಾಗಿ ಕೊಟ್ಟಿಗೆಗೆ ನುಗ್ಗಿ ಸಾಕು ಪ್ರಾಣಿಗಳನ್ನು ತಿಂದು ಜನರಲ್ಲಿ ಭಯ ಉಂಟು ಮಾಡುತ್ತಿವೆ ಎಂದಾದರೆ ಅದಕ್ಕೆ ನೇರ ಹೊಣೆ *ನಮ್ಮ ದುರಾಸೆಯ ಬದುಕು ಮತ್ತು ವ್ಯವಸ್ಥೆ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ತಿಳಿಸಿದರು.*
ಅವರು ಇಂದು *ಭೀಮೇಶ್ವರಿ* ಯಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರಿಗಾಗಿ ವನ್ಯಜೀವಿ ಸಂರಕ್ಷಣಾ ಕಾರ್ಯಾಗಾರದಲ್ಲಿ ಪತ್ರಕರ್ತರಿಗೆ *ವನ್ಯಜೀವಿ ಮತ್ತು ಮಾನವ ಸಂಘರ್ಷ* ಹೇಗೆ ಉಂಟಾಗುತ್ತದೆ ಎಂದು ಪತ್ರಕರ್ತರಿಗೆ ವಿವರಿಸಿದರು.
ಪ್ರಮುಖ ಪ್ರಾಣಿಗಳಾದ ಆನೆ, ಹುಲಿ ಮತ್ತು ಚಿರತೆ ಸೂಕ್ಷ್ಮ ಹಾಗೂ ಅಪಾಯಕಾರಿ ಪ್ರಾಣಿಗಳಾಗಿದ್ದು ಅವುಗಳು ಸಣ್ಣದಾದ ಕಾಡಿನೊಳಗೆ ಜೀವಿಸುವುದಿಲ್ಲ, ಅವುಗಳಿಗೆ ಸಹಸ್ರಾರು ಹೆಕ್ಟೇರ್ ಪ್ರದೇಶದ ದೊಡ್ಡ ಪ್ರಮಾಣದ ಅರಣ್ಯ ಇರಬೇಕು, ಅಂತಹ ಕಾಡುಗಳು ಇಂದು ಕೆಲವು ಕಡೆ ಬೆಂಕಿ ಬಿದ್ದು ನಶಿಸಿ ಹೋಗುತ್ತಿವೆ ಇದರಿಂದ ಪ್ರಾಣಿಗಳಿಗೆ ಸಕಾಲದಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ಸ್ಥಳೀಯ ಗ್ರಾಮಗಳಿಗೆ ಮತ್ತು ರೈತರ ಜಮೀನಿಗೆ ಪಾದ ಬೆಳೆಸಿ ತಿಂದು ವಾಪಸ್ಸಾಗುತ್ತಿವೆ ಎಂದು ತಿಳಿಸಿದರು.
ಕಾಡಿಗೆ ಬೆಂಕಿ ಹಾಕುವವರು ಮತ್ತು ಬೇಟೆಯಾಡುವವರು *ಮೂಢನಂಬಿಕೆ ಮತ್ತು ಪ್ರತಿಷ್ಠೆಗಾಗಿ* ಮಾಡುತ್ತಾರೆ, *ಕಾಡಿನ ಮಧ್ಯೆ ಮತ್ತು ಅಕ್ಕಪಕ್ಕದಲ್ಲಿ ಸ್ವಲ್ಪ ಕೃಷಿ ಜಮೀನು ಹೊಂದಿದ ಹಲವಾರು ಮಂದಿ ರೆಸಾರ್ಟ್ ಮಾಡಿದರೆ ಕೆಲವರು ರಜಾದಿನ ಮತ್ತು ವೀಕೆಂಡ್* ಗಳನ್ನು ಕಳೆಯಲು ಬಂದು ಮೋಜುಮಸ್ತಿಯಲ್ಲಿ ತೊಡಗುವುದರಿಂದಲೂ ಪ್ರಾಣಿಗಳಿಗೆ ಚದುರಿ ಗ್ರಾಮಗಳತ್ತ ಮುಖಮಾಡುತ್ತಿವೆ, ಇಂತಹವರಿಂದ ಪರಿಸರವೂ ಹಾಳಾಗುತ್ತಿರುವುದು ಬಹಿರಂಗ ಸತ್ಯ.
*ಕಾವೇರಿ ವನ್ಯಜೀವಿ ಧಾಮದಲ್ಲಿ ಹುಲಿ, ತರಕರಡಿ (ಜೇನೀರಕ) ಮತ್ತು ಬೆಟ್ಟಳಿಲು ಗಳಿದ್ದು ಇವು ಬೇರೆಲ್ಲೂ ಕಂಡುಬರುವುದಿಲ್ಲ. ಸೀಳುನಾಯಿ, ಆನೆ, ಕಾಡುಕೋಣ, (ಕಾಟಿ) ಜಿಂಕೆ, (ಸಾರಂಗ) ಕಡವೆ, ಬೆಟ್ಟದ ಆಡು (ಕೊಂಬು ಕುರಿ) ಇದು ಪ್ರಪಂಚದ ಏಕೈಕ ನಾಲ್ಕು ಕೊಂಬಿರುವ ಪ್ರಾಣಿ, ಇವುಗಳಲ್ಲದೆ ಅನೇಕ ಪ್ರಾಣಿ ಪಕ್ಷಿಗಳು ಇಲ್ಲಿವೆ, ಐದು ಹುಲಿಗಳಿದ್ದು ಇವು ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ದ ತನಕವೂ ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ.*
*ಹಲವಾರು ಅಭಿವೃದ್ಧಿಗಳಿಂದಲೂ ಕಾಡು ಪ್ರಾಣಿಗಳಿಗೆ ಕಂಟಕ ಎದುರಾಗಿವೆ, ನಾಡಿನ ಪ್ರಾಣಿಗಳನ್ನು ಕಾಡಿಗೆ ಅಟ್ಟುವುದರಿಂದಲೂ ಅನೇಕ ಕಾಡು ಪ್ರಾಣಿಗಳು ಸಂಕಸ್ಟಕ್ಕೀಡಾಗಿವೆ,* ತಾವುಗಳು ವರದಿ ಮಾಡುವಾಗ ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಕಾಡು ಪ್ರಾಣಿಗಳಿಂದಲೇ ಸರ್ವನಾಶ ಎಂದು ಬರೆಯುವ ಬದಲಿಗೆ ವಾಸ್ತವಾಂಶ ಅರಿತು ಸಕಾರಾತ್ಮಕವಾಗಿ ಬರೆದು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದರು.
ಕಾವೇರಿ ವನ್ಯಜೀವಿ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಎಸ್ ರಮೇಶ್ ರವರು ಮಾತನಾಡಿ ಇಂದಿನ ಅರಣ್ಯ ಕಾನೂನು ಪಂಡಿತರು ಸಮಸ್ಯೆಗಳನ್ನು ಅಧ್ಯಯನ ಮಾಡದೆ ಮನಸೋ ಇಚ್ಛೆ ಕಾನೂನು ಮಾಡಿದಂತಿದೆ, *ಕಾಡಿನೊಳಗಿರುವ ದೇವರ ಹೆಸರಿನಲ್ಲಿ ನಡೆಯುವ ಜಾತ್ರೆ ಗೆ ಬರುವವರು ಭಕ್ತಿಗೆ ಸೀಮಿತವಾಗದೆ ಮೋಜು ಮಸ್ತಿ ಮಾಡುತ್ತಾರೆ, ಮೂಢನಂಬಿಕೆ ಗೆ ಓಗೊಟ್ಟು ಕಾಡಿಗೆ ಬೆಂಕಿ ಇಡುವುದು, ಅದೇ ಹೆಸರಿನಲ್ಲಿ ಕಳ್ಳಬೇಟೆಯಾಡಿ ಸೀಮಿತ ಪ್ರಾಣಿಗಳನ್ನು ಕೊಂದು ಅಂಗಾಂಗ ಸಂಗ್ರಹ ಮತ್ತು ಮಾರಾಟ ಮಾಡುವುದು ನಡೆಯುತ್ತಿರುವುದು ಸಹ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುವಂತಾಗಿದೆ,* ಅರಣ್ಯ ಇಲಾಖೆಯಲ್ಲಿ ಶೇಕಡಾ ನಲವತ್ತರಷ್ಟು ಸಿಬ್ಬಂದಿ ಕೊರತೆ ಮತ್ತು ಅನುದಾನದ ಕೊರತೆಯಿಂದಲೂ ಕಾಡಿನ ರಕ್ಷಣೆ ಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಮನಗರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್ ಶಂಕರಪ್ಪ ಮಾತನಾಡಿ ವನ್ಯಜೀವಿಗಳು ಮತ್ತು ಕಾಡಿನ ಬಗ್ಗೆ ಪತ್ರಕರ್ತರಿಗೆ ಮಾಹಿತಿ ಇರಬೇಕು, ಸಮಸ್ಯೆಗಳಾದಾಗ ಸಕಾರಾತ್ಮಕವಾಗಿ ಬರೆಯಲು ಇವು ನೆರವಾಗುತ್ತವೆ, ಇಂತಹ ಕಾರ್ಯಾಗಾರಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದ ಪರಿಸರ ತರಬೇತುದಾರರಾದ ಲತಾ, ಸಂತೋಷ್, ಅರಣ್ಯಾಧಿಕಾರಿಗಳು, ವಾರ್ತಾ ಇಲಾಖೆಯ ಯೋಗೀಶ್ ಗೌಡ ಮತ್ತು ಸಿಬ್ಬಂದಿ, ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಅನೇಕ ಪತ್ರಕರ್ತರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in karnataka »

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ
ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕ

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್ ಅಧಿಕಾರಿ ಮತ್ತು ತಂಡ
ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತ

ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ
ರಾಮನಗರ: ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರ

ಕರಡಿಗಳ ದಾಳಿ ಗಂಭೀರ ಗಾಯ
ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.
ತೆಂಗಿ

ಗಾಂಧಿ ಭವನದ ಆಸ್ತಿ, ಆದಾಯ ಯಾರ ವಶದಲ್ಲಿದೆ ? ಸತ್ಯಾಗ್ರಹ ದಲ್ಲಿ ಸು ತ ರಾಮೇಗೌಡ ಆಗ್ರಹ
ಚನ್ನಪಟ್ಟಣ: ನಗರದ ಹೃದಯ ಭಾಗ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ
ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ
ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ
ಪ್ರತಿಕ್ರಿಯೆಗಳು