Tel: 7676775624 | Mail: info@yellowandred.in

Language: EN KAN

    Follow us :


ಒತ್ತುವರಿ ಮಾಡಿಯೂ ದಂಡ ಕಟ್ಟದ ಈಗಲ್ ಟನ್ ರೆಸಾರ್ಟ್, ಜಾಗ ವಶಕ್ಕೆ ಕ್ರಮ ಸಮಿತಿ

Posted Date: 05 Feb, 2020

ಒತ್ತುವರಿ ಮಾಡಿಯೂ ದಂಡ ಕಟ್ಟದ ಈಗಲ್ ಟನ್ ರೆಸಾರ್ಟ್, ಜಾಗ ವಶಕ್ಕೆ ಕ್ರಮ ಸಮಿತಿ

ರಾಮನಗರ: ಈಗಲ್ ಟನ್ ರೆಸಾರ್ಟ್‌ ನವರು ಸರ್ಕಾರಕ್ಕೆ ಸೇರಿದ ೨೦೮ ಎಕರೆ ಒತ್ತುವರಿ ಮಾಡಿಕೊಂಡಿದ್ದು, ದಂಡದ ಮೊತ್ತ ೯೮೦ ಕೋಟಿ ರೂಪಾಯಿಗಳನ್ನು ಇದುವರೆಗೂ ಪಾವತಿಸಿಲ್ಲ. ಈ ಬಗ್ಗೆ ಪರಿಶೀಲಿಸಿ ಸರ್ಕಾರದ ಜಾಗ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ ತಿಳಿಸಿದರು.


ಸರ್ಕಾರಿ ಜಮೀನು ಒತ್ತುವರಿ ಆರೋಪ ಎದುರಿಸುತ್ತಿರುವ ಬಿಡದಿ ಬಳಿಯ ಈ ರೆಸಾರ್ಟ್ಗೆ ಮಂಗಳವಾರ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.


ಒಟ್ಟು ೫೦೮ ಎಕರೆ ಜಾಗವಿದ್ದು, ಖಾಸಗಿ ಜಮೀನಿನ ಜೊತೆಗೆ ಸರ್ಕಾರದ ಜಮೀನು ಒತ್ತುವರಿ ಆಗಿರುವುದು ಸ್ಪಷ್ಟವಾಗಿದೆ. ಇದರಲ್ಲಿ ರೆಸಾರ್ಟ್ ನವರು ಸರ್ಕಾರಕ್ಕೆ ೨೮ ಎಕರೆ ಜಾಗ ಬಿಟ್ಟುಕೊಟ್ಟಿದ್ದಾರೆ. ಒತ್ತುವರಿಯಾದ ೭೭ ಎಕರೆಗೆ ದಂಡ ದಂಡದ ಮೊತ್ತ ನಿಗದಿ ಮಾಡಲು ಕೋಟ್೯ ಆದೇಶಿಸಿತ್ತು. ಪ್ರತಿಯಾಗಿ ೯೮೦ ಕೋಟಿ ಪಾವತಿಸುವಂತೆ ಸರ್ಕಾರ ನಿಗದಿ ಪಡಿಸಿತ್ತು.ಆದರೆ ದಂಡದ ಪ್ರಮಾಣ ಹೆಚ್ಚಾಗಿದೆ ಎಂದು ರೆಸಾರ್ಟ್ ನವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ೧೩ ತಿಂಗಳುಗಳಿಂದ ಅದರ ವಿಚಾರಣೆ ನಿಗದಿಯಾಗಿಲ್ಲ ಎಂದರು.


ಮತ್ತೊಂದೆಡೆ, ರೆಸಾರ್ಟ್ ನವರು ದಂಡವನ್ನೂ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರ ಜಾಗ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು.


ನ್ಯಾಯಾಲಯ ಹಾಗೂ ಸರ್ಕಾರಕ್ಕಿಂತ ಯಾರೂ ದೊಡ್ಡವರಲ್ಲ. ಜಮೀನು ವಶಕ್ಕೆ ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ ಸರ್ಕಾರವೇ ಅವರ ಪರವಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ. ಈ ಅನುಮಾನ ಬಗೆಹರಿಸುವ ಕೆಲಸ ಆಗಬೇಕಿದೆ ಎಂದರು.

ಒತ್ತುವರಿಯಾದ ಜಾಗದಲ್ಲಿ ಸರ್ಕಾರಿ ನಾಮಫಲಕ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಶಾಸಕರಾದ ರಮೇಶ್ ಕುಮಾರ್, ಕೆ ಜೆ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಶರವಣ, ನಾರಾಯಣಸ್ವಾಮಿ ಮತ್ತಿತರರು ತಂಡದಲ್ಲಿದ್ದರು.

ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ, ತಹಶಿಲ್ದಾರ್ ನರಸಿಂಹಮೂರ್ತಿ ಅವರು ಒತ್ತುವರಿ ಬಗ್ಗೆ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು
ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಕೊರೊನಾ ವೈರಸ್ ದಿನೇದಿನೇ ಹೆಚ್ಚಾಗುತ್ತಿರುವುದನ್ನು ನಿಧಾನವಾಗಿ ಅರ್ಥೈಸಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಯುವಕರು ಆರ

ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ
ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು/ರಾಮನಗರ:ಮಾ/೨೨/೨೦/ಭಾನುವಾರ. ನಾಳೆ ಅಂದರೆ ೨೩ ರ ಸೋಮವಾರ ದಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲಿಷ್ ಭಾಷೆಯ ಪರೀಕ್

ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ
ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ

ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ *ಪಾಪು* ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ *ಡಾ. ಪಾಟೀಲ ಪುಟ್ಟಪ

ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್
ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್

ಬೆಂಗಳೂರು: ಹಲವಾರು ದೇಶಗಳಲ್ಲಿ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ನಾಡಿಗೂ ಕಾಲಿಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ನಾಳೆಯ

ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ
ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ

ಚನ್ನಪಟ್ಟಣ: ಗಾಳಿ ಬೆಳಕು ಇಲ್ಲದ ಲಾರಿಯೊಂದರಲ್ಲಿ (ಕಂಟೇನರ್) ನಿಲ್ಲಲು ಜಾಗವಿಲ್ಲದಂತೆ ಒತ್ತೊತ್ತಾಗಿ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ತುಂಬಿದ ವಾ

ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು
ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು

ತಾಲ್ಲೂಕಿನ ಹದಿನೈದು ಸಾವಿರಕ್ಕೂ ಹೆಚ್ಚಿರುವ ಹೈನೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಮೂಲ್ ವತಿಯಿಂದ‌ ಈ ಭಾಗದ  ಹೈನುಗಾರಿಕೆಯ ರೈತರನ್ನು ಉತ್ತೇಜಿಸಲು ಹಾಗೂ ಒಂದೇ ಸೂರಿನಡಿ ಬಮೂಲ್ ಉತ್

ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ
ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ವು ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ರಾಜ್ಯ ಮತ್ತು ಅಂತರರಾಜ್ಯಗಳಿಂದಲೂ ಭಕ್ತಾಧಿಗ

*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*
*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*

ರಾಮನಗರ:ಫೆ/೧೩/೨೦/ಗುರುವಾರ.


ಬೈಕ್ ಗೆ ಖಾಸಗಿ ಗಾರ್ಮೇಂಟ್ಸ್ ವಾಹನ ಡಿಕ್ಕಿ ಹೊಡೆದಿದ್ದು ಢಿಕ್ಕಿ ಯ ರಭಸಕ್ಕೆ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೋರ್ವ ಯುವತಿ

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

Top Stories »  


Top ↑