Tel: 7676775624 | Mail: info@yellowandred.in

Language: EN KAN

    Follow us :


ಮುನಿರತ್ನನೂ ಬೇಡ, ಮತ್ತೊಬ್ಬರೂ ಬೇಡ, ಮುನಿರಾಜು ಗೆದ್ದುಬರಲಿ.

Posted Date: 23 May, 2018

ಮುನಿರತ್ನನೂ ಬೇಡ, ಮತ್ತೊಬ್ಬರೂ ಬೇಡ, ಮುನಿರಾಜು ಗೆದ್ದುಬರಲಿ.

ಇಂದಿನ ಸಾಮಾಜಿಕ ಹಾಗೂ ಬಡಬಗ್ಗರ ಕಲ್ಯಾಣವಾಗಬೇಕೆಂದರೆ ಕೇವಲ ವಿದ್ಯಾವಂತ, ಉದ್ಯಮಿ, ಹಲವಾರು ಬಾರಿ ಗೆದ್ದು ಮೋಸ, ವಂಚನೆ ಹಾಗೂ ದುಡ್ಡು ಮಾಡುವ ಕಾಯಕವನ್ನೇ ಉದ್ಯಮ ಮಾಡಿಕೊಂಡಿರುವ ರಾಜಕಾರಣಿಯಿಂದ ಸಮಾಜದ ನೊಂದ ಬಡವರು ಉದ್ದಾರವಾಗುವುದಿಲ್ಲ,


ಹಾಗೇ ಅವರು ಪ್ರತಿನಿಧಿಸುವ ಕ್ಷೇತ್ರವೂ ಸಹ ಹಿಂದುಳಿಯುತ್ತದೆ. ಅಂತಹ ಕ್ಷೇತ್ರವೀಗ ಕಾಂಗ್ರೆಸ್ ಪಕ್ಷದ ಶಾಸಕ ಮುನಿರತ್ನ ಮಾಡಿದ ಅನೈತಿಕ ಅವಾಂತರಗಳಿಂದ ಈ ತಿಂಗಳ ಹನ್ನೆರಡರಂದು ನಡೆಯಬೇಕಾಗಿದ್ದ ಚುನಾವಣೆ ಇದೇ ತಿಂಗಳ ಇಪ್ಪತ್ತೆಂಟಕ್ಕೆ ನಿಗದಿಯಾಗಿದೆ.


ಒಂದೆರೆಡಲ್ಲ ಸರಿ ಸುಮಾರು ಹತ್ತಾರು ಸಾವಿರ ಮತಚೀಟಿ(Other Id)ಗಳನ್ನು ಖರೀದಿಸಿ (ಹೆದರಿಸಿ, ಹಣದ ಆಮಿಷ ಒಡ್ಡಿ) ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರೆಂದರೆ ಮತದಾರ ಪ್ರಭುಗಳಾದ ನೀವೆ ಯೋಚಿಸಿ ಇಂತಹ ದುಷ್ಟ ನಾಯಕರಿಂದ ಕ್ಷೇತ್ರದ ಅಭಿವೃದ್ಧಿಯನ್ನಾಗಲಿ, ಸಮಾಜದ ನೊಂದ ನಾಗರೀಕರ ಉದ್ದಾರವನ್ನಾಗಲಿ ಹೇಗೆ ನಿರೀಕ್ಷಿಸುವುದು ?


ಇಂತಹ ನಾಯಕರ ನಡುವೆ ಸಜ್ಜನ ಯುವಕ, ಸಮಾಜದ ಕಳಕಳಿ ಹೊಂದಿರುವ ಮಾತೃಹೃದಯಿ, ನಾಗರೀಕ ಸಮಾಜ ನಮ್ಮದಾಗಬೇಕೆಂಬ ತುಡಿತ ಇವೆಲ್ಲವೂ ಸಾಕಾರವಾಗಬೇಕೆಂದರೆ ರಾಜರಾಜೇಶ್ವರಿ ನಗರದ ಮತದಾರ ಪ್ರಭುಗಳು ಬಿಜೆಪಿಯ ಯುವನಾಯಕ ತುಳಸಿ ಮುನಿರಾಜುಗೌಡರನ್ನು ಗೆಲ್ಲಿಸಬೇಕಾಗಿದೆ.


ಅವರ ಸಾಮಾಜಿಕ ಕಳಕಳಿಗೆ ಹಲವು ಜೀವಂತ ಉದಾಹರಣೆಗಳಿವೆ, ಇಡೀ ಕರ್ನಾಟಕ ರಾಜ್ಯದಲ್ಲಿ ಯುವಮೋರ್ಚಾ ಎಂದು ಗೊತ್ತಾಗಿದ್ದೆ  ಮುನಿರಾಜುಗೌಡ ಯುವ ಮೋರ್ಚಾ ಅಧ್ಯಕ್ಷರಾದ ನಂತರ ಕೇವಲ ಬೆಂಗಳೂರಿಗೆ ಸೀಮಿತವಾಗದೆ ಕರ್ನಾಟಕ ರಾಜ್ಯದಾದ್ಯಂತ ಯುವಕರನ್ನು ಸಂಘಟಿಸಿ ಯುವ ಬಿಜೆಪಿಯನ್ನು ಸದೃಢವಾಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.


ಸುಮಾರು ಎಂಟು ವರ್ಷಗಳಿಂದ ಬೆಂಗಳೂರಿನಾದ್ಯಂತ ಶಾಲೆಗಳಲ್ಲಿ ಹತ್ತನೆ ತರಗತಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದರ ಜೊತೆಗೆ ಕೆಲ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ.

ಸಹಕಾರ ಬೇಕೆಂದು ಕೇಳಿಕೊಂಡು ಹೋದ ಅನೇಕ ಬಡ, ಆರ್ಥಿಕವಾಗಿ ಹಿಂದುಳಿದ ಜನಗಳಿಗೆ ಅವರೆಂದು ಬರಿಗೈಲಿ ಕಳುಹಿಸಿ ಕೊಟ್ಟಿಲ್ಲ.


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮಾಜ ಕಳಕಳಿಯ ಮನವಿಗೆ ಓಗೊಟ್ಟು ಬೀದರ್ ಜಿಲ್ಲೆಯ ಗೊರಟ ಗ್ರಾಮವನ್ನು ದತ್ತುಪಡೆದು ಉನ್ನತ ಶಾಲೆ ಮತ್ತು ವಾಚನಾಲಯವನ್ನು ನಿರ್ಮಿಸಿ ಕೊಡುವುದರ ಜೊತೆಗೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ.


ಇಷ್ಟೆಲ್ಲಾ ಅಭಿವೃದ್ಧಿಗಳನ್ನು ಅಧಿಕಾರ ಇಲ್ಲದೆ ಮಾಡಿರುವ ತುಳಸಿ ಮುನಿರಾಜುಗೌಡರಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರ ಪ್ರಭುಗಳು ಗೆಲ್ಲಿಸಿದರೆ ಸರ್ಕಾರ ಅಧಿಕಾರದಲ್ಲಿ ಇರಲಿ ಬಿಡಲಿ ತಮ್ಮ ಶಕ್ತ್ಯಾನುಸಾರ ಕ್ಷೇತ್ರದ ಅಭಿವೃದ್ಧಿ ಗೆ ಬಿಜೆಪಿಯ ಅಭ್ಯರ್ಥಿ ಮುನಿರಾಜುಗೌಡ ಮತ್ತು ಅವರ ಸಹೋದರ ಮೂರ್ತಿ ಪಾಪಣ್ಣ ಮತ್ತು ತಂಡದ ಸ್ನೇಹಿತರು ಸದಾ ನಿಮ್ಮೊಂದಿಗಿದ್ದು ನ್ಯಾಯ ದೊರಕಿಸಿಕೊಡುತ್ತಾರೆಂಬ ಭರವಸೆ ಬಿಜೆಪಿಯ ಹಿರಿಯ ನಾಯಕರು ವ್ಯಕ್ತಪಡಿಸುತ್ತಾರೆ.


ಮತದಾರ ಪ್ರಭುಗಳೇ ಕಣ್ಣ ಮುಂದೆಯೇ ಕೆಟ್ಟ ಸಂಪ್ರದಾಯದ ದಂಧೆ ನಡೆಸುವ ಮುನಿರತ್ನ ರಂತಹ ನಾಲಾಯಕ್ ನಾಯಕರಿಗಿಂತ ಅಭಿವೃದ್ಧಿಯ ಪಥದ ಕನಸು ಹೊಂದಿರುವ ಮುನಿರಾಜುಗೌಡರಿಗೆ ರಾಜರಾಜೇಶ್ವರಿ ಕ್ಷೇತ್ರದ ಮತದಾರರು ಹರಸಿ ಹಾರೈಸುತ್ತಾರೆಂಬ ನಂಬಿಕೆ ನಮಗಿದೆ.

 

ಲಕ್ಷ್ಮಿಶ್ರೀ...

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ
ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕ

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ
ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತ

ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ

ರಾಮನಗರ: ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರ

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

Top Stories »  


Top ↑