Tel: 7676775624 | Mail: info@yellowandred.in

Language: EN KAN

    Follow us :


ಸಿನಿಮಾ ಹಾಗೂ ಕಿರುತೆರೆ ನಟರ ಮತದಾನ ಸಂದೇಶದ ಕಿರುಚಿತ್ರ ಬಿಡುಗಡೆ

Posted Date: 03 May, 2018

ಸಿನಿಮಾ ಹಾಗೂ ಕಿರುತೆರೆ ನಟರ ಮತದಾನ ಸಂದೇಶದ ಕಿರುಚಿತ್ರ ಬಿಡುಗಡೆ

ಬೆಂಗಳೂರು : ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು “ತಪ್ಪದೆ ಮತದಾನ ಮಾಡಿ” ಎನ್ನುವ ಸಂದೇಶವನ್ನೊಳಗೊಂಡ  ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಪ್ರಖ್ಯಾತ ನಟ-ನಟಿಯರ ಕಿರುಚಿತ್ರಗಳನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಬಿಡುಗಡೆ ಮಾಡಿದರು.

     ಕನ್ನಡ ಚಿತ್ರರಂಗದ ಖ್ಯಾತ ನಟ ವಸಿಷ್ಠ ಎನ್. ಸಿಂಹ, ಹಾಡುಗಾರ ಹಾಗೂ ಯುವ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಕಿರುತೆರೆ ನಟಿಯರಾದ ರಜನಿ ಮತ್ತು ವೈಷ್ಣವಿ ಅವರು ಮತದಾನದ ಮಹತ್ವ ಕುರಿತು ಮಾತನಾಡಿರುವ ಹಾಗೂ ತಪ್ಪದೆ ಮತದಾನ ಮಾಡಲು ಮನವಿ ಮಾಡಿಕೊಂಡಿರುವ ಕಿರುಚಿತ್ರಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಯಲ್ಲಿ ತಮ್ಮ ನಾಯಕ-ನಾಯಕಿಯರು ನೀಡಿರುವ ಕರೆಗೆ ಸಾರ್ವಜನಿಕರು ಓಗೊಟ್ಟು ಮತದಾನ ಮಾಡಿದಲ್ಲಿ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದು ಸಂಜೀವ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

     ನಟ ವಸಿಷ್ಠ ಎನ್.ಸಿಂಹ ಅವರು ಮಾತನಾಡಿ ಚುನಾವಣೆ ರಂಗು-ಗಿಂಗುಗಳ ಮೀರಿ ಮತದಾನ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು.  ಕಳೆದ ಚುನಾವಣೆಗಳಿಗಿಂತ ಶೇಕಡ 100ಕ್ಕೆ 100 ರಷ್ಟು ಮತದಾನವಾಗಬೇಕು, ಸಾರ್ವಜನಿಕರು ಒಂದು ದಿನದ ಆಮಿಷಕ್ಕೆ ಒಳಗಾಗದೆ ಐದು ವರ್ಷಕ್ಕೆ ಸೂಕ್ತವೆನಿಸುವ ನಾಯಕನನ್ನು ಆಯ್ಕೆ ಮಾಡಬೇಕು., ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಿ ತಮ್ಮ ಹಕ್ಕನ್ನು, ಒಳ್ಳೆಯವರನ್ನು ಆಯ್ಕೆ ಮಾಡುವುದಕ್ಕಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.  

     ಕಿರುತೆರೆ ನಟಿ ರಜನಿ ಅವರು ಮಾತನಾಡಿ ಓಟು ಮಾಡುವುದು ನಮ್ಮ ಕರ್ತವ್ಯ, ಪಕ್ಷ ಹಾಗೂ ಆಮಿಷಗಳಿಗೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಮನವಿ ಮಾಡಿದರು.  

     ಇದೇ ಸಂದರ್ಭದಲ್ಲಿ ನಟ-ನಟಿಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.  ಈ ಸಮಯದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ಡಾ: ಬಿ.ಆರ್.ಮಮತ ಅವರು ಉಪಸ್ಥಿತರಿದ್ದರು.  
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ
ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ

*ಹೊತ್ತಿ ಉರಿದ ಕನಕಪುರ ಮತ್ತು ಸಾತನೂರು,* *ರಾಮನಗರದಲ್ಲಿಯೂ ಉಗ್ರ ಪ್ರತಿಭಟನೆ,* *ಚನ್ನಪಟ್ಟಣ ದಲ್ಲಿ ಹೇಳಿಕೊಳ್ಳುವಂತ ಪ್ರತಿಭಟನೆ* *ಇಲ್ಲಾ, ಮಾಗಡಿಯಲ್ಲಿಯೂ ಸಹ ತಣ್ಣನೆ* *ಪ್ರತಿಭಟನೆ. ರಾಜ್ಯದಾದ್ಯ

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

Top Stories »  


Top ↑