Tel: 7676775624 | Mail: info@yellowandred.in

Language: EN KAN

    Follow us :


ಪೋಲಿಸರೇ ಯರ್ರಾಬಿರ್ರಿ ಬೈಕ್ ರೈಡರ್ ತಡೆಗಟ್ಟಲು ಕ್ರಮ ಕೈಗೊಳ್ಳಿ

Posted Date: 09 Aug, 2018

ಪೋಲಿಸರೇ ಯರ್ರಾಬಿರ್ರಿ ಬೈಕ್ ರೈಡರ್ ತಡೆಗಟ್ಟಲು ಕ್ರಮ ಕೈಗೊಳ್ಳಿ

ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕರು ನಗರವೂ ಸೇರಿದಂತೆ ತಾಲ್ಲೂಕಿದ್ಯಾಂತ ಬೈಕ್ ರೈಡಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ.


ಕೆಲ ಯುವಕರು ಅತಿ ಹೆಚ್ಚು ಶಬ್ದ ಬರುವ ಯಮಹಾ ಬೈಕ್ ನಲ್ಲಿ ರೈಡಿಂಗ್ ಮಾಡಿದರೇ ಮತ್ತೆ ಕೆಲ ಯುವಕರು ಅವರ ಬಳಿ ಇರುವ ಬೈಕ್ ನ ಸೈಲೆನ್ಸರ್ ಪೈಪ್ ನ ಫಿಲ್ಟರ್ ತೆಗೆಸಿ ಹೆಚ್ಚು ಶಬ್ದ ಬರುವಂತೆ ಮಾಡಿಸಿಕೊಂಡು ಕಿವಿಗಡಚಿಕ್ಕುವಂತೆ ಶಬ್ದ ಹೊರಡಿಸುತ್ತಾ ವ್ಹೀಲಿಂಗ್ ಮಾಡುತ್ತಿರುವುದು ಪ್ರತಿನಿತ್ಯದ ಚಾಳಿಯಾಗಿಬಿಟ್ಟಿದೆ.


ಈ ರೀತಿಯ ಬೈಕ್ ಚಾಲನೆಯಲ್ಲಿ ಕೆಲವು ಕಾಲೇಜಿನ ಮಕ್ಕಳಿದ್ದರೇ ಇನ್ನೂ ಕೆಲ ಯುವಕರು ಅಂಡಲೆಯುವ ಪೋಲಿಗಳಿದ್ದಾರೆ ಎಂದರೆ ತಪ್ಪಾಗಲಾರದು, ಜೊತೆಗೆ ಬಹುತೇಕ ಮಂದಿಗೆ ಚಾಲನ ಪರವಾನಗಿ ಇಲ್ಲವಾದರೆ ಹಲವಾರು ವಾಹನಗಳಿಗೆ ದಾಖಲಾತಿ ಸಹ ಇರುವುದಿಲ್ಲ, ಹಾಗೇ ಬಹುತೇಕ ಕಾಲೇಜು ವಿದ್ಯಾರ್ಥಿಗಳಿಗೆ ಹದಿನೆಂಟು ವರ್ಷಗಳು ಸಹ ತುಂಬಿರದವರೇ ಹೆಚ್ಚಿದ್ದು ಅವರ ಹುಚ್ಚಾಟದ ವ್ಹೀಲಿಂಗ್ ಮತ್ತು ಅತಿಯಾದ ಶಬ್ದದ ಬೈಕ್ ಗಳಿಂದ ರಸ್ತೆಯಲ್ಲಿ ಓಡಾಡುವ ಇನ್ನಿತರ ವಾಹನ ಸವಾರರು ಹಾಗೂ ನಿವಾಸಿಗಳ ಎದೆ ಬಡಿತ ಜೋರಾಗುತ್ತಿದೆ.


ಪ್ರತಿನಿತ್ಯ ಹತ್ತಾರು ಬೈಕ್ ಸವಾರರು ಈ ರೀತಿಯಲ್ಲಿ ಓಡಾಡುತ್ತಿದ್ದರೂ ಸಹ ಪೋಲಿಸರು ಕಂಡು ಕಾಣದಂತೆ ಕೇಳಿಯೂ ಕೇಳದಂತೆ ಸುಮ್ಮನಿರುವುದು ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿದೆ.


ಅದರಲ್ಲೂ ಸಾತನೂರು ಸರ್ಕಲ್ ನಲ್ಲಿ ಪ್ರತಿನಿತ್ಯ ಕನಿಷ್ಠ ಮೂರರಿಂದ ಐದು ಮಂದಿ ಪೋಲಿಸರಿದ್ದರೂ ಸಹ ಅವರೆದುರೇ ಓಡಾಡುವ ಈ ಯುವಕರನ್ನು ಹಿಡಿದು ಪ್ರಶ್ನಿಸದೇ ಇರುವುದು ಸಹ ಪುಂಡರಿಗೆ ವರದಾನವಾಗಿದೆ.


ನಮ್ಮೆಲ್ಲಾ ಪೋಲಿಸರು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ತಿರುವಿನಲ್ಲಿ ಅದರಲ್ಲೂ ತಿಂಗಳ ಕೊನೆಯ ಹತ್ತು ದಿವಸಗಳು ಮಾತ್ರ ಪ್ರಯಾಣಿಕರ ಮತ್ತು ಸರಕು ಸಾಗಣೆಯ ವಾಹನಗಳನ್ನು ಹಿಡಿದು ಕೆಲವಕ್ಕೆ ದಂಡ ಹಾಕಿ ಇನ್ನೂ ಕೆಲ ವಾಹನಗಳ ದುಡ್ಡು ಜೇಬಿಗಳಿಸಿ ಹೋಗುವ  ಅನೇಕ ಪೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದೇ ರೀತಿ ಎಲ್ಲಾ ಕಡೆಯೂ ಇಂತಹ ಸವಾರರನ್ನು ಹಿಡಿದು ಒಂದು ದಿನದ ಮಟ್ಟಿಗಾದರೂ ಜೈಲಿಗಟ್ಟಿದರೇ ಬುದ್ದಿ ಕಲಿತಾರು.


ಪೋಲಿಸರೇ ಈ ವ್ಹೀಲಿಂಗ್ ಹಾಗೂ ಅತಿಯಾದ ಶಬ್ದವನ್ನು ಹೊಂದಿರುವ ಬೈಕ್ ರೈಡರ್ ಗಳನ್ನು ಹಿಡಿದು ಕಾನೂನು ರೀತ್ಯಾ ಕ್ರಮ ಕೈಗೊಂಡರೆ ಅವರ ಪ್ರಾಣ, ಸಾರ್ವಜನಿಕರ ಪ್ರಾಣ ಉಳಿಯುವುದರ ಜೊತೆಗೆ ಪೋಲಿಸರ ಮೇಲೆ ಸಾರ್ವಜನಿಕರ ಗೌರವ ಹೆಚ್ಚಾಗುವುದರ ಜೊತೆಯಲ್ಲಿ ಇನ್ನಿತರ ಸವಾರರು ಸಹ ಭಯಭಿತರಾಗುತ್ತಾರೆ.


ಇಂದಿನಿಂದಲೇ ಕ್ರಮಕೈಗೊಳ್ಳುತ್ತೀರೆಂಬ ಭರವಸೆಯಲ್ಲಿ ಸಾರ್ವಜನಿಕರಿದ್ದಾರೆ, ಅವರ ಆಸೆ ಹುಸಿಯಾಗದಿರಲಿ.


"ಕೆಲ ಯುವಕರು ವ್ಹೀಲ್ ಬ್ಯಾಲೆನ್ಸ್ ಮತ್ತು ಹೆಚ್ಚು ಶಬ್ದ ಬರುವ ಬೈಕ್ ರೈಡಿಂಗ್ ನ್ನು ಒಂದು ಶೋಕಿಯಾಗಿಸಿಕೊಂಡಿದ್ದಾರೆ, ಅವರ ಪ್ರಾಣದ ಜೊತೆಗೆ ಸಾರ್ವಜನಿಕರ ಪ್ರಾಣದ ಜೊತೆಗೂ ಆಟವಾಡುತ್ತಿದ್ದಾರೆ. ಶೀಘ್ರವಾಗಿ ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದೆ.

ಸಿ ಪುಟ್ಟಸ್ವಾಮಿ. ಹಿರಿಯ ರೈತ ಮುಖಂಡರು."


" ಯಮಹಾ ಹಾಗೂ ಬುಲೆಟ್ ಬೈಕ್ ಗಳ ಕಿವಿಗಡಚಿಕ್ಕುವ ಶಬ್ದ ಮತ್ತು ಅವರ ಯದ್ವಾತದ್ವಾ ರೈಡಿಂಗ್ ನಿಂದ ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳುತಿದ್ದಾರೆ. ಅದರಲ್ಲೂ ಬಾಲಕರಿಗೆ ಪೋಷಕರು ಬೈಕ್ ಕೊಡದಂತೆ ಎಚ್ಚರಿಕೆ ವಹಿಸಬೇಕಾಗಿದೆ, ಪೋಲಿಸರ ಜೊತೆಗೆ ಪೋಷಕರು ಸಹ ಅವರಿಗೆ ತಿಳಿ ಹೇಳಬೇಕಾಗಿದೆ.


ಶಿವಶಂಕರ್ ವಕೀಲರು "


" ನಾವು ಈಗಾಗಲೇ ಕ್ರಮಕೈಗೊಂಡಿದ್ದು ಹಲವು ಪ್ರಕರಣಗಳನ್ನು  ದಾಖಲಿಸಿದ್ದೇವೆ, ಕೆಲವರಿಗೆ ಎಚ್ಚರಿಕೆ ಕೊಟ್ಟಿದ್ದೇವೆ, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಸ್ಟೇಷನ್ ಗಳ ಸಹಭಾಗಿತ್ವ ಹಾಗೂ ಡಿವೈಎಸ್ಪಿ ಯವರ ಮಾರ್ಗದರ್ಶನದಲ್ಲಿ ಹೆಚ್ಚಿನ ರೀತಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ.


ಶಿವಕುಮಾರ್ ಟ್ರಾಫಿಕ್ ಪಿ ಎಸ್ ಐ ಚನ್ನಪಟ್ಟಣ "

 

ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ
ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕ

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ
ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತ

ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ

ರಾಮನಗರ: ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರ

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

Top Stories »  


Top ↑