Tel: 7676775624 | Mail: info@yellowandred.in

Language: EN KAN

    Follow us :


ನಾವು ಯಾವ ಪಾಪ ಮಾಡಿದ್ದೇವೆ : ದೇವೇಗೌಡ ಪ್ರಶ್ನೆ

Posted Date: 30 Apr, 2018

ನಾವು ಯಾವ ಪಾಪ ಮಾಡಿದ್ದೇವೆ : ದೇವೇಗೌಡ ಪ್ರಶ್ನೆ

ಹಾಸನ: "ದೇವೇಗೌಡ್ರು ಮತ್ತು ಅವರ ಮಕ್ಕಳನ್ನು ಮುಗಿಸಲೇ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಡುವುದಾದ್ರೆ ನಾವು ಯಾವ ಪಾಪ ಮಾಡಿದ್ದೇವೆ? ವ್ಯಕ್ತಿಗತ ದ್ವೇಷ ಮಾಡುವುದು ಒಬ್ಬ ಮುಖ್ಯಮಂತ್ರಿಗೆ ಶೋಭೆ ತರುತ್ತಾ' ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವೇನು ಸಿದ್ದರಾಮಯ್ಯ ಮತ್ತು ಅವರ ಮಕ್ಕಳನ್ನು ಮುಗಿಸಬೇಕು
ಎಂದು ಹೇಳಿದ್ದೇವೆಯೇ? ಸಿದ್ದರಾಮಯ್ಯನವರ ಹಿರಿಯ ಮಗ ನಿಧನರಾದಾಗ ಅವರ ಮನೆಗೆ ನಾನೇ ಹೋಗಿ ಸಾಂತ್ವನ ಹೇಳಿ ಬಂದಿದ್ದೆ. ಆದರೆ, ಅವರು ನನ್ನ ಮತ್ತು ನನ್ನ ಮಕ್ಕಳನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಹೇಳ್ತಾರೆ. ಇದು ಒಬ್ಬ ಸಿಎಂ ಕ್ಯಾಲಿಬರ್‌ ಎಂದು ವ್ಯಂಗ್ಯವಾಡಿದರು.

"ನನ್ನ ಮೊಮ್ಮಗ ಪ್ರಜ್ವಲ್‌ ಮಚ್ಚು, ಲಾಂಗು, ಗುರಾಣಿ ಹಿಡಿದುಕೊಂಡು ಬಂದಿದ್ದ ಎಂದು ಹೊಳೆನರಸೀಪುರದ ಕಾಂಗ್ರೆಸ್‌ ಅಭ್ಯರ್ಥಿ ಆರೋಪ ಮಾಡಿದ್ದನ್ನು ಕೇಳಿದ್ದೇನೆ. ಇಂಥ ಹೇಳಿಕೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಪ್ರಜ್ವಲ್‌ಗೆ ಹೇಳಿದ್ದೇನೆ. ಪ್ರಚೋದನೆಗೆ ಒಳಗಾಗಿ ಪ್ರತಿಕ್ರಿಯಿಸುವ ಕೀಳುಮಟ್ಟಕ್ಕೆ ಇಳಿಯಬಾರದು ಎಂದು ರೇವಣ್ಣಗೂ ಹೇಳಿದ್ದೇನೆ. ಪ್ರಚೋದನೆಗೆ ಒಳಗಾಗದೆ ಜನರ ಮುಂದೆ ಕೈಮುಗಿದುಕೊಂಡು ಹೋಗೋಣ ಎಂದೂ ಸೂಚಿಸಿದ್ದೇನೆ' ಎಂದರು.

ಯಾರಿಂದಲೂ ಪ್ರಜ್ವಲ್‌ನನ್ನು ಕಡೆಗಣಿಸಲು ಸಾಧ್ಯವಿಲ್ಲ. ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಮಾಡಲು ಪ್ರಜ್ವಲ್‌ಗೆ ಹೇಳಿದ್ದೇನೆ ಎಂದರು. 

"ಕೆ.ಆರ್‌.ನಗರದ ಜೆಡಿಎಸ್‌ ಅಭ್ಯರ್ಥಿಯ ವಿರುದಟಛಿ ನನ್ನ ಸೊಸೆ ಮಸಲತ್ತು ನಡೆಸಿದ್ದಾಳೆಂಬ ವಿಡಿಯೋ ವೈರಲ್‌ ಆಯ್ತು. ಅದು ಎಲ್ಲಿಂದ, ಹೇಗೆ ಬಂತು ಎಂಬುದು ನನಗೆ ಗೊತ್ತಿದೆ. ಒಬ್ಬ ವ್ಯಕ್ತಿಯ ವರ್ಚಸ್ಸು ಕಳೆಯಲು ಇಂಥ ಕೀಳು ಮಟ್ಟಕ್ಕೆ ಇಳಿಯಬೇಕೆ? 57 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇಂಥವನ್ನೆಲ್ಲಾ ನೋಡಿಲ್ಲವಾ?' ಎಂದು ಪ್ರಶ್ನಿಸಿದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ
ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ

೨೦೧೯/೨೦ ನೇ ಸಾಲಿನ ಆರನೇ ತರಗತಿಗೆ ಸೇರಲು ರಾಮನಗರ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ

ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ
ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ

(ಆತ್ಮೀಯ ಓದುಗರೇ ಪ್ರತಿ ಸೋಮವಾರ ಪ್ರಕಟವಾಗುವ ಈ ಅಂಕಣದಲ್ಲಿ ತಾಲ್ಲೂಕಿನ ಅಧಿಕಾರಿ ಮತ್ತು ಇಲಾಖೆಯ ಬಗ್ಗೆ ಬರೆಯುತ್ತಿದ್ದೆ, ಆದರಿಂದು ಚನ್ನಪಟ್ಟಣದಲ್ಲಿ ಕೇವಲ ಹದಿನೆಂಟು ತಿಂಗಳು ಕೆಲಸ ಮಾಡಿ ಹದಿನೆಂ

ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ
ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಗಿಡ ನೆಡಲು ಗುಂಡಿಗಳ ಅಳತೆ ಪ್ರಮಾಣದಲ್ಲಿ ಪ್ರತಿ ಗಿಡಕ್ಕೆ ತಲಾ ನಲವತ್ತೊಂದು ಮತ್ತು ಎಂಭತ್ತನಾಲ್ಕು ರೂಪಾಯಿಗಳಂತೆ ೨೦

ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್
ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್

ಸಾಲ ಬಾಕಿ ಉಳಿಸಿಕೊಂಡ ಮಹಿಳೆಗೆ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ನೋಟೀಸ್‌ಜಾರಿ ಮಾಡಿದ್ದರಿಂದ ರೈತಸಂಘದ ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸಿದರು.

 ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಹಾತ್ವಾಕಾಂಕ್ಷಿ ಸಾಲ

ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು
ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು

ಅರವತ್ಮೂರನೇ ಕನ್ನಡ ರಾಜ್ಯೋತ್ಸವ ಸಾಲಿನಲ್ಲಿ ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿಗಳು ಬಂದಿವೆ. ಚನ್ನಪಟ್ಟಣ ತಾಲ್ಲೂಕಿನ ಲಾವಣಿ ಹಾಡುಗಾರ ಮತ್ತು ರಂಗಭೂಮಿ ನಟರಾದ ಮಳೂರು ಪುಟ್ಟಸ್ವಾಮಿಗೌಡರಿಗೆ ಸಂದರೆ ಸಹಕಾರಿ ಕ್ಷೇತ್ರದಲ್ಲಿ ಮಾ

ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ
ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ

ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆಯ ರೂಪುರೇಷೆಗಳನ್ನು ಶೀಘ್ರವಾಗಿ ತಲುಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮೇಕೆದಾಟು ಯೋಜನೆ ಕುರಿತ ರಾಜ್ಯದ

ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ
ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ

ಯಾಕೋ ಗೊತ್ತಿಲ್ಲ ಕಣ್ಣಂಚಲ್ಲಿ ನೀರು ಉಕ್ಕುಕ್ಕಿ ಬರುತ್ತಿದೆ, ಸಾವಿನ ಕಥೆ ಕೇಳಿ, ಎದೆ ಬಡಿದು‌ ಅತ್ತು‌ ಬಿಡಲೇ ಎನಿಸುತ್ತಿದೆ.

ಅವರಾರು ನೆಂಟರಿಸ್ಟರಲ್ಲಾ, ಬಂಧು ಬಳಗವೂ ಅಲ್ಲಾ,
ಆದರೂ ಮನ ಕೇಳುತ್ತಿಲ್ಲ, ಒಳಗ

 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ
 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ, ಅದಕ್ಕಾಗಿ ನಾನು ನೀರಾವರಿ ಸಚಿವನಾಗಿದ್ದಾಗ ನನ್ನ ಖಾತೆಗೆ ಸರಿಯಾಗಿ ಅನುದಾನ ನೀಡಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ತಾಲೂಕಿನ ಸಾಮಂದಿಪುರ ಗ್ರಾಮದಲ

Top Stories »  


Top ↑