Tel: 7676775624 | Mail: info@yellowandred.in

Language: EN KAN

    Follow us :


ಮುಖ್ಯ ಮಂತ್ರಿ ಕುಮಾರಸ್ವಾಮಿ ಜನತಾ ದರ್ಶನದ ಸಮಯ ಬದಲು

Posted Date: 28 Aug, 2018

ಮುಖ್ಯ ಮಂತ್ರಿ ಕುಮಾರಸ್ವಾಮಿ ಜನತಾ ದರ್ಶನದ ಸಮಯ ಬದಲು

ಬೆಂಗಳೂರು : ರಾಜ್ಯದ ನೂರಾರು ಮಂದಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಲು ಬರುತ್ತಿದ್ದಾರೆ. ಆದರೆ ಇದರಿಂದ ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ತಾವು ಬೆಂಗಳೂರಿನಲ್ಲಿರುವ ಸಂದರ್ಭದಲ್ಲಿ ಪ್ರತಿ ಶನಿವಾರ ಸಾರ್ವಜನಿಕರನ್ನು ಭೇಟಿಯಾಗಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಈ ಕುರಿತಾಗಿ ಮುಖ್ಯಮಂತ್ರಿಗಳ ಕಚೇರಿಯು ಅಧಿಕೃತ ಪ್ರಕಟನೆಯನ್ನು ಹೊರಡಿಸಿದೆ. ಪ್ರಕಟಣೆಯಲ್ಲಿ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿರುವ ಸಂದರ್ಭದಲ್ಲಿ ಪ್ರತಿ ಶನಿವಾರದಂದು ಬೆಳಗ್ಗೆ 11 ರಿಂದ ಸಂಜೆ 4.30ರವರೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆಂದು ತಿಳಿಸಲಾಗಿದೆ.

ಸಾರ್ವಜನಿಕರು ಅನಿಯಮಿತವಾಗಿ ಮುಖ್ಯಮಂತ್ರಿಯವರ ನಿವಾಸ, ಗೃಹ ಕಚೇರಿ ಕೃಷ್ಣಾ ಹಾಗೂ ವಿಧಾನಸೌಧಕ್ಕೆ ಭೇಟಿ ನೀಡುತ್ತಿರುವುದರಿಂದ ಮುಖ್ಯಮಂತ್ರಿಗಳ ಕೆಲಸ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ. ಅಲ್ಲದೇ ಸಭೆ, ಸಮಾರಂಭಗಳಿಗೆ ನಿಗದಿತ ಸಮಯಕ್ಕೆ ತಲುಪಲು ತೊಣದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿಗೆ ನಿಗದಿತ ಸಮಯವನ್ನು ನಿಗದಿಪಡಿಸಿದ್ದು, ಸಹಕರಿಸುವಂತೆ ಮನವಿ ಮಾಡಲಾಗಿದೆ.

ಇನ್ನು ಈ ಸಂದರ್ಭದಲ್ಲಿ ವೈದ್ಯಕೀಯ ಪರಿಹಾರ ನಿಧಿಗೆ ಕೋರಿಕೆ ಸಲ್ಲಿಸುವವರು ಆಧಾರ್​ ಕಾರ್ಡ್​ ಅಥವಾ ಬಿಪಿಎಲ್​ ಕಾರ್ಡ್​, ಆಸ್ಪತ್ರೆಯ ಬಿಲ್​ ಮತ್ತು ಚಿಕಿತ್ಸೆಯ ವಿವರಗಳ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಅಲ್ಲದೇ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದ ಅರ್ಜಿ ಹಾಗೂ ಖಾಸಗಿ ಅಹವಾಲುಗಳಿಗೆ ಅವಕಾಶವಿರುವುದಿಲ್ಲ ಎಂದೂ ತಿಳಿಸಿದ್ದಾರೆ. ಇನ್ನು ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಲಿಖಿತ ರೂಪದಲಲ್ಇ ಸಲ್ಲಿಸಲು ಸೂಚಿಸಲಾಗಿದೆ. ಸಿಎಂ ಸೂಚನೆಯಂತೆ ದೂರುಗಳ ಬಗ್ಗೆ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮೊಬೈಲ್​ ಎಸ್​ಎಂಎಸ್​ ಮೂಲಕ ಮಾಹಿತಿ ಒದಗಿಸಲಾಗುತ್ತದೆ ಎಂದು ಇ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ
ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕ

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ
ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತ

ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ

ರಾಮನಗರ: ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರ

ಕರಡಿಗಳ ದಾಳಿ ಗಂಭೀರ ಗಾಯ
ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿ

ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ

ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ

ಉಪಚುನಾವಣೆಯಲ್ಲಿ  ಮೈತ್ರಿ ಇಲ್ಲ ಹೆಚ್ಡಿಕೆ
ಉಪಚುನಾವಣೆಯಲ್ಲಿ ಮೈತ್ರಿ ಇಲ್ಲ ಹೆಚ್ಡಿಕೆ

ಮೈಸೂರು: ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ 

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ
ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

Top Stories »  


Top ↑