Tel: 7676775624 | Mail: info@yellowandred.in

Language: EN KAN

    Follow us :


ನಾನೇ ಕಿಂಗ್ : ಎಚ್.ಡಿ. ಕುಮಾರಸ್ವಾಮಿ

Posted Date: 09 Apr, 2018

ನಾನೇ ಕಿಂಗ್ : ಎಚ್.ಡಿ. ಕುಮಾರಸ್ವಾಮಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಕುಮಾರಸ್ವಾಮಿ ಅಪ್ಪಣಾಣೆಗೂ ಸಿಎಂ ಆಗಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈಗ ನಾನು ಹೇಳುತ್ತಿದ್ದೇನೆ ಅವರಪ್ಪನಾಣೆಗೂ ಚಾಮುಂಡಿ ಕ್ಷೇತ್ರದಲ್ಲಿ ಅವರು ಗೆಲ್ಲಲಾರರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾತನಾಡಿ, ಕುತಂತ್ರ ಹಾಗೂ ಅಸಂಬದ್ಧ ರಾಜಕೀಯ ಮಾಡುವುದರಲ್ಲಿಯೇ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರಿಗೆ ಸಾರ್ವಜನಿಕ ಜೀವನದಲ್ಲಿ ಹೇಗೆ ಮಾತನಾಡಬೇಕೆನ್ನುವುದೇ ಇನ್ನೂ ತಿಳಿದಿಲ್ಲ. ರಾಜಕೀಯವನ್ನು ರಾಜಕೀಯವಾಗಿಯೇ ನೋಡಬೇಕೆ ವಿನಃ, ಅಪ್ಪ, ಅಮ್ಮ ಎನ್ನುತ್ತ ವೈಯಕ್ತಿಕ ವಿಷಯ ತರಬಾರದು. ಕೀಳುಮಟ್ಟದ ರಾಜಕೀಯಕ್ಕೆೆ ಹೆಸರಾಗಿರುವ ಸಿದ್ದರಾಮಯ್ಯರಿಗೆ ಜೆಡಿಎಸ್‌ನಿಂದ ಸೋಲಿನ ಭೀತಿ ಎದುರಾಗಿದೆ. ಮಾತಿನ ಮೂಲಕವಾದರೂ ಜೆಡಿಎಸ್‌ನ್ನು ಕುಗ್ಗಿಿಸಬಹುದು ಎಂದುಕೊಂಡಿದ್ದಾಾರೆ. ಅದಕ್ಕಾಾಗಿ ಪದೇ ಪದೇ ಕುಮಾರಸ್ವಾಮಿ ಅಪ್ಪನಾಣೆ ಹಾಕುತ್ತ ತಿರುಗಾಡುತ್ತಿದ್ದಾರೆ. ಅವರಿಗೆ ಗೆಲ್ಲುವ ಸಾಮರ್ಥ್ಯವಿದ್ದರೆ ಚಾಮುಂಡಿ ಕ್ಷೇತ್ರದಲ್ಲಿ ಗೆದ್ದುಬರಲಿ ನೋಡೋಣ. ಅವರಪ್ಪನಾಣೆಗೂ ಅವರು ಅಲ್ಲಿ ಗೆಲ್ಲಲಾರರು. ಬೇಕಾದರೆ ಅವರು ಈ ಸವಾಲನ್ನು ಸ್ವೀಕರಿಸಿ ಎಂದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವಷ್ಟೇ ಅಲ್ಲ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸ್ಪರ್ಧಿಸಲಿ. ನಾವು ಅಲ್ಲಿಯೂ ಅವರ ವಿರುದ್ಧ ತೊಡೆತಟ್ಟುತ್ತೇವೆ. ಈವರೆಗೆ ನಮ್ಮದು ಕೇವಲ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದಷ್ಟೇ ಪ್ರಮುಖವಾಗಿತ್ತು. ಪದೇ ಪದೇ ಅಪ್ಪನಾಣೆ ಹಾಕುವ ಮೂಲಕ ಸಹನೆಯನ್ನು ಪರೀಕ್ಷಿಿಸುತ್ತಿದ್ದಾರೆ. ಇದೀಗ ನಾವು ಸಹ ಸಿದ್ಧವಾಗಿದ್ದು, ನಮ್ಮ ಅಭ್ಯರ್ಥಿಗಳ ಗೆಲುವಿನ ಜತೆಗೆ ಅವರನ್ನು ಹಾಗೂ ಕಾಂಗ್ರೆೆಸ್ ಅಭ್ಯರ್ಥಿಗಳನ್ನು ಸೋಳಿಸುವುದು ನಮ್ಮ ಧ್ಯೇಯವಾಗಿದೆ. ಬೇಕಾದರೆ ಅವರು ನಮ್ಮ ವಿರುದ್ಧ ಸೆಣಸಾಡಲಿ. ಜೆಡಿಎಸ್ ತಾಕತ್ತು ಏನೆಂಬುದು ಈ ಚುನಾವಣೆಯಲ್ಲಿ ರಾಜ್ಯದ ಜನತೆ ಮೂಲಕ ಅವರಿಗೆ ಅರಿವು ಮಾಡಿಸಿಕೊಡುತ್ತೇವೆ ಎಂದರು.

ಬಿಎಸ್ಪಿ ಹಾಗೂ ಜೆಡಿಎಸ್ ಪಕ್ಷಗಳು ಜೊತೆಗೂಡಿ ಸ್ಪರ್ಧಿಸಲಿದ್ದು, 20 ಕ್ಷೇತ್ರಗಳಲ್ಲಿ ಬಿಎಸ್ಪಿ ಸ್ಪರ್ಧೆ ಮಾಡಲಿದೆ. ಬಿಎಸ್ಪಿ ಮುಖ್ಯಸ್ಥೆೆ ಮಾಯಾವತಿ ರಾಜ್ಯಕ್ಕೆ ಆಗಮಿಸುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ದಿನಾಂಕ ಅಂತಿಮವಾದ ಮೇಲೆ ರಾಯಚೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಭಾಗಗಳಲ್ಲಿ ಅವರ ಜತೆ ಎಚ್.ಡಿ. ದೇವೇಗೌಡರು ಸಾರ್ವಜನಿಕ ಸಮಾವೇಶ ನಡೆಸಲಿದ್ದಾಾರೆ. ಹಾಗಂತ ಬಿಎಸ್ಪಿ ಜತೆ ಜೆಡಿಎಸ್ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಎರಡೂ ಪಕ್ಷಗಳು ನೇರ ಚುನಾವಣೆ ಎದುರಿಸಲಿದೆ ಎಂದರು.

ನಾನೇ ಕಿಂಗ್!
ನಾನು ಯಾವತ್ತೂ ಕಿಂಗ್ ಮೇಕರ್ ಆಗಲ್ಲ, ಕಿಂಗ್ ಆಗುತ್ತೇನೆ. ಹಳೆ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಸುಮಾರು 75ಕ್ಕೂ ಅಧಿಕ ಸ್ಥಾನದಲ್ಲಿ ಗೆಲ್ಲುವ ಭರವಸೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ 45 ಕ್ಕೂ ಅಧಿಕ ಸ್ಥಾನ ಗೆದ್ದೇ ಗೆಲ್ಲುತ್ತೇವೆ. ರಾಜ್ಯದಲ್ಲಿ ಒಟ್ಟು 113 ಸ್ಥಾನ ಗೆಲ್ಲುವ ವಿಶ್ವಾಸವಿದ್ದು, ಸ್ವತಂತ್ರವಾಗಿ ಅಧಿಕಾರಕ್ಕೆೆ ಬರುತ್ತೇವೆ. ಕಾಂಗ್ರೆೆಸ್ ಹಾಗೂ ಬಿಜೆಪಿ ಸೋಲಿಸಲು ನಾವು ಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವುದಷ್ಟೇ ನಮ್ಮ ಗುರಿ ಎಂದು ಕುಮಾರಸ್ವಾಮಿ ಹೇಳಿದರು.

(ಸಂಗ್ರಹ ವರದಿ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ
ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕ

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ
ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತ

ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ

ರಾಮನಗರ: ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರ

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

Top Stories »  


Top ↑