Tel: 7676775624 | Mail: info@yellowandred.in

Language: EN KAN

    Follow us :


ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ ಬಳ್ಳಾರಿ ಸಂಸದ ನಾಸೀರ್ ಹುಸೇನ್

Posted Date: 08 Feb, 2020

ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ ಬಳ್ಳಾರಿ ಸಂಸದ ನಾಸೀರ್ ಹುಸೇನ್

ಚನ್ನಪಟ್ಟಣ: ಎನ್ ಡಿ ಎ ನೇತೃತ್ವದ ಕೇಂದ್ರ ಸರ್ಕಾರವು ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತಿರುವುದು ಸರಿಯಾದ ಕ್ರಮವಲ್ಲ, ಸಿಎಎ, ಎನ್ಆರ್ಸಿ, ಎನ್ಪಿಆರ್ ಕಾಯಿದೆಗಳನ್ನು ಶೀಘ್ರವಾಗಿ ಹಿಂಪಡೆಯಬೇಕು ಎಂದು ಬಳ್ಳಾರಿ ಮೂಲದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದರು. ಅವರು ಇಂದು ನಗರದಲ್ಲಿ ನಡೆದ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಮುಸ್ಲಿಂ ಸಮುದಾಯ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.


ನಮ್ಮ ದೇಶದ ಸುತ್ತ ಏಳು ವಿದೇಶಗಳಿದ್ದು, ಕೇವಲ ಮೂರು ವಿದೇಶಗಳ ನಾಗರೀಕರಿಗೆ ಮಾತ್ರ ಪೌರತ್ವ ನಿಷೇಧ ಹೇರಿರುವುದು ಎಷ್ಟು ಸರಿ. ಇದು ಧರ್ಮದ ವಿರುದ್ದ ನಡೆಸಿರುವ ಷಡ್ಯಂತ್ರ ಎಂದು ಆರೋಪಿಸಿದರು. ಎನ್ ಡಿ ಎ ಸರ್ಕಾರವು ಬಹುಮತ ಇದೆ ಎಂದು ಇಷ್ಟ ಬಂದಂತೆ ಕಾನೂನು ರೂಪಿಸುತ್ತಿದೆ. ಕಾನೂನು ತರಲು ಸಹಿ ಹಾಕಿದ ಮಿತ್ರ ಪಕ್ಷಗಳೇ ಇಂದು ಕಾನೂನನ್ನು ವಿರೋಧಿಸುತ್ತಿವೆ. ತಕ್ಷಣ ಈ ಕಾನೂನನ್ನು ಹಿಂತೆಗೆದುಕೊಳ್ಳಬೇಕು. ನಂತರ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ರೂಪಿಸಬೇಕೆಂದು ಸಲಹೆ ನೀಡಿದರು.


ಜನರಿಂದ, ಜನರಿಗಾಗಿ, ಜನರಿಗೋಷ್ಕರ ಪ್ರಜಾಪ್ರಭುತ್ವ ಇದು ಸಂವಿಧಾನದ ಆಶಯ. ಕಳ್ಳರಿಂದ, ಕಳ್ಳರಿಗಾಗಿ, ಕಳ್ಳರಿಗೋಷ್ಕರ ಇರೋದೆ ಬಿಜೆಪಿ ಸರ್ಕಾರ.

ಭಾರತೀಯರನ್ನು ಮೂರ್ಖರನ್ನಾಗಿ ಮಾಡಿದ್ದೇ ಮೋದಿಯ ಸಾಧನೆ,

೧೫ ಲಕ್ಷ ಅಕೌಂಟ್ ಗೆ ಮೊದಲ ಸುಳ್ಳು, ಜಮ್ಮು ಕಾಶ್ಮೀರ ೩೭೦ ನೇ ವಿಧಿ ತೆಗೆದು ಹಾಕಿದ್ದು, ನೋಟ್ ಬ್ಯಾನ್ ಮಾಡಿದ್ದು, ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಪ್ರಮಾಣ ವಚನ ಮಾಡಲು ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡಿದ್ದು ತ್ರಿವಳಿ ತಲಾಕ್ ನಿಷೇಧಿಸಿದ್ದು, ಏರ್ ಇಂಡಿಯಾ, ಬಿಎಸ್ಎನ್ಎಲ್, ಭಾರತ್ ಪೆಟ್ರೋಲಿಯಂ ಇಂತಹ ಕಂಪೆನಿಗಳನ್ನು ಮಾರುತ್ತಿದ್ದರೂ ನಾವು ಪ್ರತಿಭಟಿಸಲಿಲ್ಲ, ಆದರೆ ಪೌರತ್ವ ಕಾಯಿದೆಯನ್ನು ಜಾರಿಗೆ ತಂದಿರುವುದನ್ನು ಹಿಂಪಡೆಯುವ ತನಕ ನಾವು ವಿಶ್ರಮಿಸುವುದಿಲ್ಲ.


ಸ್ವಚ್ಛ ಭಾರತ, ಯೋಗ, ಫಿಟ್ ಇಂಡಿಯಾ ಎಲ್ಲವೂ ನಮ್ಮವೇ ಕಾರ್ಯಕ್ರಮ ಮಾತ್ರ ಬಿಜೆಪಿ, ಪೋಟೋ ಮೋದಿದು. ಎಂದು ಎಸ್ ಡಿ ಪಿ ಐ ನ ನ್ಯಾಷನಲ್ ಸೆಕ್ರೆಟರಿ ಯಾದ ಆಲ್ಫೋನ್ಸ್ ನೇರವಾಗಿ ದೂರಿದರು.


ಪ್ರಮೋದ್ ಮುತಾಲಿಕ್ ನಮ್ಮೆಲ್ಲರ ವಿರೋಧಿ, ಅವರಿಗೆ ದೇವರು ಆಶೀರ್ವದಿಸಲಿ, ಅವರ ಧರ್ಮ ಅವರಿಗೆ ಮೇಲು, ದೇಶಕ್ಕೆ ಬೇಕಾಗಿದ್ದು ಸಂವಿಧಾನ.

ಕಲ್ಲಡ್ಕ ಪ್ರಭಾಕರ್ ಭಟ್ಟರು ಗಲಾಟೆ ಮಾಡಿಯೇ ಬದುಕೋದು, ಕ್ರೈಸ್ತರ ದುಡ್ಡು ಆಗುತ್ತೆ, ಕ್ರೈಸ್ತರು ಆಗಲ್ಲ, ಚುನಾವಣೆ ಗೆದ್ದಿದ್ದೆ ಇವಿಎಂ ನಿಂದ, ಇವಿಎಂ ನಿಷೇಧಿಸುವ ತನಕ ಬಿಜೆಪಿಯ ಸರ್ಕಾರವೇ ಬರುತ್ತದೆ ಎಂದರು.


ಕೆಪಿಸಿಸಿ ಸದಸ್ಯ ನಿಜಾಮ್ ಫೌಜದಾರ್ ಮಾತನಾಡಿ ಸರ್ಕಾರದ ನೀತಿಗಳು ಸರಿಯಾಗಿಲ್ಲ, ಸಂವಿಧಾನವನ್ನು ತಿರುಚಿ, ಮನುವಾದವನ್ನು ತರಲೆತ್ನಿಸುತ್ತಿದ್ದಾರೆ, ಇದನ್ನು ಮೋದಿ, ಷಾ ಮತ್ತು ಅನಂತ ಕುಮಾರ ಹೆಗ್ಗಡೆ ಯವರ ಮಾತಿನಲ್ಲೇ ವ್ಯಕ್ತವಾಗುತ್ತಿದೆ.

ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಇಪ್ಪತ್ತು ವರ್ಷಗಳ ಕಾಲ ಶಾಸಕರಾಗಿದ್ದು ಕಾಂಗ್ರೆಸ್ ಸರ್ಕಾರದಿಂದ. ಇದುವರೆಗೂ ಅವರು ಬಂದು ನಮಗೆ ಮಾಹಿತಿ ನೀಡುತ್ತಿಲ್ಲ. ಅವರು ಬಹಿರಂಗವಾಗಿ ಬಂದು ಸಂವಿಧಾನದ ಪರವೋ ? ಆರ್ ಎಸ್ ಎಸ್ ಪರವೋ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.


ಪೌರತ್ವ ಎಂಬುದು ಧರ್ಮದ ಮತ್ತು ರಾಜಕೀಯ ಪಕ್ಷಗಳ ಸಮಸ್ಯೆ ಅಲ್ಲ, ಎಲ್ಲರೂ ಒಂದೇ ಕಡೆ ವಾಲಲಿ ಎಂದು ಮಾಡಿಕೊಂಡಿರುವ ಕಾನೂನು ಇದು. ಅಮಿತ್ ಷಾ ಅಸ್ಸಾಂ ಗೆ ಮಾತ್ರ ಎಂದು ಹೇಳಿದ್ದು ಈಗ ದೇಶಕ್ಕೆ ಗಂಡಾಂತರ ತಂದಿದ್ದಾರೆ, ದಲಿತನಿಂದ ಬ್ರಾಹ್ಮಣನವರೆಗೆ, ಎಲ್ಲಾ ಧರ್ಮಿಯರಿಗೂ ಈ ಕಾನೂನು ತೊಂದರೆಯಾಗಿದೆ, ಡಾ ಅಂಬೇಡ್ಕರ್ ಮೂರು ಪಿಎಚ್ಡಿ ಮಾಡಿದ್ದಾರೆ, ಇಂತಹ ವಿದ್ವಾಂಸರು ಬರೆದ ಸಂವಿಧಾನವನ್ನೇ ಬದಲಿಸಲು ಹೊರಟಿದ್ದಾರೆ, ಹಿಂದೂಸ್ಥಾನದಲ್ಲಿ ಎಲ್ಲರೂ ಒಂದೇ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಜನಾಬ್ ಜಮೀರ್ ಪಾಷ ಹೇಳಿದರು.


*ಇತಿಹಾಸ ನಿರ್ಮಿಸಿದ ಪ್ರತಿಭಟನೆ*


ಮುಸ್ಲಿಂ ಸಮುದಾಯದ ಪುರುಷರು ಮಾತ್ರ ಇದುವರೆಗೂ ಪ್ರತಿಭಟನೆ ನಡೆಸುತ್ತಿದ್ದು, ಇಂದು ಮುಸ್ಲಿಂ ಮಹಿಳೆಯರು ಸಹ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದ್ದು ಜಿಲ್ಲೆಯ ಮಟ್ಟಿಗೆ ಇತಿಹಾಸ ನಿರ್ಮಿಸಿತು.

ತಂಡೋಪತಂಡೋಪವಾಗಿ ಬಂದು ಫರ್ಹಾ ಶಾಲೆಯ ಬಳಿ ಹೆಂಗಸರು, ಗುರುಭವನದ ಆವರಣದಲ್ಲಿ ಗಂಡಸರು ಜಮಾಯಿಸಿದ್ದು ಸಾತನೂರು ವೃತ್ತ, ಷೇರು ಹೋಟೆಲ್ ಕಡೆಯಿಂದ ಪೆಟ್ಟಾ ಶಾಲೆಯ ಬಳಿ ಜಮಾಯಿಸಿ ಪ್ರತಿಭಟಿಸಿದರು.


ವೇದಿಕೆಯಲ್ಲಿ ಧರ್ಮಗುರು ಅಮಾನುಲ್ಲಾ, ಧರ್ಮಗುರು ಮೌಲಾನಾ ಮುಜೀಬ್ ರೆಹಮಾನ್,  ಜಬಿಉಲ್ಲಾಖಾನ್ ಘೋರಿ, ನಿಜಾಮ್ ಫೌಜದಾರ್, ಹಮೀಬುಲ್ಲಾ, ಅಹಮದ್ ಮುನಾವರ್, ಜಕೀ ಅಹಮದ್, ವಾಸೀಲ್ಅಲಿಖಾನ್, ಶರತ್ ಚಂದ್ರ, ಕೋಟೆ ಸಿದ್ದರಾಮಯ್ಯ ಇನ್ನಿತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು
ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಕೊರೊನಾ ವೈರಸ್ ದಿನೇದಿನೇ ಹೆಚ್ಚಾಗುತ್ತಿರುವುದನ್ನು ನಿಧಾನವಾಗಿ ಅರ್ಥೈಸಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಯುವಕರು ಆರ

ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ
ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು/ರಾಮನಗರ:ಮಾ/೨೨/೨೦/ಭಾನುವಾರ. ನಾಳೆ ಅಂದರೆ ೨೩ ರ ಸೋಮವಾರ ದಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲಿಷ್ ಭಾಷೆಯ ಪರೀಕ್

ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ
ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ

ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ *ಪಾಪು* ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ *ಡಾ. ಪಾಟೀಲ ಪುಟ್ಟಪ

ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್
ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್

ಬೆಂಗಳೂರು: ಹಲವಾರು ದೇಶಗಳಲ್ಲಿ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ನಾಡಿಗೂ ಕಾಲಿಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ನಾಳೆಯ

ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ
ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ

ಚನ್ನಪಟ್ಟಣ: ಗಾಳಿ ಬೆಳಕು ಇಲ್ಲದ ಲಾರಿಯೊಂದರಲ್ಲಿ (ಕಂಟೇನರ್) ನಿಲ್ಲಲು ಜಾಗವಿಲ್ಲದಂತೆ ಒತ್ತೊತ್ತಾಗಿ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ತುಂಬಿದ ವಾ

ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು
ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು

ತಾಲ್ಲೂಕಿನ ಹದಿನೈದು ಸಾವಿರಕ್ಕೂ ಹೆಚ್ಚಿರುವ ಹೈನೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಮೂಲ್ ವತಿಯಿಂದ‌ ಈ ಭಾಗದ  ಹೈನುಗಾರಿಕೆಯ ರೈತರನ್ನು ಉತ್ತೇಜಿಸಲು ಹಾಗೂ ಒಂದೇ ಸೂರಿನಡಿ ಬಮೂಲ್ ಉತ್

ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ
ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ವು ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ರಾಜ್ಯ ಮತ್ತು ಅಂತರರಾಜ್ಯಗಳಿಂದಲೂ ಭಕ್ತಾಧಿಗ

*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*
*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*

ರಾಮನಗರ:ಫೆ/೧೩/೨೦/ಗುರುವಾರ.


ಬೈಕ್ ಗೆ ಖಾಸಗಿ ಗಾರ್ಮೇಂಟ್ಸ್ ವಾಹನ ಡಿಕ್ಕಿ ಹೊಡೆದಿದ್ದು ಢಿಕ್ಕಿ ಯ ರಭಸಕ್ಕೆ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೋರ್ವ ಯುವತಿ

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

Top Stories »  


Top ↑