Tel: 7676775624 | Mail: info@yellowandred.in

Language: EN KAN

    Follow us :


ರಾಮನಗರದ ಹುಡುಗರ ಕನ್ನಡ ಕಿರು ಚಿತ್ರ ಪ್ರೇಮ

Posted Date: 04 Sep, 2018

ರಾಮನಗರದ ಹುಡುಗರ ಕನ್ನಡ ಕಿರು ಚಿತ್ರ ಪ್ರೇಮ

ಈಗಿನ ಯುವಕರಲ್ಲಿ ಕೆಲವರಲ್ಲಿ ಒಂದೊಂದು ತರನಾದ ಹವ್ಯಾಸಗಳಿರುತ್ತದೆ‌. ಹಾಗೇಯೆ ರಾಮನಗರದ ಒಂದು ಯುವಕರ ತಂಡ ಕನ್ನಡ ಕಿರುಚಿತ್ರ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಯಾವುದೇ ತರಬೇತಿಗಳಿಲ್ಲದೇ. ಕೇವಲ ಸಿನಿಮಾ ಮೇಲಿನ ಪ್ರೀತಿಯಿಂದ ಹಾಗೂ ಸಮಾಜಕ್ಕೆ ಸಂದೇಶಗಳನ್ನು ರವಾನಿಸುವ ಸಲುವಾಗಿ ಕಿರುಚಿತ್ರಗಳನ್ನು ನಿರ್ಮಿಸಲು ಈ ತಂಡ ಸಜ್ಜಾಗಿದೆ. ಈಗಾಗಲೇ ಮಿನರ್ವ ಎಂಬ ಹೆಸರಿನ ಕಿರುಚಿತ್ರ ನಿರ್ಮಿಸಿ ಯಶಸ್ಸು ಕಂಡಿರುವ ಈ ತಂಡ, ಸಾಹಿತ್ಯ ಎಂಬ ಎರಡನೇ ಕಿರುಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಚಿತ್ರಕ್ಕೆ ಅರುಣ್ ಕುಮಾರ್ ಎಂಬುವವರು ಕಥೆ ನೀಡಿದ್ದು, ಮಿನರ್ವ ಚಿತ್ರಕ್ಕೆ ಸ್ವತಃ ಕಥೆ ಸಂಭಷಣೆ ಚಿತ್ರಕಥೆ ಸಿದ್ದ ಪಡಿಸಿದ್ದ ಸುನೀಲ್ ರವರೇ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು.. ತಂಡದಲ್ಲಿ ಕ್ಯಾಮರಾಮ್ಯಾನ್ ಆಗಿ ಮನು ಶಿವಣ್ಣ‌‌. ಚಿತ್ರಕ್ಕೆ ನಾಯಕರಾಗಿ ಕೀರ್ತಿ ವರ್ಧನ್, ನಾಯಕಿಯಾಗಿ ಚನ್ನಪಟ್ಟಣದ ಗ್ರೀಷ್ಮ ಗೌಡ, ಪ್ರಚಾರ ಕಲೆ ಧನುಶ್ ಅಂಬಾರಿ, ಹಾಗೂ ಸಂಕಲನದ ಜವಾಬ್ದಾರಿ ಈಶ್ವರ್ ಕೆ ಸಂತು ಸುಪ್ಪಿ ರವರು ನಿಭಾಹಿಸಲಿದ್ದಾರೆ. ಕಥೆ ಬಗ್ಗೆ ಹೇಳುವುದಾದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿ ಕುರಿತು ಎಷ್ಟೋ ಸಿನಿಮಾಗಳು ಬಂದಿವೆಯಾದರೂ ಈ ಕಿರುಚಿತ್ರವು ಆ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆಯಲಿದೆ ಎಂದು ನಿರ್ದೇಶನ ಮಾಡುತ್ತಿರುವ ಸುನೀಲ್ ಎನ್ ತಿಳಿಸಿದರು‌‌‌..
ಚಿತ್ರದ ಚಿತ್ರೀಕರಣ ರಾಮನಗರದಲ್ಲೇ ನೆಡೆಯಲಿದ್ದು,ದಸರಾ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶ ಈ ಕಿರುಚಿತ್ರ ತಂಡದ್ದು

ಪ್ರತಿಕ್ರಿಯೆಗಳು

  • sachin wrote:
    04 Sep, 2018 09:24 pm

    all the best my dear sweet friends and give a good message in the society on your flim and god bless you

  • Sunil wrote:
    05 Sep, 2018 11:18 am

    Thank U Very Much Sir... Its helps to us.....

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ
ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ

೨೦೧೯/೨೦ ನೇ ಸಾಲಿನ ಆರನೇ ತರಗತಿಗೆ ಸೇರಲು ರಾಮನಗರ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ

ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ
ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ

(ಆತ್ಮೀಯ ಓದುಗರೇ ಪ್ರತಿ ಸೋಮವಾರ ಪ್ರಕಟವಾಗುವ ಈ ಅಂಕಣದಲ್ಲಿ ತಾಲ್ಲೂಕಿನ ಅಧಿಕಾರಿ ಮತ್ತು ಇಲಾಖೆಯ ಬಗ್ಗೆ ಬರೆಯುತ್ತಿದ್ದೆ, ಆದರಿಂದು ಚನ್ನಪಟ್ಟಣದಲ್ಲಿ ಕೇವಲ ಹದಿನೆಂಟು ತಿಂಗಳು ಕೆಲಸ ಮಾಡಿ ಹದಿನೆಂ

ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ
ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಗಿಡ ನೆಡಲು ಗುಂಡಿಗಳ ಅಳತೆ ಪ್ರಮಾಣದಲ್ಲಿ ಪ್ರತಿ ಗಿಡಕ್ಕೆ ತಲಾ ನಲವತ್ತೊಂದು ಮತ್ತು ಎಂಭತ್ತನಾಲ್ಕು ರೂಪಾಯಿಗಳಂತೆ ೨೦

ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್
ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್

ಸಾಲ ಬಾಕಿ ಉಳಿಸಿಕೊಂಡ ಮಹಿಳೆಗೆ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ನೋಟೀಸ್‌ಜಾರಿ ಮಾಡಿದ್ದರಿಂದ ರೈತಸಂಘದ ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸಿದರು.

 ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಹಾತ್ವಾಕಾಂಕ್ಷಿ ಸಾಲ

ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು
ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು

ಅರವತ್ಮೂರನೇ ಕನ್ನಡ ರಾಜ್ಯೋತ್ಸವ ಸಾಲಿನಲ್ಲಿ ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿಗಳು ಬಂದಿವೆ. ಚನ್ನಪಟ್ಟಣ ತಾಲ್ಲೂಕಿನ ಲಾವಣಿ ಹಾಡುಗಾರ ಮತ್ತು ರಂಗಭೂಮಿ ನಟರಾದ ಮಳೂರು ಪುಟ್ಟಸ್ವಾಮಿಗೌಡರಿಗೆ ಸಂದರೆ ಸಹಕಾರಿ ಕ್ಷೇತ್ರದಲ್ಲಿ ಮಾ

ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ
ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ

ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆಯ ರೂಪುರೇಷೆಗಳನ್ನು ಶೀಘ್ರವಾಗಿ ತಲುಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮೇಕೆದಾಟು ಯೋಜನೆ ಕುರಿತ ರಾಜ್ಯದ

ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ
ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ

ಯಾಕೋ ಗೊತ್ತಿಲ್ಲ ಕಣ್ಣಂಚಲ್ಲಿ ನೀರು ಉಕ್ಕುಕ್ಕಿ ಬರುತ್ತಿದೆ, ಸಾವಿನ ಕಥೆ ಕೇಳಿ, ಎದೆ ಬಡಿದು‌ ಅತ್ತು‌ ಬಿಡಲೇ ಎನಿಸುತ್ತಿದೆ.

ಅವರಾರು ನೆಂಟರಿಸ್ಟರಲ್ಲಾ, ಬಂಧು ಬಳಗವೂ ಅಲ್ಲಾ,
ಆದರೂ ಮನ ಕೇಳುತ್ತಿಲ್ಲ, ಒಳಗ

 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ
 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ, ಅದಕ್ಕಾಗಿ ನಾನು ನೀರಾವರಿ ಸಚಿವನಾಗಿದ್ದಾಗ ನನ್ನ ಖಾತೆಗೆ ಸರಿಯಾಗಿ ಅನುದಾನ ನೀಡಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ತಾಲೂಕಿನ ಸಾಮಂದಿಪುರ ಗ್ರಾಮದಲ

Top Stories »  


Top ↑