Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲಾಡಳಿತ ನೆಟ್ಟ ಕೋಟಿ ಗಿಡಗಳೇನಾದವು ? ಬಹುತೇಕ ಗಿಡಗಳು ವಿದ್ಯುತ್ ತಂತಿಗಳ ಕೆಳಗೇ ಏಕೆ ನೆಡುತ್ತಾರೆ ? ಗಿಡಗಳ ಅರಣ್ಯರೋಧನ

Posted Date: 03 Sep, 2018

ಜಿಲ್ಲಾಡಳಿತ ನೆಟ್ಟ ಕೋಟಿ ಗಿಡಗಳೇನಾದವು ? ಬಹುತೇಕ ಗಿಡಗಳು ವಿದ್ಯುತ್ ತಂತಿಗಳ ಕೆಳಗೇ ಏಕೆ ನೆಡುತ್ತಾರೆ ? ಗಿಡಗಳ ಅರಣ್ಯರೋಧನ

ಕಳೆದ ಬಾರಿ ರಾಮನಗರ ಜಿಲ್ಲಾಡಳಿತವೂ ಜಿಲ್ಲಾದ್ಯಂತ ಕೋಟಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿ ಚಾಲನೆ ನೀಡಿ ಖಾಲಿ ಇರುವ ಅರಣ್ಯ, ಗೋಮಾಳ, ಸರ್ಕಾರಿ ಬಂಜರು ಭೂಮಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕೋಟಿ ಗಿಡಗಳ ಹೆಸರಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಲಕ್ಷಾಂತರ ಗಿಡಗಳನ್ನು ನೆಟ್ಟು ಕೈ ತೊಳೆದುಕೊಂಡಿತ್ತು.

"ಉಳಿದಿರುವ ಗಿಡಗಳ ಲೆಕ್ಕ ಕೊಡಲಿ"

ಜಿಲ್ಲಾದ್ಯಂತ ಎತ್ತ ಹೋಗಿ ಲೆಕ್ಕ ತಂದರು ಸಹ ಕೇವಲ ಒಂದು ವರ್ಷದಲ್ಲಿ ನೆಟ್ಟ ಕೋಟಿ ಗಿಡಗಳು ಲಕ್ಷ ಲೆಕ್ಕದಲ್ಲೂ ಸಿಗದಂತಾಗಿವೆ, ಅಂದು ನೆಟ್ಟ ಗಿಡಗಳೆಲ್ಲಾ ಏನಾದವೂ ? ಕಾಡು ಮತ್ತು ಸಾಕು ಪ್ರಾಣಿಗಳು ಭಕ್ಷಿಸಿದವೇ ? ಅಥವಾ ಕೆಲವು ದುಷ್ಟ ಮನುಷ್ಯರು ಕಿತ್ತೊಗೆದರಾ ? ನೆಟ್ಟ ಗಿಡಗಳೆಲ್ಲವೂ ನೀರುಣಿಸದೇ ಒಣಗಿ ಹೋದವಾ ? ಇಲ್ಲಾ ಗುತ್ತಿಗೆದಾರರು ಗಿಡಗಳನ್ನು ನೆಡಲೇ ಇಲ್ಲವಾ ? ಸಂಬಂಧಿಸಿದ ಎಲ್ಲರೂ ನೆಟ್ಟ ಗಿಡಗಳು ಹಾಗೂ ಉಳಿದಿರುವ ಗಿಡಗಳ ಲೆಕ್ಕದೊಂದಿಗೆ ಪ್ರಾಮಾಣಿಕ ಉತ್ತರ ನೀಡಲಿ.

"ಖರ್ಚು ಮಾಡಿರುವ ಹಣ ಸಾರ್ವಜನಿಕರದ್ದು"

ಸಾರ್ವಜನಿಕರ ತೆರಿಗೆ ಹಣ ಈ ಮಟ್ಟದಲ್ಲಿ ದುರುಪಯೋಗವಾಗುವುದು ಎಷ್ಟು ಸರಿ, ಪೈಸೆ ಪೈಸೆಯನ್ನು  ಕೂಡಿಟ್ಟು ತನ್ನ ಪಾಲಿನ ತೆರಿಗೆಯನ್ನು ಕಟ್ಟುತ್ತಾನೆ, ಅದನ್ನು ಸಂಬಂಧ ಪಟ್ಟ ಇಲಾಖಾಧಿಕಾರಗಳು ಸಮರ್ಪಕವಾಗಿ ಬಳಸುವುದರ ಜೊತೆಗೆ ಶಾಶ್ವತವಾಗಿ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳನ್ನು ಮಾಡಬೇಕು,

"ಹಸಿರು ಕರ್ನಾಟಕ ಅಲ್ಲಾ ! ಅದೊಂದು ಹೆಸರು ಅಷ್ಟೇ "

ಈ ಸಾಲಿನ ಮಳೆಗಾಲದಲ್ಲಿ "ಹಸಿರು ಕರ್ನಾಟಕ" ಎಂಬ ಸಂದೇಶದಡಿಯಲ್ಲಿ ರಾಜ್ಯದಾದ್ಯಂತ ರಾಜ್ಯ ಸರ್ಕಾರವೇ ಅರಣ್ಯ ಇಲಾಖೆಯಿಂದ ಗಿಡಗಳನ್ನು ರೈತರಿಗೆ ಕೊಟ್ಟು ಅವರ ಸ್ವಂತ ಭೂಮಿಯಲ್ಲಿ ಬೆಳೆಯುವಂತೆ ಪ್ರೇರೇಪಿಸುವುದು ಮತ್ತು ಖಾಲಿ ಜಾಗದಲ್ಲಿ ಗಿಡನೆಡುವ ಕೆಲಸ !?

ಅಧಿಕಾರಿಗಳ ತಲೆಯಲ್ಲೇನಿದೆ! ಪ್ರತಿವರ್ಷವೂ ಲಕ್ಷ ಕೋಟಿ ಗಿಡಗಳನ್ನು ಇವರು ಭೂಮಿ ಮೇಲೆ ನೆಡುತ್ತಾರೋ ಅಥವಾ ಆಕಾಶದಲ್ಲಿ ನೆಡುತಿದ್ದಾರೋ ಗೊತ್ತಿಲ್ಲ !

ಅಧಿಕಾರಿಗಳೇ ನೀವು ಪ್ರತಿ ವರ್ಷ ಕೋಟಿ ಗಿಡನೆಡುವುದು ಮುಖ್ಯವಲ್ಲ ಗಿಡಗಳನ್ನು ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಿ, ಗಿಡನೆಡಲು ಖರ್ಚು ಮಾಡುವ ಅರ್ಧ ದುಡ್ಡನ್ನು ವ್ಯಯಿಸಿದರೇ ಸಾಕು ಕನಿಷ್ಠ ನಲವತ್ತರಿಂದ ಐವತ್ತು ವರ್ಷ ಕೋಟಿ ಕೋಟಿ ಗಿಡಗಳನ್ನು ನೆಡುವ ಪ್ರಮೇಯವೇ ಬರುವುದಿಲ್ಲ ಅಲ್ಲವೇ !?.

"ನಿಜವಾದ ಪ್ರಕೃತಿ ಆರಾಧಕರಿವರು"

ನಿಮಗಿಂತ ಕೆಲವು (ಎಲ್ಲಾ ಸಂಘಟನೆಗಳು ಅಲ್ಲಾ) ಸಮಾಜಮುಖಿಯಾಗಿ ಕೆಲಸ ಮಾಡುವ ಸಂಘ ಜೀವಿಗಳು ಮಳೆಗಾಲದಲ್ಲಿ ಬೀಜದುಂಡೆಗಳನ್ನು ಅರಣ್ಯ ಮತ್ತು ಬೆಟ್ಟಗುಡ್ಡಗಳಲ್ಲಿ ಮಾತ್ರ ಹಾಕಿ ಸಾರ್ಥಕವಾಗುವಂತೆ ನೋಡಿಕೊಳ್ಳುತ್ತಾರೆ, ಇನ್ನೂ ಕೆಲವರು ವಿದ್ಯುತ್ ತಂತಿಗಳು ಇಲ್ಲದ ರಸ್ತೆ ಬದಿಯಲ್ಲಿ ಉಪಯುಕ್ತ ಗಿಡಗಳನ್ನು ನೆಟ್ಟು ಅವುಗಳಿಗೆ ಬೇಲಿ ಹಾಕಿ ವಾರಕ್ಕೊಮ್ಮೆಯಾದರೂ ನೀರು ಹಾಕಿ ಕಾಲಕಾಲಕ್ಕೆ ಸವರುವ ಮೂಲಕ ಅವುಗಳನ್ನು ಇಂದು ಹೆಮ್ಮರವಾಗಿ ಮಾಡಿದ್ದಾರೆ ಮತ್ತು ಮಾಡುತಿದ್ದಾರೆ.

ಚನ್ನಪಟ್ಟಣದಲ್ಲಿ ನಾನು ಸೇರಿದಂತೆ ಖ್ಯಾತ ಮೂಳೆ ತಜ್ಞ ಡಾ ಮಲವೇಗೌಡ ರು ಪ್ರಥಮ ಸಾಲಿನಲ್ಲಿ ನಿಲ್ಲುತ್ತಾರೆ, ಇಂದು ಕುವೆಂಪು ನಗರದ ಎರಡನೇ ತಿರುವಿನಿಂದ ಏಳನೇ ತಿರುವಿನ ತನಕ ಹಾಗೂ ಚಾನಲ್ ರಸ್ತೆ ಬದಿಯಲ್ಲಿ ಇರುವ ಗಿಡಗಳು ಇಂದು ಬಹುತೇಕ ಮರಗಳಾಗಿವೆ ಎಂದರೆ ಅಲ್ಲಿ ನಮ್ಮೆಲ್ಲರ ಶ್ರಮ ಅಡಗಿದೆ, ಡಾ ಮಲವೇಗೌಡ, ಅವರ ಪತ್ನಿ ಡಾ ಪ್ರೀತಿ ಮತ್ತು ಅವರ ಆಸ್ಪತ್ರೆಯ ಸಿಬ್ಬಂದಿಯ ಪಾತ್ರ ದೊಡ್ಡದು, ಡಾ ಶಂಕರ್, ವಿಜಯಕುಮಾರ್ ಗುಲೇಚಾ, ಯೋಗಾನಂದ, ಮಮತ, ಸಿರಿ, ಸಾವಿತ್ರಮ್ಮ, ಶ್ಯಾಮ್ ಇನ್ನೂ ಕೆಲ ಸಾಮಾಜಿಕ ಕಳಕಳಿ ಇರುವ ಸ್ನೇಹಿತರು ಸೇರಿ ಇವರ ಜೊತೆ ಸಾಧ್ಯವಾದಷ್ಟು ಕೈ ಜೋಡಿಸಿ ಪರಿಸರ ಅಭಿವೃದ್ಧಿ ಪಡಿಸಲು ಶ್ರಮವಹಿಸಿರುವುದು ಶ್ಲಾಘನೀಯ. 

ಇದೇ ತಂಡ ಹಲವು ವರ್ಷಗಳ ಕಾಲ ಸ್ವಚ್ಛ ನಗರದ ಹೆಸರಿನಲ್ಲಿ ವಾರಕ್ಕೆರಡು ಬಾರಿ ರಸ್ತೆಬದಿ,  ಚರಂಡಿಗಳನ್ನು ಸ್ವಚ್ಛ ಮಾಡಿದ್ದನ್ನು ಸ್ಮರಿಸಬಹುದು. ಇವರನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಮಾತೃಭೂಮಿ ಸೇವಾ ಟ್ರಸ್ಟ್, ಆಸರೆ ಸೇವಾ ಟ್ರಸ್ಟ್ ಇನ್ನು ಕೆಲ ಸಂಘಟನೆಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

"ದುಡ್ಡು ಮಾಡುವ ಯೋಜನೆ"

ಹಸಿರು ಕರ್ನಾಟಕ ಹೆಸರಿನಲ್ಲಿ ಈ ಸಾಲಿನಲ್ಲಿ ನೆಟ್ಟಿರುವ ಬಹುತೇಕ ಗಿಡಗಳು ರಸ್ತೆಬದಿಯಲ್ಲಿವೆ, ಅದರಲ್ಲೂ ಎಲ್ಲೆಲ್ಲಿ ವಿದ್ಯುತ್ ತಂತಿಗಳಿವೆಯೋ ಅಲ್ಲೇ ಗಿಡಗಳನ್ನೂ ನೆಟ್ಟಿರುವುದು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಅವಿವೇಕತನವನ್ನು ಹೊರಹಾಕುವಲ್ಲಿ ಅವರೇ ಸಫಲವಾಗಿದ್ದಾರೆ. ಈ ಯೋಜನೆ ರೂಪಿಸುವ ಅಧಿಕಾರಿಗಳಿಗೇನಾಗಿದೆ! ವಿದ್ಯುತ್ ತಂತಿ ಕೆಳಗೆ ಗಿಡಗಳನ್ನು ನೆಟ್ಟರೆ ಅವು ಎಷ್ಟು ಎತ್ತರ ಬೆಳೆಯುತ್ತವೆ, ಪ್ರತಿ ತಿಂಗಳು ಸಂಬಂಧ ಪಟ್ಟ ಇಲಾಖೆಯವರು ಕಡಿಯುತ್ತಲೇ ಇರುತ್ತಾರೆ ಎನ್ನುವ ಕನಿಷ್ಠ ಜ್ಞಾನವಾದರು ಇರಬೇಡವೆ ?

ಗಿಡಗಳನ್ನು ನೆಡುವಾಗ ವಿದ್ಯುತ್ ಇಲಾಖೆಯವರು ಏನು ಮಾಡುತ್ತಾರೆ, ಅರಣ್ಯ ಇಲಾಖೆಯವರು ಅನುಮತಿ ಪಡೆದಿದ್ದಾರೆಯೇ ? ಗಿಡ ಬೆಳೆದಂತೆಲ್ಲಾ ದೊಡ್ಡದಾದಾಗ ಎಲ್ಲರಿಗೂ ತೊಂದರೆ ಆಗುತ್ತದೆ ಎನ್ನುವುದು ಈ ಇಲಾಖೆಯ ಅಧಿಕಾರಿಗಳಿಗೂ ತಿಳಿದಿಲ್ಲವೇ ?

ಅಥವಾ ಎರಡು ಇಲಾಖೆಯ ಅಧಿಕಾರಿಗಳಿಗೂ ಇದೊಂದು ದಂಧೆಯಾಗಿದೆಯೆ ? ಗಿಡ ನೆಡುವ ಮೂಲಕ ಒಂದು ಇಲಾಖೆ ದುಡ್ಡು ಮಾಡಿದರೆ ಅವುಗಳನ್ನು ಕಡಿಯುವ ಮೂಲಕ ಮತ್ತೊಂದು ಇಲಾಖೆ ಕೊಳ್ಳೆ ಹೊಡೆಯಬಹುದು ಎಂಬ ದು(ದೂ)ರಾಲೋಚನೆಯ ಒಳಸಂಚುಗಳೇ ?ಸಂಬಂಧಿಸಿದ ಅಧಿಕಾರಿಗಳು ಉತ್ತರಿಸಬೇಕಾಗಿದೆ.

 

ಗೋ ರಾ ಶ್ರೀನಿವಾಸ...
ಮೊ: 9845856139.

ಪ್ರತಿಕ್ರಿಯೆಗಳು

  • Shivalingaiah gh wrote:
    05 Sep, 2018 06:43 am

    Supar Sar Summane grupos madadalla Entha mahethiyannu janarige thilisabekku

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ
ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ

೨೦೧೯/೨೦ ನೇ ಸಾಲಿನ ಆರನೇ ತರಗತಿಗೆ ಸೇರಲು ರಾಮನಗರ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ

ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ
ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ

(ಆತ್ಮೀಯ ಓದುಗರೇ ಪ್ರತಿ ಸೋಮವಾರ ಪ್ರಕಟವಾಗುವ ಈ ಅಂಕಣದಲ್ಲಿ ತಾಲ್ಲೂಕಿನ ಅಧಿಕಾರಿ ಮತ್ತು ಇಲಾಖೆಯ ಬಗ್ಗೆ ಬರೆಯುತ್ತಿದ್ದೆ, ಆದರಿಂದು ಚನ್ನಪಟ್ಟಣದಲ್ಲಿ ಕೇವಲ ಹದಿನೆಂಟು ತಿಂಗಳು ಕೆಲಸ ಮಾಡಿ ಹದಿನೆಂ

ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ
ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಗಿಡ ನೆಡಲು ಗುಂಡಿಗಳ ಅಳತೆ ಪ್ರಮಾಣದಲ್ಲಿ ಪ್ರತಿ ಗಿಡಕ್ಕೆ ತಲಾ ನಲವತ್ತೊಂದು ಮತ್ತು ಎಂಭತ್ತನಾಲ್ಕು ರೂಪಾಯಿಗಳಂತೆ ೨೦

ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್
ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್

ಸಾಲ ಬಾಕಿ ಉಳಿಸಿಕೊಂಡ ಮಹಿಳೆಗೆ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ನೋಟೀಸ್‌ಜಾರಿ ಮಾಡಿದ್ದರಿಂದ ರೈತಸಂಘದ ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸಿದರು.

 ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಹಾತ್ವಾಕಾಂಕ್ಷಿ ಸಾಲ

ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು
ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು

ಅರವತ್ಮೂರನೇ ಕನ್ನಡ ರಾಜ್ಯೋತ್ಸವ ಸಾಲಿನಲ್ಲಿ ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿಗಳು ಬಂದಿವೆ. ಚನ್ನಪಟ್ಟಣ ತಾಲ್ಲೂಕಿನ ಲಾವಣಿ ಹಾಡುಗಾರ ಮತ್ತು ರಂಗಭೂಮಿ ನಟರಾದ ಮಳೂರು ಪುಟ್ಟಸ್ವಾಮಿಗೌಡರಿಗೆ ಸಂದರೆ ಸಹಕಾರಿ ಕ್ಷೇತ್ರದಲ್ಲಿ ಮಾ

ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ
ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ

ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆಯ ರೂಪುರೇಷೆಗಳನ್ನು ಶೀಘ್ರವಾಗಿ ತಲುಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮೇಕೆದಾಟು ಯೋಜನೆ ಕುರಿತ ರಾಜ್ಯದ

ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ
ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ

ಯಾಕೋ ಗೊತ್ತಿಲ್ಲ ಕಣ್ಣಂಚಲ್ಲಿ ನೀರು ಉಕ್ಕುಕ್ಕಿ ಬರುತ್ತಿದೆ, ಸಾವಿನ ಕಥೆ ಕೇಳಿ, ಎದೆ ಬಡಿದು‌ ಅತ್ತು‌ ಬಿಡಲೇ ಎನಿಸುತ್ತಿದೆ.

ಅವರಾರು ನೆಂಟರಿಸ್ಟರಲ್ಲಾ, ಬಂಧು ಬಳಗವೂ ಅಲ್ಲಾ,
ಆದರೂ ಮನ ಕೇಳುತ್ತಿಲ್ಲ, ಒಳಗ

 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ
 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ, ಅದಕ್ಕಾಗಿ ನಾನು ನೀರಾವರಿ ಸಚಿವನಾಗಿದ್ದಾಗ ನನ್ನ ಖಾತೆಗೆ ಸರಿಯಾಗಿ ಅನುದಾನ ನೀಡಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ತಾಲೂಕಿನ ಸಾಮಂದಿಪುರ ಗ್ರಾಮದಲ

Top Stories »  


Top ↑