Tel: 7676775624 | Mail: info@yellowandred.in

Language: EN KAN

    Follow us :


ತೆರನಾದ ರಾಮನಗರಕ್ಕೆ ಅನಿತಾ, ರಾಜ್ಯಾಧಕ್ಷರಾಗಿ ಡಿಕೆಶಿ ಆಯ್ಕೆಯಾಗುವ ಸಾಧ್ಯತೆ !?

Posted Date: 22 May, 2018

ತೆರನಾದ ರಾಮನಗರಕ್ಕೆ ಅನಿತಾ, ರಾಜ್ಯಾಧಕ್ಷರಾಗಿ ಡಿಕೆಶಿ ಆಯ್ಕೆಯಾಗುವ ಸಾಧ್ಯತೆ !?

ರಾಜ್ಯ ರಾಜಕಾರಣದಲ್ಲಿ ಏನಾದರು ಆಗಬಹುದು ಎನ್ನುವುದಕ್ಕೊಂದು ಉದಾಹರಣೆ ಕಾಂಗ್ರೆಸ್ ಜೆಡಿ(ಎಸ್) ಮೈತ್ರಿ, ಚುನಾವಣೆಗೂ ಮುನ್ನ ಆ ಪಕ್ಷದವರು ಸರಿ ಇಲ್ಲಾ ? ಈ ಪಕ್ಷದವರು ಸರಿ ಇಲ್ಲಾ ಅಂತಿದ್ದ ರಾಜಕಾರಣಿಗಳೆಲ್ಲಾ ಇಂದು ಒಂದಾಗೋಗವ್ರೇ !


ಈ ಬಾರಿ ನಮ್ದೇ ಸರ್ಕಾರ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಅವನನ್ನು ಜೈಲಿಗೆ ಕಳುಸ್ತಿನಿ ! ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಇವನನ್ನು ಜೈಲಿಗೆ ಕಳುಸ್ತಿನಿ ಅಂತಿದ್ದ ನಾಯಕರೆಲ್ಲಾ ಈಗ ಗಪ್ ಚುಪ್, ಎಲ್ಲರೂ ಒಂದೇ ತಟ್ಟೆಯಲ್ಲಿ ಉಂಡು ಒಂದೇ ಚಾಪೆಯಲ್ಲಿ ಮಲ್ಕೊಳ್ಳೋಕೆ ಶುರುವಿಟ್ಟಿದ್ದಾರೆ !?.


ಪರಮಾಶ್ಚರ್ಯವೆಂದರೆ ಮತ ಹಾಕಿದ ಪ್ರಭುವಿನ ಗೋಳು ಒಂದೆಡೆಯಾದರೆ ನಮ್ಮೂರಿನಲ್ಲಿ ಲೀಡ್ ಕೊಡ್ಬೇಕು, ನಮ್ಮಣ್ಣ ನಾ ಗೆಲ್ಲಿಸ್ಬೇಕು, ನಮ್ಮ ಜಾತಿಯವನನ್ನು ಗೆಲ್ಲಿಸ್ಬೇಕು ಅಂತ ಸಂಬಂಧಿಕರ ಜೊತೆ, ಸ್ನೇಹಿತರ ಜೊತೆ, ಊರಿನವರ ಜೊತೆ ಅದರಲ್ಲೂ ಸಾಮಾಜಿಕ ಜಾಲತಾಣಗಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಜಗಳವಾಡಿಕೊಂಡಿದ್ದವರು ಎದುರುಬದುರು ಸಿಕ್ಕಿದಾಗ ಮಾತನಾಡಲು, ಸುಮ್ಮನಿರಲೂ ಆಗದೆ ಕೈ ಕೈ ಹಿಸುಕಿಕೊಳ್ಳುತಿದ್ದಾರೆ.


ಅದೇನೆ ಇರಲಿ ರಾಜ್ಯದಲ್ಲೀಗ ವೈಯುಕ್ತಿಕ ನಿಂದನೆಗೂ ಇಳಿದಿದ್ದ (ಇದನ್ನು ಡಿಕೆಶಿ ಒಪ್ಕೊಂಡಿದ್ದಾರೆ) ಬದ್ದ ವೈರಿಗಳಾದ ಎರಡು ಪಕ್ಷಗಳು ಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿ ಬಿಜೆಪಿ ಯನ್ನು ದೂರವಿಟ್ಟು ಅಧಿಕಾರಕ್ಕೆ ಬರುತಿದ್ದಾರೆ, ವೈಯುಕ್ತಿಕ ಅಧಿಕಾರದ ಲಾಲಸೆ ಬಿಟ್ಟು ರಾಜ್ಯದ ಹಿತದೃಷ್ಟಿಯಿಂದ ಐದು ವರ್ಷ ಅಧಿಕಾರ ನಡೆಸಿದರೆ ಇವರ ಇಂದಿನ ಹೊಂದಾಣಿಕೆ ಸಾರ್ಥಕವಾಗುತ್ತದೆ, ಆದರೆ ಇದು ಬಹಳ ಕಷ್ಟ ಮುಂದಿನ ಲೋಕಸಭಾ ಚುನಾವಣೆಯ ವರೆಗೂ ಉಳಿದರೆ ಹೆಚ್ಚು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.


ಜೆಡಿ(ಎಸ್) ವರಿಷ್ಠರಾದ ಹೆಚ್ ಡಿ ದೇವೇಗೌಡರು ಈಗಾಗಲೇ ಧರ್ಮ ಒಡೆದ ಎಂ ಬಿ ಪಾಟೀಲರನ್ನು ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಡಿ ಕೆ ಶಿವಕುಮಾರ್ ರವರನ್ನು ಸಂಪುಟದಿಂದ ದೂರವಿಡಬೇಕು ಎಂಬ ಷರತ್ತನ್ನು ಕಾಂಗ್ರೆಸ್ ನ ಮುಂದಿಟ್ಟಿದ್ದಾರೆ, ಆದರೆ ಇದನ್ನು ಕಾಂಗ್ರೆಸ್ ನವರು ಅರಗಿಸಿಕೊಳ್ಳುವುದು ತುಸು ಕಷ್ಟ, ಎಂ ಬಿ ಪಾಟೀಲ್ ರನ್ನು ಹೊರಗಿಡುವುದು ಲಿಂಗಾಯತ ವೀರಶೈವ ಸಮುದಾಯದಲ್ಲೇ ಗೊಂದಲವಿರುವುದರಿಂದ ಸಾಧ್ಯವಾಗಬಹುದು.


ಡಿ ಕೆ ಶಿವಕುಮಾರ್ ಈ ಬಾರಿಯ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಬಹುತೇಕ ಶ್ರಮ ಅವರದ್ದೇ, ಹಾಗಾಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅನಿವಾರ್ಯವಾಗಲಿದೆ.


ದೇವೇಗೌಡರ ಇನ್ನೊಂದು ತಂತ್ರಗಾರಿಕೆಯನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ !

ಅದೇನೆಂದರೆ ಗೌಡರ ಇನ್ನೊಂದು ಗುಣವೆಂದರೆ ಕಷ್ಟಕಾಲದಲ್ಲಿ ನೆರವಾದವರನ್ನು ಕೈ ಬಿಡುವುದಿಲ್ಲ.

ಹಾಗಾಗಿ ಡಿ ಕೆ ಶಿವಕುಮಾರ್ ರವರನ್ನು ಸಂಪುಟದಿಂದ ಹೊರಗಿಟ್ಟು ಕಾಂಗ್ರೆಸ್ ನ ರಾಜ್ಯಾಧಕ್ಷರನ್ನಾಗಿ ಮಾಡುವ ಹಂಬಲವಿರುವುದನ್ನು ಅಲ್ಲಗೆಳೆಯುವಂತಿಲ್ಲ, ಇಲ್ಲಿ ಜಾತಿ ಅಭಿಮಾನವು ಕೆಲಸ ಮಾಡುವುದು ಸಹ ಅಷ್ಟೇ ಸತ್ಯ.


ಡಿ ಕೆ ಶಿವಕುಮಾರ್ ರವರೇ ಹೇಳಿರುವಂತೆ ಹೆಚ್ ಡಿ ಕುಮಾರಸ್ವಾಮಿ ಯವರಿಂದ ತೆರನಾದ ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿಯವರು ಸ್ಪರ್ಧಿಸಲಿದ್ದಾರೆ, ಅಂದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ಹಾಕುವುದಿಲ್ಲ ಎಂದಾಯಿತು, ರಾಮನಗರದಲ್ಲಿ ಬಿಜೆಪಿ ಗೆ ನೆಲೆ ಇಲ್ಲಾ, ಸಿ ಪಿ ಯೋಗೇಶ್ವರ್ ಈ ಹಿಂದೆ ಹೇಳಿರುವಂತೆ ಅವರೇನಾದರು ಸ್ಪರ್ಧಿಸಿದರೆ ವೈಯುಕ್ತಿಕ ವರ್ಚಸ್ಸಿನಿಂದ ಹಾಗೂ ಕಾಂಗ್ರೆಸ್ ಮತ್ತು ಜೆಡಿ(ಎಸ್) ಹೊಂದಾಣಿಕೆಯಿಂದ ಮುನಿದಿರುವ ಕೆಲ ನಾಯಕರ ಸಹಾಯದಿಂದ ಪೈಪೋಟಿ ನೀಡಬಹುದು.


ಈ ಮೊದಲು ಹೆಚ್ ಡಿ ಕುಮಾರಸ್ವಾಮಿ ಯವರಿಂದ ತೆರನಾದ ರಾಮನಗರಕ್ಕೆ ನಿಷ್ಠಾವಂತ ಕಾರ್ಯಕರ್ತ ರಾಜು ರವರನ್ನು ಅಂದು ಗೆಲ್ಲಿಸಿಕೊಂಡು ಬರಲಾಗಿತ್ತು, ಈ ಬಾರಿಯೂ ಸ್ಥಳೀಯ ಮುಖಂಡರೊಬ್ಬರು ಸ್ಪರ್ಧಿಸಲು ಅನುವುಮಾಡಿಕೊಡುತ್ತಾರೆ ಎನ್ನುವುದು ಬಹುತೇಕ ಸುಳ್ಳಾಗಲಿದೆ, ಮತ್ತೊಮ್ಮೆ ಕುಟುಂಬ ರಾಜಕಾರಣದ ಕೆಸರು ಮೆತ್ತಿಕೊಳ್ಳುವ ಸಾಧ್ಯತೆ ಎದುರಾಗಲಿದೆ.


ಪದವೀಧರರ ಚುನಾವಣೆ ಮುಗಿದು ಲೋಕಸಭಾ ಚುನಾವಣೆ ಬರುವ ವೇಳೆಗೆ ಏನೇನಾಗಲಿದೆ ಎಂದು ಕಾದು ನೋಡೋಣಾ.

 

ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ
ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ

*ಹೊತ್ತಿ ಉರಿದ ಕನಕಪುರ ಮತ್ತು ಸಾತನೂರು,* *ರಾಮನಗರದಲ್ಲಿಯೂ ಉಗ್ರ ಪ್ರತಿಭಟನೆ,* *ಚನ್ನಪಟ್ಟಣ ದಲ್ಲಿ ಹೇಳಿಕೊಳ್ಳುವಂತ ಪ್ರತಿಭಟನೆ* *ಇಲ್ಲಾ, ಮಾಗಡಿಯಲ್ಲಿಯೂ ಸಹ ತಣ್ಣನೆ* *ಪ್ರತಿಭಟನೆ. ರಾಜ್ಯದಾದ್ಯ

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

Top Stories »  


Top ↑