Tel: 7676775624 | Mail: info@yellowandred.in

Language: EN KAN

    Follow us :


ಮರುಕಳಿಸಿದ ಭರಚುಕ್ಕಿ ಜಲಪಾತ ವೈಭವ

Posted Date: 16 Jul, 2018

ಮರುಕಳಿಸಿದ ಭರಚುಕ್ಕಿ ಜಲಪಾತ ವೈಭವ

ಚಾಮರಾಜನಗರ: ಕಬಿನಿ ಜಲಾಶಯ ದಿಂದ 50 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿರುವ ಕಾರಣ ಜಿಲ್ಲೆಯ ಪ್ರಸಿದ್ಧ ಭರಚುಕ್ಕಿ ಜಲಪಾತ ಮೈದುಂಬಿಕೊಂಡಿದ್ದು ಜಲಧಾರೆ ಬೆಳ್ನೊರೆಯಾಗಿ ಧುಮ್ಮಿಕ್ಕುತ್ತಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆಯಾಗದೇ ಭರಚುಕ್ಕಿ ಜಲಪಾತಕ್ಕೆ ಈ ಪ್ರಮಾಣದ ನೀರು ಹರಿದುಬಂದಿರಲಿಲ್ಲ. ಹಾಗಾಗಿ ಈ ವೈಭವದ ದೃಶ್ಯ ಕಾಣಸಿಕ್ಕಿರಲಿಲ್ಲ. ಆದರೆ ಈ ಬಾರಿ ಕಾವೇರಿ, ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಬಿನಿ ಜಲಾಶಯದಿಂದ ಕಳೆದ ಮೂರು ದಿನಗಳಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಕಳೆದ ತಿಂಗಳ 18ರ ನಂತರ ಸಾಧಾರಣ ಪ್ರಮಾಣದ ನೀರು ಜಲಪಾತಕ್ಕೆ ಹರಿದು ಬಂದಿತ್ತು. ಆದರೆ ಕಳೆದ ಮೂರು ದಿನ ಗಳಿಂದ ಕಬಿನಿ ಜಲಾಶಯದಿಂದ ಬಿಡಲಾಗಿರುವ 50 ಸಾವಿರ ಕ್ಯೂಸೆಕ್‌ ನೀರಿನ ಜೊತೆಗೆ, ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಲು ಕೇವಲ 4 ಅಡಿ ಬಾಕಿಯಿದ್ದು, ಈಗ 3 ಸಾವಿರ ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಹೀಗಾಗಿ ಭರಚುಕ್ಕಿ ವೈಭವ ಮರುಕಳಿಸಿದೆ.

ಕೇರಳದ ವೈನಾಡಿನಲ್ಲಿ ಹುಟ್ಟಿ ಹರಿಯುವ ಕಪಿಲಾ, ತಲಕಾವೇರಿಯಿಂದ ಬರುವ ಕಾವೇರಿ, ಮೈಸೂರು ಜಿಲ್ಲೆಯ ತಿರುಮ ಕೂಡಲು ನರಸೀಪುರದಲ್ಲಿ ಒಂದಾಗುತ್ತಾರೆ. ನಂತರ ಕಬಿನಿ ಕಾವೇರಿ ಒಡಲಲ್ಲಿ ಸೇರಿ ಹೋಗುತ್ತಾಳೆ. ಈ ಕಾವೇರಿ ಜಿಲ್ಲೆಯ ಶಿವನಸಮುದ್ರ ಪ್ರದೇಶದಲ್ಲಿ ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುತ್ತಾಳೆ. ಈ ಪ್ರದೇಶ ಭರಚುಕ್ಕಿಯಾಗಿ ಪ್ರಸಿದ್ಧವಾಗಿದೆ. 

ಕರ್ನಾಟಕದ ನಯಾಗರಾ: ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುವ ಭರಚುಕ್ಕಿ, ಅಷ್ಟೇ ಅಗಲದ ಪ್ರದೇಶದಲ್ಲಿ ಅನೇಕ ಕವಲುಗಳೊಡೆದು ಧುಮ್ಮಿಕ್ಕುತ್ತದೆ. ನದಿಯಲ್ಲಿ ಹೆಚ್ಚು ನೀರು ಹರಿದಾಗ ಈ ಕವಲುಗಳ ಸಂಖ್ಯೆ ಹೆಚ್ಚಾಗಿ 100 ಅಡಿ ಅಗಲಕ್ಕೂ ಜಲಪಾತ ಮೈತುಂಬಿಕೊಳ್ಳುತ್ತದೆ. ಹೀಗಾಗಿ ಇದನ್ನು ಕರ್ನಾಟಕದ ನಯಾಗರ ಎಂದು ಬಣ್ಣಿಸಲಾಗುತ್ತದೆ.
 
ಕಾವೇರಿ ನದಿ ಸತ್ತೇಗಾಲದ ಸೇತುವೆ ಬಳಿ ಮೈದುಂಬಿ ಹರಿಯುತ್ತಿದೆ. ಬ್ರಿಟಿಷರ ಕಾಲದ ಹಳೆಯ ವೆಸ್ಲಿ ಸೇತುವೆಯ ಅರ್ಧ ಭಾಗ ದಷ್ಟು ಎತ್ತರಕ್ಕೆ ನೀರು ತುಂಬಿ ಹರಿಯುತ್ತದೆ. ಈ ಸೇತುವೆಯನ್ನು ಬಳಸಲಾಗುತ್ತಿಲ್ಲ. ಆದರೆ ಹಳೆಯ ಸೇತುವೆ ಕಣ್ಮನ ಸೆಳೆಯು ತ್ತದೆ. ಕೆಆರ್‌ಎಸ್‌ ಭರ್ತಿಯಾಗಿ ಅಲ್ಲಿಂ ದಲೂ ನೀರು ಹರಿದರೆ ಭರಚುಕ್ಕಿಯ ವೈಭವ ಮತ್ತಷ್ಟು ಹೆಚ್ಚುತ್ತದೆ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ
ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ

*ಹೊತ್ತಿ ಉರಿದ ಕನಕಪುರ ಮತ್ತು ಸಾತನೂರು,* *ರಾಮನಗರದಲ್ಲಿಯೂ ಉಗ್ರ ಪ್ರತಿಭಟನೆ,* *ಚನ್ನಪಟ್ಟಣ ದಲ್ಲಿ ಹೇಳಿಕೊಳ್ಳುವಂತ ಪ್ರತಿಭಟನೆ* *ಇಲ್ಲಾ, ಮಾಗಡಿಯಲ್ಲಿಯೂ ಸಹ ತಣ್ಣನೆ* *ಪ್ರತಿಭಟನೆ. ರಾಜ್ಯದಾದ್ಯ

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

Top Stories »  


Top ↑