Tel: 7676775624 | Mail: info@yellowandred.in

Language: EN KAN

    Follow us :


ಯೋಗೇಶ್ವರ್ ರಾಮನಗರದಲ್ಲಿ ಸ್ಪರ್ಧಿಸಿದರೆ ಗೆಲುವು ಬಹುತೇಕ ಖಚಿತ.

Posted Date: 20 May, 2018

ಯೋಗೇಶ್ವರ್ ರಾಮನಗರದಲ್ಲಿ ಸ್ಪರ್ಧಿಸಿದರೆ ಗೆಲುವು ಬಹುತೇಕ ಖಚಿತ.

ಈ ಬಾರಿಯ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಎದುರು ಸೋಲುಂಡ ಸಿ ಪಿ ಯೋಗೇಶ್ವರ್ ರವರು ತೆರವಾದ ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದರೇ ಅವರ ಗೆಲುವು ಖಚಿತ ಎಂಬುದಾಗಿ ರಾಮನಗರ ಕಾಂಗ್ರೆಸ್ ನ ನಂಬಲರ್ಹ ವ್ಯಕ್ತಿಗಳ ಅನಿಸಿಕೆಯಾಗಿದೆ.


ಯಾವುದೇ ಪಕ್ಷದ ನಾಯಕರು ಗೆಲ್ಲುವುದು ಸ್ಥಳೀಯ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ, ಪ್ರತಿಬಾರಿ ಚುನಾವಣೆಯಲ್ಲಿಯೂ ಈ ವ್ಯಕ್ತಿಗಳು ತಮ್ಮ ಸ್ವಾಭಿಮಾನವನ್ನು ಕೆಲವು ಬಾರಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ಎದುರಾಳಿ ಪಕ್ಷದವರ ಜೊತೆ ಪೈಪೋಟಿಗಿಳಿದು ತಮ್ಮ ನಾಯಕನನ್ನು ಗೆಲ್ಲಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.


ಎಂದೋ ಒಂದು ದಿನ ಬಂದು ಕಾರ್ಯಕರ್ತರನ್ನು ಹುರಿದುಂಬಿಸಿ ಎದುರಾಳಿಯನ್ನು ಬಯ್ದು ಹೋಗುವ ನಾಯಕ ಗೆದ್ದ ನಂತರ ತನ್ನ ಅವಶ್ಯಕತೆಗನುಗುಣವಾಗಿ ಎದುರಾಳಿಯ ಜೊತೆ ಒಂದೇಬಾರಿಗೆ ಕುಚುಕು ಗೆಳೆಯನಾಗಿ ಬಿಡುತ್ತಾನೆ.

ಇತ್ತ ಹೊಡೆದಾಡಿ, ಬಡಿದಾಡಿ ತನ್ನ ಕುಟುಂಬದ ಸಮೇತ ಅನೇಕರನ್ನು ಎದುರು ಹಾಕಿಕೊಂಡ ನಿಷ್ಠಾವಂತ ಕಾರ್ಯಕರ್ತರ ಗತಿ ! ಅಬ್ಬಾ ತಾವೆಲ್ಲರೂ ಅವನ ಸ್ಥಾನದಲ್ಲಿ ನಿಮ್ಮನ್ನು ಒಮ್ಮೆ ಕಲ್ಪಿಸಿಕೊಳ್ಳಿ ! ?


ಇಂತಹ ವಾತಾವರಣವೀಗ ರಾಮನಗರ ಕಾಂಗ್ರೆಸ್ ಪಾಳೆಯದಲ್ಲಿನ ನಿಷ್ಠಾವಂತ ಕಾರ್ಯಕರ್ತರಲ್ಲಿ ಉಲ್ಬಣಗೊಳ್ಳುತ್ತಿದೆ, ಕೇವಲ ಮೂವ್ವತ್ತೆಂಟು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದ ಜೆಡಿ(ಎಸ್) ಜೊತೆ ಅವರೂ ಕರೆಯದೇ ಇದ್ದರೂ ಇವರೇ ನಾವು ಬೆಂಬಲ ನೀಡುತ್ತೇವೆ ನೀವು ಸರ್ಕಾರ ರಚಿಸಿ ಎಂದು ದುಂಬಾಲು ಬಿದ್ದಿದ್ದು ಅವರ ಶೋಚನೀಯ ಸ್ಥಿತಿಯನ್ನು ತೋರಿಸುತ್ತದೆ.

ಅಷ್ಟೇ ಅಲ್ಲಾ ಏನೂ ಶರತ್ತುಗಳಿಲ್ಲದೆ (unconditional support) ಬೆಂಬಲ ಸೂಚಿಸಿದ್ದು ಕಾಂಗ್ರೆಸ್ ಅಧೋಗತಿಗಿಳಿದಿದೆ ಎಂಬುದನ್ನು ತೋರಿಸುತ್ತದೆ.


ಈ ವಿಷಯವಾಗಿ ರಾಮನಗರದಲ್ಲಾಗಲೇ ಕಾಂಗ್ರೆಸ್ಸಿಗರು ಒಂದು ಪತ್ರಿಕಾಗೋಷ್ಠಿ ಕರೆದು ಜೆಡಿ(ಎಸ್) ನವರು ಬರುವ ತನಕ ಕಾಯಬೇಕಾಗಿತ್ತು, ಇಷ್ಟೊಂದು ಅವಸರದ ಅವಶ್ಯಕತೆ ಇರಲಿಲ್ಲ ಎಂಬ ಹೇಳಿಕೆಯನ್ನು ಕೊಡುವುದರ ಮೂಲಕ ತಮ್ಮ ಅಸಮಾಧಾನವನ್ನು ಹೊರಗೆಡವಿದ್ದಾರೆ.


ಅಂದರೆ ಹೆಚ್ ಡಿ ಕುಮಾರಸ್ವಾಮಿ ಯವರು ರಾಜಿನಾಮೆ ನೀಡಿರುವ ರಾಮನಗರ ಕ್ಷೇತ್ರಕ್ಕೆ ಜೆಡಿ(ಎಸ್) ನಿಂದ ಅಭ್ಯರ್ಥಿಯನ್ನು ಹಾಕುತ್ತಾರೆ, ಸರ್ಕಾರದಲ್ಲಿ ಮೈತ್ರಿ ಇರುವುದರಿಂದ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಹಾಕುವುದಿಲ್ಲ, ಇನ್ನೂ ಬಿಜೆಪಿಗೆ ಅಲ್ಲಿ ನೆಲೆಯಿಲ್ಲ.


ಕಾಂಗ್ರೆಸ್ ನಿಂದ ಬಲಿಷ್ಠ ಅಭ್ಯರ್ಥಿಯನ್ನು ಹಾಕದಿದ್ದರೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆನ್ನು ತೋರಿಸುವ ಕೆಲಸ ಮಾಡಲು ಸಜ್ಜಾಗಿರುವುದು ಕಂಡುಬರುತ್ತಿದೆ.


ಸಿ ಪಿ ಯೋಗೇಶ್ವರ್ ರಾಮನಗರ ಕ್ಷೇತ್ರಕ್ಕೆ ಚಿರಪರಿಚಿತರಾಗಿರುವುದರಿಂದ ಬಿಜೆಪಿ ಪಕ್ಷವು ಅವರ ಬೆನ್ನಿಗಿರುವುದರಿಂದ ಕಾಂಗ್ರೆಸ್ ನ ಮುಖಂಡರನ್ನು ಭೇಟಿ ಮಾಡಿದರೆ, ಅವರಿಗಾಗಿರುವ ಅನ್ಯಾಯ, ಮೋಸದ ಜೊತೆಗೆ ಅವಮಾನಗೊಂಡಿರುವ ಹಲವಾರು ನಾಯಕರು ಇವರ ಜೊತೆ ಕೈಜೋಡಿಸಿ ಸಿ ಪಿ ಯೋಗೇಶ್ವರ್ ಗೆಲುವಿಗೆ ಸಹಕರಿಸಬಹುದು.


ಯಾಕೆಂದರೆ ಈ ಮೈತ್ರಿ ಸರ್ಕಾರಗಳು ಅವಧಿಪೂರ್ವ ಪ್ರಸವಕ್ಕೊಳಗಾಗುವುದೇ ಹೆಚ್ಚು, ಐದು ವರ್ಷ ಪೂರೈಸೋದು ಬಹಳ ಕಷ್ಟ, ಏನೂ ಆಗದೆ ಈ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಿದರೆ ಅದು ದಾಖಲೆಯಾಗಿ ಉಳಿಯುತ್ತದೆ.

ಇದರ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳೆರಡು ಬಹುಸಂಖ್ಯಾತರಾದ ಲಿಂಗಾಯತರನ್ನು ಎರಡು ರೀತಿಯಲ್ಲಿ ಎದುರು ಹಾಕಿಕೊಂಡಂತಾಗಿದೆ, ಅದರ ಲಾಭವನ್ನು ಸಿ ಪಿ ಯೋಗೇಶ್ವರ್ ಮತ್ತು ಬಿಜೆಪಿ ಪಕ್ಷ ಪಡೆದುಕೊಳ್ಳಬಹುದಾಗಿದೆ.


ಹಾಗಾಗಿ ಸಿ ಪಿ ಯೋಗೇಶ್ವರ್ ಇಂದಿನಿಂದಲೇ ರಾಮನಗರ ಅಕಾಡಕ್ಕಿಳಿದರೆ ಚನ್ನಪಟ್ಟಣದ ಸೋಲು ರಾಮನಗರದಲ್ಲಿ ಗೆಲುವಿನ ಮೆಟ್ಟಿಲಾಗುವುದರಲ್ಲಿ ಸಂದೇಹವಿಲ್ಲ.

 

ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ
ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ

*ಹೊತ್ತಿ ಉರಿದ ಕನಕಪುರ ಮತ್ತು ಸಾತನೂರು,* *ರಾಮನಗರದಲ್ಲಿಯೂ ಉಗ್ರ ಪ್ರತಿಭಟನೆ,* *ಚನ್ನಪಟ್ಟಣ ದಲ್ಲಿ ಹೇಳಿಕೊಳ್ಳುವಂತ ಪ್ರತಿಭಟನೆ* *ಇಲ್ಲಾ, ಮಾಗಡಿಯಲ್ಲಿಯೂ ಸಹ ತಣ್ಣನೆ* *ಪ್ರತಿಭಟನೆ. ರಾಜ್ಯದಾದ್ಯ

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

Top Stories »  


Top ↑