Tel: 7676775624 | Mail: info@yellowandred.in

Language: EN KAN

    Follow us :


ದುಡ್ಡು ಪೀಕುವ ಕೆಲವು ಪತ್ರಕರ್ತರು, ಅವರನ್ನು ಭ್ರಷ್ಟರನ್ನಾಗಿಸುತ್ತಿರುವ ರಾಜಕಾರಣಿಗಳು.

Posted Date: 20 Apr, 2018

ದುಡ್ಡು ಪೀಕುವ ಕೆಲವು ಪತ್ರಕರ್ತರು, ಅವರನ್ನು ಭ್ರಷ್ಟರನ್ನಾಗಿಸುತ್ತಿರುವ ರಾಜಕಾರಣಿಗಳು.

ಮಾನ್ಯರೇ,

ಈಗ ಚುನಾವಣೆಯು ಬಾಗಿಲಿಗೆ ಬರುತ್ತಿದೆ. ಸ್ಪರ್ಧಾಳುಗಳಾಗುವವರೆಲ್ಲ ರನ್ನೂ ಇಂದ್ರ-ಚಂದ್ರ ಎಂದು ಹೊಗಳುವ ಕಾಲ ಹತ್ತಿರವಾಗುತ್ತಿದೆ. ನಿಮ್ಮಲ್ಲಿರುವ ಒಂದು ಮುಖವಷ್ಟೇ ಅನಾವರಣ ಆಗ ಬಹುದು. ನೀವು ಹೊಗಳುವವರನ್ನು ಸರಿಯಾಗಿ ಗಮನಿಸದೇ ಹೋದರೆ, ನಿಮ್ಮ ಇನ್ನೊಂದು ಮುಖದ ಬಗ್ಗೆ ಬೆಳಕು ಚೆಲ್ಲಿ ನೀವು ವಿಚಲಿತರಾಗುವಂತೆ ಮಾಡುವ ಮಂದಿಯೂ ಬರಬಹುದು.

ಇಂತಹ ವಿಷಯಗಳನ್ನು ಪ್ರಸ್ತಾಪಿಸಿ ದಾಗ, ಯಾಕೆ ಬೇಕು ಎಂದು, ಹಾಗೆ ಬರೆ ಯುವವರನ್ನು ಸಂತೃಪ್ತಿಪಡಿಸಿ ಅವರನ್ನೇ ಸದ್ದಿಲ್ಲದ ರೀತಿಯಲ್ಲಿ ಮಾಡಬಹುದಾದ ಮನಸ್ಸು ನಿಮಗೂ ಸಹ ಬರಬಹುದು. ಹಾಗಾಗಿ ಹುಳುಕು ಮುಚ್ಚಿಕೊಳ್ಳಲು ನೀವು ಆ ರೀತಿ ಬರೆಯುವ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮ ಮಂದಿಯ ಕೈ ಬೆಚ್ಚಗೆ ಮಾಡಿ ಅವರನ್ನು ಓಲೈಸಿಕೊಳ್ಳಲು ಯತ್ನಿಸಬಹುದು.

ಇದು ಚುನಾವಣೆಯ ಹೊತ್ತಿಗೆ ಮಾತ್ರ ಸೀಮಿತವಾಗದೆ, ಅದೊಂದು ಸಂಪ್ರದಾಯವಾಗಿ ಬಿಡಬಹುದು ಆಮೇಲೆ ನಿರಂತರವಾಗಿ ನಿಮ್ಮನ್ನು ಸುಲಿಗೆ ಮಾಡುವ ಪರಿಪಾಠವೂ ಸಹ ಬೆಳೆಯಬಹುದಾದ ಸಾಧ್ಯತೆಯು ಬರಬಹುದು.

ಈಗ ಮುದ್ರಣ ಮಾಧ್ಯಮಕ್ಕೂ ದುಸ್ಥಿತಿಯು ಹೆಗಲು ಏರಿದೆ, ಕಾಸಿ ಗಾಗಿ ಸುದ್ದಿ ಬರೆಯುವ ಪ್ರವೃತ್ತಿ ಶುರುವಾಗಿದೆ. ಹಣ ಹಂಚಿದರೆ ಎಂತಹ ಅದ್ಭುತವಾದ ಭಾಷೆಯ ಮೂಲಕ ಹೊಗಳುವ ಮಂದಿಗೇನೂ ಕಡಿಮೆ ಇಲ್ಲ. (4ನೇ ಪುಟಕ್ಕೆ) 

ಇವತ್ತಿಗೂ ಸಹ ಮಾಧ್ಯಮಗಳು ಹಾಗೂ ನ್ಯಾಯಾಂಗ ಗೌರವವನ್ನು ಉಳಿಸಿಕೊಂಡಿವೆ ಎಂಬ ಭಾವನೆಯು ಇದೆ. ಅದು ಎಷ್ಟರ ಪ್ರಮಾಣದ್ದು ಎಂದು ನಾನು ಇಲ್ಲಿ ವಿಶ್ಲೇ  ಷಣೆ ಮಾಡಲು ಹೋಗು ವುದಿಲ್ಲ. ಈಚಲಮರದ ಕೆಳಗೆ ಕುಳಿತು ಮಜ್ಜಿಗೆ ಯನ್ನು ಕುಡಿದರೂ ಸಹ ಅದು ಹೆಂಡ ಕುಡಿದಂತೆಯೇ ಆಗುವುದು. 

ಈಗದೊಡ್ಡ ದೊಡ್ಡ ನಗರಗಳಿಂದ ಮೊದಲ್ಗೊಂಡು ಸಣ್ಣ ಸಣ್ಣ ಪಟ್ಟಣಗಳ ವರೆಗೂ ಮಾಧ್ಯಮಗಳಲ್ಲಿ ಕೆಲಸ ಮಾಡುವವರ ಬಗ್ಗೆ ಅಪಸ್ವರಗಳು ಇವೆ. ಜನ ಸಾಮಾನ್ಯರೂ ಸಹ ಕಾಸು ಕೊಟ್ಟರೆ ಅವರು ಏನು ಬೇಕಾದರೂ ಬರೆಯು ತ್ತಾರೆ ಎಂಬ ಅಭಿಪ್ರಾಯ ಬಂದಿರುವುದು. ಅದನ್ನು ಹೋಗಲಾಡಿಸದೇ ಹೋದರೆ, ಈ ಒಂದು ಮಾಧ್ಯ ಮವೂ ಸಹ ಭ್ರಷ್ಟತೆಯ ಪಟ್ಟಿಯೊಳಗೆ ಕೇವಲ ಅಡಗಿ ಕುಳಿತುಕೊಳ್ಳು ವುದಷ್ಟೇ ಅಲ್ಲ, ಸಾರ್ವತ್ರಿ ವಾಗಿ ಹರಿದಾಡುವ ಸಂದ ರ್ಭಗಳು ಜಾಸ್ತಿಯಾಗು ತ್ತದೆ.

ಕೆಲವು ಪತ್ರಕರ್ತರು ಕೂಟ ಕಟ್ಟಿ ಕೊಂಡು ಒಂದೂವರೆಯಷ್ಟು 2ರಷ್ಟು ಹೆಸರು ಹಾಗೂ ಪಟ್ಟಿ ನೀಡಿ, ಎಲ್ಲರ ಹಣ ಸಂಗ್ರಹ ಮಾಡಿಕೊಂಡು ಹಂಚಿ ಕೊಳ್ಳುವ ಪರಿಪಾಠ ಶುರುವಾಗಿದೆ.

ರಾಜಕೀಯದವರನ್ನು ಯಾರಾದರೂ ಕೇಳಿದರೆ ಅವರಿಗೆ ಕಪ್ಪ-ಕಾಣಿಕೆ ಕೊಟ್ಟಿಲ್ಲ ಅದಕ್ಕಾಗಿಯೇ ಅವರು ಸುತ್ತಾಡುತ್ತಾರೆ ಎಂದು ಜೋರು ಧ್ವನಿಯಲ್ಲಿ ಹೇಳುವ ಕೆಲಸವೂ ನಡೆ ಯುತ್ತದೆ.

ಇಂತಹವೆಲ್ಲವೂ ಅಸಹ್ಯ ವೆನ್ನಿಸುತ್ತವೆ, ಆದರೂ ಕೂಡ ಹಣ ಸಿಗುತ್ತದೆ ಎಂದರೆ ಗೋಷ್ಠಿಗಳಿಗೆ ಮಹತ್ವ ನೀಡುವ, ಇಲ್ಲದಿ ದ್ದರೆ, ಅದಾವ ಪತ್ರಿಕಾ ಗೋಷ್ಠಿ ಬಿಸ್ಕೆಟ್ ಎಸೆದು ಬಾಳೆಹಣ್ಣು ಕೊಟ್ಟು ಕಳು ಹಿಸುತ್ತಾರೆ ಎನ್ನುವ ಒಂದು ಪರಿಪಾಠವೂ ಸಹ ಬೆಳೆದಿದೆ.

ದಯಮಾಡಿ ನಮ್ಮ ಪತ್ರಿಕೆಯ ಹೆಸರು ಹೇಳಿ ಕೇಳಿದರೆ ಕೊಡಬೇಡಿ

ಮಾನ್ಯ ರಾಜಕಾರಣಿಗಳೇ, ಗೋಷ್ಠಿಯ ಮೂಲಕ ಅತಿ ಯಾದ ಪ್ರಚಾರ ಪಡೆಯುವ ಬಯಕೆ ಹೊತ್ತವರೇ, ನಮ್ಮ ಪತ್ರಿಕೆಯ ಪರವಾಗಿ ಗೋಷ್ಠಿಗೆ ಬಂದವರು ಹಣ ಕೇಳಿದರೆ ದಯಮಾಡಿ ಕೊಡಬೇಡಿ.

ಆ ಲೆಕ್ಕ ನೋಡಿದರೆ ಸಮಯ ಸಂದರ್ಭ ಬಂದಾಗ ನೀವು ಮಿಂಚುವ ಸಲು ವಾಗಿ ಹಣ ನೀಡುತ್ತೀರಿ. ಒಂದು ಸಾರಿ ಎಂದು ನೀಡಿದ ಆ ಕಾಣಿಕೆಯು ಆಮೇಲೆ ಕೊಡಲೇ ಬೇಕು ಎಂಬ ಕಡ್ಡಾಯವಾದ ಕ್ರಿಯೆಯಾ ಗುತ್ತದೆ.

ಚುನಾವಣೆಯ ಹೊತ್ತಿ ನಲ್ಲಿ ನಿಮ್ಮ ಪರವಾಗಿ ಫ್ಯೂಚರ್ ಬರೆಯು ತ್ತೇವೆ. ಎಲ್ಲರೂ ಒಟ್ಟಾಗಿ ಬರೆಯು ತ್ತೇವೆ ಎಂದು ಗುಂಪು ಬರವಣಿಗೆಯೂ ಕಪ್ಪ ವಸೂಲಿ ಮಾಡು ವುದೂ ನಡೆಯುತ್ತಿದೆ.

ಕಳೆದ 5ವರ್ಷದ ಹಿಂದಿನ ಚುನಾವಣೆಯಲ್ಲಿ ನಮ್ಮ ಪತ್ರಿಕೆಯ ವರ ವರದಿಗಾರ ರಾಗಿದ್ದವರೂ ಸೇರಿ ತಲಾ 50ಸಾವಿರ ಹಣ ಸಂಗ್ರಹ ಮಾಡಿ ಹಂಚಿಕೊಂಡಿದ್ದಾರೆ. ಈ ಪ್ರಮಾಣ ಈ ಸಾರಿ ಇನ್ನೂ ಜಾಸ್ತಿ ಯಾಗಬಹುದಾಗಿದೆ.

ನಿಮಗೆ ಆತ್ಮಗೌರವ ಇಲ್ಲ ಎಂದು ಎಲ್ಲರನ್ನೂ ಆತ್ಮ ಗೌರವ ವಿಲ್ಲದವರ ರೀತಿಯಲ್ಲಿ ಮಾಡುವುದು ಅಕ್ಷಮ್ಯ.ಇದನ್ನು ನಿಲ್ಲಿಸಿ.

ಪ್ರಾಯೋಜಿತವಾದ ಸುದ್ದಿಗಾಗಿ ಹಣ ಸಂಗ್ರಹ ಮಾಡುವ ಕೆಲಸವೂ ಸಹ ಆಗಬಹುದು. ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಇಲ್ಲ ನಾನು ಅದೇ ಮಾಡುವುದು. ಯಾರಿಂದಲೋ ಹೊಡೆದು ಅದರಲ್ಲಿ ಒಂದಂಶವನ್ನು ಬೇರೆಯವರಿಗೂ ಹಂಚು ತ್ತೇನೆ ಎಂದು ಮೊಂಡು ಬಿದ್ದರೆ ನಿಮ್ಮ ಹಣೆಯ ಬರಹವೇ ಅಷ್ಟು ಎಂದು ನಾವು ಸುಮ್ಮನಾಗಬೇಕಾಗು ತ್ತದೆ. ಆ ರೀತಿಯಲ್ಲಿ ನೀವು ನಡೆದುಕೊಂಡರೆ ಅದಕ್ಕೆ ನಾವು ಏನು ಹೇಳಲು ಸಾಧ್ಯ ವಾದೀತು. ಕೊಟ್ಟವನು ಕೋಡಂಗಿ ಪಡೆದ ವನು ವೀರಭದ್ರ ಎಂದು ಸುಮ್ಮ ನಾಗುವುದು ಒಳಿತು ಎಂದು ಭಾವಿಸಬೇಕಾಗುತ್ತದೆ.

ಈ ಬರಹವನ್ನು ಓದಿದ ನಮ್ಮ ಉದ್ಯಮದ ಸ್ನೇಹಿ ತರೂ ಸಹ ನಮ್ಮನ್ನು ಮೂರು ಮೂಲೆ ಕೂಡಿದ ಜಾಗದಲ್ಲಿ ತಮಗೆ ಇಷ್ಟ ಬಂದ ರೀತಿಯಲ್ಲಿ ಟೀಕಿಸ ಬಹುದಾಗಿದೆ. ಇಂತಹ ಟೀಕೆಗೆ ನಾವು ಸೊಪ್ಪು ಹಾಕುವುದಿಲ್ಲ. 

ಮನುಷ್ಯ ಅಬ್ಬಬ್ಬಾ ಎಂದರೆ, 100 ವರ್ಷ ಬದುಕಬಹುದು. ಅದಾದ ನಂತರ ಎಲ್ಲವನ್ನು ಬಿಟ್ಟು ಇಲ್ಲಿಂದ ನಿರ್ಗಮಿಸಲೇ ಬೇಕಾಗಿದೆ. ಇದಕ್ಕಾಗಿ ನಾವು ಏನೆಲ್ಲಾ ಮಾಡಬೇಕೊ ಅದೆಲ್ಲವನ್ನು ಮಾಡುತ್ತಾ ಆತ್ಮಗೌರವವನ್ನು ಕಳೆದು ಕೊಳ್ಳುವುದು ಎಷ್ಟು ಸರಿಯಾದೀತು? ಇಂತಹ ವನ್ನು ನೋಡುವುದು ನಮ್ಮ ದುರದೃಷ್ಟ.

-ಸು.ತ. ರಾಮೇಗೌಡ

ಹಿರಿಯ ಪತ್ರಕರ್ತರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ
ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕ

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ
ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತ

ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ

ರಾಮನಗರ: ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರ

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

Top Stories »  


Top ↑