Tel: 7676775624 | Mail: info@yellowandred.in

Language: EN KAN

    Follow us :


ಮುಪ್ಪಿನಲ್ಲೂ ಮಾದರಿ ಜೀವನದ ಮುನ್ನುಡಿಯಲ್ಲಿ ಮಂಡ್ಯದ ನರಸಮ್ಮ

Posted Date: 11 Feb, 2020

ಮುಪ್ಪಿನಲ್ಲೂ ಮಾದರಿ ಜೀವನದ ಮುನ್ನುಡಿಯಲ್ಲಿ ಮಂಡ್ಯದ ನರಸಮ್ಮ

ಚನ್ನಪಟ್ಟಣ: ಸಣ್ಣಪುಟ್ಟ ಗಾಯಗಳಾದವರು, ಕೆಲ ಪೋಲಿಯೊ ಪೀಡಿತರು, ಕೆಲ ವಿಕಲಚೇತನರು, ವೃದ್ಧವೃದ್ದೆಯರು, ಒಟ್ಟಾರೆ ಸೋಮಾರಿಗಳು ಭಿಕ್ಷೆ ಬೇಡುವುದರಲ್ಲಿ ನಿಸ್ಸೀಮರು. ಇಂತಹ ಸೋಂಬೇರಿಗಳಿಗೆಲ್ಲ ಸಡ್ಡು ಹೊಡೆದು ಎಂಭತ್ತರ ಆಸುಪಾಸಿನ ವಯಸ್ಸಿನಲ್ಲಿಯೂ ಸ್ವಾಭಿಮಾನದಿಂದ ಊರೂರು ತಿರುಗಿ *ರಂಗೋಲಿ ಪುಡಿ (ಹುಡಿ) ಮಾರಿ ಜೀವನ ಸಾಗಿಸುತ್ತಿರುವ* ಈ ವೃದ್ದೆಯನ್ನು ತಮ್ಮ ಜೀವನದ ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳಬೇಕೆ ವಿನಹ ಯಾವುದೋ ಚಿತ್ರ ನಟನನ್ನೋ, ಉದ್ಯಮಿಯನ್ನೋ ಅಥವಾ ಹೊಲಸು ರಾಜಕಾರಣಿಯನ್ನೋ‌ ಅಲ್ಲಾ ಎಂಬುದು ಈ ವೃದ್ದೆಯ ಬದುಕನ್ನು ನೋಡಿದಾಗ ಅನ್ನಿಸುವುದರಲ್ಲಿ ಅನುಮಾನವೇ ಇಲ್ಲ.


ಈ ವೃದ್ದೆಯ ಹೆಸರು ನರಸಮ್ಮ. ಈಕೆ ಮಂಡ್ಯದ ಬಳಿ ಇರುವ ಚಿಕ್ಕಮಂಡ್ಯದ ಬಳಿಯ ಸಾತನೂರು (ಬೆಟ್ಟದ ಸಾತನೂರು) ಗ್ರಾಮದವರು.


ಈಕೆಯ ಗಂಡ ಮರಣ ಹೊಂದಿದ್ದು ನಲವತ್ತು ವರ್ಷಗಳ ಹಿಂದೆ. ಇದ್ದೊಬ್ಬ ಮಗನೂ ಸತ್ತು ಇಪ್ಪತ್ತನಾಲ್ಕು ವರ್ಷಗಳು ಸಂದಿವೆ, ಅವನ ಪುತ್ರನೂ ಸಹ ಎಂಟು ವರ್ಷದವನಿದ್ದಾಗಲೇ ಮರಣ ಹೊಂದಿದ್ದಾನೆ. ಇದ್ದೊಬ್ಬ ಸೊಸೆಯೂ‌ ತನ್ನ ಅತ್ತೆಯ ಬಿಟ್ಟು ಅಪ್ಪನ ಮನೆ ಸೇರಿಕೊಂಡಿದ್ದಾಳೆ.


ಇಂತಹ ಸಂದರ್ಭದಲ್ಲಿಯೂ ಸಹ ಈ ವೃದ್ದೆಯೂ ಎದೆ ಗುಂದದೆ, ಭಿಕ್ಷೆ ಬೇಡದೆ, ಸ್ವಾಭಿಮಾನಕ್ಕಾಗಿ ದುಡಿದು ತಿನ್ನುತ್ತಿರುವುದು ಇಂದಿನ ಯುವಕರಿಗೆ, ನಿರುದ್ಯೋಗಿಗಳಿಗೆ, ಡಿಗ್ರಿ ಪಡೆದಿದ್ದೇನೆಂಬ ಅಹಂಕಾರದಿಂದ ಇಂತಹದೇ ಕೆಲಸ ಬೇಕೆಂದು‌, ಯಾವ ಕೆಲಸವೂ ಮಾಡದಿರುವವರಿಗೆಲ್ಲರಿಗೂ ಈ ಅಮ್ಮ ಮಾದರಿಯಾಗಿದ್ದಾರೆ.


ಮಂಡ್ಯದ ತನ್ನ ಊರಿನ ಬೆಟ್ಟದ ತಪ್ಪಲಿನಲ್ಲಿ ರಂಗೋಲಿ ಕಲ್ಲನ್ನು ಪುಡಿ ಮಾಡಿಸಿಕೊಂಡು ಊರು‌ಕೇರಿ ತಿರುಗಿ ಸಂಪ್ರದಾಯ ಗೃಹಿಣಿಯರ ಮನವೊಲಿಸಿ ರಂಗೋಲಿ ಮಾರಿ‌ ತನ್ನ ಜೀವನವನ್ನು ಯಾರ ಹಂಗಿಲ್ಲದೆಯೂ ಈ ಇಳಿವಯಸ್ಸಿನಲ್ಲೂ ಸ್ವಾಭಿಮಾನದಿಂದ ಸಾಗಿಸುತ್ತಿರುವುದು ಇಂದಿನ ಪೀಳಿಗೆಗೆ ಹಾಗೂ ಸೋಂಬೇರಿಗಳಿಗೆ ಮಾದರಿಯಾಗಿದ್ದಾರೆ.


ಇವರನ್ನು ಕಂಡು ಪೋಟೋ ತೆಗೆದು, ಮಾತನಾಡಿ ಮಾಹಿತಿ ಕಲೆ ಹಾಕಿ, ಸಹಾಯ ಹಸ್ತ ಚಾಚಿದ ವಿಜಯಕುಮಾರ್ ಗುಲೇಚಾ (ವನಿತಾ ಸ್ಯಾರಿ) ಅವರಿಗೂ‌ ಯುವಕರಿಗೆ ಮಾದರಿಯಾದ ಮಂಡ್ಯದ ನರಸಮ್ಮನವರಿಗೂ ಮನಸಾರೆ ವಂದಿಸುವುದರ ಜೊತೆಗೆ ಇಂತಹ ವಯೋವೃದ್ದರು ಬದುಕಿಗಾಗಿ ಹೋರಾಟ ಮಾಡಿ ಜೀವನಕ್ಕಾಗಿ‌ ವ್ಯಾಪಾರ ಮಾಡುತ್ತಾ ತಮ್ಮ ಬಳಿಗೆ ಬಂದಾಗ ಚೌಕಾಸಿ ಮಾಡದೇ ಖರೀದಿಸಿ ಅವರ ಸ್ವಾಭಿಮಾನದ ಜೀವನಕ್ಕೆ ಸ್ಪಂದಿಸಿರಿ ಎನ್ನುವ...


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು
ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಕೊರೊನಾ ವೈರಸ್ ದಿನೇದಿನೇ ಹೆಚ್ಚಾಗುತ್ತಿರುವುದನ್ನು ನಿಧಾನವಾಗಿ ಅರ್ಥೈಸಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಯುವಕರು ಆರ

ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ
ನಾಳೆ ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು/ರಾಮನಗರ:ಮಾ/೨೨/೨೦/ಭಾನುವಾರ. ನಾಳೆ ಅಂದರೆ ೨೩ ರ ಸೋಮವಾರ ದಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲಿಷ್ ಭಾಷೆಯ ಪರೀಕ್

ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ
ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ

ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ *ಪಾಪು* ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ *ಡಾ. ಪಾಟೀಲ ಪುಟ್ಟಪ

ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್
ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್

ಬೆಂಗಳೂರು: ಹಲವಾರು ದೇಶಗಳಲ್ಲಿ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ನಾಡಿಗೂ ಕಾಲಿಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ನಾಳೆಯ

ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ
ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ

ಚನ್ನಪಟ್ಟಣ: ಗಾಳಿ ಬೆಳಕು ಇಲ್ಲದ ಲಾರಿಯೊಂದರಲ್ಲಿ (ಕಂಟೇನರ್) ನಿಲ್ಲಲು ಜಾಗವಿಲ್ಲದಂತೆ ಒತ್ತೊತ್ತಾಗಿ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ತುಂಬಿದ ವಾ

ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು
ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು

ತಾಲ್ಲೂಕಿನ ಹದಿನೈದು ಸಾವಿರಕ್ಕೂ ಹೆಚ್ಚಿರುವ ಹೈನೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಮೂಲ್ ವತಿಯಿಂದ‌ ಈ ಭಾಗದ  ಹೈನುಗಾರಿಕೆಯ ರೈತರನ್ನು ಉತ್ತೇಜಿಸಲು ಹಾಗೂ ಒಂದೇ ಸೂರಿನಡಿ ಬಮೂಲ್ ಉತ್

ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ
ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ವು ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ರಾಜ್ಯ ಮತ್ತು ಅಂತರರಾಜ್ಯಗಳಿಂದಲೂ ಭಕ್ತಾಧಿಗ

*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*
*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*

ರಾಮನಗರ:ಫೆ/೧೩/೨೦/ಗುರುವಾರ.


ಬೈಕ್ ಗೆ ಖಾಸಗಿ ಗಾರ್ಮೇಂಟ್ಸ್ ವಾಹನ ಡಿಕ್ಕಿ ಹೊಡೆದಿದ್ದು ಢಿಕ್ಕಿ ಯ ರಭಸಕ್ಕೆ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೋರ್ವ ಯುವತಿ

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

Top Stories »  


Top ↑