Tel: 7676775624 | Mail: info@yellowandred.in

Language: EN KAN

    Follow us :


ಪ್ರಯಾಣಿಕರಿಗೆ ಭೀತಿ ಮೂಡಿಸಿದ್ದ ಹೆದ್ದಾರಿ ದರೋಡೆಕೋರರ ಬಂಧನ

Posted Date: 11 Feb, 2020

ಪ್ರಯಾಣಿಕರಿಗೆ ಭೀತಿ ಮೂಡಿಸಿದ್ದ ಹೆದ್ದಾರಿ ದರೋಡೆಕೋರರ ಬಂಧನ

ಮಂಡ್ಯ: ಮೋಜು-ಮಸ್ತಿ ಮಾಡಲು ರಾತ್ರಿ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ೦೯ ಮಂದಿ ಆರೋಪಿಗಳು ಶ್ರೀರಂಗಪಟ್ಟಣ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.ಮೈಸೂರು ತಾಲ್ಲೂಕು ರಮ್ಮನಹಳ್ಳಿಯ ಯು. ಉಪೇಂದ್ರ (೧೯), ಕಿರಣ (೨೦), ಪ್ರತಾಪ್ (೨೩), ಮಾದಪ್ಪ (೨೧), ಎಂ.ಶೇಖರ (೨೮), ಅನೂಜ್ (೨೧), ಕಿರಣ (೨೦), ಮೈಸೂರಿನ ಗಾಂಧಿ ನಗರ ನಿವಾಸಿಗಳಾದ ರವಿಕುಮಾರ (೨೪), ಜಿ.ಶಿವಕುಮಾರ (೨೨) ಬಂಧಿತರು.


ಆರೋಪಿಗಳಿಂದ ೧೧ ಮೊಬೈಲ್ ಫೋನ್, ೧೪೦೦ ರೂ. ನಗದು, ಅಪರಾಧ ಕೃತ್ಯಕ್ಕೆ ಬಳಸುತ್ತಿದ್ದ ಕಾರು, ೨ ಸ್ಕೂಟರ್, ಮಾರಕಾಸ್ತ್ರ ಸೇರಿದಂತೆ ೨.೫೪ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.*ಶೋಕಿಲಾಲಾಗಳು:*

ಬಂಧಿತ ಆರೋಪಿಗಳು ಪೈಕಿ ಕೆಲವರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇನ್ನೂ ಕೆಲವರು ತರಕಾರಿ, ಹಣ್ಣು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದರು. ಮೋಜಿನ ಜೀವನ ನಡೆಸಲು ಹೆಚ್ಚು ಹಣ ಬೇಕಿದ್ದ ಕಾರಣ ಎಲ್ಲರೂ ಸೇರಿ ಬೆಂಗಳೂರು- ಮೈಸೂರು ಹೆದ್ದಾರಿ, ಹಾಸನ-ಮೈಸೂರು ಹೆದ್ದಾರಿ, ಮೈಸೂರು-ಅರಕೆರೆ ರಸ್ತೆ ಸೇರಿದಂತೆ ಹಲವೆಡೆ ದರೋಡೆ ನಡೆಸುತ್ತಿದ್ದರು.ಹಗಲಿನಲ್ಲಿ ವ್ಯಾಪಾರ, ಗಾರೆ ಕೆಲಸ ಮುಗಿಸಿ ರಾತ್ರಿ ವೇಳೆ ದರೋಡೆಗೆ ಸಂಚು ರೂಪಿಸುತ್ತಿದ್ದರು. ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಓಡಿ ಸುತ್ತಿದ ಗದ್ದರ್ ದತ್ ಸವಾಾರರುುುುುುುುುುು


ಹಲ್ಲೆ ಮಾಡಿ ಹಣ, ಚಿನ್ನಾಭರಣ, ಮೊಬೈಲ್ ಫೋನ್‌ಗಳನ್ನು ದೋಚುತ್ತಿದ್ದರು. ಇದರಿಂದ ಸಿಕ್ಕ ಹಣದಲ್ಲಿ ಶೋಕಿ ಮಾಡುತ್ತಿದ್ದೆವು. ಮೋಜು ಮಾಡಲು ಹಣ ಬೇಕಾಗಿದ್ದರಿಂದ ದರೋಡೆ ಮಾಡುತ್ತಿದ್ದೆವು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.*ಸಿಕ್ಕಿ ಬಿದ್ದದ್ದು ಹೇಗೆ?:*

ಫೆ.೫ರಂದು ಸಂಜೆ ೬.೩೦ರಲ್ಲಿ ಹಂಪಾಪುರ ಚೆಕ್‌ಪೋಸ್ಟ್ ಬಳಿ ಪಿಎಸ್‌ಐ ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನೀಲಿ ಬಣ್ಣದ ಕಾರಿನಲ್ಲಿದ್್ದದವ ರನ್ನು ಪರಿಶೀಲಿಸಿದಾಗ ಅದರಲ್ಲಿ ಲಾಂಗ್, ದೊಣ್ಣೆ ಇದ್ದದ್ದು ಕಂಡು ಬಂದಿದ್ದು ೬ ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಆಗ ದರೋಡೆ ಕೃತ್ಯ ನಡೆಸುತ್ತಿದ್ದೇವೆ ಎಂದು ಬಾಯಿ ಬಿಟ್ಟಿದ್ದಾರೆ. ಬಂಧಿತರು ನೀಡಿದ ಮಾಹಿತಿ ಮೇರೆಗೆ ಉಳಿದ ಮೂವರು ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ.*ಪ್ರಕರಣಗಳೇನು?:*

೨೦೨೦ ಜ.೨೧ರ ತಡರಾತ್ರಿ ೧.೩೦ರಲ್ಲಿ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಪಾಳ್ಯ ಗ್ರಾಮದ ಸ್ಮಶಾನದ ಬಳಿ ಶಿವನಸಮುದ್ರ-ಬನ್ನೂರು-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಗೂಡ್ಸ್ ವಾಹನವನ್ನು ತಡೆದು ದರೋಡೆ ನಡೆಸಿದ್ದರು. ವಾಹನದಲ್ಲಿದ್ದ ಕೆ.ಆರ್.ನಗರ ತಾಲ್ಲೂಕು ಭೇೇೇೇರ್ಯರ್ರ ಗ್ರಾಮದ ರಂಗನಾಥ, ವೆಂಕಟೇಶ, ಚಾಮರಾಜನಗರ ತಾಲ್ಲೂಕು ಕುಡ್ಲೂರಿನ ಚಾಲಕ ನಾಗೇಶ್‌ನನ್ನು ಲಾಂಗ್-ದೊಣ್ಣೆಗಳನ್ನು ತೋರಿಸಿ ಅಡಿಕೆ ವ್ಯಾಪಾರದಿಂದ ಬಂದಿದ್ದ ೧೧ ಸಾವಿರ ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಸಂಬAಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

೨೦೨೦ ಜ.೩೦ರ ರಾತ್ರಿ ೧೨.೧೦ರ ಸುಮಾರಿನಲ್ಲಿ ಮೈಸೂರು-ಅರಕೆರೆ ರಸ್ತೆ ಹಂಪಾಪುರ ಗ್ರಾಮದ ಕ್ರಾಸ್ ಬಳಿ ಮೈಸೂರಿನಿಂದ ಮಹದೇವಪುರ ಗ್ರಾಮಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ಚಂದ್ರಶೇಖರ, ಪುರುಷೋತ್ತಮ ಅವರನ್ನು ನಾಲ್ಕು ಮಂದಿ ದುಷ್ಕರ್ಮಿಗಳು ಬೆದರಿಸಿ ೯೮೦೦ ರೂ. ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದರು.

ಅಲ್ಲದೆ, ಅದೇ ದಿನ ಮೈಸೂರು ತಾಲ್ಲೂಕು ರಮ್ಮನಹಳ್ಳಿ ಬಳಿಯ ಮೈಸೂರು-ಮಹದೇವಪುರ ರಸ್ತೆಯಲ್ಲಿ ರಾತ್ರಿ ೧.೩೦ರ ಸುಮಾರಿನಲ್ಲಿ ಮೈಸೂರಿನ ಹಾಲಿನ ಡೇರಿಯಲ್ಲಿ ಉದ್ಯೋಗಿಯಾಗಿದ್ದ ಗೊಬ್ಬರಗಾಲ ನಿವಾಸಿ ಸಂಜಯ್ ಎಂಬುವವರನ್ನು ಅಡ್ಡಗಟ್ಟಿ ನಗದು, ಮೊಬೈಲ್ ಫೋನ್ ದೋಚಿದ್ದರು.

ಎರಡೂ ಪ್ರಕರಣದ ಆರೋಪಿಗಳ ಪತ್ತೆಗೆ ಎಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಶ್ರೀರಂಗಪಟ್ಟಣ ಡಿವೈಎಸ್ಪಿ ಅರುಣ್ ಎನ್.ನಾಗೇಗೌಡ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಸಿಪಿಐ ಕೆ.ವಿ.ಕೃಷ್ಣಪ್ಪ, ಅರಕೆರೆ ಪಿಎಸ್‌ಐ ಸಿ.ಚೌಡೇಗೌಡ, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪಿಎಸ್‌ಐ ಗಿರೀಶ್, ಕೆಆರ್.ಸಾಗರ ಪಿಎಸ್‌ಐ ಎಸ್.ಬಿ.ನವೀನ್‌ಗೌಡ, ಶ್ರೀರಂಗಪಟ್ಟಣ ಪಿಎಸ್‌ಐ ಮುದ್ದುಮಹದೇವ, ಎಎಸ್‌ಐ ಮಂಚಪ್ಪ, ಕುಮಾರ, ಕೃಷ್ಣಶೆಟ್ಟಿ, ರಾಜಶೇಖರ, ಮಂಜೇಗೌಡ, ಎಸ್.ಅರುಣ್‌ಕುಮಾರ, ರವೀಶ, ಎಸ್.ಎಸ್.ಚಂದ್ರ ಶೇಖರ, ದಿನೇಶ, ಕಿರಣ್ ಕುಮಾರ, ಚಾಲಕರಾದ ಪ್ರಕಾಶ, ನವೀನ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಸಿಬ್ಬಂದಿ ರವಿಕಿರಣ್, ಲೋಕೇಶ್, ಗೃಹರಕ್ಷಕದಳದ ಶ್ರೀನಿವಾಸ್ ಕಾರ್ಯಾಚರಣೆ ತಂಡದಲ್ಲಿ ದ್ದರು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಗೋ ರಾ ಶ್ರೀನಿವಾಸ...


ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು
ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಕೊರೊನಾ ವೈರಸ್ ದಿನೇದಿನೇ ಹೆಚ್ಚಾಗುತ್ತಿರುವುದನ್ನು ನಿಧಾನವಾಗಿ ಅರ್ಥೈಸಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಯುವಕರು ಆರ

ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ
ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು/ರಾಮನಗರ:ಮಾ/೨೨/೨೦/ಭಾನುವಾರ. ನಾಳೆ ಅಂದರೆ ೨೩ ರ ಸೋಮವಾರ ದಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲಿಷ್ ಭಾಷೆಯ ಪರೀಕ್

ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ
ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ

ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ *ಪಾಪು* ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ *ಡಾ. ಪಾಟೀಲ ಪುಟ್ಟಪ

ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್
ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್

ಬೆಂಗಳೂರು: ಹಲವಾರು ದೇಶಗಳಲ್ಲಿ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ನಾಡಿಗೂ ಕಾಲಿಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ನಾಳೆಯ

ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ
ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ

ಚನ್ನಪಟ್ಟಣ: ಗಾಳಿ ಬೆಳಕು ಇಲ್ಲದ ಲಾರಿಯೊಂದರಲ್ಲಿ (ಕಂಟೇನರ್) ನಿಲ್ಲಲು ಜಾಗವಿಲ್ಲದಂತೆ ಒತ್ತೊತ್ತಾಗಿ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ತುಂಬಿದ ವಾ

ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು
ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು

ತಾಲ್ಲೂಕಿನ ಹದಿನೈದು ಸಾವಿರಕ್ಕೂ ಹೆಚ್ಚಿರುವ ಹೈನೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಮೂಲ್ ವತಿಯಿಂದ‌ ಈ ಭಾಗದ  ಹೈನುಗಾರಿಕೆಯ ರೈತರನ್ನು ಉತ್ತೇಜಿಸಲು ಹಾಗೂ ಒಂದೇ ಸೂರಿನಡಿ ಬಮೂಲ್ ಉತ್

ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ
ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ವು ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ರಾಜ್ಯ ಮತ್ತು ಅಂತರರಾಜ್ಯಗಳಿಂದಲೂ ಭಕ್ತಾಧಿಗ

*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*
*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*

ರಾಮನಗರ:ಫೆ/೧೩/೨೦/ಗುರುವಾರ.


ಬೈಕ್ ಗೆ ಖಾಸಗಿ ಗಾರ್ಮೇಂಟ್ಸ್ ವಾಹನ ಡಿಕ್ಕಿ ಹೊಡೆದಿದ್ದು ಢಿಕ್ಕಿ ಯ ರಭಸಕ್ಕೆ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೋರ್ವ ಯುವತಿ

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

Top Stories »  


Top ↑