Tel: 7676775624 | Mail: info@yellowandred.in

Language: EN KAN

    Follow us :


ಜೆಡಿಎಸ್/ಕಾಂಗ್ರೆಸ್ ಖರ್ಗೆ ಸಿಎಂ, ರೇವಣ್ಣ ಡಿಸಿಎಂ. ಜೆಡಿಎಸ್/ಬಿಜೆಪಿ ಹೆಚ್ಡಿಕೆ ಸಿಎಂ/ಕೇಂದ್ರಮಂತ್ರಿ !?

Posted Date: 14 May, 2018

ಜೆಡಿಎಸ್/ಕಾಂಗ್ರೆಸ್ ಖರ್ಗೆ ಸಿಎಂ, ರೇವಣ್ಣ ಡಿಸಿಎಂ. ಜೆಡಿಎಸ್/ಬಿಜೆಪಿ ಹೆಚ್ಡಿಕೆ ಸಿಎಂ/ಕೇಂದ್ರಮಂತ್ರಿ !?

ಇಂದು ಕರ್ನಾಟಕದಲ್ಲಿ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬರಲು ಸಜ್ಜಾಗಿದೆ, ಬಹುತೇಕ ಎಲ್ಲಾ ಮಾಧ್ಯಮ ಮತ್ತು ಸಂಘಸಂಸ್ಥೆಗಳ ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದೇ ಟಾಂ ಟಾಂ ಹೊಡೆದಿದ್ದಾರೆ.


ಸಮ್ಮಿಶ್ರ ಸರ್ಕಾರ ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ಸರ್ಕಾರ ರಚನೆ ಮಾಡುವುದು ಸುಲಭವಲ್ಲ, ಯಾಕೆಂದರೆ ಅದಕ್ಕೆ ನೂರಾರು ಕಾರಣಗಳ ಜೊತೆಗೆ ತೊಡರುಗಳು ಬಹಳಷ್ಟಿವೆ, ಬಹು ಮುಖ್ಯವಾದ ಸಂಗತಿ ಎಂದರೆ ರಾಷ್ಟ್ರೀಯ ಪಕ್ಷಗಳಾದ ಇವು ಸಾರ್ವಜನಿಕರಿಗೆ ಉತ್ತರ ಕೊಡಲಾಗದಷ್ಟು ಎಡರುತೊಡರುಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿವೆ.


ಸಮ್ಮಿಶ್ರ ಸರ್ಕಾರ ರಚನೆಯಾಗಬೇಕೆಂದರೆ ಈ ಎರಡು ರಾಷ್ಟ್ರೀಯ ಪಕ್ಷಗಳಿಗೂ ಪ್ರಾದೇಶಿಕ ಪಕ್ಷದ ಅವಶ್ಯಕತೆ ಬಹಳಷ್ಟಿದೆ, ಅವರಿಗಾಗಿಯೇ ಕರ್ನಾಟಕದಲ್ಲಿ ಜೆಡಿ(ಎಸ್) ಪಕ್ಷ ಸಜ್ಜಾಗಿದೆ ಎಂದರೆ ತಪ್ಪಾಗಲಾರದು, ಜೆಡಿ(ಎಸ್) ಪಕ್ಷ ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಕನಸಿನ‌ಮಾತು, ಅಧಿಕಾರದಲ್ಲಿರಬೇಕು ಎನ್ನುವುದಕ್ಕೋಷ್ಕರವಾದರು ಜೆಡಿ(ಎಸ್) ಒಂದು ರಾಷ್ಟ್ರೀಯ ಪಕ್ಷದ ಜೊತೆ ಹೋಗಲೇಬೇಕಾಗಿದೆ.


ನಂಬಲರ್ಹ, ಬಲ್ಲ ಮೂಲಗಳ ಪ್ರಕಾರ ಜೆಡಿ(ಎಸ್) ಮತ್ತು ಈ ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಒಂದು ಹಂತದಲ್ಲಿ ಈಗಾಗಲೇ ಒಡಂಬಡಿಕೆಯಾಗಿದೆಯಂತೆ.


ಜೆಡಿ(ಎಸ್) ಕಾಂಗ್ರೆಸ್ ಪಕ್ಷದ ಜೊತೆ ಹೋದರೆ ದಲಿತ ಮುಖ್ಯಮಂತ್ರಿ ಕೂಗೆದ್ದಿರುವುದರಿಂದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಯವರನ್ನು ಮುಖ್ಯಮಂತ್ರಿಯಾಗಿ ಮಾಡಿ ದೇವೇಗೌಡರ ಅತ್ಯಂತ ಪ್ರೀತಿಯ ಪುತ್ರ ಹೆಚ್ ಡಿ ರೇವಣ್ಣನವರನ್ನು ಉಪ‌ ಮುಖ್ಯಮಂತ್ರಿ ಮಾಡಲು ಮಾತುಕತೆಯಾಗಿದೆಯಂತೆ.

ಅಂದರೆ ಇಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರು ಧರ್ಮಸಿಂಗ್ ಸರ್ಕಾರದ ಮಾದರಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಲಿದ್ದಾರೆ.


ಒಂದು ವೇಳೆ ಜೆಡಿ(ಎಸ್) ಬಿಜೆಪಿಯ ಜೊತೆ ಸರ್ಕಾರ ರಚಿಸಿದರೆ ಹೆಚ್ ಡಿ ಕುಮಾರಸ್ವಾಮಿ ಯವರು ನಾನೇ ಮುಖ್ಯಮಂತ್ರಿ ಆಗಬೇಕೆಂದು ಬೇಡಿಕೆ ಇಡುತ್ತಾರೆ, ಆ ಸಂದರ್ಭದಲ್ಲಿ ಯಡಿಯೂರಪ್ಪ ರಾದಿಯಾಗಿ ಬಿಜೆಪಿ ಮುಖಂಡರು ಒಪ್ಪುವುದಿಲ್ಲ, ಇದಕ್ಕೆ ಪರ್ಯಾಯವಾಗಿ ಕೆಲ ತಿಂಗಳ ಮಟ್ಟಿಗೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿ ಹೆಚ್ ಡಿ ರೇವಣ್ಣನವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಒಳ ಒಪ್ಪಂದವಾಗಿದೆಯಂತೆ.


ಇದರ ಜೊತೆಗೆ ಬಿಜೆಪಿಯೂ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಈ ಮೇಲಿನ ಅಧಿಕಾರಕ್ಕೆ ದೊಡ್ಡಗೌಡರು ತಕರಾರಿಲ್ಲದೆ ಒಪ್ಪಿಕೊಂಡದ್ದೆ ಆದರೆ ಮುಖ್ಯಮಂತ್ರಿ ಆಕಾಂಕ್ಷಿಯಾದ ಕುಮಾರಸ್ವಾಮಿ ಯವರನ್ನು ದೇವೇಗೌಡರ ಸಮ್ಮುಖದಲ್ಲಿಯೇ ಕೇಂದ್ರದ ಮಂತ್ರಿಯಾಗಿ ಮಾಡಲಾಗುವುದೆಂದು ಖುದ್ದು ಎರಡು ಪಕ್ಷದ ಹಿರಿಯರ ಜೊತೆಗೆ ಮಾತುಕತೆಯಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.


ಸಮ್ಮಿಶ್ರ ಸರ್ಕಾರ ಬಂದು ಯೋಗೇಶ್ವರ್ ಏನಾದರೂ ಗೆದ್ದರೆ ಅವರಿಗೆ ಮೂರು ಪಕ್ಷಗಳಿಂದಲೂ ಅವರು ಹೊರಗುಳಿಯುತ್ತಾರೆ, ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಕೊಡುವ ಜೆಡಿ(ಎಸ್) ಪಕ್ಷವೇ ಇಲ್ಲಿ ನಿರ್ಣಾಯಕ ಆಗುವುದರಿಂದ ಯೋಗೇಶ್ವರ್ ಗೆದ್ದರೂ ಸಹ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೂ ಅಚ್ಚರಿ ಪಡಬೇಕಾಗಿಲ್ಲ.


ಜೆಡಿ(ಎಸ್) ಸಂಪೂರ್ಣ ಬಹುಮತದಿಂದ ಗೆದ್ದು ಸರ್ಕಾರ ರಚಿಸಿದರೆ ಅದು ಕರ್ನಾಟಕದ ರೈತರ ಪುಣ್ಯ.

ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭ ಒದಗಿಬಂದರೆ ಅದು ದೊಡ್ಡಗೌಡರ ಕುಟುಂಬದ ಅಧಿಕಾರದ ಪುಣ್ಯ.

ಕಾಂಗ್ರೆಸ್ ಜೊತೆಗೆ ಬಂದರೆ ಖರ್ಗೆ, ಪರಂ ರವರ ಪುಣ್ಯ.

ಬಿಜೆಪಿ ಜೊತೆ ಹೋದರೆ ಯಡ್ಯೂರಪ್ಪ, ಈಶ್ವರಪ್ಪ ರ ಪುಣ್ಯ.


ಸಮ್ಮಿಶ್ರ ಸರ್ಕಾರ ಬಂದರೆ ಒಟ್ಟಾರೆ ಕರ್ನಾಟಕ ಜನತೆಯ ಪೂರ್ವಜನ್ಮದ ಪಾಪ !.


ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ
ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕ

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ
ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತ

ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ

ರಾಮನಗರ: ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರ

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

Top Stories »  


Top ↑