Tel: 7676775624 | Mail: info@yellowandred.in

Language: EN KAN

    Follow us :


ಗಾಂಧಿ ಭವನದ ಆಸ್ತಿ, ಆದಾಯ ಯಾರ ವಶದಲ್ಲಿದೆ ? ಸತ್ಯಾಗ್ರಹ ದಲ್ಲಿ ಸು ತ ರಾಮೇಗೌಡ ಆಗ್ರಹ

Posted Date: 02 Oct, 2019

ಗಾಂಧಿ ಭವನದ ಆಸ್ತಿ, ಆದಾಯ ಯಾರ ವಶದಲ್ಲಿದೆ ? ಸತ್ಯಾಗ್ರಹ ದಲ್ಲಿ ಸು ತ ರಾಮೇಗೌಡ ಆಗ್ರಹ

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ಹೆಸರಿನ ಸ್ಮಾರಕ (ಗಾಂಧಿ ಭವನ) ಕ್ಕೆ ಅರವತ್ತೈದು ವರ್ಷಗಳಾಗಿದ್ದು ಶಿಥಿಲಗೊಂಡಿದೆ, *ಗೋಖಲೆ ಟ್ರಸ್ಟ್* ಹೆಸರಿನಲ್ಲಿ ಈ ಆಸ್ತಿ ಇದ್ದು ನಾಲ್ಕು ಅಂಗಡಿಗಳ ಬಾಡಿಗೆ ಇಂದಿಗೂ ಬರುತ್ತಿದ್ದು ಇದಕ್ಕೂ‌ ಮೊದಲು ಗ್ರಂಥಾಲಯದ ಬಾಡಿಗೆ ಸಹ ಬರುತ್ತಿದ್ದು ಈ ಹಣವು ಟ್ರಸ್ಟ್ ನ ಖಾತೆಗಾಗಲಿ, ಅಥವಾ ಗಾಂಧಿ ಭವನದ ರಿಪೇರಿಗಾಗಲಿ ಬಳಕೆ ಆಗದೆ ಯಾರೋ ಒಬ್ಬ ಏಕವ್ಯಕ್ತಿಯು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಹೋರಾಟಗಾರ, ಪತ್ರಕರ್ತ ಸು ತ ರಾಮೇಗೌಡ ತಿಳಿಸಿದರು.

ಅವರು ಇಂದು ಗಾಂಧಿ ಭವನದ ಮುಂದೆ ಸತ್ಯಾಗ್ರಹ ಕುಳಿತು ಸತ್ಯಕ್ಕೆ ಆಗ್ರಹಿಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿ ಕೊಟ್ಟ ನೆನಪಿಗಾಗಿ ಈ ಜಾಗವನ್ನು ಕಾಯ್ದಿರಿಸಿದ್ದು, ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಚಂಗಲರಾಯರೆಡ್ಡಿ ಯವರು ೨೯/೦೪/೧೯೫೦ ರಲ್ಲಿ ಅಸ್ತಿಭಾರ ಶಿಲಸ್ಥಾಪನೆ ಮಾಡಿ, ೩೦/೧೦/೧೯೫೪ ರಲ್ಲಿ ಶ್ರೀ ಮನ್ ಮಹಾರಾಜ ರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಭವನವನ್ನು ಉದ್ಘಾಟಿಸಿದರು.

ಮೂರೂವರೆ ಗುಂಟೆ ಜಮೀನನ್ನು ಆರ್ಯಮೂರ್ತಿ ಎಂಬುವವರು ಸ್ಮಾರಕ ನಿರ್ಮಿಸಲು ದಾನ ನೀಡಿದ್ದು ಮಿಕ್ಕ ಜಾಗ ಸರ್ಕಾರಿ ಖರಾಬು ಜಮೀನಾಗಿದ್ದು, ಇತ್ತೀಚಿನ ಮಾಹಿತಿ ಪ್ರಕಾರ ಸಂಪೂರ್ಣ ಸರ್ಕಾರಿ ಖರಾಬು ಎಂದು ತಿಳಿದಿದೆ, ಸ್ಮಾರಕದ ಮುಂದೆ ರಾಜ್ಯದ ಮೊದಲ ವಿದ್ಯಾಮಂತ್ರಿ ವಿ ವೆಂಕಟಪ್ಪ ಮತ್ತು ವಿಶ್ವ ವಿಖ್ಯಾತ ಆರ್ಥಿಕ ತಜ್ಞ ವೆಂಕಟಗಿರಿಗೌಡರ ಪ್ರತಿಮೆಗಳಿದ್ದು ಇವೆರಡರ ಮುಂದಿನ ಮಧ್ಯ ಭಾಗದಲ್ಲಿ ರಾಷ್ಟ್ರಕವಿ ಕುವೆಂಪು ರವರ ಪ್ರತಿಮೆ ಪ್ರತಿಷ್ಟಾಪನೆ ಮಾಡಲಾಗಿದೆ.

ಗೋಖಲೆ ಟ್ರಸ್ಟ್ ಈಗ ಅಸ್ತಿತ್ವದಲ್ಲಿ ಇದೆಯಾ ? ಅಲ್ಲಿನ ಟ್ರಸ್ಟಿಗಳಾರು ? ಅಂದಿನ ಗ್ರಂಥಾಲಯ ಮತ್ತು ನಾಲ್ಕು ಅಂಗಡಿಗಳ ಬಾಡಿಗೆಯ ಕೋಟ್ಯಂತರ ರೂಪಾಯಿ ಯಾರ ವಶದಲ್ಲಿದೆ ಎಂಬುದನ್ನು ತಿಳಿಸಿ ಇದರ ಪರಭಾರೆಗೆ ಅನುವು ಮಾಡಿಕೊಡಲಿ*
ಸು ತ ರಾಮೇಗೌಡ

ಅರವತ್ತೈದು ವರ್ಷಗಳ ಹಿಂದೆ ಗಾಂಧೀಜಿಯವರ ಭೇಟಿಯ ನೆನಪಿಗಾಗಿ ನಿರ್ಮಾಣವಾಗಿರುವ ಈ ಸ್ಮಾರಕವನ್ನು ಶಾಶ್ವತವಾಗಿ, ಉತ್ಕೃಷ್ಟ ದರ್ಜೆಯಲ್ಲಿ ನಿರ್ಮಾಣ ಮಾಡುವತ್ತ ಸಂಬಂಧಿಸಿದವರು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಸ್ಮಾರಕ ಮತ್ತು ಜಾಗಕ್ಕೆ ಸಂಬಂಧಿಸಿದಂತೆ ಯಾರ ಬಳಿ ಯಾವ ದಾಖಲೆಗಳಿವೆ ಎಂಬುದನ್ನು ಜಾಹೀರುಗೊಳಿಸಲಿ*
*ಗೋ ರಾ ಶ್ರೀನಿವಾಸ...

ಸಂಪೂರ್ಣ ದಾಖಲೆ ಸಮೇತ ನಮ್ಮ ಇಲಾಖೆಗೆ ಹಸ್ತಾಂತರಿಸಿದರೆ ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತೇವೆ, ಹಸ್ತಾಂತರ ಮಾಡಿದ ಒಂದು ವಾರದಲ್ಲೇ ಅಸ್ತಿಭಾರ ಹಾಕುತ್ತೇವೆ.*
*ಶಂಕರಪ್ಪ, ಹಿರಿಯ ಸಹಾಯಕ ನಿರ್ದೇಕರು, ವಾರ್ತಾ ಮತ್ತು ಪ್ರಸಾರ ಇಲಾಖೆ, ರಾಮನಗರ.

ಸತ್ಯಾಗ್ರಹದಲ್ಲಿ ಲ್ಯಾಬ್ ಚಂದ್ರು, ಪತ್ರಕತ್ರರಾದ ಸು ನಾ ನಂದಕುಮಾರ್, ಕರೀಂ, ಸಾಧು ರಮೇಶ್, ಡಿ ಎಂ ಮಂಜುನಾಥ, ಅಭಿಲಾಸ್, ಮಂಜು ಎಲೆಕೇರಿ, ಕುಮಾರ್ ಮತ್ತು ಕೆಲವು ನಿವೃತ್ತ ನೌಕರರಾದ ಎಂ ಸಿ ಮಲ್ಲಯ್ಯ, ರೇವಣ್ಣ, ಬೆಟ್ಟಯ್ಯ ಶಿಕ್ಷಕ ವಸಂತಕುಮಾರ್, ಮಾತೃಭೂಮಿ ಮಹೇಶ್ ಸತ್ಯಾಗ್ರಹಕ್ಕೆ ಸಾಥ್ ನೀಡಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದರು.

*ಗೋ ರಾ ಶ್ರೀನಿವಾಸ...*
*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ
ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕ

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ
ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತ

ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ

ರಾಮನಗರ: ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರ

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

Top Stories »  


Top ↑